ಚಿಕನ್ 65 ಗೊತ್ತು ಆದರೆ ಈ ಹೆಸರು ಹೇಗೆ ಬಂತು ಗೊತ್ತಾ...?

By Suvarna News  |  First Published Feb 18, 2022, 9:45 AM IST
  • ಮೊದಲ ಬಾರಿಗೆ ಚಿಕನ್‌  65 ಮಾಡಿದ್ಯಾರು
  • ಚಿಕನ್‌  65 ಗೆ ಈ ಹೆಸರು ಬಂದಿದ್ಹೇಗೆ?
  • ಈ ವಿಡಿಯೋದಲ್ಲಿ ಇದೆ ಉತ್ತರ

ಚಿಕನ್  65  ಯಾರಿಗೆ ಗೊತ್ತಿಲ್ಲ ಹೇಳಿ, ಮಾಂಸಾಹಾರ ಇಷ್ಟಪಡುವ ಪ್ರತಿಯೊಬ್ಬರಿಗೂ ಚಿಕನ್‌ 65 ಗೊತ್ತಿರಬಹುದು. ಆದರೆ ಅದಕ್ಕೆ ಆ ಹೆಸರು ಹೇಗೆ ಬಂತು ಗೊತ್ತಾ. ಗೊತ್ತಿಲ್ಲ ಎಂದಾದರೆ ನೀವು ಈ ವಿಡಿಯೋ ನೋಡಲೇಬೇಕು. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ರೌನಕ್ ರಾಮ್‌ಟೆಕೆ (Raunak Ramteke) ಎಂಬುವವರು ಆ ಖಾದ್ಯಕ್ಕೆ  ಹೆಸರು ಹೇಗೆ ಬಂದಿತು ಎಂಬುದನ್ನು ವಿವರಿಸಿದ್ದಾರೆ.

ಎಲ್ಲಾ ಆಹಾರಪ್ರೇಮಿಗಳ ಗಮನಕ್ಕೆ, ಚಿಕನ್‌ 65 ಖಾದ್ಯದ ಹೆಸರಿನಲ್ಲಿರುವ 65 ಸಂಖ್ಯೆಯ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಮಸಾಲೆಯುಕ್ತ ಮತ್ತು ರುಚಿಕರವಾದ ಮಾಂಸಾಹಾರಿ ಖಾದ್ಯ ದಕ್ಷಿಣ ಭಾರತದ್ದು. ಇದು ದೇಶದಾದ್ಯಂತ ಬಹಳ ಜನಪ್ರಿಯವಾಗಿದೆ. ಆದಾಗ್ಯೂ, ನಿಮಗೆ ಈ ಹೆಸರಿನ ಹಿಂದಿನ ಕಥೆ ತಿಳಿದಿಲ್ಲದಿದ್ದಲ್ಲಿ ಈ ವಿಡಿಯೋ ನೋಡಿ.

 
 
 
 
 
 
 
 
 
 
 
 
 
 
 

Latest Videos

undefined

A post shared by Raunak Ramteke (@raunak_ramteke)

 

ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಈ ಐತಿಹಾಸಿಕ ಖಾದ್ಯಕ್ಕೆ ಅದರ ಹೆಸರು ಹೇಗೆ ಬಂದಿತು ಎಂಬುದನ್ನು ವ್ಯಕ್ತಿಯೊಬ್ಬರು ವಿವರಿಸಿದ್ದಾರೆ.     ಈ ವಿಡಿಯೋವನ್ನು  ರೌನಕ್ ರಾಮ್ಟೆಕೆ (Raunak Ramteke) ಅವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಖಾದ್ಯದ ಹೆಸರಿನ ಹಿಂದಿನ ಕುತೂಹಲಕಾರಿ ಸಂಗತಿಯನ್ನು ರೌನಕ್ ವಿಡಿಯೋ ಮೂಲಕ ಹೇಳಿದ್ದಾರೆ.

ತಯಾರಿಕೆಯಲ್ಲಿ ಬಳಸಿದ 65 ಪದಾರ್ಥಗಳ ಕಾರಣದಿಂದಾಗಿ ಭಕ್ಷ್ಯವು ಅದರ ಹೆಸರನ್ನು ಪಡೆದುಕೊಂಡಿದೆ ಅಥವಾ ತಯಾರಿಕೆಯ ಮೊದಲು ಕೋಳಿಯನ್ನು 65 ತುಂಡುಗಳಾಗಿ ಕತ್ತರಿಸಲಾಗುತ್ತದೆ ಎಂದು ಕೆಲವರು ಭಾವಿಸಿದ್ದರು ಅಲ್ಲದೇ ಚಿಕನ್ ಅನ್ನು 65 ದಿನಗಳವರೆಗೆ ಮ್ಯಾರಿನೇಟ್‌ ಮಾಡಲಾಗಿದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಈ ಹೆಸರಿನ ಹಿಂದಿನ ನಿಜವಾದ ಕಾರಣವೆಂದರೆ ಅದನ್ನು ಆರಂಭಿಸಿದ ವರ್ಷ.

KFC Chicken: ಕೆಎಫ್‌ಸಿ ಚಿಕನ್‌ನಲ್ಲಿ ಸಿಕ್ತು ಕೋಳಿಯ ಇಡೀ ತಲೆ

ಚಿಕನ್ 65 ಅನ್ನು ಮೊದಲು 1965 ರಲ್ಲಿ ಚೆನ್ನೈನ( Chennai) ಬುಹಾರಿ ಹೋಟೆಲ್‌ನಲ್ಲಿ (Buhari Hotel) ತಯಾರಿಸಲಾಯಿತು. ಈ ಹೋಟೆಲ್ ಅನ್ನು 1951 ರಲ್ಲಿ ಎಎಮ್ ಬುಹಾರಿ ( AM Buhari) ಅವರು ಪ್ರಾರಂಭಿಸಿದರು. ಅಲ್ಲದೇ ಇದು ಚೆನ್ನೈನಲ್ಲಿ ಉತ್ತಮ ಭೋಜನವನ್ನು ಪರಿಚಯಿಸಿದ ಮೊದಲ ಹೊಟೇಲ್ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

'ಬುಹಾರಿ ಹೋಟೆಲ್ ಅನ್ನು 1951 ರಲ್ಲಿ  ಎ.ಎಂ. ಬುಹಾರಿ ಅವರು ಪ್ರಾರಂಭಿಸಿದರು . ಜೊತೆಗೆ ಈಗ ಜನಪ್ರಿಯವಾದ ಚಿಕನ್ 65 ಅನ್ನು ನೀಡುವುದರ ಜೊತೆಗೆ, ಈ ಸ್ಥಳವು ಮದ್ರಾಸ್‌ನಲ್ಲಿ (ಈಗ ಚೆನ್ನೈ) ಉತ್ತಮ ಭೋಜನದ ಪರಿಕಲ್ಪನೆಯನ್ನು ಪರಿಚಯಿಸಿದ ಮೊದಲ ಸ್ಥಳವಾಗಿದೆ. ನೀವು ಎಂದಾದರೂ ಕೋಳಿಗಳ ಇತರ ಖಾದ್ಯವನ್ನು ತಿಂದಿದ್ದೀರಾ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.

Food of India: ರಾಜಸ್ಥಾನದ ರುಚಿ ನೋಡಲೇಬೇಕಾದ ಸಾಂಪ್ರದಾಯಿಕ ನಾನ್‌ವೆಜ್‌ ಅಡುಗೆ!

ಈ ವಿಡಿಯೋ ನೋಡಿದ ಅನೇಕರು ಈ ವಿಚಾರ ನಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ ಅಲ್ಲದೇ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದು ರಾಜ್ಯದಲ್ಲೂ ವಿವಿಧ ರೀತಿಯ ಆಹಾರ ಪದಾರ್ಥಗಳು ದೊರೆಯುವ ದೇಶ ಭಾರತ.  ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ತುಂಬಿರುವ ಸುಂದರ ರಾಜ್ಯ ರಾಜಸ್ಥಾನದ (Rajasthan) ಅಡುಗೆಗಳು ಅಷ್ಟೇ ರುಚಿಕರ.  ಕೆಲವು ಭವ್ಯವಾದ ಅರಮನೆಗಳು, ಸುಂದರವಾದ ನೃತ್ಯ ಪ್ರಕಾರಗಳು, ಕಲಾಕೃತಿಗಳ ಜೊತೆ ರಾಜಸ್ಥಾನಿ ಪಾಕ ಪದ್ಧತಿಯು ಈ ಪ್ರದೇಶದ ವಿಶೇಷತೆಯಾಗಿದೆ. ರಾಜಸ್ಥಾನದ ದಾಲ್-ಬಾಟಿ ಮತ್ತು ಚುರ್ಮಾ ಸಖತ್‌ ಫೇಮಸ್‌ ಡಿಶ್‌.

click me!