ಮುಂಬೈ: ಕಳೆದ ವಾರ ಮುಂಬೈನ ಹಲವೆಡೆ ಧಾರಾಕಾರ ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತವಾಗಿದ್ದವು. ಹೊರಗಡೆ ಜೋರಾಗಿ ಮಳೆ ಸುರಿಯುತ್ತಿದ್ದರೆ ಮನೆ ಒಳಗೆ ಕುಳಿತಿರುವವರು ಏನಾದರೂ ಬಿಸಿ ಬಿಸಿ ಬಜ್ಜಿಯೋ ಮತ್ತಿನೇನೋ ತಿನ್ನಲು ಬಯಸುತ್ತಾರೆ. ಆದರ ಎಲ್ಲವನ್ನು ಮನೆಯಲ್ಲೇ ತಯಾರಿಸಿಕೊಂಡು ತಿನ್ನಲು ಸಮಯವೂ ಬೇಕು ಕೆಲಸವೂ ಹಿಡಿಯುವುದು. ಆದರೆ ಆನ್‌ಲೈನ್‌ನಲ್ಲಿ ಡೆಲಿವರಿ ಮಾಡಿದರೆ ಸ್ವಲ್ಪ ಹೊತ್ತಿನಲ್ಲೇ ನಿಮ್ಮ ಮನೆ ಬಾಗಿಲಿಗೆ ನೀವು ಇಷ್ಟ ಪಡುವ ಆಹಾರ ಬಂದು ಸೇರುತ್ತದೆ. ಆದರೆ ಈ ಮಳೆಯ ಸಮಯದಲ್ಲೂ ಆಹಾರವನ್ನು ಡೆಲಿವರಿ ಮಾಡುವ ಡೆಲಿವರಿ ಎಜೆಂಟರ್‌ಗಳಿಗೆ ಮಾತ್ರ ಇದು ಕಷ್ಟದ ಕೆಲಸ. ಆದಾಗ್ಯೂ ಒಬ್ಬ ಫುಡ್ ಡೆಲಿವರಿ ಬಾಯ್ ಮಳೆಯನ್ನು ಲೆಕ್ಕಿಸದೇ ಕುದುರೆಯ ಮೂಲಕ ಸಾಗಿ ಆಹಾರವನ್ನು ಡೆಲಿವರಿ ಮಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುದುರೆ ಮೇಲೆ ಇರುವ ವ್ಯಕ್ತಿಯ ಬೆನ್ನಿನಲ್ಲಿ ಸ್ವಿಗ್ಗಿ ಆಹಾರ ಸಂಸ್ಥೆಯ ಡೆಲಿವರಿ ಬ್ಯಾಗ್ ಕಾಣಿಸುತ್ತಿದೆ. ಇತರ ವಾಹನಗಳ ನಡುವೆ ಡೆಲಿವರಿ ಬಾಯ್ ಇರುವ ಕುದುರೆ ರಸ್ತೆ ದಾಟುತ್ತಿರುವುದನ್ನು ಯಾರೋ ಹಿಂದಿನಿಂದ ತಮ್ಮ ಫೋನ್‌ನಲ್ಲಿ ಸೆರೆ ಹಿಡಿದಿದ್ದಾರೆ. ಡೆಲಿವರಿ ಯುವಕನ ಈ ಸಿನಿಮಾ ಶೈಲಿಯ ಡೆಲಿವರಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ. ಬೆನ್ನಿಗೆ ಡೆಲಿವರಿ ಬ್ಯಾಗ್ ಏರಿಸಿ ವಾಹನ ಸಂದಣಿಯ ರಸ್ತೆಗಳಲ್ಲಿ ಯುವಕ ಕುದುರೆ ಮೇಲೆ ಸಾಗುತ್ತಿರುವುದನ್ನು ವಿಡಿಯೋ (video) ತೋರಿಸುತ್ತಿದೆ. ಇತರ ವಾಹನಗಳ ಜೊತೆ ಜೊತೆಯೇ ರಸ್ತೆ ದಾಟುವ ಕುದುರೆ ಮುಂದೆ ಸಾಗುತ್ತದೆ. ವಿಡಿಯೋ ನೋಡಿದ ಅನೇಕರು ಹಿಂದೆಂದೂ ಮುಂಬೈನಲ್ಲಿ ಈ ರೀತಿ ಕುದುರೆ (Horse) ಮೇಲೆ ಆಹಾರ ಪೂರೈಕೆ (food delivery) ಮಾಡಿದ್ದನ್ನು ನೋಡಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಯುವತಿಗೆ ಮಿಸ್ ಯೂ ಮೆಸೇಜ್ ಕಳುಹಿಸಿದ ಡೆಲಿವರಿ ಬಾಯ್: ರಿಪ್ಲೇ ಮಾಡಿದ ಸ್ವಿಗ್ಗಿ
ಕಳೆದ ಶುಕ್ರವಾರ (ಜು.1) ಮುಂಬೈ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿತ್ತು. ಇದು ಹಲವೆಡೆ ಸಂಚಾರ ಮಾರ್ಗ ಬದಲಾವಣೆಗೆ ಕಾರಣವಾಗಿತ್ತು. ಇದು 2015 ರ ನಂತರ ಮುಂಬೈನಲ್ಲಿ ದಾಖಲಾದ ಅತ್ಯಧಿಕ ಮಳೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ದಾಖಲೆ ತಿಳಿಸಿದೆ. ಜುಲೈ 5 ರವರೆಗೆ ಮುಂಬೈನಲ್ಲಿ ಭಾರೀ ಮಳೆ ಅಥವಾ ವಿಪರೀತ ಮಳೆಯಾಗುವ ಸೂಚನೆಯ ಯೆಲ್ಲೋ ಅಲರ್ಟ್ (yellow alert) ಅನ್ನು ಹವಾಮಾನ ಇಲಾಖೆ ನೀಡಿದೆ. ಮುಂಬೈನ ಪ್ರಾದೇಶಿಕ ಹವಾಮಾನ ಕೇಂದ್ರವು ಪ್ರಕಟಿಸಿದ ಹವಾಮಾನ ಬುಲೆಟಿನ್ ಪ್ರಕಾರ ಮುಂದಿನ 48 ಗಂಟೆಗಳ ಕಾಲ ಮುಂಬೈ ನಗರ ಮತ್ತು ಉಪನಗರಗಳಲ್ಲಿ ಸಾಧಾರಣ ಮಳೆ ಮತ್ತು ಪ್ರತ್ಯೇಕವಾಗಿ ಭಾರಿ ಮಳೆಯ ಮುನ್ಸೂಚನೆ ನೀಡಿತ್ತು.
ಕೆಲ ದಿನಗಳ ಹಿಂದೆ ಕೈಕಾಲು ಇಲ್ಲದ ವ್ಯಕ್ತಿಯೊಬ್ಬರು ತಮ್ಮ ಗಾಲಿಕುರ್ಚಿಯಲ್ಲಿ ತೆರಳುತ್ತ ಫುಡ್ ಡೆಲಿವರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಸ್ವಿಗ್ವಿ, ಝೊಮೆಟೋದಂತಹಾ ಫುಡ್ ಡೆಲಿವರಿ ಆಪ್‌ಗಳು ಅದೆಷ್ಟೋ ಮಂದಿಯ ಜೀವನವನ್ನು ರೂಪಿಸಿದೆ. ಕೆಲಸ ಸಿಗದೆ ಕಂಗಾಲಾಗಿದ್ದ ಅದೆಷ್ಟೋ ಯುವಕರು ಫುಡ್ ಡೆಲಿವರಿ ಬಾಯ್‌ಗಳಾಗಿ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಕಡಿಮೆ ಸಂಬಳಕ್ಕಾಗಿ ದುಡಿಯುವವರು ಪಾರ್ಟ್ ಟೈಮ್ ಆಗಿ ಫುಡ್ ಡೆಲಿವರಿ ಮಾಡಿ ಹಣ ಗಳಿಸುತ್ತಾರೆ. ಹಾಗೆಯೇ ಇಲ್ಲಿ ವಿಕಲಚೇತನರೊಬ್ಬರ ಪಾಲಿಗೆ ಫುಡ್ ಡೆಲಿವರಿ ಆಪ್ ವರದಾನವಾಗಿತ್ತು.
ಸೀರೆಯುಟ್ಟು ಕುದುರೆ ಸವಾರಿ ಮಾಡೋ ಮೋನಾಲಿಸಾ: ಬುಲೆಟ್, ಲಾರಿಯನ್ನೂ ಓಡಿಸುವ ಗಟ್ಟಿಗಿತ್ತಿ
ಗಣೇಶ್ ಮುರುಗನ್ ಚೆನ್ನೈನ 37 ವರ್ಷದ ವ್ಯಕ್ತಿಯಾಗಿದ್ದು, ಅವರು ಗಾಲಿಕುರ್ಚಿಯಲ್ಲಿ ಜನರಿಗೆ ಆಹಾರವನ್ನು ತಲುಪಿಸುತ್ತಾರೆ. ಸುಮಾರು ಆರು ವರ್ಷಗಳ ಹಿಂದೆ, ಅವರು ಟ್ರಕ್‌ಗೆ ಡಿಕ್ಕಿ ಹೊಡೆದ ನಂತರ ಅವರ ಬೆನ್ನುಹುರಿಗೆ ತೀವ್ರವಾದ ಗಾಯವಾಗಿತ್ತು. ಇದರಿಂದಾಗಿ ಅವರು ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಆದರೆ ಈ ದುರ್ಘಟನೆಯಿಂದ ವಿಚಲಿತರಾಗದೆ, ತಮ್ಮ ಮೋಟಾರು ಚಾಲಿತ ಗಾಲಿಕುರ್ಚಿಯನ್ನು ತೆಗೆದುಕೊಂಡು ಫುಡ್ ಡೆಲಿವರಿ ಮಾಡುತ್ತಿದ್ದು, ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.