ಚಳಿಗಾಲದಲ್ಲಿ ಬೆಚ್ಚಗಿರಲು ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಬಿಸಿ ಬಿಸಿ ಆಹಾರ, ಪಾನೀಯಗಳನ್ನು ಸೇವಿಸಬೇಕು. ಅದರಲ್ಲೂ ಕೆಲ ಮಸಾಲೆಗಳ ಸೇವನೆ ಚಳಿಗಾಲದಲ್ಲಿ ದೇಹ ಸಂಪೂರ್ಣ ಶಾಖದಿಂದ ಕೂಡಿರಲು ನೆರವಾಗುತ್ತದೆ. ಅದರಲ್ಲೊಂದು ಬೆಳ್ಳುಳ್ಳಿ. ಚಳಿಗಾಲದಲ್ಲಿ ಬೆಳ್ಳುಳ್ಳಿ ಸೇವನೆಯಿಂದ ಆರೋಗ್ಯಕ್ಕೇನು ಪ್ರಯೋಜನ ತಿಳಿಯಿರಿ.
ಚಳಿಗಾಲದ ದಿನಗಳಲ್ಲಿ ದೇಹಕ್ಕೆ (Body) ಹೆಚ್ಚಿನ ಶಾಖದ ಅಗತ್ಯವಿರುತ್ತದೆ. ಹೀಗಾಗಿ ಬೆಚ್ಚಗಿನ ಕೋಟುಗಳು ಮತ್ತು ಸ್ವೆಟ್ಟರ್‌ಗಳನ್ನು ಧರಿಸಬೇಕಾಗುತ್ತದೆ. ಆದರೆ ಇವಿಷ್ಟು ಮಾತ್ರವಲ್ಲದೆ, ಆರೋಗ್ಯಕರವಾಗಿ ಉಳಿಯಲು, ಆಂತರಿಕ ತಾಪಮಾನವು ಸಾಮಾನ್ಯವಾಗಿ ಉಳಿಯಲು ಆಹಾರ ಅವಶ್ಯಕ. ನೀವು ಬಿಸಿಯಾದ ಆಹಾರ (Food) ಮತ್ತು ಪಾನೀಯ (Drinks)ವನ್ನು ಸೇವಿಸಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಮಾತ್ರವಲ್ಲ ದೇಹ ಬಿಸಿಯಾಗಿಡುವಲ್ಲಿ ನಾವು ತೆಗೆದುಕೊಳ್ಳುವ ಮಸಾಲೆಗಳು ಸಹ ಮುಖ್ಯ ಪಾತ್ರ ವಹಿಸುತ್ತವೆ. ಹೀಗಾಗಿ ಚಳಿಗಾಲದಲ್ಲಿ ದೇಹದಲ್ಲಿ ಶಾಖವನ್ನು ಉತ್ಪಾದಿಸುವ ಮಸಾಲೆಗಳನ್ನು ಸೇವಿಸಬೇಕು. ಅದರಲ್ಲೊಂದು ಬೆಳ್ಳುಳ್ಳಿ.
ಚಳಿಗಾಲ ಆರಂಭವಾದೊಡನೆ ನೆಗಡಿ, ಜ್ವರ ಮತ್ತು ಹಲವಾರು ಇತರ ಋತುಮಾನದ ಕಾಯಿಲೆಗಳು ಕಾಡ ತೊಡಗುತ್ತವೆ. ಹೀಗಾಗಿ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಇದಕ್ಕಾಗಿ ಆಂತರಿಕವಾಗಿ ನಮ್ಮನ್ನು ಪೋಷಿಸಲು ನಮಗೆ ಸಹಾಯ ಮಾಡುವ ಆಹಾರಗಳನ್ನು ತೆಗೆದುಕೊಳ್ಳಬೇಕು. ಆರೋಗ್ಯ ವೃತ್ತಿಪರರು ಋತುಗಳು ಬದಲಾದಂತೆ ನಮ್ಮ ಆಹಾರಕ್ರಮವನ್ನು ಬದಲಾಯಿಸಲು ನಿರಂತರವಾಗಿ ಸಲಹೆ ನೀಡುತ್ತಾರೆ. ಚಳಿಗಾಲದ ಆಹಾರಗಳು ಯಾವಾಗಲೂ ಕಾಳುಗಳನ್ನು ಒಳಗೊಂಡ ಊಟ, ಸೊಪ್ಪು-ತರಕಾರಿಗಳು ಮತ್ತು ಸಾಮಾನ್ಯ ಆರೋಗ್ಯವನ್ನು ಉತ್ತೇಜಿಸುವ ಮಸಾಲೆ (Spices)ಗಳನ್ನು ಒಳಗೊಂಡಿರಬೇಕು.
Cucumber In Winter: ಚಳಿಗಾಲದಲ್ಲಿ ಸೌತೆಕಾಯಿ ತಿಂದ್ರೆ ಶೀತ, ಕೆಮ್ಮಿನ ಸಮಸ್ಯೆ ಜಾಸ್ತಿ
ಬೆಳ್ಳುಳ್ಳಿ (Garlic) ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಕೆಯಾಗುವ ಪದಾರ್ಥಗಳಲ್ಲಿ ಒಂದಾಗಿದೆ. ವಿಟಮಿನ್‌ಗಳು, ಖನಿಜಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣದಲ್ಲಿ ಸಮೃದ್ಧವಾಗಿದೆ. ನಿಮ್ಮ ನೆಚ್ಚಿನ ಪಾಕವಿಧಾನಗಳನ್ನು ಹೆಚ್ಚಿಸಲು ಇದನ್ನು ಬಳಸುವ ಮೊದಲು, ಪ್ರಾಚೀನ ಸಮಾಜಗಳು ಬೆಳ್ಳುಳ್ಳಿಯನ್ನು ಔಷಧಿಯ (Medicine) ರೂಪವಾಗಿ ಬಳಸುತ್ತಿದ್ದವು ಎಂದು ನಿಮಗೆ ತಿಳಿದಿದೆಯೇ?
ಚಳಿಗಾಲದಲ್ಲಿ ಬೆಳ್ಳುಳ್ಳಿ ಸೇವನೆಯ ಆರೋಗ್ಯ ಪ್ರಯೋಜನಗಳು
1. ಶೀತ ಮತ್ತು ಕೆಮ್ಮನ್ನು ತಡೆಯುತ್ತದೆ: ಚಳಿಗಾಲದಲ್ಲಿ ಶೀತ, ಕೆಮ್ಮು (Cough), ನೋಯುತ್ತಿರುವ ಗಂಟಲು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬೆಳ್ಳುಳ್ಳಿಯು ಆ ಕಾಲೋಚಿತ ಆರೋಗ್ಯ ಸಮಸ್ಯೆಗಳಿಂದ ನಿಮಗೆ ಪರಿಹಾರವನ್ನು ನೀಡುತ್ತದೆ. ದೆಹಲಿ ಮೂಲದ ಆರೋಗ್ಯ ಮತ್ತು ಸ್ವಾಸ್ಥ್ಯ ತಜ್ಞರಾದ ಡಾ. ಶಿಖಾ ಶರ್ಮಾ ಪ್ರಕಾರ ಬೆಳ್ಳುಳ್ಳಿ, ಸೋಂಕು ಮತ್ತು ಇತರ ಕಾಯಿಲೆಗಳನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ. ನೀವು ಸೈನುಟಿಸ್, ಶೀತ ಮತ್ತು ಜ್ವರದ ವಿರುದ್ಧ ಹೋರಾಡಲು ಬಿಸಿ ಸಾರುಗಳು ಮತ್ತು ಸೂಪ್‌ಗಳಿಗೆ ಬೆಳ್ಳುಳ್ಳಿಯನ್ನು ಸೇರಿಸಬಹುದು. ಆದರೆ ಕಚ್ಚಾ ರೂಪದಲ್ಲಿ ಸೇವಿಸಿದಾಗ ಬೆಳ್ಳುಳ್ಳಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
2. ತೂಕ ನಷ್ಟವನ್ನು ಸುಲಭಗೊಳಿಸುತ್ತದೆ: ಚಳಿಗಾಲದಲ್ಲಿ ಹೆಚ್ಚು ತಿನ್ನುವ ಬಯಕೆ ಕಾಡುವ ಕಾರಣ ಹೆಚ್ಚಿನವರು ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳುತ್ತಾರೆ. ಹೀಗಿರುವಾಗ ಬೆಳ್ಳುಳ್ಳಿ ಸೇವನೆ ತೂಕ ಕಳೆದುಕೊಳ್ಳಲು (Weight loss) ನಿಮಗೆ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯು ಉತ್ಕರ್ಷಣ ನಿರೋಧಕಗಳ ಉಗ್ರಾಣವಾಗಿದ್ದು ಅದು ದೇಹವನ್ನು ನಿರ್ವಿಷಗೊಳಿಸಲು ಮತ್ತು ಆರೋಗ್ಯಕರ ಚಯಾಪಚಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ಅಂಶಗಳು ಮತ್ತಷ್ಟು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ತೂಕ ನಷ್ಟವನ್ನು ಉತ್ತೇಜಿಸಲು ಬೆಳಿಗ್ಗೆ ಹಸಿ ಬೆಳ್ಳುಳ್ಳಿ ಮತ್ತು ಜೇನುತುಪ್ಪವನ್ನು (Honey) ಸೇವಿಸಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
Winter Foods: ಚಳಿಗಾಲದಲ್ಲಿ ಟೊಮೊಟೊ ಸೂಪ್ ಕುಡಿಯೋದ್ರಿಂದ ಇಷ್ಟೆಲ್ಲಾ ಲಾಭ
3. ಉಸಿರಾಟದ ಆರೋಗ್ಯವನ್ನು ಹೆಚ್ಚಿಸುತ್ತದೆ: ಬೆಳ್ಳುಳ್ಳಿಯಲ್ಲಿರುವ ಉರಿಯೂತದ ಗುಣಲಕ್ಷಣಗಳು ಉಸಿರಾಟ ಮತ್ತು ಶ್ವಾಸಕೋಶದ ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಇದು ಚಳಿಗಾಲದಲ್ಲಿ ಜ್ವರ (Fever) ಮತ್ತು ನೋಯುತ್ತಿರುವ ಗಂಟಲಿನ ಸಮಸ್ಯೆಯನ್ನು ಬಗೆಹರಿಸುತ್ತದೆ.
4. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ: ಚಳಿಗಾಲದಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗೆಯೇ ಹೃದಯ ಸಂಬಂಧಿ ಕಾಯಿಲೆಗಳು (Heart disease) ಹೆಚ್ಚು ಕಾಡುತ್ತವೆ. ಆದರೆ ಬೆಳ್ಳುಳ್ಳಿ ಸೇವನೆ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ. ಬೆಳ್ಳುಳ್ಳಿಯಲ್ಲಿರುವ ಶಾಖದ ಅಂಶ ಹೃದಯವನ್ನು ಆರೋಗ್ಯಕರವಾಗಿಡುತ್ತದೆ.
5. ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತದೆ: ಚಳಿಗಾಲದಲ್ಲಿ ಚರ್ಮ (Skin) ಶುಷ್ಕಗೊಳ್ಳುತ್ತದೆ, ಕೂದಲು ಒರಟು ಒರಟಾಗುತ್ತದೆ. ಹೀಗಿರುವಾಗ ಚರ್ಮ ಮತ್ತು ಕೂದಲಿನ (Hair) ಆರೋಗ್ಯವನ್ನು ಉತ್ತೇಜಿಸಲು ಸಹ ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ದೇಹವನ್ನು ಡಿಟಾಕ್ಸ್ ಆಗಿಡುತ್ತದೆ. ಹೀಗಾಗಿ ಚರ್ಮ, ಕೂದಲು ಸಹ ಹೆಚ್ಚು ಒಣಗುವುದಿಲ್ಲ.