ಜಾಹೀರಾತಿಗೆ ಮರುಳಾಗಿ ಅಪಾಯಕಾರಿ ಗೋಧಿಹಿಟ್ಟು ತರಬೇಡಿ! ಶುದ್ಧತೆ ಪರೀಕ್ಷೆಯ ಸಿಂಪಲ್​ ವಿಡಿಯೋ ಇಲ್ಲಿದೆ ನೋಡಿ..

Published : Feb 20, 2025, 06:09 PM ISTUpdated : Feb 21, 2025, 10:07 AM IST
ಜಾಹೀರಾತಿಗೆ ಮರುಳಾಗಿ ಅಪಾಯಕಾರಿ ಗೋಧಿಹಿಟ್ಟು ತರಬೇಡಿ! ಶುದ್ಧತೆ ಪರೀಕ್ಷೆಯ ಸಿಂಪಲ್​ ವಿಡಿಯೋ ಇಲ್ಲಿದೆ ನೋಡಿ..

ಸಾರಾಂಶ

ಗೋಧಿ ಹಿಟ್ಟು ಸಾಮಾನ್ಯವಾಗಿ ಬಳಕೆಯಲ್ಲಿದೆ. ಆದರೆ, ಪ್ರದೇಶಕ್ಕೆ ತಕ್ಕಂತೆ ಆಹಾರ ಸೇವಿಸುವುದು ಮುಖ್ಯ. ಬ್ರ್ಯಾಂಡೆಡ್ ಗೋಧಿ ಹಿಟ್ಟಿನ ಜಾಹೀರಾತುಗಳಿಗೆ ಮರಳಾಗಬೇಡಿ. ಹಿಟ್ಟಿನ ಪರಿಶುದ್ಧತೆ ಮುಖ್ಯ. FSSAI ಶುದ್ಧ ಗೋಧಿ ಹಿಟ್ಟನ್ನು ಪತ್ತೆಹಚ್ಚಲು ಕೆಲವು ವಿಧಾನಗಳನ್ನು ತಿಳಿಸಿದೆ. ನೀರಿಗೆ ಹಿಟ್ಟು ಸೇರಿಸಿ ಪರೀಕ್ಷಿಸಬಹುದು. ಶುದ್ಧ ಹಿಟ್ಟು ಸಿಹಿಯಾಗಿರುತ್ತದೆ, ನಯವಾಗಿರುತ್ತದೆ ಮತ್ತು ಕಡಿಮೆ ಬೂದಿ ಬಿಡುತ್ತದೆ. ನಿಂಬೆ ರಸ ಹಾಕಿದಾಗ ಗುಳ್ಳೆಗಳು ಬಂದರೆ, ಅದು ಕಲಬೆರಕೆಯಾಗಿರಬಹುದು.

 ಗೋಧಿಹಿಟ್ಟನ್ನು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಬಳಸಲಾಗುತ್ತದೆ. ಅನ್ನದ ಬದಲು ಚಪಾತಿ ತಿನ್ನಿ ಎಂದು ಹಲವರು ಹೇಳುವುದು ಉಂಟು. ಆದರೆ, ಆಯಾ ಪ್ರದೇಶಕ್ಕೆ ತಕ್ಕಂತೆ ಯಾವ ಆಹಾರವನ್ನು ತಿನ್ನಬೇಕು, ತಿನ್ನಬಾರದು ಎನ್ನುವುದು ಸರಿಯಾಗಿ ಅರ್ಥ ಮಾಡಿಕೊಂಡು ಆಮೇಲೆ ಡಯೆಟ್​ ಫಾಲೋ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಒಂದು ಪ್ರದೇಶದಲ್ಲಿ ಒಂದು ಆಹಾರ ಸರಿಯಾಗಿದ್ದರೆ, ಇನ್ನೊಂದು ಪ್ರದೇಶದಲ್ಲಿ ಅದು ವ್ಯರ್ಜ್ಯ. ಆದರೆ ಬೇರೆಯವರು ಮಾಡಿದ್ದನ್ನೇ ಅದರಲ್ಲಿಯೂ ವಿದೇಶಿಗರ ಬೆನ್ನುಹತ್ತಿ ಹೋಗಿರುವ ಹಲವು ಭಾರತೀಯರು ಇಲ್ಲಿ ಧಾರಾಳವಾಗಿ ಉತ್ತಮ ಆಹಾರ ಸಿಕ್ಕರೂ, ವಿದೇಶಿಗರ ಆಹಾರಕ್ಕೆ ಮೊರೆ ಹೋಗುವುದು ಇದೆ. ಅದೇನೇ ಇರಲಿ, ಸದ್ಯ ಗೋಧಿಯ ವಿಷಯಕ್ಕೆ ಬರುವುದಾದರೆ,  ಬ್ರ್ಯಾಂಡೆಡ್, ಜಾಹೀರಾತುಗಳ​ ಮೊರೆ ಹೋಗದೇ ನೀವು ಬಳಸುತ್ತಿರುವ ಗೋಧಿ ಹಿಟ್ಟು ಎಷ್ಟು ಪರಿಶುದ್ಧವಾಗಿದೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. 

ಕೆಲವು ಬ್ರ್ಯಾಂಡೆಡ್​ಗಳ ಗೋಧಿಹಿಟ್ಟನ್ನು ತಂದಾಗ ಅದು ತುಂಬಾ ಮೃದುವಾಗುವುದನ್ನು ನೀವು ನೋಡಬಹುದು. ಸಾಲದ್ದಕ್ಕೆ ಅದರ ಪ್ರಚಾರಕ್ಕೆ ಲಕ್ಷ ಲಕ್ಷ ಹಣ ಪಡೆದು ನಟ-ನಟಿಯರೂ ಕಾಣಿಸಿಕೊಂಡು ಜನರನ್ನು ಮರಳು ಮಾಡುವುದು ಇದೆ. ಆದರೆ ಖಂಡಿತವಾಗಿಯೂ ಆ ತಾರೆಯರು ತಮ್ಮ ಮನೆಗಳಲ್ಲಿ ಅದನ್ನು ಬಳಸುವುದಿಲ್ಲ ಎನ್ನುವುದೂ ನೆನಪಿರಲಿ. ತುಂಬಾ ಸಾಫ್ಟ್​ ಆಗುವುದಕ್ಕೆ ಅಪಾಯಕಾರಿ ಮೈದಾ ಹಿಟ್ಟನ್ನೂ ಸೇರಿಸಲಾಗುತ್ತದೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಅಷ್ಟೇ ಅಲ್ಲದೇ, ಅನೇಕ ಬಾರಿ ಗೋಧಿ ಹಿಟ್ಟಿಗೆ ಹೊಟ್ಟನ್ನು ಸೇರಿಸಲಾಗುತ್ತದೆ.ಹೊಟ್ಟು ಶುದ್ಧ ಗೋಧಿ ಹಿಟ್ಟಿಗಿಂತ ಅಗ್ಗವಾಗಿರುವುದರಿಂದ ಉದ್ಯಮಿಗಳಿಗೆ ಲಾಭ ಹೆಚ್ಚು ಸಿಗುತ್ತದೆ. ಇಂದು  ಇಂಥ ಆಹಾರ ಪದ್ಧತಿಗಳೇ ನಮ್ಮ ಅರಿವಿಗೆ ಬಾರದೇ ದೇಹವನ್ನು ಮೃತ್ಯುಕೂಪ ಮಾಡುತ್ತಿವೆ. 

ಬೇಳೆ ಬೇಯಿಸುವಾಗ ಬರುವ ನೊರೆ ಎಷ್ಟು ಡೇಂಜರ್‌ ಎನ್ನುವುದು ಗೊತ್ತಾ? ಸೇವಿಸಿದ್ರೆ ಏನಾಗುತ್ತೆ ನೋಡಿ!
 
 ಈ ಹಿನ್ನೆಲೆಯಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI ) ವಿಡಿಯೋ ಒಂದನ್ನು ಶೇರ್​ ಮಾಡಿದ್ದು, ಶುದ್ಧ ಗೋಧಿಹಿಟ್ಟನ್ನು ಹೇಗೆ ಪತ್ತೆ ಹಚ್ಚುವುದು ಎಂದು ತೋರಿಸಿಕೊಟ್ಟಿದೆ. ಪ್ರಾಧಿಕಾರದ ಈ ವಿಡಿಯೋದಲ್ಲಿ, ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ನೀರಿನ ಮೇಲೆ ಸ್ವಲ್ಪ ಹಿಟ್ಟನ್ನು ಸಿಂಪಡಿಸಿ. ಇದನ್ನು ಒಂದು ಚಮಚದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ಕಲಬೆರಕೆಯಾಗದಿದ್ದರೆ, ಹೊಟ್ಟಿನ ಕೆಲವು ಭಾಗಗಳು ನೀರಿನ ಮೇಲೆ ತೇಲುತ್ತಿರುವುದನ್ನು ಕಾಣಬಹುದು. ನೀರಿನ ಮೇಲೆ ಬಹಳಷ್ಟು ಹೊಟ್ಟು ತೇಲುತ್ತಿರುವುದನ್ನು ನೀವು ನೋಡಿದರೆ, ನಿಮ್ಮ ಹಿಟ್ಟಿನಲ್ಲಿ ಕಳಪೆ ಮತ್ತು ಅತಿಯಾದ ಹೊಟ್ಟು ಮಿಶ್ರಣವಾಗಿದೆ ಎಂದು ಅರ್ಥಮಾಡಿಕೊಳ್ಳಿ ಎಂದು ಹೇಳಲಾಗಿದೆ. 

ಇನ್ನೊಂದಿಷ್ಟು ವಿಧಾನಗಳು ಎಂದರೆ:
* ಒಂದು ಲೋಟ ನೀರಿಗೆ ಒಂದು ಚಮಚ ಹಿಟ್ಟು ಬೆರೆಸಿ. ಶುದ್ಧ ಹಿಟ್ಟು ಕೆಳಭಾಗದಲ್ಲಿ ನೆಲೆಗೊಳ್ಳುತ್ತದೆ, ನೀರು ಸ್ಪಷ್ಟವಾಗಿರುತ್ತದೆ. ನೀರು ಮೋಡ ಅಥವಾ ಹಾಲಿನಂತೆ ಬಿಳುಪಾಗಿ ಕಾಣುತ್ತಿದ್ದರೆ,  ಹೆಚ್ಚುವರಿ ಹೊಟ್ಟುಗಳಿಂದ ಕಲಬೆರಕೆಯಾಗಿರಬಹುದು. 
* ಇನ್ನು ಶುದ್ಧ ಗೋಧಿ ಹಿಟ್ಟು  ಸ್ವಲ್ಪ ಸಿಹಿಯಾಗಿರುತ್ತದೆ. ಹಿಟ್ಟು ಕಹಿ ಅಥವಾ ಲೋಹೀಯ ರುಚಿಯನ್ನು ಹೊಂದಿದ್ದರೆ, ಅದು ರಾಸಾಯನಿಕಗಳಿಂದ ಕಲಬೆರಕೆಯಾಗಿರಬಹುದು. 
* ನಿಮ್ಮ ಬೆರಳುಗಳ ನಡುವೆ ಸ್ವಲ್ಪ ಪ್ರಮಾಣದ ಹಿಟ್ಟನ್ನು ಉಜ್ಜಿಕೊಳ್ಳಿ. ಶುದ್ಧ ಹಿಟ್ಟು ನಯವಾದ ಮತ್ತು ಕೆನೆಯಂತೆ ಭಾಸವಾಗುತ್ತದೆ. ಹಿಟ್ಟು ಒರಟಾಗಿ ಅಥವಾ ಒರಟಾಗಿ ಕಂಡುಬಂದರೆ, ಅದು ಮರಳು ಅಥವಾ ಇತರ ಕಲ್ಮಶಗಳಿಂದ ಕಲಬೆರಕೆಯಾಗಿರಬಹುದು.
* ಒಂದು ಚಮಚ ಅಥವಾ ಲೋಹದ ತಟ್ಟೆಯಲ್ಲಿ ಸ್ವಲ್ಪ ಪ್ರಮಾಣದ ಹಿಟ್ಟನ್ನು ಸುಟ್ಟುಹಾಕಿ. ಶುದ್ಧ ಹಿಟ್ಟು ಸಂಪೂರ್ಣವಾಗಿ ಉಜ್ಜುತ್ತದೆ, ಕನಿಷ್ಠ ಬೂದಿಯನ್ನು ಬಿಡುತ್ತದೆ. ಅತಿಯಾದ ಬೂದಿ ಹಿಟ್ಟು ಕಲಬೆರಕೆಯಾಗಿದೆ ಎಂದು ಸೂಚಿಸುತ್ತದೆ.
* ಸ್ವಲ್ಪ ಪ್ರಮಾಣದ ಹಿಟ್ಟಿನ ಮೇಲೆ ಕೆಲವು ಹನಿ ನಿಂಬೆ ರಸವನ್ನು ಇರಿಸಿ. ಗುಳ್ಳೆಗಳು ಕಾಣಿಸಿಕೊಂಡರೆ, ಅದು ಹಿಟ್ಟಿನಲ್ಲಿ ಸೀಮೆಸುಣ್ಣದ ಪುಡಿ ಇರುವಿಕೆಯನ್ನು ಸೂಚಿಸುತ್ತದೆ.

ಜೊಮೆಟೋ ಬಾಯ್​ ಲೇಟಾದ್ದಕ್ಕೆ ಆರತಿ ಬೆಳಗಿ, ಕುಂಕುಮ ಇಟ್ಟು ಬರಮಾಡಿಕೊಂಡ ಉದ್ಯಮಿ: ವಿಡಿಯೋ ವೈರಲ್​

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ