ನೀವು ಟೀ (Tea) ಪುಡಿಗೆ ಸಾಮಾನ್ಯವಾಗಿ ಎಷ್ಟು ಬೆಲೆ ಕೊಡೋಕೆ ಸಿದ್ಧವಿರ್ತೀರಾ ? ಹೆಚ್ಚೆಂದರೆ ನೂರರಿಂದ ಮುನ್ನೂರು ಅಲ್ವಾ ? ಆದ್ರೆ ಅಚ್ಚರಿಯೆಂಬಂತೆ, ಇತ್ತೀಚೆಗೆ ಅಸ್ಸಾಂ (Assam)ನಲ್ಲಿ ಅದೇ ಬೆಲೆಗೆ ಒಂದು ಕಿಲೋಗ್ರಾಂ ಚಹಾ ಎಲೆಗಳನ್ನು ಮಾರಾಟ ಮಾಡಲಾಗಿದೆ. ಅಷ್ಟಕ್ಕೂ ಆ ಟೀ ಎಲೆಗಳ ಸ್ಪೆಷಾಲಿಟಿ ಏನು ? ಇಲ್ಲಿದೆ ಮಾಹಿತಿ.
ಭಾರತದಲ್ಲಿ, ಚಹಾವು (Tea) ಕೇವಲ ಪಾನೀಯವಲ್ಲ; ಬದಲಿಗೆ ನಮ್ಮಲ್ಲಿ ಹಲವರು ಜೀವನಶೈಲಿ (Lifestyle)ಯ ಭಾಗವಾಗಿ ಅನುಸರಿಸುವ ದೈನಂದಿನ ಆಚರಣೆಯಾಗಿದೆ. ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಚಹಾ ಕುಡಿಯುವುದು ಹಲವರಿಗೆ ಅಭ್ಯಾಸ (Habit) ಆಗಿಬಿಟ್ಟರುತ್ತದೆ. ಚಹಾವು ಒಂದು ಬರಿಯ ಪಾನೀಯ ಮಾತ್ರವಾಗಿ ಉಳಿಯದೆ ಭಾರತದಲ್ಲಿ ಇದನ್ನು ಭಾವನೆ ಎಂದು ಪರಿಗಣಿಸಲಾಗುತ್ತದೆ. ಇದು ದೇಶದ ಪಾಕಶಾಲೆಯ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಟೀ ಎಲೆಯನ್ನು ಬೆಳೆಯುತ್ತಾರೆ. ಹೀಗಾಗಿ ಒಂದೊಂದು ರಾಜ್ಯದ ಚಹಾ ಎಲೆಗಳು ನಿರ್ಧಿಷ್ಟ ಹೆಸರಿನೊಂದಿಗೆ ಪ್ರಸಿದ್ಧಿಯಾಗಿರುತ್ತದೆ.
ಚಹಾ ಸೇವನೆ ಹಲವು ಆರೋಗ್ಯ (Health) ಪ್ರಯೋಜನಗಳನ್ನು ಹೊಂದಿದೆ. ಚಹಾ ಸೇವನೆ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮೂಡ್‌ನ್ನು ರಿಫ್ರೆಶ್‌ಗೊಳಿಸುತ್ತದೆ, ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ತಲೆನೋವಿನ ಸಮಸ್ಯೆಯನ್ನು ಶಮನಗೊಳಿಸುತ್ತದೆ ಎಂದು ಹಲವರು ನಂಬುತ್ತಾರೆ. ಹೀಗಾಗಿಯೇ ಬಹುತೇಕರು ಒಂದು ಕಪ್ ಚಾಯ್‌ನೊಂದಿಗೆ ದಿನವನ್ನು ಆರಂಭಿಸುತ್ತಾರೆ. ನಮ್ಮಲ್ಲಿ ಹೆಚ್ಚಿನವರು ಉತ್ತಮ ಗುಣಮಟ್ಟದ ಚಹಾದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ, ಉತ್ತಮ ಗುಣಮಟ್ಟದ ಚಹಾವನ್ನು ಆನಂದಿಸಲು, ನೀವು ಎಂದಾದರೂ ಒಂದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುತ್ತೀರಾ ?
ಬೆಳಗ್ಗೆ ಹಾಲಿನ ಪುಡಿ ಟೀ ಕುಡೀತೀರಾ? ಒಳ್ಳೇದಲ್ಲ ಬಿಟ್ಟು ಬಿಡಿ
ಒಂದು ಕಿಲೋಗ್ರಾಂ ಚಹಾ ಎಲೆ ಒಂದು ಲಕ್ಷ ರೂ.ಗೆ ಮಾರಾಟ
ಇತ್ತೀಚೆಗೆ ಅಸ್ಸಾಂ (Assam)ನಲ್ಲಿ ಒಂದು ಕಿಲೋಗ್ರಾಂ ಚಹಾ ಎಲೆಗಳನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ. ವರದಿಗಳ ಪ್ರಕಾರ, ಪಭೋಜನ್ ಗೋಲ್ಡ್ ಟೀ, ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಅಪರೂಪದ ಸಾವಯವ ಚಹಾವನ್ನು ಜೂನ್ 20, 2022 ರಂದು ಪ್ರತಿ ಕಿಲೋಗ್ರಾಂಗೆ 1 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಜೋರ್ಹತ್ ಟೀ ಹರಾಜು ಕೇಂದ್ರದ (ಜೆಟಿಎಸಿ) ಅಧಿಕಾರಿಯು ಚಹಾವನ್ನು ಪಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್ ಮಾರಾಟ ಮಾಡುತ್ತಿದೆ ಮತ್ತು ಅಸ್ಸಾಂ ಮೂಲದ ಟೀ ಬ್ರ್ಯಾಂಡ್ ಎಸಾಹ್ ಟೀ ಖರೀದಿಸಿದೆ ಎಂದು ಹೇಳಿದ್ದಾರೆ.
ಪಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್ ಮಾರಾಟ ಮಾಡಿದ ಚಹಾವನ್ನು ಅಸ್ಸಾಂ ಮೂಲದ ಟೀ ಬ್ರ್ಯಾಂಡ್ ‘ಎಸಾಹ್ ಟೀ’ ಖರೀದಿಸಿದೆ ಎಂದು ಜೋರ್ಹತ್ ಟೀ ಹರಾಜು ಕೇಂದ್ರದ (ಜೆಟಿಎಸಿ) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪಭೋಜನ್ ಗೋಲ್ಡ್ ಟೀ ಕಡು ಹಳದಿ ಬಣ್ಣದಿಂದ ಕೂಡಿರಲಿದ್ದು ಇದು ಕುಡಿದ ನಂತರ ಹಿತವಾದ ರುಚಿಯ ಅನುಭವವನ್ನು ನೀಡುತ್ತದೆ. ಇದನ್ನು ಚಹಾ ಎಸ್ಟೇಟ್‌ನಲ್ಲಿ ಎರಡನೇ ಚಿಗುರುಗಳನ್ನು ಕಿತ್ತು ತಯಾರಿಸಲಾಗುತ್ತದೆ. ಈ ಚಿಗುರುಗಳು ಚಿನ್ನದ ಬಣ್ಣಕ್ಕೆ ತಿರುಗುವುದಲ್ಲದೆ, ಚಹಾಕ್ಕೂ ಉತ್ತಮ ಬಣ್ಣವನ್ನು ನೀಡುತ್ತವೆ ಎಂದು ಮಾಹಿತಿ ನೀಡಿದ್ದಾರೆ..
Lavender Tea: ವಿಶ್ವದ ಅತ್ಯಂತ ಆರೋಗ್ಯಕರ ಚಹಾದ ಬಗ್ಗೆ ನಿಮಗೆಷ್ಟು ಗೊತ್ತು
ಹೊಸ ದಾಖಲೆಯ ಬೆಲೆಗೆ ಸಂತಸ ವ್ಯಕ್ತಪಡಿಸಿದ ಸಂಸ್ಥೆ
ಎಸಾಹ್ ಟೀ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿಜಿತ್ ಶರ್ಮಾ ಮಾತನಾಡಿ, ಅಸ್ಸಾಂನ ಅತ್ಯುತ್ತಮ ಚಹಾ ಮಿಶ್ರಣಗಳಲ್ಲಿ ಒಂದನ್ನು ತಮ್ಮ ಗ್ರಾಹಕರಿಗೆ ಒದಗಿಸಲು ಈ ಚಹಾ ವೈವಿಧ್ಯವು ಸಹಾಯ ಮಾಡುತ್ತದೆ ಎಂದಿದ್ದಾರೆ. ಪಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್‌ನ ಮಾಲೀಕ ರಾಖಿ ದತ್ತಾ ಸೈಕಿಯಾ ಹೇಳಿಕೆಯಲ್ಲಿ, "ನಾವು ಈ ಅಪರೂಪದ ವಿಧದ ಚಹಾವನ್ನು ಕೇವಲ ಒಂದು ಕೆಜಿ ಉತ್ಪಾದಿಸಿದ್ದೇವೆ ಮತ್ತು ಇತಿಹಾಸವನ್ನು ಸೃಷ್ಟಿಸಿದ ಈ ಹೊಸ ದಾಖಲೆಯ ಬೆಲೆಯಿಂದ ಸಂತೋಷಪಡುತ್ತೇವೆ. ಇದು ಪಡೆದ ಬೆಲೆಯು ಟೀಯ ಮಹತ್ವವನ್ನು ತಿಳಿಸಲು ಸಹಾಯ ಮಾಡುತ್ತದೆ. ಅಸ್ಸಾಂ ಚಹಾ ಉದ್ಯಮವು ತನ್ನ ಕಳೆದುಹೋದ ಖ್ಯಾತಿಯನ್ನು ಮರಳಿ ಪಡೆಯುತ್ತದೆ ಎಂದು ಹೇಳಿದರು.
ಎಸಾಹ್ ಟೀ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿಜಿತ್ ಶರ್ಮಾ ಮಾತನಾಡಿ, ಈ ಚಹಾ ವೈವಿಧ್ಯವು ಅಪರೂಪವಾಗಿದ್ದು, ಚಹಾದ ವಿಶೇಷ ಅಭಿರುಚಿ ಇರುವವರಿಗೆ ಇದು ಒಂದು ಕಪ್‌ನಲ್ಲಿನ ವಿಶಿಷ್ಟ ಅನುಭವವೇ ಸರಿ. ನಮ್ಮ ಗ್ರಾಹಕರು ಪ್ರಪಂಚದಾದ್ಯಂತ ಹರಡಿದ್ದು, ಈ ವಿಧದ ರುಚಿ ಮತ್ತು ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರಿಗೆ ಅಸ್ಸಾಂನ ಅಧಿಕೃತ ಚಹಾದ ಸುವಾಸನೆಯನ್ನು ಒದಗಿಸುತ್ತಿರುವ ನಮ್ಮ ಧ್ಯೇಯ ಮುಂದುವರಿಸಲು ಸಾಧ್ಯವಾಗುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ', ಎಂದು ಅವರು ವಿವರಿಸಿದ್ದಾರೆ.
ಈ ವಿಧದ ಪ್ರೀಮಿಯಂ ಗುಣಮಟ್ಟದ ವಿಶೇಷ ಚಹಾಕ್ಕಾಗಿ ವಿವೇಚನಾಶೀಲ ಗ್ರಾಹಕರು, ಚಹಾ ಪ್ರಿಯರು ಮತ್ತು ಖರೀದಿದಾರರಿಂದ ಹೆಚ್ಚಿನ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಈ ವಿಧದ ಚಹಾವನ್ನು ಮೊದಲ ಬಾರಿಗೆ ತಯಾರಿಸಲಾಯಿತು ಎಂದು ಸೈಕಿಯಾ ಹೇಳಿದ್ದಾರೆ