ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ಅಧಿಕ ತೂಕದ ಸಮಸ್ಯೆ ಕಂಡು ಬರುತ್ತದೆ. ಬೇಗ ತೂಕ ಇಳಿಸಿಕೊಳ್ಳೋಕೆ ಹಲವೊಬ್ಬರು ವರ್ಕ್‌ಔಟ್ ಸಹ ಮಾಡುತ್ತಾರೆ. ಆದ್ರೆ ನಿಮ್ಗೊಂದು ವಿಷ್ಯ ಗೊತ್ತಾ ? ಬೇಕಾಬಿಟ್ಟಿ ತಿಂದು ವರ್ಕ್‌ಟ್ ಮಾಡ್ತೀನಿ ಅಂದ್ರೆ ಏನೂ ಪ್ರಯೋಜನವಾಗಲ್ಲ.
ಇವತ್ತಿನ ದಿನಗಳಲ್ಲಿ ಅಧಿಕ ತೂಕ ಹಲವರಲ್ಲಿ ಕಂಡು ಬರುವ ಸಮಸ್ಯೆ. ಅದಕ್ಕೆ ವ್ಯಾಯಾಮ, ಡಯೆಟ್, ಯೋಗ ಅಂತ ಏನೇನೋ ಮಾಡ್ತಾರೆ. ಆದ್ರೂ ತೂಕ ಕಡಿಮೆಯಾಗಲ್ಲ. ಅಧಿಕ ತೂಕದಿಂದ ಅನೇಕ ಗಂಭೀರ ರೋಗಗಳು ಸಹ ಕಾಡಬಹುದು. ಜನರು ತಮ್ಮ ಬೆಳೆಯುತ್ತಿರುವ ಹೊಟ್ಟೆ ಮತ್ತು ಕೊಬ್ಬನ್ನು ಕಡಿಮೆ ಮಾಡಲು ಏನೇನೋ ಕಸರತ್ತು ಮಾಡ್ತಾರೆ. ಅದರಲ್ಲೂ ಮುಖ್ಯವಾಗಿ ಡಯೆಟ್ ಪದ್ಧತಿಯನ್ನು ಅನುಸರಿಸುತ್ತಾರೆ. ಕರಿದ ತಿಂಡಿ, ಜಂಕ್‌ಫುಡ್‌ಗಳನ್ನು ತಿನ್ನೋದು ಬಿಟ್ಟು ಸೊಪ್ಪು ತರಕಾರಿ, ಹಣ್ಣುಗಳನ್ನು ಹೆಚ್ಚು ಸೇವಿಸುತ್ತಾರೆ. ಆದ್ರೆ ಇನ್ನು ಕೆಲವೊಬ್ಬರು ಹಾಗಲ್ಲ. ಇಷ್ಟವಾಗಿದ್ದೆಲ್ಲಾ ತಿನ್ತಾ ಹೋಗ್ತಾರೆ. ಆಮೇಲೆ ಚೆನ್ನಾಗಿ ವರ್ಕ್‌ಟ್ ಮಾಡ್ತಾರೆ. ಹಲವರ ಪ್ರಕಾರ ಬೇಕಾಬಿಟ್ಟಿ ತಿಂದು ವರ್ಕ್‌ಔಟ್ ಮಾಡಿದ್ರೆ ಸಾಕು ಮತ್ತೇನೂ ತೊಂದ್ರೆ ಆಗಲ್ಲ. ಆದ್ರೆ ವಾಸ್ತವ ಹಾಗಿಲ್ಲ. ಬೇಕಾಬಿಟ್ಟಿ ತಿಂದು ವರ್ಕೌಟ್ ಮಾಡಿದ್ರೆ ನೋ ಯೂಸ್ ಎನ್ನುತ್ತೆ ಅಧ್ಯಯನ.
ಕಳಪೆ ಆಹಾರಪದ್ಧತಿಯಿಂದ ದೀರ್ಘಾವಧಿಯ ಆರೋಗ್ಯ ಸಮಸ್ಯೆ
ವ್ಯಾಯಾಮವು (Exercise) ಅನಾರೋಗ್ಯಕರ ಆಹಾರ (Food)ದಿಂದ ದೇಹದ ಮೇಲಾಗುವ ಪರಿಣಾಮವನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂದು ಅಧ್ಯಯನವನ್ನು ತೋರಿಸುತ್ತದೆ. ವಿಶೇಷವಾಗಿ ದೀರ್ಘಾವಧಿಯ ಆರೋಗ್ಯ (Health) ಮತ್ತು ದೀರ್ಘಾಯುಷ್ಯದ ಮೇಲೆ ಕೆಟ್ಟ ಆಹಾರಪದ್ಧತಿಯು ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಈ ಅಧ್ಯಯನದ ವರದಿಯನ್ನು ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ. ಯುಕೆ ಬಯೋಬ್ಯಾಂಕ್ ಯೋಜನೆಯಲ್ಲಿ ದಾಖಲಾದ 360,600 ವಯಸ್ಕರ ಆಹಾರ ಮತ್ತು ವ್ಯಾಯಾಮದ ಮಾದರಿಗಳ 11-ವರ್ಷ ಮೌಲ್ಯಮಾಪನದಿಂದ ಸಂಶೋಧನೆಗಳನ್ನು ಪಡೆಯಲಾಗಿದೆ. ಈ ಸಂಶೋಧನೆಯಲ್ಲಿ ಕಡಿಮೆ ಹಣ್ಣು ಮತ್ತು ತರಕಾರಿ ಸೇವನೆ, ಹೆಚ್ಚು ಸಂಸ್ಕರಿಸಿದ ಮಾಂಸ ಸೇವನೆಯನ್ನು ಕಳಪೆ ಆಹಾರಪದ್ಧತಿಯೆಂದು ವಿವರಿಸಲಾಗಿದೆ.
ಈ ರೀತಿ ಆಹಾರ ತಯಾರಿಸಿದ್ರೆ ತೂಕ ಇಳಿಯೋದು ಗ್ಯಾರಂಟಿ!
ಆರೋಗ್ಯಕರ ಆಹಾರವನ್ನು ಅಭ್ಯಾಸ ಮಾಡುವಾಗ ಹೆಚ್ಚಿನ ಮಟ್ಟದ ದೈಹಿಕ ಚಟುವಟಿಕೆಯಲ್ಲಿ ತೊಡಗಿರುವ ಭಾಗವಹಿಸುವವರು ಕಡಿಮೆ ಸಾವಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಫಲಿತಾಂಶಗಳು ಸೂಚಿಸಿವೆ - ಅವರ ಮರಣದ ಅಪಾಯವು ಒಟ್ಟಾರೆಯಾಗಿ 17% ರಷ್ಟು ಕಡಿಮೆಯಾಗಿದೆ. ಉತ್ತಮ ಆಹಾರಪದ್ಧತಿಯನ್ನು ಅನುಸರಿಸುವವರು ಹೃದಯರಕ್ತನಾಳದ ಕಾಯಿಲೆಯಿಂದ ಸಾಯುವ ಸಾಧ್ಯತೆ 19% ಕಡಿಮೆ, ಮತ್ತು ಕ್ಯಾನ್ಸರ್‌ಗಳ ಸಾಧ್ಯತೆಯೂ 27% ಕಡಿಮೆಯಿದೆ ಎಂಬುದು ತಿಳಿದುಬಂದಿದೆ.
ಆರೋಗ್ಯಕರ ಆಹಾರ ಸೇವನೆಯಿಂದ ದೀರ್ಘಾಯುಷ್ಯ
ನಿಯಮಿತ ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಆಹಾರವು ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೆಲವು ಜನರು ಹೆಚ್ಚಿನ ಮಟ್ಟದ ವ್ಯಾಯಾಮದೊಂದಿಗೆ ಕಳಪೆ ಆಹಾರದ ಪರಿಣಾಮಗಳನ್ನು ಸರಿದೂಗಿಸಬಹುದು ಅಥವಾ ಕಡಿಮೆ ದೈಹಿಕ ಚಟುವಟಿಕೆಯ ಪರಿಣಾಮಗಳನ್ನು ಉತ್ತಮ ಗುಣಮಟ್ಟದ ಜೊತೆಗೆ ಸರಿದೂಗಿಸಬಹುದು ಎಂದು ಭಾವಿಸಬಹುದು. ಆಹಾರ ಪದ್ಧತಿ ಡೇಟಾವು ದುರದೃಷ್ಟವಶಾತ್, ಇದು ಹಾಗಲ್ಲ ಎಂದು ತೋರಿಸುತ್ತದೆ. ಆಹಾರ ಮತ್ತು ದೈಹಿಕ ಚಟುವಟಿಕೆ ಎರಡೂ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ನಿರ್ಣಾಯಕವಾಗಿವೆ... ಸಾಧ್ಯವಾದರೆ, ಎರಡೂ ವಿಷಯಗಳನ್ನು ಸರಿಯಾಗಿ ಮಾಡಲು ಪ್ರಯತ್ನಿಸಿ ಎಂದು ಅಧ್ಯಯನಕಾರರು ಹೇಳಿದ್ದಾರೆ.
ತೂಕ ಹೆಚ್ಚಾಗೋ ಭಯದಿಂದ ಕರಿದ ತಿಂಡಿ ತಿನ್ತಿಲ್ವಾ ? ಫ್ಯಾಟ್ ಫ್ರೀ ಸ್ನ್ಯಾಕ್ಸ್ ತಿನ್ನಿ
ದೈಹಿಕ ಚಟುವಟಿಕೆ ಮತ್ತು ಉತ್ತಮ ಆಹಾರ ಪದ್ಧತಿಗಳು ಎನರ್ಜಿ, ಗ್ಲೂಕೋಸ್ ಮತ್ತು ಮೆಟಾಬಾಲಿಕ್ ಹೋಮಿಯೋಸ್ಟಾಟಿಕ್ ಪ್ರಕ್ರಿಯೆಗಳ ಮೇಲೆ ಪೂರಕ ಮತ್ತು ಸಂವಾದಾತ್ಮಕ ಪರಿಣಾಮಗಳನ್ನು ಹೊಂದಿವೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ. ಮೂಲಭೂತವಾಗಿ, ವ್ಯಾಯಾಮ ಮತ್ತು ಉತ್ತಮ ಆಹಾರವು ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿದೆ ಎಂದು ತಿಳಿದುಬಂದಿದೆ.
ಸಂಶೋಧನೆಗಳು ಮೂಲಭೂತವಾಗಿ, ವ್ಯಾಯಾಮವು ಅನಾರೋಗ್ಯಕರ ಆಹಾರದ ಪರಿಣಾಮವನ್ನುಇಲ್ಲವಾಗಿಸಬಹುದು ಎಂಬ ಜನರ ಸಾಮಾನ್ಯ ನಂಬಿಕೆಯನ್ನು ತಳ್ಳಿಹಾಕಿದೆ., ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಫ್ರೈಗಳನ್ನು ತಿನ್ನುವುದು, ನಂತರ ವ್ಯಾಯಾಮ ಮಾಡಿ ಇದನ್ನು ಕರಗಿಸಿಕೊಳ್ಳಬಹುದು ಎಂಬುದು ನಿಜವಲ್ಲ. ಒಬ್ಬನು ಹೆಚ್ಚು ವ್ಯಾಯಾಮ ಮಾಡುವುದು ಹೆಚ್ಚು ತಿನ್ನಬಹುದು ಎಂಬುದಕ್ಕೆ ಸೂಚನೆಯಲ್ಲ. ಆಹಾರದಲ್ಲಿಯೂ, ವ್ಯಾಯಾಮಲ್ಲಿಯೂ ಸಮತೋಲನ ಮುಖ್ಯ ಎಂಬುದನ್ನು ಅಧ್ಯಯನವು ವಿವರಿಸುತ್ತದೆ.