ತುಪ್ಪ ಒಳ್ಳೆಯದು! ಹೇಗೆ? ಇಲ್ಲಿದೆ ಮಾಹಿತಿ!

By Suvarna News  |  First Published Jul 21, 2022, 5:55 PM IST

ತುಪ್ಪ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಒಂದು ಒಗ್ಗರಣೆಯಿಂದ ಹಿಡಿದು ಹಲವು ಸ್ವೀಟ್ಸ÷್ಗಳಿಗೂ ತುಪ್ಪ ಬಳಸಲಾಗುತ್ತದೆ. ಅತಿಯಾಗಿ ತುಪ್ಪ ಸೇವಿಸಿದರೆ ದೇಹದಲ್ಲಿ ಕೊಬ್ಬು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆದರೆ ತುಪ್ಪ ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮ ಎಂತಹದು ಈ ಬಗ್ಗೆ ಇಲ್ಲಿದೆ ಮಾಹಿತಿ.


ತುಪ್ಪ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಒಂದು ಒಗ್ಗರಣೆಯಿಂದ ಹಿಡಿದು ಹಲವು ಸ್ವೀಟ್ಸ÷್ಗಳಿಗೂ ತುಪ್ಪ ಬಳಸಲಾಗುತ್ತದೆ. ಇದು ಅದರ ರುಚಿ ಇನ್ನಷ್ಟು ಇಮ್ಮಡಿಗೊಳಿಸುತ್ತದೆ. ನಮ್ಮ ಭಾರತೀಯ ಪಾಕ ಪದ್ಧತಿಯಲ್ಲಿ ತನ್ನದೇ ಮಹತ್ವವನ್ನು ಪಡೆದಿದೆ. ಅತಿಯಾಗಿ ತುಪ್ಪ ಸೇವಿಸಿದರೆ ದೇಹದಲ್ಲಿ ಕೊಬ್ಬು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆದರೆ ತುಪ್ಪ ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮ ಎಂತಹದು ಈ ಬಗ್ಗೆ ಇಲ್ಲಿದೆ ಮಾಹಿತಿ.

ಹಸುವಿನ ಹಾಲಿನಿಂದ ಮಾಡಿದ ಬೆಣ್ಣೆಯನ್ನು ಚೆನ್ನಾಗಿ ಕಾಯಿಸಿ ತುಪ್ಪ ಮಾಡಲಾಗುತ್ತದೆ. ಇದು ಸಂಪೂರ್ಣ ಕೊಬ್ಬಿನಾಂಶದಿAದ ಕೂಡಿದೆ ಎಂದು ಎಷ್ಟೋ ಜನ ತುಪ್ಪ ಸೇವಿಸುವುದಕ್ಕೆ ಹಿಂಜರಿಯುತ್ತಾರೆ. ಆದರೆ ನಮ್ಮ ಬಹುತೇಕ ಆಹಾರ ಪದ್ಧತಿಯಲ್ಲಿ ತುಪ್ಪವನ್ನು ಪ್ರಧಾನವಾಗಿ ಬಳಸಲಾಗುತ್ತದೆ. ಅಲ್ಲದೆ ಇದು ಸುಲಭವಾಗಿ ಜೀರ್ಣವಾಗುವ ಕೊಬ್ಬಿನಾಂಶವಾಗಿದೆ. ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಇದ್ದು, ಆಯುರ್ವೇದದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಹಾಗಾಗಿ ಹಿಂದಿನ ಕಾಲದಿಂದಲೂ  ತುಪ್ಪವನ್ನು ಬಹುತೇಕ ಕಾಯಿಲೆಗಳಿಗೆ ಔಷಧಿಯಾಗಿ ನೀಡಲಾಗುತ್ತದೆ. 

Tap to resize

Latest Videos

ತುಪ್ಪದ ಪ್ರಯೋಜನಗಳು
1. ವಿಟಮಿನ್

ತುಪ್ಪದಲ್ಲಿ ದೇಹಕ್ಕೆ ಬೇಕಾದ ಹೇರಳವಾದ Vitaminn A, E, K ಅಂಶವಿದೆ. ಮೂಳೆಗಳು ಮತ್ತು ಹೃದಯ ಸ್ನಾಯುಗಳ ಉತ್ತಮ ಬೆಳವಣಿಗೆಗೆ ಇವು ಕಾರಣವಾಗಿವೆ. ಈ ಜೀವಸತ್ವಗಳು ಕರಗಬಲ್ಲ ಕೊಬ್ಬು ಮತ್ತು ತುಪ್ಪದಿಂದ ಮಾಡಿದ ಆಹಾರದ ಕೊಬ್ಬಿನೊಂದಿಗೆ ಮಿಕ್ಸ ಆಗುವುದರಿಂದ ದೇಹ ಅವುಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.

2. ಜೀರ್ಣಕ್ರಿಯೆ ಸಹಾಯ ಮಾಡುತ್ತದೆ
ತುಪ್ಪದ ಜೀರ್ಣಕ್ರಿಯೆಯು ಬ್ಯುಟೈರೇಟ್‌ನಿಂದ ಬ್ಯುಟರಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ಇದು ಅವಶ್ಯಕವಾಗಿದೆ. ಇದು ಉರಿಯೂತದ ಔಷಧವಾಗಿದೆ ಮತ್ತು ಆಹಾರದ ಜೀರ್ಣಕ್ರಿಯೆಗೆ ಹೆಚ್ಚು ಸಹಾಯ ಮಾಡುತ್ತದೆ. ಆಹಾರದಲ್ಲಿ ತುಪ್ಪ ಬಳಸುವುದರಿಂದ ಹೊಟ್ಟೆಯಲ್ಲಿನ ಇನ್ಫೆಕ್ಷನ್ ಮತ್ತು ಫುಡ್ ಪಾಯಿಸನ್(Food Poison) ಸಮಸ್ಯೆಯನ್ನು ನಿವಾರಿಸುತ್ತದೆ.

ಆರೋಗ್ಯಕ್ಕೆ ಎಮ್ಮೆ ತುಪ್ಪ ಒಳ್ಳೇದಾ, ಹಸುವಿನ ತುಪ್ಪ ಒಳ್ಳೇದಾ?

3. ರೋಗ ನಿರೋಧಕ ಶಕ್ತಿ (Immunity Power)
ತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಿದ್ದು, ಹೃದಯ ಹಾಗೂ ದೇಹದ ಆರೋಗ್ಯ ಕಾಪಾಡುತ್ತದೆ. ಈ ಉತ್ಕರ್ಷಣ ನಿರೋಧಕಗಳು ಎಲ್ಲಾ ಉತ್ತಮ ಜೀವಸತ್ವಗಳು, ಖನಿಜಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ದೇಹವನ್ನು ಆರೋಗ್ಯಕರವಾಗಿಸಲು ಮತ್ತು ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಅಲ್ಲದೆ ಆರೋಗ್ಯದ ಸಮತೋಲನ ಕಾಪಾಡುತ್ತದೆ.

4. ಉರಿ ನಿವಾರಿಸುತ್ತದೆ
ಆಯುರ್ವೇದದಲ್ಲಿ(Ayurveda) ತುಪ್ಪಕ್ಕೆ ಮಹತ್ವದ ಸ್ಥಾನವಿದೆ. ಇದನ್ನು ಔಷಧವಾಗಿ ಬಳಸಲಾಗುತ್ತದೆ. ಸುಟ್ಟ ಗಾಯಗಳಿಗೆ ತುಪ್ಪ ಹಚ್ಚುವುದರಿಂದ ಉರಿ ಕಡಿಮೆ ಆಗುವುದರ ಜೊತೆಗೆ ಗಾಯವೂ ಕಡಿಮೆಯಾಗುತ್ತದೆ. ಇದು ಚರ್ಮಕ್ಕೆ ಮಾಯಿಶ್ಚರೈಸರ್(Moisturise) ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸುಟ್ಟ ಗಾಯವನ್ನು(Wound) ಗುಣಪಡಿಸಲು ಸಹಾಯ ಮಾಡುತ್ತದೆ.

5. ಕೆಮ್ಮು (Cough)
ಕೆಮ್ಮು ಕಡಿಮೆ ಮಾಡಲು ತುಪ್ಪ ಉತ್ತಮ ಔಷಧ ಎನ್ನಲಾಗುತ್ತದೆ. ಒಂದೆರಡು ತುಳಸಿ(Tulasi) ಎಲೆಗೆ ಬೆಚ್ಚಗಿನ ತುಪ್ಪಕ್ಕೆ ಹಾಕಿಕೊಂಡು ತಿನ್ನುವುದರಿಂದ ಕೆಮ್ಮು ಮತ್ತು ಶೀತ ನಿವಾರಣೆಗೆ ಸಹಾಯ ಮಾಡುತ್ತದೆ. ಇದನ್ನು ಶುಂಠಿ ರಸ, ಏಲಕ್ಕಿ ಪುಡಿಯ ಜೊತೆಯೂ ಸೇವಿಸಲಾಗುತ್ತದೆ. ಹೀಗೆ ಮಾಡುವುದರಿಂದ ಕೆಮ್ಮಿನ ಜೊತೆಗೆ ಹೋರಾಡುವುದಲ್ಲದೆ ದೇಹದ ದುರ್ಬಲತೆಯಾಗುವುದನ್ನು ತಡೆಯುತ್ತದೆ.

6. ಮಲಬದ್ಧತೆ ನಿವಾರಣೆ (Constipation)
ಆಯುರ್ವೇದದ ಪಂಚಕರ್ಮ ಚಿಕಿತ್ಸೆಯಲ್ಲಿ(Panchakarma) ತುಪ್ಪವನ್ನು ಬಳಸಲಾಗುತ್ತದೆ. ಏಕೆಂದರೆ ತುಪ್ಪ ಮಲಬದ್ಧತೆಯನ್ನು(Constipation) ನಿವಾರಿಸುವ ಗುಣ ಹೊಂದಿದೆ. ಸಾಮಾನ್ಯವಾಗಿ ಬೆಚ್ಚಗಿನ ಹಾಲಿಗೆ ತುಪ್ಪ ಹಾಕಿಕೊಂಡು ರಾತ್ರಿ ಮಲಗುವ ಮುನ್ನ ಕುಡಿಯಲಾಗುತ್ತದೆ. ಇದರಿಂದ ದೇಹ ಒಣಗುವುದು ತಡೆಯುತ್ತದಲ್ಲದೆ ಮಲಬ್ಧತೆಯನ್ನು ನಿವಾರಿಸುತ್ತದೆ.

ತುಪ್ಪದಲ್ಲಿ ತರಕಾರಿ ಬೇಯಿಸುವುದು ಆರೋಗ್ಯಕ್ಕೆ ಒಳ್ಳೇದಾ ?

7. ಮೂಳೆಗೆ ಸಹಕಾರಿ (Bone Health)
ಶುದ್ಧ ತುಪ್ಪದಲ್ಲಿ ವಿಟಮಿನ್ ಹೆಚ್ಚಿನದಾಗಿದೆ. K2 ಇದು ಕ್ಯಾಲ್ಶಿಯಂ ಸೇರಿದಂತೆ ಖನಿಜಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಮೂಳೆಗಳು ಗಟ್ಟಿಯಾಗುತ್ತವೆ ಮತ್ತು ಆರೋಗ್ಯಕರವಾಗಿರುತ್ತವೆ. ಇದು ಸರಿಯಾದ ಹಲ್ಲಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಮತ್ತು ಅಪಧಮನಿಗಳ ಕ್ಯಾಲ್ಸಿಫಿಕೇಶನ್ ಅನ್ನು ತಡೆಯುತ್ತದೆ.

click me!