ಜಗತ್ತಿನಲ್ಲಿ ಹಲವು ದುಬಾರಿ ಮದ್ಯಗಳಿವೆ. ಇದೀಗ ವಿಶ್ವದ ಅತ್ಯಂತ ದುಬಾರಿ ಕಾಕ್‌ಟೈಲ್ ಬೆಲೆ ಬಹಿರಂಗವಾಗಿದೆ. ಸ್ಟೈಲೀಶ್ ಗ್ಲಾಸಿನಲ್ಲಿ ಈ ಕಾಕ್‌ಟೈಲ್ ಡ್ರಿಂಕ್ ನೀಡಲಾಗುತ್ತದೆ. ಇದರ ಬೆಲೆ ಬರೋಬ್ಬರಿ 10 ಲಕ್ಷ ರೂಪಾಯಿ.
ಚಿಕಾಗೋ(ಸೆ.14) ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಆದರೆ ಮದ್ಯವಿಲ್ಲದೆ ಹಲವರ ಜೀವನ ಮುಂದೆ ಸಾಗಲ್ಲ, ಸರ್ಕಾರವೂ ಮುನ್ನಡೆಯಲ್ಲ. ಹೀಗಾಗಿ ಸರ್ಕಾರಕ್ಕೆ ಪ್ರತಿ ಬಾರಿ ಆರ್ಥಿಕ ಸಂಕಷ್ಟ ಎದುರಾದಾಗ ನೇರವಾಗಿ ಮದ್ಯಪಾನಗಳ ಮೇಲಿನ ತೆರಿಗೆ ಏರಿಕೆ, ಬೆಲೆ ಏರಿಕೆ ಮಾಡುವುದು ಹೊಸದೇನಲ್ಲ. ಕೈಗೆಟುಕುವ ಮದ್ಯ ದುಬಾರಿಯಾದರೂ ಕುಡಿತಕ್ಕೇನು ಕಡಿಮೆ ಇಲ್ಲ. ಜಾಗತಿಕ ಮಟ್ಟದಲ್ಲಿ ಈಗಾಗಲೇ ಅತ್ಯಂತ ದುಬಾರಿ ಮದ್ಯಗಳು ಭಾರಿ ಜನಪ್ರಿಯವಾಗಿದೆ. ಇದರ ನಡುವೆ ವಿಶ್ವದ ಅತ್ಯಂತ ದುಬಾರಿ ಕಾಕ್‌ಟೈಲ್ ಡ್ರಿಂಕ್ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಕಾಕ್‌ಟೈಲ್ ಬೆಲೆ 10 ಲಕ್ಷ ರೂಪಾಯಿ. ಮ್ಯಾರೋ ಮಾರ್ಟಿನ್ ಕಾಕ್‌ಟೈಲ್ ಮೇಲೆ ಇದೀಗ ಎಲ್ಲರ ಕಣ್ಣು ಬಿದ್ದಿದೆ.
10 ಲಕ್ಷ ರೂಪಾಯಿ ಎಂದು ಒಂದು ಬಾಟಲಿ ಇಲ್ಲ. ಕೇವಲ ಒಂದು ಸ್ಟೈಲೀಶ್ ಗ್ಲಾಸ್‌ನಲ್ಲಿ ಮುಕ್ಕಾಲು ಕಾಕ್‌ಟೈಲ್ ಅಷ್ಟೆ. ಇದಕ್ಕೆ 10 ಲಕ್ಷ ರೂಪಾಯಿ ನೀಡಬೇಕು. ಈ ಅಲ್ಟ್ರಾ ಲಕ್ಷುರಿ ಕಾಕ್‌ಟೈಲ್ ಡ್ರಿಂಕ್‌ನ್ನು ಅಮೆರಿಕದ ಚಿಕಾಗೋದಲ್ಲಿನ ವಿಂಡಿ ಸಿಟಿ ಅನ್ನೋ ರೆಸ್ಟೋರೆಂಟ್ ಪರಿಚಯಿಲಿದೆ. ವಿಂಡಿ ಸಿಟಿ ರೆಸ್ಟೋರೆಂಟ್‌ನಲ್ಲಿ ಅಡಾಲಿನಾ ಬಿವರೇಜ್ ವಿಶ್ವದಲ್ಲೇ ಜನಪ್ರಿಯ. ಇಲ್ಲಿರುವುದು ಎಲ್ಲಾ ದುಬಾರಿ ಮದ್ಯಗಳು ಮಾತ್ರ.
ರೈಲಿನಲ್ಲಿ ಪ್ರಯಾಣಿಕರು ಎಷ್ಟು ಬಾಟಲಿ ಮದ್ಯ ಒಯ್ಯಲು ಅವಕಾಶವಿದೆ? ಇಲ್ಲಿದೆ ನಿಯಮ!
ಇದೀಗ ಅಡಾಲಿನಾ ಬಿವರೇಜ್‌ನ ಖ್ಯಾತ ಚೆಫ್ ಅಲುಮ್ ಸೂ ಅಹ್ನ್ ಹಾಗೂ ಸ್ಥಳೀಯ ಖ್ಯಾತ ಜ್ಯೂವೆಲ್ಲರಿ ಬ್ರ್ಯಾಂಡ್ ಮ್ಯಾರೋ ಫೈನ್ ಸಹಭಾಗಿತ್ವದಲ್ಲಿ ಈ ಕಾಕ್‌ಟೈಲ್ ಡ್ರಿಂಕ್ ತಯಾರಿಸಿ ರೆಸ್ಟೋರೆಂಟ್‌ನಲ್ಲಿ ಪರಿಚಯಿಸಿದೆ. ಇದೀಗ ವಿಶ್ವದ ಅತ್ಯಂತ ದುಬಾರಿ ಕಾಕ್‌ಟೈಲ್ ಡ್ರಿಂಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಕಾಕ್‌ಟೈಲ್ ಡ್ರಿಂಕ್‌ಗೆ ಜಗತ್ತಿನ ದುಬಾರಿ ಮೆಝ್ಕಾಲ್ ಡಿಸ್ಟಿಲ್ಡ್ ಅಲ್ಕೋಹಾಲ್ ಬಿವರೇಜ್ ಬಳಸಲಾಗಿದೆ. ಇದು ಅತ್ಯಂತ ವಿಶೇಷವಾದ ಡ್ರಿಂಕ್. ಇದು ಕಾಕ್‌ಟೈಲ್ ಡ್ರಿಂಕ್ ಆಗಿರುವ ಕಾರಣ ಸಹಜವಾಗಿ ಇತರ ಕೆಲ ಮಿಕ್ಸಿಂಗ್ ಇದ್ದೇ ಇದೆ. ಅತ್ಯಂತ ಖ್ಯಾತ ಹೇರ್ಲೂಮ್ ಟೊಮ್ಯಾಟೋ ನೀರು, ನಿಂಬೆ ಹಣ್ಣು, ಬಸಿಲ್ ಸೊಪ್ಪು, ಒಲೀವ್ ಆಯಿಲ್, ಚಿಲ್ಲಿ ಲಿಕ್ವೆರ್ ಮಿಶ್ರಣ ಮಾಡಿ ಈ ಕಾಕ್‌ಟೈಲ್ ತಯಾರಿಸಲಾಗುತ್ತದೆ. ಆದರೆ ಇದಕ್ಕೆ ಇಷ್ಟೊಂದು ಬೆಲೆ ಏಕೆ? ಅನ್ನೋ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಇಲ್ಲಿದೆ ಉತ್ತರ.
ಈ ಕಾಕ್‌ಟೈಲ್ ಅತ್ಯಂತ ವಿಶೇಷವಾಗಿ ತಯಾರಿಸಿದ ಕಾಕ್‌ಟೈಲ್. ಇದನ್ನು ಅತ್ಯಂತ ವಿಶೇಷ ಹಾಗೂ ಆಗರ್ಭ ಶ್ರೀಮಂತರು ಮಾತ್ರ ಖರೀದಿಸಲು ಸಾಧ್ಯ. ಹೀಗಾಗಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಈ ಕಾಕ್‌ಟೈಲ್ ಆರ್ಡರ್ ಪಡೆಯಲಿದೆ. ಹೀಗಾಗಿ ಆರ್ಡರ್ ಮಾಡುವ ಗ್ರಾಹಕನ ವಿಶೇಷ ಕ್ಷಣಗಳನ್ನು ಮತ್ತಷ್ಟು ಸ್ಮರಣೀಯ ಮಾಡಲಾಗುತ್ತದೆ. ಇದಕ್ಕಾಗಿ ಈ ಡ್ರಿಂಕ್ ಜೊತೆ ಮ್ಯಾರೋ ಫೈನ್ ಜ್ಯೂವೆಲ್ಲರಿ ಈ ಡ್ರಿಂಕ್‌ಗಾಗಿ ತಯಾರಿಸಿರುವ 9 ಕಾರೆಟ್ ಡೈಮೆಂಟ್ ಟೆನಿಸ್ ಚೈನ್ ನೀಡಲಾಗುತ್ತದೆ. ಈ ಚೈನ್‌ನಲ್ಲಿ 150 ಡೈಮಂಡ್ಸ್ ಹಾಗೂ 14 ಕಾರೆಟ್ ಚಿನ್ನ ಇರಲಿದೆ.
ಸಂಚಲನ ಸೃಷ್ಟಿಸಿದ ನಂಜನಗೂಡಿನ ಹುಲಿ, ಇದು ಭಾರತದ ಮೊದಲ ಬೆಲ್ಲದಿಂದ ತಯಾರಿಸಿದ ರಮ್!
ಹೊಸ ಮ್ಯಾರೋ ಮಾರ್ಟಿನ್ ಕಾಕ್‌ಟೈಲ್ ಡ್ರಿಂಕ್ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಂತೆ ಈ ವಿಂಡಿ ಸಿಟಿ ರೆಸ್ಟೋರೆಂಟ್ ಗ್ರಾಹಕರು ಫುಲ್ ಖುಷಿಯಾಗಿದ್ದಾರೆ. ಹೊಸ ಕಾಕ್‌ಟೈಲ್ ಆರ್ಡರ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.