
ರುಚಿ ಮತ್ತು ಪೌಷ್ಟಿಕಾಂಶಗಳಿಂದ ತುಂಬಿರುವ ಸಾಂಪ್ರದಾಯಿಕ ಭಾರತೀಯ ಆಹಾರ (traditional Indian food item) ಪದಾರ್ಥವನ್ನು ವಿಶ್ವದ ಅತ್ಯಂತ ಕೆಟ್ಟ ಆಹಾರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ವಿಶ್ವದಲ್ಲಿ ಅತ್ಯಂತ ಕೆಟ್ಟ ಆಹಾರ ಎಂದು ಪರಿಗಣಿಸಲಾಗಿರುವ ಈ ಆಹಾರವನ್ನು ಭಾರತದ ಅನೇಕ ಭಾಗಗಳಲ್ಲಿ ಜನರು ನಿತ್ಯ ಸೇವನೆ ಮಾಡ್ತಿದ್ದಾರೆ. ಭಾರತದ ಮಿಸ್ಸಿ ರೋಟಿ (missi roti), ಕೆಟ್ಟ ಆಹಾರ ಪಟ್ಟಿಯಲ್ಲಿ ಜಾಗ ಪಡೆದಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಮಿಸ್ಸಿ ರೋಟಿಯನ್ನು ಪೋಷಕಾಂಶಗಳಿಂದ ಕೂಡಿರುವ ಆಹಾರ, ಸೂಪರ್ ಫುಡ್ (superfood) ಎಂದೇ ಭಾರತೀಯರು ನಂಬಿದ್ದಾರೆ. ಆದ್ರೆ Taste Atlas ಜಾರಿ ಮಾಡಿರುವ ವಿಶ್ವದ ಅತ್ಯಂತ ಕೆಟ್ಟ ಆಹಾರದಲ್ಲಿ ಇದನ್ನು ಸೇರಿಸಲಾಗಿದೆ.
ಕೆಟ್ಟ ಆಹಾರದ ಪಟ್ಟಿಯಲ್ಲಿ ಮಿಸ್ಸಿ ರೋಟಿಗೆ ಎಷ್ಟನೇ ಸ್ಥಾನ : Taste Atlas ಜಾರಿ ಮಾಡಿರುವ ವಿಶ್ವದ ಕೆಟ್ಟ ಆಹಾರದ ಪಟ್ಟಿಯಲ್ಲಿ ಮಿಸ್ಸಿ ರೋಟಿಯನ್ನು ಸೇರಿಸಲಾಗಿದೆ. Taste Atlas ವಿಶ್ವದ 100 ಕೆಟ್ಟ ಆಹಾರದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜನವರಿ 2025 ರಲ್ಲಿ ಈ ಪಟ್ಟಿ ಬಿಡುಗಡೆಯಾಗಿದೆ. 100 ಕೆಟ್ಟ ಆಹಾರ ಪಟ್ಟಿಯಲ್ಲಿ ಭಾರತದ ಪ್ರಸಿದ್ಧ ಆಹಾರ ಮಿಸ್ಸಿ ರೋಟಿ ಇರೋದು ಎಲ್ಲರನ್ನು ಅಚ್ಚರಿಗೊಳಿಸಿದೆ. ಭಾರತೀಯರ ಪ್ರಸಿದ್ಧ ಆಹಾರ ಮಿಸ್ಸಿ ರೋಟಿ 100ರಲ್ಲಿ 56ನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಭಾರತದ ಏಕೈಕ ಆಹಾರವಿದ್ದು, ಅದು ಭಾರತೀಯರ ಕೋಪಕ್ಕೆ ಕಾರಣವಾಗಿದೆ.
ಪಡ್ಡಿನಂತೆ ರುಚಿ ನೀಡುವ ಬನ್ ದೋಸೆ ತಯಾರಿಸುವ ವಿಧಾನ: ಇಲ್ಲಿದೆ ಸುಲಭ ರೆಸಿಪಿ
ಮಿಸ್ಸಿ ರೋಟಿ ಅಂದ್ರೇನು? : ಮಿಸ್ಸಿ ರೋಟಿ ಪಂಜಾಬ್‌ನ ಸಾಂಪ್ರದಾಯಿಕ ಆಹಾರ ಪದ್ಧತಿ. ಮಿಸ್ಸಿ ರೋಟಿಯನ್ನು ಕಡಲೆ ಹಿಟ್ಟು, ಮಸಾಲೆಗಳು ಮತ್ತು ತರಕಾರಿಗಳಿಂದ ತಯಾರಿಸಲಾಗುತ್ತದೆ. ಇದು ಗ್ಲುಟನ್-ಮುಕ್ತವಾಗಿದೆ. ಉತ್ತರ ಭಾರತೀಯ ಆಹಾರದಲ್ಲಿ ಮಿಸ್ಸಿ ರೋಟಿ ಪ್ರಸಿದ್ಧಿ ಪಡೆದಿದೆ. ಮಿಸ್ಸಿ ರೊಟ್ಟಿ ರುಚಿಕರ ಮಾತ್ರವಲ್ಲ, ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ಪ್ರೋಟೀನ್ ಮತ್ತು ಇತರ ಪೋಷಕಾಂಶಗಳಿವೆ. ಇದು ಸಾಂಪ್ರದಾಯಿಕ ಭಾರತೀಯ ಥಾಲಿಯ ಪ್ರಮುಖ ಭಾಗವಾಗಿದೆ. ಬರೀ ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಇದು ಪ್ರಸಿದ್ಧಿ ಪಡೆದಿದೆ.
ಹೃದಯ ಆರೋಗ್ಯದ ದೃಷ್ಟಿಯಿಂದ ಯಾವ ಅಡುಗೆ ಎಣ್ಣೆ ಸೂಕ್ತ ಗೊತ್ತೇ?
ಸೋಶಿಯಲ್ ಮೀಡಿಯಾದಲ್ಲಿ ವಿರೋಧ : ಸೋಶಿಯಲ್ ಮೀಡಿಯಾದಲ್ಲಿ ಇದು ಟ್ರೋಲ್ ಆಗಲು ಶುರುವಾಗಿದೆ. ಜನರು ಮಿಸ್ಸಿ ರೋಟಿಯನ್ನು ಕೆಟ್ಟ ಆಹಾರ ಪಟ್ಟಿಯಲ್ಲಿ ಸೇರಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರ ಟೇಸ್ಟ್ ಭಿನ್ನವಾಗಿರುತ್ತದೆ. ಆದ್ರೆ ಮಿಸ್ಸಿ ರೋಟಿಯಂತಹ ಆರೋಗ್ಯಕರ ಆಹಾರವನ್ನು ಈ ಪಟ್ಟಿಯಲ್ಲಿ ಸೇರಿಸುವುದು ತಪ್ಪು ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಬದನೆಕಾಯಿ ಅಥವಾ ಹಾಗಲಕಾಯಿಯಿಂದ ಮಾಡಿದ ಆಹಾರವನ್ನು ಪಟ್ಟಿಯಲ್ಲಿ ಸೇರಿಸ್ಬಹುದಿತ್ತು, ಮಿಸ್ಸಿ ರೋಟಿ ಏಕೆ ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. ಭಾರತದ ಎಲ್ಲ ಆಹಾರವೂ ಸೂಪರ್ ಆಹಾರವಲ್ಲ ಎಂಬುದನ್ನು ತೋರಿಸಲು ಪಟ್ಟಿಯಲ್ಲಿ ಮಿಸ್ಸಿ ರೋಟಿಯನ್ನು ಸೇರಿಸಲಾಗಿದೆ. ಇದು ತಮಾಷೆಯಾಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಕೆಲವರು ಇದ್ರಲ್ಲಿ ಪಕ್ಷಪಾತವಾಗಿದೆ ಎಂದಿದ್ದಾರೆ. ಈ ಪಟ್ಟಿಯಲ್ಲಿ ಹಲವು ಸ್ಪ್ಯಾನಿಷ್ ಭಕ್ಷ್ಯಗಳಿವೆ, ಆದರೆ ನಾರ್ಡಿಕ್ ದೇಶಗಳ ಭಕ್ಷ್ಯಗಳು ಕಡಿಮೆ ಇವೆ ಎಂದಿದ್ದಾರೆ.
ಕೆಟ್ಟ ಆಹಾರದ ಪಟ್ಟಿಯಲ್ಲಿ ಯಾವೆಲ್ಲ ಆಹಾರವಿದೆ? : ಟೇಸ್ಟ್ ಅಟ್ಲಾಸ್ ಜಾರಿ ಮಾಡಿದ ಕೆಟ್ಟ ಆಹಾರದ ಪಟ್ಟಿಯಲ್ಲಿ ಜೆಲ್ಲಿಡ್ ಈಲ್ಸ್, ಫ್ರಾಗ್ ಐ ಸಲಾಡ್, ಡೆವಿಲ್ಡ್ ಕಿಡ್ನಿಗಳು ಮತ್ತು ಬ್ಲಡ್ ಡಂಪ್ಲಿಂಗ್ಸ್‌ನಂತಹ ವಿಲಕ್ಷಣ ಭಕ್ಷ್ಯಗಳ ಜೊತೆಗೆ ಮಿಸ್ಸಿ ರೋಟಿಯನ್ನು ಸೇರಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.