ಒಂದು ಕಾಲಕ್ಕೆ ಬಡತನದ ಸಂಕೇತವಾಗಿದ್ದ ಆಟಿಯ ಆಹಾರಗಳು ಈಗ ಆ ಕಾಲದ ಅರಿವು ಮೂಡಿಸುವ ಹೊಸ ಸಂದರ್ಭವನ್ನು ಸೃಷ್ಟಿಸಿದೆ. ಆಷಾಡ ತಿಂಗಳೆಂದರೆ ಅದು ತುಳುವರಿಗೆ ಜೀವಂತಿಕೆ ತುಂಬಿದ ದಿನಗಳು
ವರದಿ- ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಜು.23) : ಕರಾವಳಿಯಲ್ಲೀಗ ಆಟಿ ತಿನಿಸು ತಿನ್ನುವುದೇ ಒಂದು ಖುಷಿ. ಒಂದು ಕಾಲಕ್ಕೆ ಬಡತನದ ಸಂಕೇತವಾಗಿದ್ದ ಆಟಿಯ ಆಹಾರಗಳು ಈಗ ಆ ಕಾಲದ ಅರಿವು ಮೂಡಿಸುವ ಹೊಸ ಸಂದರ್ಭವನ್ನು ಸೃಷ್ಟಿಸಿದೆ. ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಬಂಟರ ಯಾನೇ ನಾಡವರ ಮಾತೃ ಸಂಘದ ಸಮಿತಿ ಸಹಭಾಗಿತ್ವದಲ್ಲಿ ಆಟಿಡಂಜಿ ಪೊಂಜೆವೆನ ಕೂಟ ಅಪರೂಪದ ಕಾರ್ಯಕ್ರಮ ನಡೆಯಿತು.
ರಾಜ್ಯದ ಇತರ ಭಾಗಗಳಲ್ಲಿ ಆಷಾಡ ತುಳುವರಿಗೆ ಅದು ಆಟಿ. ಈ ತಿಂಗಳೆಂದರೆ ಅದು ತುಳು(Tulu)ವರಿಗೆ ಜೀವಂತಿಕೆ ತುಂಬಿದ ದಿನಗಳು. ಆಟಿ ತಿಂಗಳೆಂದರೆ ಬಡತನ(Poverty) ಮತ್ತು ಹಸಿವಿನದಿನಗಳಾಗಿತ್ತು. ಹಸಿವು ಮತ್ತು ಬಡತನವಿದ್ದಲ್ಲಿ ಆರೋಗ್ಯ(Health) ವಿರುತ್ತೆ ಅನ್ನೋದು ಹಿಂದಿನವರ ನಂಬಿಕೆ. ಅದೇ ಕಾರಣಕ್ಕೆ ನಮ್ಮ ಪೂರ್ವಿಕರು ನೂರು ವರ್ಷಕ್ಕೂ ಅಧಿಕ ಬದುಕುತ್ತಿದ್ದರು. ಪ್ರಕೃತಿದತ್ತವಾದ ಆಹಾರಗಳನ್ನು ಸೇವಿಸುತ್ತಾ ಒಂದು ರೀತಿಯ ವೃತಾಚರಣೆಯನ್ನೇ ಮಾಡುತ್ತಿದ್ದರು. ಒಂದು ರೀತಿಯಲ್ಲಿ ಆಯುರ್ವೇದದ(Ayurveda) ಆಹಾರ ಪದ್ಧತಿ ಪಾಲಿಸುತ್ತಿದ್ದರು.
Dakshina Kannada; ಒಮ್ಮೆ ನೋಡಬೇಕು ತುಳುನಾಡ ಟ್ರಾವೆಲರ್, ಸಮರ ಕಲೆ ಸಾಧಕನ ಹೊಸ ಪ್ರಯೋಗ
ಈ ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಮಂಡಳಿಗಳಿಂದ ಸುಮಾರು 15 ಬಗೆಯ ಆಟಿಯ ತಿನಿಸುಗಳನ್ನು ಉಣಪಡಿಸಲಾಯ್ತು. ತಿಮರೆ ಚಟ್ನಿ, ಪೆಲಕಾಯಿ ಗಟ್ಟಿ, ಮೂಡೆ, ಪೆಲಕಾಯಿ ಮುಳುಕ, ಅರಶಿನ ಎಲೆ ಗಟ್ಟಿ, ತೇವು ಚಟ್ನಿ, ಪತ್ರೊಡೆ, ಉಪ್ಪಡ್ ಪಚ್ಚಿರ್, ಮೆಂತೆ ಗಂಜಿ, ತೇಟ್ಲದ ಗಸಿ ಹೀಗೆ ಇನ್ನೂ ಅನೇಕ ಬಗೆಯ ಹಳೆ ಪದ್ದತಿಯ ಆಹಾರಗಳನ್ನು ಉಣಬಡಿಸಲಾಯಿತು.
ಆಷಾಡವೆಂದರೆ ರಣ ಮಳೆ ಬೀಸುವ ಕಾಲ. ಜನರಿಗೆ ಮಳೆಗಾದಲ್ಲಿ ಯಾವುದೇ ತರಕಾರಿಗಳು ಸಿಗುತ್ತಿರಲಿಲ್ಲ. ಹಾಗಾಗಿ ಗೆಡ್ಡೆ- ಗೆಣಸು, ಸೊಪ್ಪುಗಳಿಂದಲೇ ತಯಾರಿಸಿದ ಆಹಾರ ಸೇವಿಸೋದು ಇಲ್ಲಿನ ಪದ್ಧತಿಯಾಗಿತ್ತು. ಆಷಾಡದ ಊಟದ ಮೆನು ಬೇರೇನೇ ಇರುತ್ತಿತ್ತು. ಈಗೆಲ್ಲಾ ಆಷಾಡದ ಊಟ ಎಲ್ಲಿ ಸಿಗುತ್ತೆ ಹೇಳಿ?
'ತುಳುನಾಡ ದೈವಾರಾಧಕರಿಗೆ ತಟ್ಟಿದ ಬಿಸಿ : ನೆರವಿಗೆ ಮೊರೆ'
ಮಳೆಗಾದಲ್ಲಿ ರೋಗರುಜಿನಗಳು ಬಾಧಿಸೋದು ಜಾಸ್ತಿ ಹಾಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ದೇಹದ ಉಷ್ಣತೆಯನ್ನು ಕಾಪಾಡಲು ಅನುಕೂಲ ಆಗುವಂತಹಾ ಆಹಾರ ಪದ್ಧತಿ ರೂಢಿಯಲ್ಲಿತ್ತು. ಜ್ಞಾಪಕ ಶಕ್ತಿ ಹೆಚ್ಚಿಸುವ ತಿಮರೆ ಚಣ್ನಿ, ಜೀರ್ಣಕ್ಕೆ ಅನುಕೂಲ ಮಾಡುವ ಬೇಯಿಸಿದ ಮಾವಿನ ಗೊಜ್ಜು, ಸಿಹಿಮೂತ್ರ ಬಿಪಿ ನಿಯಂತ್ರಣಕ್ಕೆ ಕಂಚಾಲ, ಲೋ ಬಿಪಿಯವರಿಗೆ ಉಪ್ಪಡ ಪಚ್ಚಿಲ್,ಕಬ್ಬಿಣಾಂಶದ ತೊಜಂಕು, ಮೂಲ ವ್ಯಾದಿ ತಡೆಗೆ ತೇವು ತೇಟ್ಲ, ಘಮಘಮಿಸುವ ಹಲಸಿನ ಮುಳ್ಕ, ಅರಸಿನ ಘಟ್ಟಿ ಹೀಗೆ ಹತ್ತಾರು ಬಗೆಯ ಆಹಾರ ತಿನ್ನೋ ಸಂಪ್ರದಾಯವಿತ್ತು.
ಭತ್ತದ ಭಿತ್ತನೆ ಕಾರ್ಯ ಮುಗಿದ ಮೇಲೆ ಕೃಷಿ ಚಟುವಟಿಕೆಗೂ ಸ್ವಲ್ಪ ವಿರಾಮ. ನಮ್ಮ ಪೂರ್ವಿಕರು ಬಹುಜನ ಪ್ರಿಯರು ಮಾತ್ರವಲ್ಲ, ಭೋಜನ ಪ್ರಿಯರೂ ಹೌದು ಎಂಬುದಕ್ಕೆ ಈ ಆಹಾರ ಪದ್ಧತಿಯೇ ಸಾಕ್ಷಿ ಅಲ್ವಾ.