
ಮುಸ್ಲಿಂ ಸಮುದಾಯ (Muslim community )ದ ಜನರು ಹಂದಿ ಮಾಂಸ (pork) ಸೇವನೆ ಮಾಡುವುದಿಲ್ಲ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿರುವ ವಿಷ್ಯ. ಆದ್ರೆ ಯಾಕೆ ಹಂದಿ ಮಾಂಸದ ಸೇವನೆ ಮಾಡೋದಿಲ್ಲ ಎಂಬುದು ಅನೇಕರಿಗೆ ಗೊತ್ತಿಲ್ಲ. ಹಂದಿ ಮಾಂಸವು ಇಸ್ಲಾಮಿಕ್ (Islamic) ನಂಬಿಕೆಗಳ ಪ್ರಕಾರ ನಿಷೇಧಿಸಲ್ಪಟ್ಟಿರುವ ಆಹಾರ ಪದಾರ್ಥವಾಗಿದೆ. ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕಾರಣಗಳನ್ನು ಕೂಡ ಇದು ಒಳಗೊಂಡಿದೆ.
ಮುಸ್ಲಿಂ ಸಮುದಾಯದ ಜನರು ಹಂದಿ ಮಾಂಸ ತಿನ್ನದಿರಲು ಕಾರಣ :
ಧಾರ್ಮಿಕ ಕಾರಣಗಳು : ಮುಸ್ಲಿಂ ಸಮುದಾಯದವರು ಹಂದಿ ಮಾಂಸ ತಿನ್ನದಿರಲು ಇಸ್ಲಾಮಿಕ್ ಧಾರ್ಮಿಕ ಗ್ರಂಥಗಳಲ್ಲಿ ನೀಡಿರುವ ಸೂಚನೆಗಳೇ ಮುಖ್ಯ ಕಾರಣ. ಇಸ್ಲಾಂ ಧರ್ಮದ ಪವಿತ್ರ ಗ್ರಂಥ (Islam holy book) ವಾದ ಕುರಾನ್‌ನಲ್ಲಿ ಹಂದಿ ಮಾಂಸವನ್ನು ಹರಾಮ್ (ನಿಷೇಧಿತ) ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಕುರಾನ್‌ನ 2:173, 5:3, 6:145 ಮತ್ತು 16:115 ಪದ್ಯಗಳು ಮುಸ್ಲಿಮರು ಹಂದಿಮಾಂಸವನ್ನು ತಿನ್ನಬಾರದು ಎಂದು ಸ್ಪಷ್ಟಪಡಿಸಿದೆ. ಈ ಧಾರ್ಮಿಕ ನಿಯಮವು ಮುಸ್ಲಿಮರ ಜೀವನದ ಪ್ರಮುಖ ಭಾಗವಾಗಿದ್ದು, ಸಂಪೂರ್ಣ ಭಕ್ತಿಯಿಂದ ಅದನ್ನು ಅನುಸರಿಸುತ್ತಾರೆ.
ಕೋಳಿ ಯಾವ ದೇಶದ ರಾಷ್ಟ್ರೀಯ ಪಕ್ಷಿ? ಬಹುಶಃ ನಿಮಗೂ ಈ ಉತ್ತರ ಗೊತ್ತಿರಲಿಕ್ಕಿಲ್ಲ!
ಸ್ವಚ್ಛತೆ ಮತ್ತು ಆರೋಗ್ಯ : ಧಾರ್ಮಿಕ ಕಾರಣವನ್ನು ಹೊರತುಪಡಿಸಿ ಹಂದಿ ಮಾಂಸ ತಿನ್ನದಿರಲು ಇನ್ನೊಂದು ಕಾರಣ ನೈರ್ಮಲ್ಯ ಮತ್ತು ಆರೋಗ್ಯ. ಹಂದಿಗಳನ್ನು ಸಾಮಾನ್ಯವಾಗಿ ಕೊಳಕು ಪ್ರಾಣಿ ಎಂದು ಪರಿಗಣಿಸಲಾಗಿದೆ. ಹಂದಿ, ತನ್ನ ಆಹಾರದಲ್ಲಿ ವಿವಿಧ ವಸ್ತುಗಳನ್ನು ತಿನ್ನುತ್ತದೆ. ಕಸ ಮತ್ತು ಮಲವನ್ನು ಸಹ ತಿನ್ನುತ್ತದೆ. ಹಂದಿಯ ದೇಹದಲ್ಲಿ ಪರಾವಲಂಬಿಗಳು, ಬ್ಯಾಕ್ಟೀರಿಯಾಗಳು ಬೆಳೆಯುವ ಅಪಾಯವಿರುತ್ತದೆ. ಸಂಶೋಧನೆಯೊಂದರ ಪ್ರಕಾರ, ಹಂದಿ ಮಾಂಸದಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್ ಕಂಡು ಬಂದಿದೆ. ಟ್ರಿಕಿನೋಸಿಸ್ ರೋಗ ಹಂದಿಮಾಂಸದಿಂದ ಹರಡುತ್ತದೆ. ಅದು ಮನುಷ್ಯರ ಆರೋಗ್ಯವನ್ನು ಹದಗೆಡಿಸುತ್ತದೆ. ಈಗ ಹಂದಿ ಮಾಂಸದ ಸ್ವಚ್ಛತೆ ಹಾಗೂ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆಯಾದ್ರೂ, ಇಸ್ಲಾಮಿಕ್ ದೃಷ್ಟಿಕೋನಗಳಲ್ಲಿ ಇದನ್ನು ಇನ್ನೂ ಅಸುರಕ್ಷಿತವೆಂದು ಪರಿಗಣಿಸಲಾಗಿದೆ.
ಸಾಂಸ್ಕೃತಿಕ ಕಾರಣ : ಹಂದಿ ಮಾಂಸ ಸೇವನೆ ನಿಷೇಧದ ಹಿಂದೆ ಬರೀ ಧಾರ್ಮಿಕ ಕಾರಣ ಮಾತ್ರವಲ್ಲ ಸಾಂಸ್ಕೃತಿಕ ಕಾರಣವೂ ಇದೆ. ಮುಸ್ಲಿಂ ಸಮಾಜದಲ್ಲಿ ಹಂದಿಗಳನ್ನು ಅಶುದ್ಧ ಪ್ರಾಣಿಯಾಗಿ ನೋಡಲಾಗುತ್ತದೆ. ಅದರ ಸೇವನೆ ಶಿಸ್ತು ಮತ್ತು ಜೀವನದಲ್ಲಿ ಧಾರ್ಮಿಕ ನಂಬಿಕೆಯ ಬದ್ಧತೆಯನ್ನು ಮುರಿದಂತೆ ಎಂದು ಅವರು ಭಾವಿಸುತ್ತಾರೆ. ಹಂದಿ ಮಾಂಸ ಸೇವನೆಯನ್ನು ಮುಸ್ಲಿಂ ಕುಟುಂಬಗಳು ಬಹಳ ಗಂಭೀರವಾಗಿ ಪರಿಗಣಿಸಿವೆ. ಹಂದಿಮಾಂಸ ತಿನ್ನದಿರುವುದು ವೈಯಕ್ತಿಕ ನಂಬಿಕೆಯ ವಿಷಯವಲ್ಲ, ಸಮುದಾಯದ ಏಕತೆ ಮತ್ತು ಗುರುತಿಗೆ ಸಂಬಂಧಿಸಿದೆ ಎಂದು ಅವರು ಭಾವಿಸುತ್ತಾರೆ.
ಇತರ ಧರ್ಮದಲ್ಲೂ ಇದೆ ಹಂದಿಮಾಂಸ ನಿಷೇಧ : ಹಂದಿ ಮಾಂಸ ನಿಷೇಧ ಬರೀ ಇಸ್ಲಾಮಿಕ್ ಗೆ ಮಾತ್ರ ಸೀಮಿತವಾಗಿಲ್ಲ. ಇನ್ನು ಕೆಲ ಧರ್ಮದಲ್ಲೂ ಹಂದಿ ಮಾಂಸ ಸೇವನೆಯನ್ನು ನಿಷೇಧಿಸಲಾಗಿದೆ. ಜುದಾಯಿಸಂನಲ್ಲಿ ಹಂದಿ ಮಾಂಸ ನಿರ್ಬಂಧವಿದೆ. ಯಹೂದಿ ಧಾರ್ಮಿಕ ಗ್ರಂಥವಾದ ಟೋರಾದಲ್ಲಿ ಹಂದಿಗಳನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಅದರ ಸೇವನೆಯನ್ನು ನಿಷೇಧಿಸಲಾಗಿದೆ.
ಚಮಚದಲ್ಲಿ ಮುದ್ದೆ ತಿಂದಿದ್ದ ನಿವೇದಿತಾ ಗೌಡ, ಹಾಲು ಬೆರೆಸಿ ಕಾಶ್ಮೀರಿ ಚಿಕನ್ ಮಾಡಿದ್ದೇ ಅದ್ಭುತ!
ಅದೇ ರೀತಿ ಹಿಂದೂ ಧರ್ಮ (Hinduism) ಪಾಲಿಸುವ ಕೆಲ ಸಮುದಾಯದವರು ಕೂಡ ಹಂದಿ ಮಾಂಸವನ್ನು ಸೇವನೆ ಮಾಡೋದಿಲ್ಲ. ಹಿಂದೂ ಧರ್ಮದಲ್ಲಿ ಹಂದಿ ಮಾಂಸ ಸೇವನೆ ನಿಷಿದ್ಧವಿಲ್ಲವಾದ್ರೂ ಅನೇಕರು ಅದನ್ನು ಅಶುದ್ಧವೆಂದು ಪರಿಗಣಿಸುತ್ತಾರೆ. ಹಂದಿ ಮಾಂಸವು ಹೆಚ್ಚಿನ ಭಾರತೀಯ ಪಾಕಪದ್ಧತಿಯಲ್ಲಿ ಸಾಮಾನ್ಯ ಪದಾರ್ಥವಲ್ಲ. ಆದರೆ ಇದನ್ನು ಗೋವಾ, ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ವ್ಯಾಪಕವಾಗಿ ಸೇವಿಸಲಾಗುತ್ತದೆ. ಹಾಗೆಯೇ ಚೀನಾ ಮತ್ತು ಮ್ಯಾನ್ಮಾರ್ ಗಡಿಯಲ್ಲಿರುವ ಈಶಾನ್ಯ ಭಾರತದಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.