ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಹಾರದ ವಿಡಿಯೋಗಳು ವೈರಲ್ ಆಗ್ತಿವೆ. ಜನರು ಯಾವ್ ಯಾವ್ದೋ ಆಹಾರಕ್ಕೆ ಮತ್ತ್ಯಾವುದೋ ಆಹಾರ ಬೆರೆಸಿ ನೀಡ್ತಿದ್ದಾರೆ. ಕೆಲವು ಇಷ್ಟವಾದ್ರೆ ಕೆಲವು ಕಷ್ಟವಾಗುತ್ತದೆ.
ಬಗೆ ಬಗೆಯ ಖಾದ್ಯಕ್ಕೆ ಭಾರತ ಫೇಮಸ್. ಭಾರತದಲ್ಲಿ ಸಿಗುವಷ್ಟು ವೆರೈಟಿ ಖಾದ್ಯ ನಮಗೆ ಬೇರೆ ಕಡೆ ಸಿಗೋದು ಕಷ್ಟ. ಭಾರತದ ಪದಾರ್ಥಗಳು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿವೆ. ಬಟರ್ ಚಿಕನ್, ಪನೀರ್ ಬಟರ್ ಮಸಾಲಾ, ಆಲೂಗಡ್ಡೆ ಕರಿ, ಚಿಕನ್ ಕರಿ, ಪುಲಾವ್ ಹೀಗೆ ವೆರೈಟಿ ಮಸಾಲೆ ತಿಂಡಿಗಳು ಭಾರತದಲ್ಲಿವೆ. ಈ ಎಲ್ಲ ಬಾಯಿ ಚಪ್ಪರಿಸಿ ತಿನ್ನುವ ಆಹಾರಕ್ಕೆ ಮುಖ್ಯವಾಗಿ ಬೇಕಾಗಿರೋದು ಮಸಾಲೆ. ನೀವು ಆಹಾರಕ್ಕೆ ಯಾವ ಮಸಾಲೆ ಬಳಸ್ತೀರಿ ಎನ್ನುವುದು ರುಚಿಯನ್ನು ಅವಲಂಭಿಸಿದೆ.
ಈ ಮಸಾಲೆ (Spices) ಗಳ ರುಚಿ ಮತ್ತು ಸುವಾಸನೆಯು ಆಹಾರ (Food) ಪ್ರಿಯರನ್ನು ಸೆಳೆಯುತ್ತದೆ. ಮನೆ, ಹೊಟೇಲ್, ರೆಸ್ಟೋರೆಂಟ್ ಗಳಿಂದ ಹಿಡಿದು ಬೀದಿ ಬದಿಯಲ್ಲಿಯೂ ಸಾಂಪ್ರದಾಯಿಕ ಅಡುಗೆ ಎಲ್ಲರ ಗಮನ ಸೆಳೆಯುತ್ತದೆ. ಸಾಮಾಜಿಕ ಜಾಲತಾಣ (Social Network) ದಲ್ಲಿ ಇತ್ತೀಚಿಗೆ ಬೀದಿ ಬದಿ ವ್ಯಾಪಾರಿಗಳು ಗಮನ ಸೆಳೆಯುತ್ತಿದ್ದಾರೆ. ಅವರ ಚಿತ್ರವಿಚಿತ್ರ ಖಾದ್ಯಗಳು ಸುದ್ದಿ ಮಾಡಲು ಕಾರಣವಾಗ್ತಿದೆ.
ಮ್ಯಾಂಗೋ ಸೀಸನ್ ಶುರು, ಡಯಾಬಿಟಿಸ್ ಇರೋರು ಮಾವಿನ ಹಣ್ಣು ತಿನ್ಬೋದಾ?
ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್, ಫೇಸ್ಬುಕ್, ಯುಟ್ಯೂಬ್, ಟಿಕ್ ಟಾಕ್ ಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ವಿಡಿಯೋವನ್ನು ನೀವು ನೋಡಬಹುದು. ಕೆಲ ದಿನಗಳ ಹಿಂದಷ್ಟೆ ಐಸ್ ಕ್ರೀಂ ಚಿಕನ್ ಮಾಡಿ ವ್ಯಕ್ತಿಯೊಬ್ಬ ಗಮನ ಸೆಳೆದಿದ್ದ. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿತ್ತು. ಆಯಾ ಆಹಾರವನ್ನು ಇದ್ದ ಹಾಗೆ ಬಿಟ್ಬಿಡಿ. ಅದ್ರಲ್ಲಿ ಇಂಥ ಬದಲಾವಣೆ ಮಾಡೋಕೆ ಹೋಗಿ ಆ ಆಹಾರದ ಮರ್ಯಾದೆ ತೆಗೆಯಬೇಡಿ ಎಂದು ಜನರು ಛೀಮಾರಿ ಹಾಕಿದ್ದರು. ಈಗ ಇಂಥಹದ್ದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ರಾಜಸ್ಥಾನಿ ಕುರಿ ಮಾಂಸವನ್ನು ಮದ್ಯದೊಂದಿಗೆ ಬೇಯಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ವೈರಲ್ ವೀಡಿಯೊದಲ್ಲಿ, ಬೀದಿ ವ್ಯಾಪಾರಿಯೊಬ್ಬರು ರಾಜಸ್ಥಾನಿ ಮಟನ್ ಕರಿಯನ್ನು ಮದ್ಯದೊಂದಿಗೆ ಬೆರೆಸಿ ಅಡುಗೆ ಮಾಡುತ್ತಿದ್ದಾರೆ.
ರೆಸ್ಟೋರೆಂಟಲ್ಲಿ ಯಾವಾಗ್ಲೂ ತಂದೂರಿ ರೋಟಿನೇ ತಿಂತೀರಾ? ಹುಷಾರು!
ಈ ವಿಡಿಯೋವನ್ನು ಇನ್ಟ್ರಾಗ್ರಾಮ್ (Instagram) ಬಳಕೆದಾರ @therealharryuppal ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎರಡು ಪೆಗ್ ಪ್ಲಸ್ ಮಟನ್ ಪೆಗ್ ಎಂದು ಆತ ಶೀರ್ಷಿಕೆ ಹಾಕಿದ್ದಾನೆ. ರಾಜಸ್ಥಾನದ ಜೈಪುರದಲ್ಲಿರುವ ಅಂಗಡಿಯೊಂದರ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ಅಂಗಡಿ ವ್ಯಾಪಾರಿ ಮೊದಲು ಮಟನ್ ಕರಿ ಮಾಡೋದು ಹೇಗೆ ಎಂಬುದನ್ನು ವಿವರಿಸುತ್ತಾರೆ. ಅದಕ್ಕೆ ಏನೆಲ್ಲ ಬೇಕು ಎಂಬುದನ್ನು ಹೇಳ್ತಾ, ಮಟನ್ ಕರಿ ಮಾಡ್ತಾರೆ. ನಂತ್ರ ಅದಕ್ಕೆ ಪಿಂಕ್ ಬಣ್ಣದ ಆಲ್ಕೋಹಾಲ್ ಸೇರಿಸುತ್ತಾರೆ. ಆಲ್ಕೋಹಾಲ್ ಬಾಟಲಿ ಮೇಲೆ ಶೇಕಡಾ 37. 5ರಷ್ಟು ಆಲ್ಕೋಹಾಲ್ ಇದ್ರಲ್ಲಿದೆ. ಇದನ್ನು ಹಾಕಿದ ನಂತ್ರ ಮಟನ್ ಬೇಯಿಸ್ತಾರೆ. ಅದು ಬೆಂದ ಮೇಲೆ ಮುಚ್ಚಳ ತೆಗೆಯುತ್ತಾರೆ. ಅದ್ರ ವಾಸನೆ ಘಮ್ ಎನ್ನುತ್ತಿದೆ ಎಂದು ವಿಡಿಯೋ ಮಾಡುತ್ತಿರುವ ವ್ಯಕ್ತಿ ಹೇಳೋದನ್ನು ನೀವು ಕೇಳಬಹುದು. ನಂತ್ರ ಇದನ್ನು ಆತ ಸೇವನೆ ಮಾಡ್ತಾನೆ.
34 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋಕ್ಕೆ ಬಳಕೆದಾರರು ಸಾಕಷ್ಟು ಕಮೆಂಟ್ ಕೂಡ ಮಾಡಿದ್ದಾರೆ. ವ್ಯಕ್ತಿಯೊಬ್ಬ ನಾನು ಸಸ್ಯಹಾರಿಯಾಗಿದ್ದಕ್ಕೆ ಹೆಮ್ಮೆಯಾಗ್ತಿದೆ ಎಂದು ಬರೆದಿದ್ದಾನೆ. ಮಟನ್ ಬಿಸಿಗೆ ಆಲ್ಕೋಹಾಲ್ ಪವರ್ ಹೋಗಿರಬಹುದು ಎಂದು ಒಬ್ಬರು ಬರೆದ್ರೆ ಇನ್ನೊಬ್ಬರು ಬಳಸಿರುವ ಆಲ್ಕೋಹಾಲ್ ಯಾವುದು ಹೇಳಿ ಅಂತಾ ಬರೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇಂಥ ವಿಡಿಯೋಗಳು ಸಾಕಷ್ಟು ಹರಿದಾಡ್ತಿರುತ್ತವೆ. ವ್ಯಾಪಾರಸ್ಥರು, ಗ್ರಾಹಕರನ್ನು ಸೆಳೆಯಲು ಸಾಂಪ್ರದಾಯಿಕ ಖಾದ್ಯದಲ್ಲಿ ಬದಲಾವಣೆ ಮಾಡ್ತಿದ್ದಾರೆ. ಕೆಲ ಖಾದ್ಯ ಜನರಿಗೆ ಇಷ್ಟವಾದ್ರೆ ಮತ್ತೆ ಕೆಲವನ್ನು ಜನರು ರಿಜೆಕ್ಟ್ ಮಾಡ್ತಾರೆ.