
ವಾಷಿಂಗ್ಟನ್: ಬಾಡಿಗೆ ಕಾರು, ಬಾಡಿಗೆ ಮನೆ ಬಗ್ಗೆ ಕೇಳಿರುತ್ತೀರಿ.. ಆದರೆ ಬಾಡಿಗೆ ಕೋಳಿ ಎಂಬ ಬಗ್ಗೆ ಕೇಳಿರಲು ಸಾಧ್ಯವೆ? ಅಮೆರಿಕದಲ್ಲಿ ಮೊಟ್ಟೆಗೋಸ್ಕರ ಕೋಳಿಗಳನ್ನೂ ಬಾಡಿಗೆಗೆ ಕೊಡುವ ವ್ಯವಸ್ಥೆ ಶುರುವಾಗಿದೆ!
ಹೌದು.. ಅಮೆರಿಕದಲ್ಲಿ ಏವಿಯನ್ ಫ್ಲು ಎಂಬ ಹಕ್ಕಿಜ್ವರ ಕಾಣಿಸಿಕೊಂಡ ಬಳಿಕ ಕೋಟ್ಯಂತರ ಕೋಳಿಗಳು ಸಾವನ್ನಪ್ಪಿವೆ. ಪರಿಣಾಮ ಕೋಳಿಮೊಟ್ಟೆಯ ಬೆಲೆ ಗಗನಕ್ಕೇರಿದೆ. ಕೆಲ ನಗರಗಳಲ್ಲಿ ಡಜನ್ ಮೊಟ್ಟೆ ಬೆಲೆ ಸುಮಾರು 866 ರು. (10 ಡಾಲರ್ ಅಥವಾ 1 ಮೊಟ್ಟೆಗೆ 72 ರು.) ಕೂಡ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ‘ರೆಂಟ್ ದಿ ಚಿಕನ್’ ಎಂಬ ಕಂಪನಿ ಜನರಿಗೆ ಕೈಗೆಟಕುವ ದರದಲ್ಲಿ ಮೊಟ್ಟೆ ಒದಗಿಸುವುದಕ್ಕೋಸ್ಕರ ಹೊಸ ಯೋಜನೆಯನ್ನು ಆರಂಭಿಸಿದೆ.
ಭಾರತದ ಚುನಾವಣೆ ಸುಧಾರಣೆಗಾಗಿ 180 ಕೋಟಿ ಹಣ : ಮತ್ತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿ
ಕಂಪನಿಯ ಸಹ-ಸಂಸ್ಥಾಪಕ ಜೆನ್ ಟಾಂಪ್ಕಿನ್ಸ್ ಅವರು ಹೇಳುವಂತೆ, ದುಬಾರಿ ಬೆಲೆ ಕೊಟ್ಟು ಮೊಟ್ಟೆ ಖರೀದಿಸುವ ಬದಲು, ಜನರಿಗೆ ಕೋಳಿಗಳನ್ನು ಕಂಪನಿಯವರೇ ಬಾಡಿಗೆಗೆ ಕೊಡುತ್ತಾರೆ. 2 ಕೋಳಿಗಳು ವಾರಕ್ಕೆ ಸುಮಾರು 1 ಡಜನ್ ಮೊಟ್ಟೆಗಳನ್ನು ಇಡುತ್ತವೆ. ಬಾಡಿಗೆಗೆ ನೀಡಿದ ಅವಧಿ ಮುಗಿದ ನಂತರ ಕಂಪನಿಯವರು ಕೋಳಿಗಳನ್ನು ವಾಪಸ್ ಪಡೆಯುತ್ತಾರೆ. ಆದರೆ ಆ ಅವಧಿಯಲ್ಲಿ ಕೋಳಿ ಹಾಕಿದ ಅಷ್ಟೂ ಮೊಟ್ಟೆಗಳನ್ನು ಜನ ಬಳಸಿಕೊಳ್ಳಬಹುದಾಗಿದೆ. ಈ ಹೊಸ ಟ್ರೆಂಡ್ ಅಮೆರಿಕದಲ್ಲಿ ಭಾರೀ ಸದ್ದು ಮಾಡಿದ್ದು, ಬಾಡಿಗೆ ಕೋಳಿಗಳಿಗಾಗಿ ಜನ ಮುಗಿಬಿದ್ದಿದ್ದಾರೆ.
ಇವರದ್ದು 84 ವರ್ಷದ ದಾಂಪತ್ಯ, 100ಕ್ಕೂ ಅಧಿಕ ಮೊಮ್ಮಕ್ಕಳು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.