ಹೊಟೇಲ್‌ಗೆ ಹೋಗಿ ಸ್ಪೂನ್ (Spoon), ಫೋರ್ಕ್ ಬಿಟ್ಟು ಬರಿಗೈಲಿ ತಿಂದು ನೋಡಿ. ಎಲ್ರೂ ಎಷ್ಟು ಚಿತ್ರವಾಗಿ ನೋಡ್ತಾರೆ ಅಂತ. ಆದ್ರೆ ಹಿಂದೆಲ್ಲಾ ಬರಿಗೈಲಿ (Bare hand) ತಿನ್ತಾ ಇದ್ರಲ್ಲಾ, ಏನೂ ತೊಂದ್ರೆಯಿರಲ್ಲಿಲ್ಲ. ಈಗ್ಲೂ ಅಷ್ಟೇ, ಅವ್ರು ಇವ್ರು ಏನ್ ಹೇಳ್ತಾರೆ ಅಂತ ಯೋಚಿಸೋದನ್ನು ಬಿಟ್ಬಿಡಿ. ಬರಿಗೈಲಿ ತಿನ್ನೋದ್ರಿಂದ ಎಷ್ಟೊಂದು ಆರೋಗ್ಯ (Health) ಪ್ರಯೋಜನವಿದೆ ತಿಳ್ಕೊಳ್ಳಿ.
ನಮ್ಮ ಹಿರಿಯರು ಕೆಲವೊಂದು ಸಂಪ್ರದಾಯಗಳನ್ನು ಅನುಸರಿಸುತ್ತಿದ್ದರು. ಅದರಲ್ಲಿ ಕೆಲವೊಂದಕ್ಕೆ ನಮಗೆ ಕಾರಣ ಗೊತ್ತಿದೆ, ಕೆಲವೊಂದಕ್ಕೆ ಗೊತ್ತಿಲ್ಲ. ಹೀಗಾಗಿಯೇ ಕೆಲವೊಂದನ್ನು ಮೌಢ್ಯವಾಗಿ ಅನುಸರಿಸುತ್ತೇವೆ, ಕೆಲವೊಂದನ್ನು ಅನುಸರಿಸಲು ಹೋಗುವುದಿಲ್ಲ. ಆದ್ರೆ ಮೌಢ್ಯವೆಂದು ನಾವಂದುಕೊಂಡಿರುವ ಹಳೆಯ ಸಂಪ್ರದಾಯಗಳಲ್ಲಿ ಅದೆಷ್ಟು ಹೊಸ ವಿಚಾರಗಳಿವೆ ನೋಡಿ. ಹಿಂದಿನ ಕಾಲದ ಕೆಲವು ಸಂಪ್ರದಾಯಗಳನ್ನು ಏಕೆ ಅನುಸರಿಸಬೇಕು ? ಅದ್ರಿಂದ ಸಿಗೋ ಪ್ರಯೋಜನವೇನು ? ಅದಕ್ಕಿರೋ ವೈಜ್ಞಾನಿಕ ಆಧಾರವೇನು? ಎಂಬುದನ್ನು ತಿಳಿಯೋಣ.
ಯಾವ್ದಾದ್ರೂ ದೊಡ್ಡ, ಹೊಟೇಲ್, ರೆಸ್ಟೋರೆಂಟ್‌ಗೆ ಹೋಗಿ. ಸ್ಪೂನ್ ಬಿಟ್ಟು ಕೈಯಲ್ಲೇ ಆಹಾರ ತಿನ್ನಿ. ಅಲ್ಲಿರೋರೆಲ್ಲಾ ನಿಮ್ಮನ್ನು ವಿಚಿತ್ರವಾಗಿ ನೋಡದಿದ್ರೆ ಮತ್ತೆ ಕೇಳಿ. ಅಲ್ಲೇನು ಕೈಯಲ್ಲಿ ತಿನ್ನೋದು ಅಕ್ಷಮ್ಯ ಅಪರಾಧ ಅಂತ ಬೋರ್ಡೇನು ಹಾಕಿರಲ್ಲ. ಆದ್ರೆ ಅವ್ರು ನಡೆಸ್ಕೊಳ್ಳೋ ರೀತಿ ಮಾತ್ರ ಅಕ್ಷರಶಃ ಹಾಗೇ ಇರುತ್ತೆ. ಕೈಯಲ್ಲಿ ತಿನ್ನೋ ಇಂಡಿಯನ್ ಕಲ್ಚರ್ ಬಿಟ್ಟು ಸ್ಪೂನ್‌ನಲ್ಲಿ ತಿನ್ನೋ ಫಾರಿನ್ ಕಲ್ಚರ್‌ಗೆ ಎಲ್ರೂ ಜೈ ಅಂತಾರೆ. ಇರ್ಲಿ ಬಿಡಿ, ನಾವೇನು ಇಲ್ಲಿ ಕೈಯಲ್ಲಿ ತಿನ್ನಿ, ಸ್ಪೂನ್‌ನಲ್ಲಿ ತಿನ್ಬೇಡಿ ಅಂತ ಲೆಕ್ಚರ್ ಕೊಡೋಕೆ ಬಂದಿಲ್ಲ. ಅವರವರ ಊಟ ಅವರಿಷ್ಟ ಎಂಬಂತೆ ತಿನ್ನೋ ರೀತಿನೂ ಅವ್ರಿಗೇನೆ ಬಿಟ್ಟಿದ್ದು. ಆದ್ರೆ ಸ್ಪೂನ್ ಬಿಟ್ಟು ಬರಿ ಕೈಯಲ್ಲಿ ತಿನ್ನೋದ್ರಿಂದ ಆರೋಗ್ಯಕ್ಕೆ ಅದೆಷ್ಟು ಪ್ರಯೋಜನಗಳಿವೆ ನಾವ್ ಹೇಳ್ತೀವಿ.
undefined
ಗರ್ಭಿಣಿಯರು ಈ ಮಲ್ಟಿ ಗ್ರೇನ್ ರೊಟ್ಟಿ ಸೇವಿಸಿದ್ರೆ, ಮಲಬದ್ಧತೆ ಸಮಸ್ಯೆ ಇರೋದಿಲ್ಲ
ಬರಿ ಕೈಗಳಿಂದ ಆಹಾರ ತಿನ್ನುವುದು: ಭಾರತೀಯ ಸಂಸ್ಕೃತಿಯಲ್ಲಿ ಆಹಾರ (Food)ವನ್ನು ಕೈಯಿಂದ ತಿನ್ನುವುದು ಸಭ್ಯ ಸಂಸ್ಕೃತಿಯಾಗಿದೆ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೈಗಳಲ್ಲಿ ತಿನ್ನುವ ಅಭ್ಯಾಸ ಕಡಿಮೆ. ಬದಲಾಗಿ ಸ್ಪೂನ್ (Spoon), ಫೋರ್ಕ್, ಸ್ಟಿಕ್, ಚಾಕುಗಳ ಸಹಾಯದಿಂದ ಆಹಾರವನ್ನು ಸೇವಿಸಲಾಗುತ್ತದೆ. ಪ್ರಸ್ತುತ ಈ ಸಂಸ್ಕೃತಿ ಭಾರತಕ್ಕೂ ಹಾಲಿಟ್ಟಿದೆ. ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಸ್ಪೂನ್, ಪೋರ್ಕ್‌ಗಳ ಜತೆಗೇ ಆಹಾರವನ್ನು ಸರ್ವ್ ಮಾಡಲಾಗುತ್ತದೆ.
ವಿದೇಶಿಯರು ಅಸಭ್ಯವೆಂದು ಪರಿಗಣಿಸಿರುವ ಕೈಯಲ್ಲಿ ಆಹಾರ ತಿನ್ನುವ ಪದ್ಧತಿ ಆರೋಗ್ಯಕ್ಕೆ ಅದೆಷ್ಟು ಉತ್ತಮ ಅನ್ನೋದು ನಿಮ್ಗೆ ಗೊತ್ತಾ ? ಯಾವುದೇ ಊಟಕ್ಕೆ ಕುಳಿತುಕೊಳ್ಳುವ ಮೊದಲು, ಎಲ್ಲರೂ ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆಯುತ್ತಾರೆ. ಇದರಿಂದ ಕೈ ಬೆರಳುಗಳ ನಡುವಿನ ಸಮನ್ವಯದ ವ್ಯಾಯಾಮವಾಗುತ್ತದೆ. ಕೈಗಳ ಮೂಲಕ ನಾವು ನಿಧಾನವಾಗಿ ತಿನ್ನಲು ಸಾಧ್ಯವಾಗುವುದರಿಂದ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಬರಿ ಕೈಗಳಿಂದ ತಿನ್ನುವಾಗ ಆಹಾರವು ಉತ್ತಮ ರುಚಿಯನ್ನು ನೀಡುತ್ತದೆ ಎಂದು ವೈಜ್ಞಾನಿಕ ಪ್ರಯೋಗವು ಸಾಬೀತುಪಡಿಸಿದೆ.
Healthy Breakfast: ತೂಕ ಇಳಿಸ್ಬೇಕೆಂದ್ರೆ ಬಾಳೆಹಣ್ಣಿನ ಜೊತೆ ಬೆಳಿಗ್ಗೆ ಇದನ್ನು ತಿಂದ್ನೋಡಿ
ಬರಿಗಾಲಿನಲ್ಲಿ ನಡೆಯುವುದು: ಹಿಂದಿನ ಕಾಲದಲ್ಲೆಲ್ಲಾ ಚಪ್ಪಲಿಯಿರಲ್ಲಿಲ್ಲ ಬಿಡಿ. ಕಿಲೋಮೀಟರ್ ಗಟ್ಟಲೆ ದಾರಿಯನ್ನು ಚಪ್ಪಲಿಯಿಲ್ಲದೆ ನಡೆಯುತ್ತಿದ್ದರು. ಹೀಗೆ ಬರಿಗಾಲಿನಲ್ಲಿ ನಡೆಯುವುದನ್ನು ಅರ್ಥಿಂಗ್ ಎಂದು ಕರೆಯುತ್ತಾರೆ. ಹೀಗೆ ಬರಿಗಾಲಿನಲ್ಲಿ ಮಣ್ಣಿನಲ್ಲಿ ನಡೆಯೋದ್ರಿಂದ ಹಲವಾರು ಆರೋಗ್ಯ (Health) ಪ್ರಯೋಜನಗಳಿವೆ ಎಂಬುದು ವೈಜ್ಷಾನಿಕವಾಗಿ ಸಾಬೀತಾಗಿದೆ. ನೆಲದಲ್ಲಿ ಬರಿಗಾಲಿನಲ್ಲಿ ನಡೆಯುವುದರಿಂದ ದೇಹದಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚುತ್ತದೆ.
ಮುಂಜಾನೆ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ರೀತಿಯ ಚಟುವಟಿಕೆ ದೇಹದ ಅಂಗಗಳ ಕಾರ್ಯನಿರ್ವಹಣೆಯನ್ನು ಉತ್ತೇಜಿಸುತ್ತದೆ.
ಪಾದರಕ್ಷೆಗಳನ್ನು ಮನೆಯ ಹೊರಗೆ ಬಿಡುವುದು: ಹಿಂದೂ ಸಂಸ್ಕೃತಿಯಲ್ಲಿ ಚಪ್ಪಲಿಯನ್ನು ಮನೆಯಿಂದ ಹೊರಗೆ ಬಿಡುವುದು ಸಂಪ್ರದಾಯ. ಅತಿಥೇಯರು ಮನೆಗೆ ಬಂದಾಗಲೂ ಅವರಿಗೆ ಇದನ್ನೇ ಸೂಚಿಸಲಾಗುತ್ತದೆ. ಈ ರೀತಿ ಚಪ್ಪಲಿಯನ್ನು ಮನೆಯಿಂದ ಹೊರಗಿಡಲು ವೈಜ್ಞಾನಿಕ ಕಾರಣಗಳೂ ಇವೆ. ಮನೆಯಿಂದ ಹೊರಗೆ ಓಡಾಡಿದಾಗ ಕಾಲಲ್ಲಿ ಸೇರಿಕೊಂಡಿರುವ ಬ್ಯಾಕ್ಟಿರೀಯಾ (Bacteria)ಗಳು ಚಪ್ಪಲಿಯನ್ನು ಮನೆಯಿಂದ ಹೊರಗಡೆ ಬಿಡುವುದರಿಂದ ಮನೆಯೊಳಗೆ ಪ್ರವೇಶಿಸುವುದಿಲ್ಲ.
ಇ ಕೊಲಿ ಎಂಬುದು ಶೂ ತಳದಲ್ಲಿ ಕಂಡುಬರುವ ಸಾಮಾನ್ಯ ರೀತಿಯ ಬ್ಯಾಕ್ಟೀರಿಯಾಗಳಲ್ಲಿ ಒಂದಾಗಿದೆ. ಇದು ಕರುಳು ಮತ್ತು ಮೂತ್ರದ ಸೋಂಕನ್ನು ಉಂಟುಮಾಡುತ್ತದೆ. ಶೂಗಳಲ್ಲಿ ಕಂಡುಬರುವ ಇನ್ನೊಂದು ಬ್ಯಾಕ್ಟೀರಿಯಾ ಸಿ. ಡಿಫ್ ಬ್ಯಾಕ್ಟೀರಿಯಾ. ಇದು ವಿಶೇಷವಾಗಿ ದುರ್ವಾಸನೆಯ ಅತಿಸಾರವನ್ನು ಉಂಟುಮಾಡುತ್ತದೆ. ಮನೆಯೊಳಗೆ ಚಪ್ಪಲಿ ಹಾಕದಿರುವುದು ಇಂಥಾ ರೋಗಗಳಿಂದ ದೂರವಿಡಲು ನೆರವಾಗುತ್ತದೆ.