
ಪಾಪಾಸುಕಳ್ಳಿ (Prickly Pear) ರೈತ ಮಿತ್ರ ಎಂದು ಸಹ ಕರೆಸಿಕೊಳ್ಳುತ್ತದೆ. ಇದು ಒಂದು ರೀತಿ ಮುಳ್ಳಿನಿಂದ ಆವೃತವಾಗಿರುವ ಸಸ್ಯ. ಕನ್ನಡ ಭಾಷೆಯಲ್ಲಿ ಇದನ್ನು ಪಾಪಾಸುಕಳ್ಳಿ, ಡಬ್ಬುಗಳ್ಳಿ, ಡಬ್ಬಗೊಳ್ಳಿ, ಸಂಸ್ಕೃತ ಭಾಷೆಯಲ್ಲಿ ವಜ್ರಕಾಯ, ವಿದಾರ ವಿಶ್ವಸಾರಕ, ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ನಾಗ ಫಣಿ ಎಂದು ಕರೆಯುತ್ತಾರೆ. ಇದರಲ್ಲಿಅನೇಕ ಪ್ರಭೇದಗಳಿವೆ. ರಾಜಸ್ಥಾನದಲ್ಲಿ ಮುಳ್ಳು ಇರದ ಪಾಪಾಸುಕಳ್ಳಿ ಬೆಳೆದು ಕತ್ತರಿಸಿ ದನಗಳಿಗೆ ಮೇವಾಗಿ ಬಳಸುತ್ತಾರೆ. ಹೆಣ್ಣು ಮಕ್ಕಳ ಕಿವಿ ಚುಚ್ಚಲು ಇದರ ಮುಳ್ಳುಗಳನ್ನೇ ಬಳಸುತ್ತಿದ್ದರು. ಅತ್ಯಂತ ಚೂಪಾದ, ಗಟ್ಟಿಯಾದ ಇದರ ಮುಳ್ಳಿನಲ್ಲಿ ಆಂಟಿಸೆಪ್ಟಿಕ್ ಗುಣ ಇರುತ್ತದೆ ಎಂದು ಹೇಳಲಾಗುತ್ತದೆ.
ಇದು ಭಾರತದಾದ್ಯಂತ ಬಂಜರು ಭೂಮಿಯಲ್ಲಿ ಕುರುಚಲು ಕಾಡುಗಳಲ್ಲಿ ಬೆಳೆಯುವ ಸಸ್ಯ. ಪಾಪಾಸು ಕಳ್ಳಿಯ ಮೂಲ ಅಮೆರಿಕಾ ಖಂಡಗಳು. ಪೋರ್ಚುಗೀಸ್ ರು ಅಲ್ಲಿಂದ ಭಾರತಕ್ಕೆ ತಂದರೆಂದು ಹೇಳಲಾಗುತ್ತದೆ. ಭೀಕರ ಬರಗಾಲದಲ್ಲೂ ಬದುಕಬಲ್ಲ ಈ ಡಬ್ಬುಗಳ್ಳಿ ಹೊಲ ಮನೆ ತೋಟ ಗದ್ದೆಗಳ ಕಾವಲಿಗೆ ವಜ್ರಾಯುಧ ಇದ್ದಂತೆ ಎಂದು ಹಿರಿಯರು ಹೇಳುತ್ತಾರೆ. ಇದರ ಹಣ್ಣುಗಳು (Fruits) ತಿನ್ನಲು ತುಂಬಾ ರುಚಿ. ತಿಂದಾಗ ಬಾಯಿಯಲ್ಲಾ ಕೆಂಪು ಕೆಂಪು. ಆದರೆ ಹಣ್ಣುಗಳನ್ನು ಬಿಡಿಸಲು ಪರಿಣಿತಿ ಬೇಕು. ಹಣ್ಣಿನ ಮೇಲೆ ಸಣ್ಣ ಸಣ್ಣ ಮುಳ್ಳು ಇರುವುದರಿಂದ ತಂಗಡಿಸೊಪ್ಪು ಅಥವಾ ಹುಲ್ಲಿನಿಂದ ಬಡಿದು ಹಣ್ಣಿನ ತಿರುಳು ತಿನ್ನಬೇಕು. ಅಳಿವಿನಂಚಿನಲ್ಲಿರುವ ಈ ಡಬ್ಬುಗಳ್ಳಿ ನಿಜಕ್ಕೂ ವಿಶೇಷ ಗುಣಗಳನ್ನು ಹೊಂದಿದೆ. ಅದೇನೆಂದು ತಿಳಿದುಕೊಳ್ಳೋಣ.
ಎಣ್ಣೆಭರಿತ ಆಹಾರ ಸೇವಿಸಿದ್ಮೇಲೆ ಹೀಗೆ ಮಾಡಿದ್ರೆ ಆರೋಗ್ಯದ ಬಗ್ಗೆ ಭಯಪಡಬೇಕಿಲ್ಲ
ಪಾಪಾಸುಕಳ್ಳಿ ಹಣ್ಣಿನ ಔಷಧೀಯ ಗುಣಗಳು
ಮುಳ್ಳು ಪಿಯರ್ ಕ್ಯಾಕ್ಟಸ್ ಅನ್ನು ಸೂಪರ್‌ಫುಡ್ ಎಂದು ಕರೆಯುತ್ತಾರೆ. ಯಾಕೆಂದರೆ ಇದು ಆರೋಗ್ಯಕರ ಆಹಾರದ (Healthy food) ಭಾಗವಾಗಿದೆ. ಇದರಲ್ಲಿ ಫೈಬರ್, ಆಂಟಿಆಕ್ಸಿಡೆಂಟ್‌ಗಳು ಮತ್ತು ಕ್ಯಾರೊಟಿನಾಯ್ಡ್‌ಗಳು ಸಮೃದ್ಧವಾಗಿವೆ. ಮಧುಮೇಹ (Diabetes), ಅಧಿಕ ಕೊಲೆಸ್ಟ್ರಾಲ್, ಸ್ಥೂಲಕಾಯತೆ ಮತ್ತು ಹ್ಯಾಂಗೊವರ್‌ಗಳಿಗೆ ಚಿಕಿತ್ಸೆ ನೀಡಲು ಉತ್ತೇಜಿಸಲಾಗಿದೆ. ಇದು ಅದರ ಆಂಟಿವೈರಲ್ ಮತ್ತು ಉರಿಯೂತದ ಗುಣಲಕ್ಷಣಗಳಿಗೆ ಸಹ ಹೆಸರುವಾಸಿಯಾಗಿದೆ.
ಮಧುಮೇಹ ಇರುವವರಿಗೆ ಒಳ್ಳೆಯದು: ಮುಳ್ಳು ಪಿಯರ್ ಕೆಲವು ಜನರಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು 17% ರಿಂದ 46%ರಷ್ಟು ಕಡಿಮೆ ಮಾಡುತ್ತದೆ. ಟೈಪ್ 2 ಡಯಾಬಿಟಿಸ್ ಹೊಂದಿರುವವರಲ್ಲೂ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ: ಅನುವಂಶಿಕವಾಗಿ ಅಧಿಕ ಕೊಲೆಸ್ಟರಾಲ್ (Cholestrol) ಸಮಸ್ಯೆಯಿಂದ ಬಳಲುತ್ತಿರುವವರು ಮುಳ್ಳು ಪಿಯರ್ ಕಳ್ಳಿಯ ಖಾದ್ಯ ತಿರುಳನ್ನು ಪ್ರತಿದಿನ 4 ವಾರಗಳವರೆಗೆ ತೆಗೆದುಕೊಳ್ಳುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ. ಇವಿಷ್ಟೇ ಅಲ್ಲದೆ ಬೊಜ್ಜು, ಅತಿಸಾರ ಮೊದಲಾದ ಸಮಸ್ಯೆಗಳಿಗೂ ಮುಳ್ಳು ಪಿಯರ್ ಅತ್ಯುತ್ತಮವಾಗಿದೆ.
ಆರೋಗ್ಯಕ್ಕೆ ಬೇಕು Seasonal Fruits, ಬೇಸಿಗೆಗೆ ಇವೇ ಬೆಸ್ಟ್
ಹ್ಯಾಂಗೋವರ್ ಕಡಿಮೆ ಮಾಡುತ್ತದೆ. ಅಲ್ಕೋಹಾಲ್ ಕುಡಿಯುವ ಮೊದಲು ಮುಳ್ಳು ಪಿಯರ್ ಕ್ಯಾಕ್ಟಸ್ ಅನ್ನು ತೆಗೆದುಕೊಳ್ಳುವುದರಿಂದ ಮರುದಿನ ಹ್ಯಾಂಗೋವರ್‌ನ (Hangover) ಕೆಲವು ಲಕ್ಷಣಗಳನ್ನು ಕಡಿಮೆ ಮಾಡಬಹುದು. ಇದು ವಾಕರಿಕೆ, ಅನೋರೆಕ್ಸಿಯಾ ಮತ್ತು ಒಣ ಬಾಯಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಆಗಾಗ ಮೂತ್ರ ಬರುವ ಸಮಸ್ಯೆ ನಿವಾರಣೆಯಾಗುತ್ತದೆ: ಕೆಲವೊಬ್ಬರು ಆಗಾ ಮೂತ್ರ (Urine) ವಿಸರ್ಜಿಸಲು ಬಲವಾದ ಪ್ರಚೋದನೆಯನ್ನು ಅನುಭವಿಸುತ್ತಾರೆ. ಪುಡಿಮಾಡಿದ ಮುಳ್ಳು ಪಿಯರ್ ಕ್ಯಾಕ್ಟಸ್ ಹೂವುಗಳನ್ನು ತೆಗೆದುಕೊಳ್ಳುವುದರಿಂದ ಈ ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು.
ಪಾಪಾಸುಕಳ್ಳಿ ಹಣ್ಣಿನ ರಸ ಕಫ ಹಾಗೂ ಕೆಮ್ಮು ನಿವಾರಕವಾಗಿ ಕೆಲಸ ಮಾಡುತ್ತದೆ. ಎಲೆಗಳ ರಸ ಚರ್ಮಕ್ಕೆ ಕಾಂತಿ ನೀಡುತ್ತದೆ ಹಾಗೂ ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಹಣ್ಣುಗಳ ಸೇವನೆಯಿಂದ ಮಲಬದ್ಧತೆ ನಿವಾರಣೆ ಆಗುತ್ತದೆ. ಮೊಣಕಾಲು ಬಾವು ನೋವುಗಳಿಗೆ ಎಲೆಗಳ ರಸವನ್ನು ಲೇಪಿಸಬೇಕು. ಚರ್ಮ ರೋಗಗಳಿಗೆ ಸಹ ಇದು ಉಪಯುಕ್ತವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.