ಶ್ವಾನವೊಂದು ಟಿವಿಯಲ್ಲಿ ಮಾಂಸದ ಚಿತ್ರ ಕಾಣಿಸಲು ಶುರುವಾದಂತೆ ಒಂದೇ ಸಮನೇ ಟಿವಿ ಸ್ಕ್ರೀನ್ ಅನ್ನು ನೆಕ್ಕಲು ಶುರು ಮಾಡಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶ್ವಾನಗಳ ಅನೇಕ ಮುದ್ದಾದ ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಶ್ವಾನಗಳು ತಮ್ಮ ಮುದ್ದು ಮುದ್ದಾದ ತುಂಟಾಟಗಳಿಂದ ಎಲ್ಲರ ನೋವನ್ನು ಮರೆಸುತ್ತವೆ. ಕೆಲವೊಮ್ಮೆ ಟಿವಿಯಲ್ಲಿ ತಿಂಡಿ ತಿನಿಸುಗಳ ವಿಡಿಯೋ ಫೋಟೋಗಳು ಬಂದಾಗ ನಮಗೆ ಅದನ್ನು ನಾವು ತಿನ್ನಬೇಕು ರುಚಿ ನೋಡಬೇಕು ಅನ್ನಿಸುತ್ತಿರುತ್ತದೆ. ಟಿವಿ ಸ್ಕ್ರಿನ್ ಮೇಲೆ ಬರುವ ಕಲರ್‌ಫುಲ್ ತಿಂಡಿಗಳು ಬಾಯಲ್ಲಿ ನೀರೂರಿಸುವ ಜೊತೆಗೆ ಹೊಟ್ಟೆ ಹಸಿವನ್ನು ಹೆಚ್ಚಿಸುತ್ತವೆ. ಆದರೆ ಈ ಅನುಭವ ನಮಗೆ ಮಾತ್ರವಲ್ಲ. ಪ್ರಾಣಿಗಳಿಗೂ ಹಾಗೆ ಅನ್ನಿಸುತ್ತಂತೆ. ಇದಕ್ಕೊಂದು ಉತ್ತಮ ಉದಾಹರಣೆ ಈ ವಿಡಿಯೋ.
ಹೌದು ಶ್ವಾನವೊಂದು ಟಿವಿಯಲ್ಲಿ ಮಾಂಸದ ಚಿತ್ರ ಕಾಣಿಸಲು ಶುರುವಾದಂತೆ ಒಂದೇ ಸಮನೇ ಟಿವಿ ಸ್ಕ್ರೀನ್ ಅನ್ನು ನೆಕ್ಕಲು ಶುರು ಮಾಡಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶ್ವಾನಗಳು ಸಾಮಾನ್ಯವಾಗಿ ಆಹಾರವನ್ನು ತುಂಬಾ ಇಷ್ಟ ಪಡುವ ಪ್ರಾಣಿಗಳು. ಅದರಲ್ಲೂ ಮಾಂಸವಾಗಿದ್ದಲ್ಲಿ ಅವುಗಳ ಒದ್ದಾಟ ಹೇಳತೀರದು. ಹಾಗಾಗಿಯೇ ಇಲ್ಲೊಂದು ಶ್ವಾನ ಟಿವಿ ಸ್ಕ್ರೀನ್‌ನಲ್ಲಿ ಮಾಂಸ ಕಾಣಿಸುತ್ತಿದ್ದಂತೆ ಸ್ಕ್ರೀನ್‌ನ್ನು ನೆಕ್ಕಲು ಶುರು ಮಾಡಿದೆ.
He reminds me of the first time I ate kebabs.😋😋😋pic.twitter.com/nbg92UmZ7Y
— Sharing travel (@TripInChina)ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಶೇರಿಂಗ್ ಟ್ರಾವೆಲ್ (@TripInChina) ಎಂಬ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದೆ. ಇದು ಚೀನಾದ ಟಿವಿ ಸ್ಕ್ರೀನೊಂದರ ವಿಡಿಯೋ ಇದಾಗಿದೆ. ಶ್ವಾನದ ಈ ವಿಡಿಯೋ ನನಗೆ ನಾನು ಮೊದಲ ಬಾರಿ ಕಬಾಬ್ ತಿಂದ ಕ್ಷಣವನ್ನು ನೆನಪಿಸಿತು ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 7.5 ಮಿಲಿಯನ್ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಶ್ವಾನಗಳ ಒಡನಾಟ ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ಸಂಶೋಧನೆಗಳು ಸಾಬೀತು ಪಡಿಸಿವೆ. ಬಹುತೇಕ ಶ್ವಾನಪ್ರಿಯರು ಶ್ವಾನಗಳನ್ನು ತಮ್ಮ ಮನೆಯ ಓರ್ವ ಸದಸ್ಯ ಎಂಬಂತೆ ನೋಡಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಶ್ವಾನವೊಂದರ ಹುಟ್ಟುಹಬ್ಬವನ್ನು ಭಾರಿ ಗಾತ್ರದ ಕೇಕ್ ಕತ್ತರಿಸಿ ಊರಿಗೆಲ್ಲಾ ಊಟ ಹಾಕುವ ಮೂಲಕ ಧಾಮ್‌ಧೂಮ್ ಆಗಿ ಆಚರಿಸಲಾಗಿತ್ತು.
ನಾಯಿಗಳು ಸಾಮಾನ್ಯವಾಗಿ ಸ್ನಾನ ಮಾಡುವುದು ಎಂದರೆ ಮಾರು ದೂರ ಓಡುತ್ತವೆ. ಶ್ವಾನದ ಮಾಲೀಕರು ತಮ್ಮ ಮುದ್ದಾದ ನಾಯಿಗೆ ಸ್ನಾನ ಮಾಡಿಸಲು ಹರ ಸಾಹಸವನ್ನೇ ಮಾಡುತ್ತಾರೆ. ಆದರೆ ಇಲ್ಲೊಂದು ಶ್ವಾನದ ಮರಿ ಮಾತ್ರ ವಿಭಿನ್ನ. ಇದಕ್ಕೆ ಶ್ವಾನ ಮಾಡುವುದೆಂದರೆ ತುಂಬಾ ಇಷ್ಟ. ಬಹುಶ ಈ ಶ್ವಾನ ತನ್ನ ಮಾಲಕರು ಶವರ್‌ನಲ್ಲಿ ಸ್ನಾನ ಮಾಡುವುದನ್ನು ನೋಡಿರಬೇಕು ಎಂದೆನಿಸುತ್ತದೆ. ಏಕೆಂದರೆ ಇದು ಕೈ ತೊಳೆಯುವಂತಹ ಸಿಂಕ್‌ಗೆ ಇಳಿದು ಟ್ಯಾಪ್‌ಗ ತಲೆಯೊಡ್ಡಿ ಸ್ನಾನ ಮಾಡುತ್ತದೆ. ಮೇಲಿಂದ ಬೀಳುವ ನೀರನ್ನು ಆನಂದಿಸುವ ಈ ನಾಯಿ ಮರಿ ವಿಡಿಯೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮನೆಯಲ್ಲಿ ಶ್ವಾನವನ್ನು ಒಂಟಿಯಾಗಿ ಬಿಟ್ಟು ಹೋಗುತ್ತೀರಾ : ಹಾಗಿದ್ರೆ ಈ ಸ್ಟೋರಿ ಓದಿ
ನಾಯಿ ಅಥವಾ ಬೆಕ್ಕು ಮುಂತಾದ ಸಾಕುಪ್ರಾಣಿಗಳು ಸ್ನಾನ ಮಾಡುವ ವಿಡಿಯೋ ನೋಡಲು ಮಜಾವಾಗಿರುತ್ತದೆ. ಏಕೆಂದರೆ ಒಂದೊಂದು ಶ್ವಾನ ಸ್ನಾನ ಎಂದರೆ ನೀಡುವ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ. ಕೆಲವು ಶ್ವಾನಗಳು ಇಷ್ಟಪಟ್ಟು ಸ್ನಾನ ಮಾಡಿದರೆ ಮತ್ತೂ ಕೆಲವು ನನಗೆ ಸ್ನಾನ ಬೇಡ ಎಂದು ಬೊಬ್ಬೆ ಹೊಡೆಯಲು ಶುರು ಮಾಡುತ್ತವೆ. ಇನ್ನು ಈ ವಿಡಿಯೋ ಗೊಲ್ಡನ್ ರಿಟ್ರೈವರ್ ( Golden Retriever) ತಳಿಯ ಶ್ವಾನವಾದ ಫಿನ್ಲೇ ಹೆಸರಿನಲ್ಲಿರುವ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದೆ.