ಆಹಾರದಲ್ಲಿ ಪೋಷಕಾಂಶ ಹಾಗೆಯೇ ಇರಬೇಕಾದ್ರೆ ಅಡುಗೆ ಮಾಡೋವಾಗ ಈ ಟಿಪ್ಸ್ ಫಾಲೋ ಮಾಡಿ

Published : Jun 09, 2022, 01:02 PM ISTUpdated : Jun 09, 2022, 01:04 PM IST
ಆಹಾರದಲ್ಲಿ ಪೋಷಕಾಂಶ ಹಾಗೆಯೇ ಇರಬೇಕಾದ್ರೆ ಅಡುಗೆ ಮಾಡೋವಾಗ ಈ ಟಿಪ್ಸ್ ಫಾಲೋ ಮಾಡಿ

ಸಾರಾಂಶ

ಆರೋಗ್ಯದ (Health) ಬಗ್ಗೆ ಪ್ರತಿಯೊಬ್ಬರಿಗೂ ಕಾಳಜಿ (Care) ಇರುತ್ತದೆ. ಹೀಗಾಗಿಯೇ ಅಳೆದೂ ತೂಗಿ ಆಹಾರ (Food) ತಿನ್ನುತ್ತಾರೆ. ಹೆಚ್ಚು ಪೌಷ್ಠಿಕಾಂಶ (Nutrition)ವಿರುವ ಆಹಾರಗಳನ್ನು ಆಯ್ದುಕೊಳ್ಳುತ್ತಾರೆ. ಆದ್ರೆ ನೀವು ಅಡುಗೆ (Cooking) ಮಾಡೋವಾದ ಸರಿಯಾದ ವಿಧಾನ ಅನುಸರಿಸದಿದ್ದರೆ ಪೌಷ್ಠಿಕಾಂಶವಿರುವ ಆಹಾರ ತಿಂದ್ರೂ ಪ್ರಯೋಜನವಿಲ್ಲ.

ಕೋವಿಡ್ (Covid) ಸಾಂಕ್ರಾಮಿಕ ಹರಡಲು ಆರಂಭವಾದಾಗಿನಿಂದಲೂ ಜನರಲ್ಲಿ ಆರೋಗ್ಯ (Health)ದ ಬಗ್ಗೆ ಕಾಳಜಿ ಹೆಚ್ಚಿದೆ. ಹೆಚ್ಚು ಪೌಷ್ಠಿಕಾಂಶ, ಖನಿಜ, ಕಬ್ಬಿಣ, ಪ್ರೋಟೀನ್ ಅಂಶವಿರುವ ಅಹಾರ (Food)ವನ್ನು ಸೇವಿಸಬೇಕೆಂಬ ಮನವರಿಕೆ ಮೂಡಿದೆ. ಹೀಗಾಗಿಯೇ ಹೆಚ್ಚು ಪೌಷ್ಠಿಕಾಂಶ (Nutrition)ವುಳ್ಳ ಹಣ್ಣು, ತರಕಾರಿ, ಕಾಳುಗಳನ್ನು ತಂದು ತಿನ್ನುತ್ತಿದ್ದಾರೆ. ಇಂಥವುಗಳನ್ನು ತಂದು ತಿನ್ನೋದ್ರಿಂದ ಆರೋಗ್ಯ ಚೆನ್ನಾಗಿರುತ್ತೆ ಅನ್ನೋದೇನೋ ನಿಜ. ಆದ್ರೆ ಅಡುಗೆ (Cooking) ಮಾಡುವಾಗ ಸರಿಯಾದ ವಿಧಾನವನ್ನು ಅನುಸರಿಸದಿದ್ದರೆ ಪೌಷ್ಠಿಕಾಂಶಗಳಲ್ಲೆಲ್ಲಾ ಕಳೆದುಹೋಗುತ್ತವೆ. ಹೀಗಾಗಿ ಅಡುಗೆ ಮಾಡುವಾಗ ನೀವು ಈ ಕೆಳಗೆ ಹೇಳಿದ ತಪ್ಪುಗಳನ್ನು ಮಾಡ್ತಿಲ್ಲ ಅನ್ನೋದನ್ನು ಖಚಿತಪಡಿಸಿಕೊಳ್ಳಿ.

ಆಹಾರ ಸೇವನೆ ಮಾಡುವಾಗ ಪೋಷಕಾಂಶಗಳ ಬಗ್ಗೆ ಅನೇಕರು ಆಲೋಚನೆ ಮಾಡುವುದಿಲ್ಲ. ಕೆಲವೊಮ್ಮೆ ಅಡುಗೆ ಮಾಡುವ ವಿಧಾನಗಳಿಂದ ಆಹಾರದಲ್ಲಿರುವ ಫೋಷಕಾಂಶ ನಷ್ಟವಾಗುತ್ತದೆ. ದೇಹಕ್ಕೆ ಪೋಷಕಾಂಶಗಳು ಅತ್ಯಗತ್ಯವಾಗಿದ್ದು, ಕೆಲವೊಂದು ಟಿಪ್ಸ್ ಮೂಲಕ ಆಹಾರದ ಪೋಷಕಾಂಶಗಳು ದೇಹ ಸೇರುವಂತೆ ಮಾಡಬಹುದು.

Kitchen Tips: ಮನೇಲಿ ಫ್ರಿಡ್ಜ್‌ ಇಲ್ವಾ ? ಪರ್ವಾಗಿಲ್ಲ ಹೀಗಿಟ್ರೂ ಹಣ್ಣು, ತರಕಾರಿ ಫ್ರೆಶ್ ಆಗಿರುತ್ತೆ

ತರಕಾರಿ ಕತ್ತರಿಸಿದ ಬಳಿಕ ತೊಳೆಯಬೇಡಿ: ತರಕಾರಿ (Vegetables)ಯನ್ನು ತಂದು ತೊಳೆದು ಕತ್ತರಿಸಿಕೊಳ್ಳುವ ಅಭ್ಯಾಸ ಒಳ್ಳೆಯದು. ಬದಲಿಗೆ ಎಲ್ಲವನ್ನೂ ಕತ್ತರಿಸಿ ನಂತರ ತರಕಾರಿಗಳನ್ನು ಒಟ್ಟಿಗೆ ತೊಳೆಯುವ ಅಭ್ಯಾಸ ಇಟ್ಟುಕೊಳ್ಳಬೇಡಿ. ಮುಖ್ಯವಾಗಿ ಈ ರೀತಿ ಮಾಡುವುದರಿಂದ ತರಕಾರಿಯಲ್ಲಿರುವ ಕೊಳೆ ಹೋಗಿರುವುದಿಲ್ಲ. ಮಾತ್ರವಲ್ಲ, ಕತ್ತರಿಸಿದ ತರಕಾರಿಗಳನ್ನು ತೊಳೆಯುವುದರಿಂದ ಅದರಲ್ಲಿರುವ ಪೋಷಕಾಂಶಗಳು ಸಂಪೂರ್ಣವಾಗಿ ನಷ್ಟವಾಗುತ್ತವೆ.

ತರಕಾರಿಯನ್ನು ಬೇಯಿಸಿದ ನಂತ್ರ ತೊಳೆಯಬೇಡಿ: ತರಕಾರಿಗಳನ್ನು ಚೆನ್ನಾಗಿ ತೊಳೆದ ನಂತರ ಬೇಯಿಸಿ. ಬೆಂದ ಬಳಿಕ ತರಕಾರಿ ತೊಳೆಯುವುದನ್ನು ಮಾಡಬೇಡಿ.

ಸಿಪ್ಪೆ ತೆಗೆಯುವಾಗ ಗಮನವಿರಲಿ: ತರಕಾರಿಗಳನ್ನು ಕಟ್ ಮಾಡುವಾಗ ತುಂಬಾ ಜಾಗರೂಕತೆ ವಹಿಸಬೇಕಾಗುತ್ತದೆ. ಕೆಲವೊಂದು ತರಕಾರಿಗಳ ಸಿಪ್ಪೆ ತೆಗೆದು ಬಳಸಬೇಕಾಗುತ್ತದೆ. ಸಿಪ್ಪೆ ತೆಗೆಯುವಾಗ ಗಮನವಿರಲಿ. ಸಿಪ್ಪೆ (Peel) ಜೊತೆ ಅನೇಕರು ತರಕಾರಿಯನ್ನೂ ಕತ್ತರಿಸಿ ಎಸೆಯುತ್ತಾರೆ. ಹಾಗಾಗದಂತೆ ನೋಡಿಕೊಳ್ಳಿ. ಸಿಪ್ಪೆ ತೆಗೆಯುವಾಗ ಬದಿಯಲ್ಲಿ ಕಟ್‌ ಮಾಡುವ ಭರದಲ್ಲಿ ಹೆಚ್ಚು ಭಾಗವನ್ನು ತೆಗೆದು ಹಾಕಿದರೆ ಪೋಷಕಾಂಶ ನಷ್ಟವಾಗುವುದು ಖಂಡಿತ.

Kitchen Hacks: ತರಕಾರಿ, ಹಣ್ಣು ಕಟ್ ಮಾಡೋದು ಅಂದ್ರೆ ತಲೆನೋವಾ ? ಇಲ್ಲಿದೆ ಸೂಪರ್ ಐಡಿಯಾ       

ತುಂಬಾ ಹೊತ್ತು ನೀರಲ್ಲಿ ನೆನೆಸಬೇಡಿ: ಅಡುಗೆ ಮಾಡುವ ಮೊದಲು ಅದರ ಕೊಳೆ, ವಿಷಕಾರಿ ಅಂಶ ಹೋಗಲೆಂದು ಹಲವರು ತರಕಾರಿಯನ್ನು ನೀರಿನಲ್ಲಿ ತುಂಬಾ ಸಮಯ ನೆನೆಸಿಡುತ್ತಾರೆ. ಹಾಗೇ ಮಾಡಬೇಡಿ, ಇದರಿಂದ ಪೋಷಕಾಂಶ ನಷ್ಟವಾಗುವ ಸಾಧ್ಯತೆಯಿರುತ್ತದೆ. ನೀರಿನ ಅಂಶವನ್ನು ತರಕಾರಿ ಹೆಚ್ಚಾಗಿ ಹೀರಿಕೊಳ್ಳುವುದ್ರಿಂದ ಇದು ಆರೋಗ್ಯಕ್ಕೂ ಹಾನಿಯುಂಟು ಮಾಡುತ್ತದೆ.

ತರಕಾರಿ ಕತ್ತರಿಸಿ ತುಂಬಾ ಹೊತ್ತು ಹಾಗೇ ಬಿಡಬೇಡಿ: ಅಡುಗೆ ಮಾಡುವ ಸ್ಪಲ್ಪ ಮಾತ್ರ ಮೊದಲು ತರಕಾರಿಯನ್ನು ಕತ್ತರಿಸಿ. ಮೊದಲೇ ತರಕಾರಿ ಕತ್ತರಿಸಿ ತೆರೆದ ಸ್ಥಳದಲ್ಲಿ ಇಡಬೇಡಿ. ಅಥವಾ ತರಕಾರಿಯನ್ನು ಕತ್ತರಿಸಿ ತುಂಬಾ ಗಂಟೆಗಳ ನಂತರ ಅಡುಗೆ ಮಾಡಲು ಹೊರಡಬೇಡಿ. ಇದರಿಂದ ಅದರಲ್ಲಿರುವ ಸತ್ವವೆಲ್ಲವೂ ನಷ್ಟವಾಗಿರುತ್ತದೆ.

Eating Disorder: 22 ವರ್ಷಗಳಿಂದ ಒಮ್ಮೆಯೂ ಸಸ್ಯಾಹಾರ ಸೇವನೆ ಮಾಡಿಲ್ಲ ಈ ಮಹಿಳೆ!

ಹೆಚ್ಚು ಉಪ್ಪು, ಖಾರ, ಮಸಾಲೆ ಸೇರಿಸಬೇಡಿ: ಅಡುಗೆ ಮಾಡಲು ತರಕಾರಿ ಬೇಯಿಸುವ ಸಂದರ್ಭ ಯಾವತ್ತೂ ಹೆಚ್ಚು ಉಪ್ಪು (Salt), ಖಾರ, ಮಸಾಲೆಯನ್ನು ಸೇರಿಸಿಕೊಳ್ಳಬೇಡಿ. ಇವುಗಳನ್ನು ಕಡಿಮೆ ಪ್ರಮಾಣದಲ್ಲಿ ಹಾಕಿ. ತರಕಾರಿ ಸಂಪೂರ್ಣವಾಗಿ ಬೆಂದ ನಂತರ ಬೇಕಾದರೆ ಹೆಚ್ಚು ಮಸಾಲೆ ಸೇರಿಸಿಕೊಳ್ಳಿ,. ಇದರಿಂದ ಪೋಷಕಾಂಶ ನಷ್ಟವಾಗುವ ಭಯವಿರುವುದಿಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?