ಬೇಸಿಗೆಯಲ್ಲಿ ಆರೋಗ್ಯ ಚೆನ್ನಾಗಿರಬೇಕಾ? ನೇರಳೆ ತಿನ್ನೋದ ಮರೀಬೇಡಿ

By Suvarna News  |  First Published Jun 8, 2022, 5:31 PM IST

ಬೇಸಿಗೆಯಲ್ಲಿ(Summer) ತಂಪು ನೀಡುವ ಆಹಾರ ಪದಾರ್ಥಗಳ ಸೇವನೆ(Cold Food) ಹಾಗೂ ಹಣ್ಣುಗಳ(Fruit) ಸೇವನೆ ಆರೋಗದ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇನ್ನೇನು ಮುಂಗಾರು ಆರಂಭವಾಗುತ್ತಿದೆ ಎನ್ನುವಾಗ ಬರುವ ನೇರಳೆ ಹಣ್ಣು(Jamun Fruit) ಸಣ್ಣಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುವ ಹಣ್ಣು. ಮೇ ಅಂತ್ಯ ಕಾಲದಲ್ಲಿ ನೇರಳೆ ಹಣ್ಣುಗಳ ಸುರಿಮಳೆ. ಈ ಬಗ್ಗೆ ಮಾಹಿತಿ ಇಲ್ಲಿದೆ. 


ಬೇಸಿಗೆಯಲ್ಲಿ ತಂಪು ನೀಡುವ ಆಹಾರ ಪದಾರ್ಥಗಳ ಸೇವನೆ ಹಾಗೂ ಹಣ್ಣುಗಳ ಸೇವನೆ ಆರೋಗದ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಒಳ್ಳೊಳ್ಳೆ ಹಣ್ಣುಗಳು ಬೇಕೆನ್ನಿಸುವುದು ಸಹಜ. ಮಾವಿನ ಹಣ್ಣು(Mango), ಕಲ್ಲಂಗಡಿ(Watermelon), ಕರಬೂಜ ಕಂಡರAತೂ ಬಿಡುವುದೇ ಇಲ್ಲ. ಮೇ ಅಂತ್ಯ ಕಾಲದಲ್ಲಿ ನೇರಳೆ ಹಣ್ಣುಗಳ ಸುರಿಮಳೆ. ಇನ್ನೇನು ಮುಂಗಾರು ಆರಂಭವಾಗುತ್ತಿದೆ ಎನ್ನುವಾಗ ಬರುವ ನೇರಳೆ ಹಣ್ಣು ಸಣ್ಣಮಕ್ಕಳಿಂದ ಹಿಡಿದು ದೊಡ್ಡವರಿಗೂ(Elders) ಇಷ್ಟವಾಗುವ ಹಣ್ಣು. ಸ್ವಲ್ಪ ಒಗರು, ಸಿಹಿಯಾಗಿರುವ ಈ ನೇರಳೆ ಹಣ್ಣು ತಿಂದರೆ ಅದರ ರಸ ಬಾಯಿ ತುಂಬಾ ಹರಡುತ್ತದೆ. ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತೆ. ಇದನ್ನು ಇಂಗ್ಲಿಷ್‌ನಲ್ಲಿ ಬ್ಲಾಕ್‌ಬರ‍್ರಿ(Blackberry) ಎಂದು ಕರೆಯುತ್ತಾರೆ. ಈ ಹಣ್ಣು ತಿನ್ನುವುದರಿಂದ ಏನೆಲ್ಲಾ ಪ್ರಯೋಜನವಿದೆ? ಇದರಲ್ಲಿರುವ ಗುಣಗಳ ಬಗ್ಗೆ, ಹೇಗೆ ಇದನ್ನು ತಿನ್ನಬೇಕು ಎಂಬುದರ ಮಾಹಿತಿ ಇಲ್ಲಿದೆ. 

ಗುಣಗಳು
ನೇರಳೆ ಹಣ್ಣಿನಲ್ಲಿ ಹೇರಳವಾಗಿ ಮ್ಯಾಂಗನೀಸ್(Mangnees), ಹೆಚ್ಚಿನ ಪ್ರಮಾಣದ ಫೈಬರ್(Fiber), ವಿಟಮಿನ್ ಸಿ, ಕೆ(Vitamin C, K) ಇದ್ದು, ಮಿದುಳು(Brain) ಸಂಬAಧಿತ ಖಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದರಲ್ಲಿದೆ. 
1.ಒಂದು ಕಪ್ ನೇರಳೆ ಹಣ್ಣಿನಲ್ಲಿ 30.2 ಮಿಲಿ ಗ್ರಾಂನಷ್ಟು ವಿಟಮಿನ್ ಸಿ(Vitamin C) ಸಿಗುತ್ತದೆ. ಇದರಿಂದ ಮೂಳೆಗಳನ್ನು(Bone) ಬಲಪಡಿಸುತ್ತದೆ. ಜೊತೆಗೆ ಗಾಯಗಳನ್ನು ಗುಣಪಡಿಸುವುದಲ್ಲದೆ, ಚರ್ಮದ(Skin) ಬೆಳವಣಿಗೆ, ಕಬ್ಬಿಣಾಂಶ(Iron), ಸಾಮಾನ್ಯ ಶೀತ(Cold) ನಿವಾರಣೆ ಮಾಡುತ್ತದೆ.
2. ಕೆಲ ಅಧ್ಯಯನದ ಪ್ರಕಾರ ನೇರಳೆಯಲ್ಲಿ ಕ್ಯಾನ್ಸರ್(Cancer) ತಡೆಗಟ್ಟುವ ಗುಣವಿದೆ ಎನ್ನಲಾಗಿದೆ.
3. ಡಯೆಟ್ ಫ್ರೆಂಡ್ಲಿಯಾಗಿರುವ(Diet Friendly) ನೇರಳೆಯಲ್ಲಿ ಫೈಬರ್(Fiber) ಅಂಶವಿದ್ದು, ಜೀರ್ಣಕ್ರಿಯೇ(Digestion) ಸಮಸ್ಯೆಗಳನ್ನು ಬಗೆಹರಿಸುತ್ತದೆ. ಹೊಟ್ಟೆ ನೋವು(Stmoch pain), ಮಲಬದ್ಧತೆಯನ್ನು(Constipation) ನಿವಾರಿಸುತ್ತದೆ. ಫೈಬರ್ ಪ್ರಮಾಣ ದೇಹಕ್ಕೆ ಸರಿಯಾಗಿ ಸಿಗಲಿಲ್ಲವೆಂದಲ್ಲಿ ಹೃದಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೊಲೆಸ್ಟಾçಲ್(Cholesterol) ಕಡಿಮೆ ಮಾಡುವುದರ ಜೊತೆಗೆ ರಕ್ತದಲ್ಲಿನ ಶುಗರ್ ಲೆವೆಲ್ ಕಂಟ್ರೋಲ್(Sugar Level Control) ಮಾಡುತ್ತದೆ.
4. ಶರೀರಕ್ಕೆ ಬೇಕಾಗುವ ವಿಟಮಿನ್ ಕೆ(Vitamin K) ಅಂಶ ಇದರಲ್ಲಿ ಹೆಚ್ಚಿದೆ. ಮೂಳೆ ಫ್ರಾö್ಯಕ್ಚರ್(Bone Fracture), ಪಿರಿಯಡ್ಸ್ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗುವುದನ್ನು ನಿಯಂತ್ರಿಸುತ್ತದೆ. ಒಂದು ಕಪ್ ನೇರಳೆಯಲ್ಲಿ 29  ಮೈಕ್ರೋಗ್ರಾಂನಷ್ಟು ವಿಟಮಿನ್ ಕೆ ಸಿಗುತ್ತದೆ. 
5. ನೇರಳೆ ಹಣ್ಣು ಸೇವನೆಯಿಂದ ಮೆದುಳು ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ವಯಸ್ಸಾದ ನಂತರ ಕಾಣಿಸಿಕೊಳ್ಳುವ ನೆನಪಿನ ಶಕ್ತಿ(Memory Power) ಕೊರತೆ ನಿವಾರಿಸುತ್ತದೆ.

ಆರೋಗ್ಯಕ್ಕೆ ಬೇಕು Seasonal Fruits, ಬೇಸಿಗೆಗೆ ಇವೇ ಬೆಸ್ಟ್

ಡಯೆಟ್‌ನಲ್ಲಿ ನೇರಳೆ ಹೀಗೆ ಬಳಸಿದರೆ ಉತ್ತಮ
1. ಬೇಸಿಗೆಯಲ್ಲಿ ನೇರಳೆ ಸಿಕ್ಕರೆ ಬಿಡಬೇಡಿ. ಏಕೆಂದರೆ ಇದು ದೇಹವನ್ನು ತಂಪಾಗಿರಿಸುತ್ತದೆ. ಶೇ.84ರಷ್ಟು ನೀರಿನಾಂಶವಿದ್ದು ಫಾಸ್ಪರಸ್(Phosphorus) ಹಾಗೂ ಮಿನರಲ್ಸ್(Minerals) ಹೆಚ್ಚಿದೆ. ಹಾಗಾಗಿ ದೇಹವನ್ನು ತಂಪಾಗಿರಿಸುವುದರ ಜೊತೆಗೆ ಆಯಕ್ಟಿವ್(Active) ಆಗಿರುವಂತೆ ನೋಡಿಕೊಳ್ಳುತ್ತದೆ. ಇದನ್ನು ಸಂಜೆಯ ಸ್ನಾö್ಯಕ್ಸ್(Evening Snacks) ರೀತಿಯಲ್ಲಿ ಬೀಜ ತಗೆದು ಜ್ಯೂಸ್(Juice) ಮಾಡಿಕೊಂಡು ಕುಡಿಯಬಹುದು.
2. ನೇರಳೆಯಲ್ಲಿ ವಿಟಮಿನ್ ಬಿ1, ಬಿ2, ಬಿ3, ಬಿ4 ಇದ್ದು, ಆಗಾಗ್ಗೆ ಸೇವಿಸುವುದರಿಂದ ಇಮಿನ್ಯುಟಿ ಪವರ(Immunity Power) ಹೆಚ್ಚಿಸುತ್ತದೆ. ವಿಟಮಿನ್ ಸಿ ಇರುವುದರಿಂದ ಆಯಂಟಿ ಬ್ಯಾಕ್ಟೀರಿಯವಾಗಿ(Anti Bacteria) ಕೆಲಸ ಮಾಡುತ್ತದೆ. ಇದು ದೇಹದ ಹೊರಗಿನ(Outer) ಹಾಗೂ ಒಳಗಿನ(Inner) ಗಾಯವನ್ನು ಗುಣಪಡಿಸುತ್ತದೆ. ನೇರಳೆಯ ಪೌಡರ್(Powder) ಅನ್ನು ನೀರಿನೊಂದಿಗೆ ಕಲಸಿ ಗಾಯದ ಮೇಲೆ ಹಚ್ಚಬಹುದು ಹಾಗೂ ನೀರಿನೊಂದಿಗೆ ಸೇವಿಸಬಹುದು. 
3. ಬೇಸಿಗೆಯಲ್ಲಿ ಜೀರ್ಣದ(Digestion) ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ನೇರಳೆ ಹಣ್ಣು ಸೇವನೆಯಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ಯಕೃತ್(Liver) ಮತ್ತು ಗುಲ್ಮವನ್ನು ಸಕ್ರಿಯಗೊಳಿಸಿ ಜೀರ್ಣ ಶಕ್ತಿಗೆ ಸುಗಮಗೊಳಿಸುವ ಗುಣ ಇದರಲ್ಲಿದೆ.
4. ಸಕ್ಕರೆ ಖಾಯಿಲೆ(Sugar Level Control) ನಿಯಂತ್ರಣಕ್ಕೆ ಒಳ್ಳೆಯ ಮನೆಯೌಷಧಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಗ್ಲೆöÊಕಮಿಕ್ ಇಂಡೆಕ್ಸ್(Glycemic Index) ಅಂದರೆ ಗ್ಲೂಕೋಸ್(Glucose) ಪ್ರಮಾಣ ಕಡಿಮೆ ಇದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಂಟ್ರೋಲ್ ಮಾಡುವ ಶಕ್ತಿ ಹೊಂದಿದೆ. ಇದರೊಂದಿಗೆ ಬಾಯಾರಿಕೆ, ನಿಶಕ್ತಿ, ಮೂತ್ರವಿಸರ್ಜನೆ ಸಮಸ್ಯೆ ಇರುವವರು ನೇರಳೆ ಹಣ್ಣು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ನೇರಳೆ ಹಣ್ಣಿನ ಬೀಜವನ್ನು ಒಣಗಿಸಿ ಪುಡಿ ಮಾಡಿ ಬಿಸಿನೀರಿನೊಂದಿಗೆ ದಿನವೂ ಸೇವಿಸುವುದರಿಂದ ಶುಗರ್ ಬೇಗ ಕಂಟ್ರೋಲ್‌ಗೆ ಬರುತ್ತದೆ ಎಂದು ಹೇಳಲಾಗುತ್ತದೆ.
5. ಬೇಸಿಗೆಯ ಬಿಸಿಲಿನಿಂದಾಗಿ ಸ್ಕಿನ್ ಪ್ರಾಬ್ಲಂ(Skin Problem) ಕಾಮನ್ ಆಗಿದೆ. ಅತಿಯಾಗಿ ಬೆವರುವುದು(Swet), ಚರ್ಮ ಒಡೆಯುವುದು ಕಾಣಿಸಿಕೊಳ್ಳುತ್ತದೆ. ನೇರಳೆಯಲ್ಲಿ ಚರ್ಮಕ್ಕೆ ಬೇಕಾದ ವಿಟಮಿನ್ ಸಿ(Vitamin C) ಹೆಚ್ಚಿರುವುದರಿಂದ ಕಾಂತಿಯುಕ್ತ ತ್ವಚೆಯನ್ನು ಪಡೆಯಬಹುದು. ಇದನ್ನು ಪೇಸ್ಟ್ ಮಾಡಿ ಸ್ಕçಬ್(Scrub) ರೀತಿ ಮುಖ(Face) ಹಾಗೂ ಕೈ, ಕಾಲುಗಳಿಗೆ ಹಚ್ಚುತ್ತಾರೆ.
6. ದೈನಂದಿನ ಬದುಕಿನಲ್ಲಿ ಡಯೆಟ್ ಬಗ್ಗೆ ಎಲ್ಲರೂ ತಲೆಕೆಡಿಸಿಕೊಳ್ಳುತ್ತಾರೆ. ತೂಕ ಕಡಿಮೆಗೆ(Weight Loss) ಸಹಕಾರಿಯಾಗಿರುವ ಈ ನೇರಳೆ ಪ್ರತೀ ದಿನ ಸಲಾಡ್(Salad) ರೀತಿಯಲ್ಲೋ ಅಥವಾ ಪ್ಯೂರಿ(Puree), ಜ್ಯೂಸ್ ರೀತಿಯಲ್ಲಿ ಸೇವಿಸುವುದರಿಂದ ತೂಕ ಹೆಚ್ಚುವುದನ್ನು ನಿಯಂತ್ರಿಸಬಹುದು.

ಮಾವಿನ ಹಣ್ಣಿನ ಸೀಸನ್ ಇದು, ತಿನ್ನಬೇಕು ನಿಜ, ಅತಿಯಾಗಿ ಅಲ್ಲ

Tap to resize

Latest Videos

ಎಚ್ಚರ ಇರಲಿ
1. ಎರಡು ದಿನಕ್ಕೊಮ್ಮೆ 100 ಗ್ರಾಂನಷ್ಟು ನೇರಳೆ ತಿನ್ನುವುದು.
2. ತಿನ್ನುವ ಮೊದಲು ಉಪ್ಪು(Salt) ನೀರಿನಲ್ಲಿ 5 ನಿಮಿಷ ನೆನಸಿಟ್ಟು ಚೆನ್ನಾಗಿ ತೊಳೆದು ಸೇವಿಸಬೇಕು.
3. ಗರ್ಭಿಣಿಯರು(Pregnent) ಹಾಗೂ ಹಾಲುಣಿಸುವ ತಾಯಂದಿರು ನೇರಳೆ ಹಣ್ಣು ಸೇವಿಸಬಾರದು.
4. ನೇರಳೆ ಹಣ್ಣು ತಿನ್ನುವ ಮೊದಲು(Before) ಹಾಗೂ ತಿಂದ ನಂತರ(After) 2 ಗಂಟೆಗಳ ಕಾಲ ಹಾಲು(Milk) ಕುಡಿಯುವುದು ಒಳ್ಳೆಯದಲ್ಲ.

 

 

click me!