ಬಫೆಯಲ್ಲಿ ಹೆಚ್ಚು ತಿನ್ಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ

By Suvarna News  |  First Published Jul 23, 2022, 11:04 AM IST

ಅದೇನೋಪ್ಪಾ ರೆಸ್ಟೋರೆಂಟ್‌ ಬಫೆಗೆ ಇಷ್ಟಪಟ್ಟಿದ್ದೆಲ್ಲಾ ತಿನ್ಬೇಕು ಅಂತ ಹೋಗ್ತೀನಿ. ಆದ್ರೆ ಏನು ತಿನ್ನೋಕೆ ಆಗಲ್ಲ ಅಂತ ಹಲವರು ಹೇಳ್ತಾರೆ. ನಿಮ್ದೂ ಇದೇ ಗೋಳಾ. ಹಾಗಿದ್ರೆ ಬಫೆಯಲ್ಲಿ ಸರಿಯಾಗಿ ತಿನ್ನೋದು ಹೇಗೆ ನಾವ್ ಹೇಳ್ತೀವಿ. 


ರೆಸ್ಟೋರೆಂಟ್‌ಗಳಲ್ಲಿ ಬಫೆಯಲ್ಲಿ ಊಟ ಮಾಡೋದು ಅಂದ್ರೆ ಎಲ್ಲಿಗೂ ಅಚ್ಚುಮೆಚ್ಚಿನ ವಿಚಾರ. ಸಮಂಜಸವಾದ ಬೆಲೆಯಲ್ಲಿ ರುಚಿಕರವಾದ ಅನ್‌ಲಿಮಿಟೆಡ್‌ ಭಕ್ಷ್ಯಗಳನ್ನು ತಿನ್ನಲು ಸಾಧ್ಯವಾಗುತ್ತದೆ. ಬಫೆಯಲ್ಲಿ ಸಾಕಷ್ಟು ಆಹಾರವನ್ನು ಟೇಸ್ಟ್ ಮಾಡಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದ್ರೆ ಕೆಲವೊಬ್ಬರಿಗೆ ಅಂದುಕೊಂಡಷ್ಟು ತಿನ್ನಲು ಸಾಧ್ಯವಾಗುವುದಿಲ್ಲ. ಇದಕ್ಕೆ ನೀವು ಬಫೆಯಲ್ಲಿ ಹೋಗಿ ಮೊದಲು ಯಾವ ರೀತಿಯ ಆಹಾರವನ್ನು ಸೇವಿಸುತ್ತೀರಿ ಎಂಬುದು ಸಹ ಕಾರಣವಾಗುತ್ತದೆ. ಮಾತ್ರವಲ್ಲ ಬಫೆಗೆ ಹೋದರೆ ನೀವು ಕೆಲವೊಂದು ಆಹಾರಗಳನ್ನು ತಿನ್ನಲೇಬಾರದು. ಯಾಕೆಂದರೆ ಬಫೆಯಲ್ಲಿ ಲಭ್ಯವಿರುವ ಇಂಥಾ ಆಹಾರ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡಬಹುದು. ಅಂಥಾ ಆಹಾರಗಳು ಯಾವುದೆಂದು ತಿಳಿಯೋಣ. 

ಕರಿದ ಆಹಾರಗಳು: ಕರಿದ ಆಹಾರಗಳು (Fried food) ಬಫೆಯಲ್ಲಿ ಅತ್ಯಂತ ಆಕರ್ಷಕವಾದ ಭಕ್ಷ್ಯಗಳಾಗಿವೆ. ಬಫೆಗೆ ಹೋದ ತಕ್ಷಣ ಎಲ್ಲರೂ ಮೊದಲು ಇಂಥಾ ಕರಿದ ಆಹಾರಗಳನ್ನು ತಿನ್ನಲು ಹಾತೊರೆಯುತ್ತಾರೆ. ಆದರೆ ರೆಸ್ಟೋರೆಂಟ್ ಬಫೆಯಲ್ಲಿ ಮೊತ್ತ ಮೊದಲ ಬಾರಿಗೇ ಇದನ್ನು ಆಯ್ಕೆ ಮಾಡುವುದು ಉತ್ತಮ ಆಯ್ಕೆಯಲ್ಲ. ಯಾಕೆಂದರೆ ಹೆಚ್ಚಿನ ರೆಸ್ಟೊರೆಂಟ್‌ಗಳು ಅಂತಹ ಆಹಾರಗಳನ್ನು ಹುರಿಯಲು ಅಗ್ಗದ ತೈಲಗಳನ್ನು ಬಳಸುತ್ತವೆ. ಅದು ನಿಮ್ಮ ಆರೋಗ್ಯಕ್ಕೆ (Health), ಹೃದಯಕ್ಕೆ (Heart) ಅಪಾಯವನ್ನುಂಟುಮಾಡುತ್ತದೆ.

Latest Videos

undefined

ಬಫೆಯಲ್ಲಿ ಮಹಿಳೆ ಹೆಚ್ಚು ತಿಂದಿದ್ದಾಳೆಂದು ಡಬಲ್ ಬಿಲ್ ನೀಡಿದ ರೆಸ್ಟೋರೆಂಟ್‌

ಮೊಳಕೆ ಕಾಳುಗಳು: ಮೊಳಕೆ ಕಾಳುಗಳು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಆದ್ರೆ ಈ ಆರೋಗ್ಯ ಪ್ರಯೋಜನಗಳ ಹೊರತಾಗಿಯೂ, ನೀವು ಯಾವಾಗಲೂ ಬಫೆಯಲ್ಲಿ ಅವುಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಇದಕ್ಕೆ ಕಾರಣವು ತುಂಬಾ ಸರಳವಾಗಿದೆ. ಮೊಳಕೆ ಕಾಳುಗಳು ಒದ್ದೆಯಾದ ವಾತಾವರಣದಲ್ಲಿ ಬೆಳೆಯುತ್ತವೆ. ಹೀಗಾಗಿ ಇದನ್ನು ಸರ್ವ್ ಮಾಡುವಾಗ ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸ್ವಲ್ಪ ಕಷ್ಟವಾಗುತ್ತದೆ. ಇದರರ್ಥ ಇದರಲ್ಲಿ ಸೂಕ್ಷ್ಮಜೀವಿಗಳೂ ಇದ್ದು, ಇದು ನಿಮ್ಮ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡಬಹುದು. ಹೀಗಾಗಿ ಬಫೆಯಲ್ಲಿ ಮೊಳಕೆ ಕಾಳು ತಿನ್ನೋದನ್ನು ತಪ್ಪಿಸಿ.

ಮೆಕರೋನಿ ಸಲಾಡ್: ಬಫೆಯಲ್ಲಿ ತಿನ್ನುವಾಗ ರುಚಿಕರವಾದ ಕೆನೆ ಸಲಾಡ್ ತಿನ್ನುವುದು ಯಾಕೆ ಒಳ್ಳೆಯದಲ್ಲ ನಾವು ತಿಳಿಸುತ್ತೇವೆ. ಕೆನೆ ಸಲಾಡ್ ದೀರ್ಘಕಾಲದವರೆಗೆ ಸಿದ್ಧಪಡಿಸಿ ಇಡಲಾಗುತ್ತದೆ. ಮೇಯೊ ಆಧಾರಿತ ಸಲಾಡ್‌ಗಳನ್ನು ದೀರ್ಘಕಾಲದವರೆಗೆ ತೆರೆದಿಟ್ಟಾಗ, ಅವು ಬ್ಯಾಕ್ಟೀರಿಯಾವನ್ನು ಆಕರ್ಷಿಸುತ್ತವೆ ಮತ್ತು ತ್ವರಿತವಾಗಿ ಹಾಳಾಗುತ್ತವೆ.

ಡ್ರೆಸ್ಸಿಂಗ್: ನೀವು ಬಫೆಯಲ್ಲಿ ಹಲವಾರು ಡ್ರೆಸ್ಸಿಂಗ್‌ಗಳನ್ನು ಕಾಣಬಹುದು ಮತ್ತು ಕೆಲವು ಸಾಮಾನ್ಯವಾದವುಗಳೆಂದರೆ ಇಟಾಲಿಯನ್ ಡ್ರೆಸ್ಸಿಂಗ್, ಹನಿ ಸಾಸಿವೆ ಡ್ರೆಸ್ಸಿಂಗ್ ಮತ್ತು ರಾಂಚ್ ಡ್ರೆಸ್ಸಿಂಗ್. ಬಫೆಯಲ್ಲಿ ಇರಿಸಲಾದ ಹೆಚ್ಚಿನ ಡ್ರೆಸ್ಸಿಂಗ್‌ಗಳಲ್ಲಿ ಸಕ್ಕರೆ, ಸೋಡಿಯಂ ಮತ್ತು ಸಂರಕ್ಷಕಗಳು ಅಧಿಕವಾಗಿರುತ್ತವೆ. ಹೀಗಾಗಿ ಇವುಗಳನ್ನು ದೀರ್ಘಕಾಲದವರೆಗೆ ತೆರೆದಿದ್ದರೆ, ಅವು ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಯ ಸ್ಥಳವಾಗಬಹುದು. ಮತ್ತು ನೀವು ಅವುಗಳನ್ನು ಸೇವಿಸಿದರೆ, ನೀವು ಆಹಾರದಿಂದ ಹರಡುವ ರೋಗಗಳಿಗೆ ತುತ್ತಾಗುವ ಹೆಚ್ಚಿನ ಅವಕಾಶಗಳಿವೆ.

Wedding Buffet: ಮದುವೆ ಊಟಾನಾ? ಹೊಟ್ಟೆ ಸರಿಯಾಗಿರ್ಬೇಕು ಎಂದರೆ ಹೀಗ್ಮಾಡಿ

ಸುಶಿ: ಇದು ಆರೋಗ್ಯಕರ ಜಪಾನೀಸ್ ಆಹಾರಗಳಲ್ಲಿ ಒಂದಾಗಿದೆ. ಇತ್ತೀಚಿಗೆ ಜನರು ಇದನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ  ಆದರೆ, ಉತ್ತಮ ಮತ್ತು ಆರೋಗ್ಯಕರ ಸುಶಿ ಯಾವಾಗಲೂ ತಾಜಾ ಮತ್ತು ಉತ್ತಮ ಗುಣಮಟ್ಟದ ಸಮುದ್ರಾಹಾರ (Sea food)ದೊಂದಿಗೆ ಮಾಡಬೇಕು. ಅಲ್ಲದೆ, ಉತ್ತಮ ಸುಶಿ ತಯಾರಿಸಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಯಾವಾಗಲೂ ಸುಶಿಯನ್ನು ವಿಶ್ವಾಸಾರ್ಹ ಸ್ಥಳದಿಂದ ತಿನ್ನಲು ಶಿಫಾರಸು ಮಾಡಲಾಗುತ್ತದೆ. ಹೀಗಾಗಿ ಬಫೆಯಲ್ಲಿ ಅಪ್ಪಿತಪ್ಪಿಯೂ ಸುಶಿಯನ್ನು ತಿನ್ನೋ ತಪ್ಪು ಮಾಡಲೇಬೇಡಿ.

click me!