ಎಣ್ಣೆ ಹೊಡೆಯೋರು ಹಾಗೇ ಸುಮ್ನೆ ಕೂತ್ಕೊಂಡಿರುವಾಗ ಮಾತನಾಡುವುದನ್ನು ನೀವು ಕೇಳಿಸ್ಕೊಂಡಿದ್ದೀರಾ ? ಏನೆಲ್ಲಾ ಮಾತಾಡ್ತಾರೆ ನೋಡಿ. ಕುಡಿಯೋ ಬಗ್ಗೆ ಅವ್ರ ಹೇಳೋ ಮಾತಂತೂ ಏನಪ್ಪಾ ಇದು ಲಾಜಿಕ್ಕೇ ಇಲ್ಲ ಅನ್ಸುತ್ತೆ. ಅಲ್ಕೋಹಾಲ್ (Alcohol)ಬಗ್ಗೆ ನೀವು ಕೂಡಾ ಇಂಥಹಾ ತಪ್ಪು (Wrong) ಅಭಿಪ್ರಾಯ ಹೊಂದಿದ್ರೆ ಸರಿ ಮಾಡ್ಕೊಳ್ಳಿ.
ಸದ್ಯದ ಪ್ರಪಂಚದಲ್ಲಿ ಕುಡಿಯೋದೆ ನನ್ನ ವೀಕ್‌ನೆಸ್ಸು ಅನ್ನೋರೆ ಹೆಚ್ಚಿನವರು. ಆದ್ರೆ ಹೆಚ್ಚಿನವರು ಮದ್ಯ ಕುಡೀತಾರಾದ್ರೂ ಮದ್ಯದ ಬಗ್ಗೆ ಹಲವಾರು ವಿಚಾರಗಳನ್ನು ತಪ್ಪಾಗಿ ತಿಳಿದುಕೊಂಡಿರುತ್ತಾರೆ. ಅದನ್ನೇ ಕಣ್ಮುಚ್ಚಿಕೊಂಡು ಅನುಸರಿಸುತ್ತಾರೆ. ಮದ್ಯ ಕುಡಿಯುವುದರಿಂದಾಗುವ ಹಾನಿ, ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಂಡಿರುವುದಕ್ಕಿಂತ ಹೆಚ್ಚು ಮೂಢನಂಬಿಕೆಗಳನ್ನು ಅಳವಡಿಸಿಕೊಂಡಿರುತ್ತಾರೆ. ಆದ್ರೆ ಮದ್ಯದ ಬಗ್ಗೆ ನೀವು ತಿಳ್ಕೊಂಡಿರೋ ಎಲ್ಲಾ ವಿಚಾರನೂ ಸತ್ಯ ಅಲ್ಲ ನೋಡಿ.
ಮಿಥ್ಯ 1: ಮದ್ಯ ಕುಡಿದ ಮೇಲೆ ಶಾಂತವಾಗಲು ಒಂದು ಕಪ್ ಕಾಫಿ ಕುಡಿಯಿರಿ
ರಿಯಾಲಿಟಿ: ಅಲ್ಕೋಹಾಲ್ (Alcohol) ಕುಡಿದ ಬಳಿಕ ಕೆಫೀನ್, ಕಾಫಿ ಅಥವಾ ಎನರ್ಜಿ ಡ್ರಿಂಕ್ಸ್‌ಗಳನ್ನು ಕುಡಿಯುವುದರಿಂದ ದೇಹದಲ್ಲಿ ಅಲ್ಕೋಹಾಲ್ ಪ್ರಭಾವ ಬೀರುವುದಿಲ್ಲ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ, ಕೆಫೀನ್‌ಯುಕ್ತ ಪಾನೀಯಗಳು ನೀವು ಶಾಂತವಾಗಿದ್ದೀರಿ ಎಂದು ನಂಬುವಂತೆ ಮಾಡುತ್ತದೆ. ಆದರೆ ದೇಹದಲ್ಲಿ ಮದ್ಯದ ಅಮಲು ಹಾಗೆಯೇ ಇರುತ್ತದೆ.
Drinking Ritual: ಕುಡಿಯುವ ಮೊದಲು ಮದ್ಯವನ್ನು ನೆಲಕ್ಕೆ ಸಿಂಪಡಿಸುವುದೇಕೆ ?
ಮಿಥ್ಯ 2: ವಾಂತಿ ಮಾಡಿದರೆ ಮದ್ಯದ ಅಮಲಿನಿಂದ ಹೊರಬರಬಹುದು
ರಿಯಾಲಿಟಿ: ಕೇಳುವಾಗಲೇ ವಿಚಿತ್ರವೆನಿಸುತ್ತದೆ ಅಲ್ಲವೇ ? ಆದರೆ ಹೆಚ್ಚಿನವರು ಇದನ್ನೇ ನಿಜವೆಂದು ನಂಬಿದ್ದಾರೆ. ವಾಂತಿ ಮಾಡಿದ ತಕ್ಷಣ ಮದ್ಯದ ಅಮಲು ಇಳಿದುಬಿಡುತ್ತದೆ, ಅಸ್ವಸ್ಥತೆಯಿಲ್ಲದೆ ಆರಾಮವಾಗಿರಬಹುದು ಎಂದು ಅಂದುಕೊಳ್ಳುತ್ತಾರೆ. ಆದರೆ ಹಾಗಾಗುವುದಿಲ್ಲ. ಮದ್ಯ ಕುಡಿದು ಅಸ್ವಸ್ಥತೆಯಾಗದಿರಲು ಒಂದೇ ಮಾರ್ಗವೆಂದರೆ ಹೆಚ್ಚು ಕುಡಿಯಬೇಡಿ. ಮದ್ಯ ಸೇವಿಸಿದ ನಂತರ ಒಬ್ಬರ ರಕ್ತದಲ್ಲಿ ಅಲ್ಕೋಹಾಲ್ ಅಂಶವು (BAC) ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಹೀಗಾಗಿ ಅಮಲಾಗುವ ಪ್ರಮಾಣವೂ ವ್ಯತ್ಯಸ್ಥವಾಗಿರುತ್ತದೆ.
ಮಿಥ್ಯ 3: ಗಾಢವಾದ ಬಿಯರ್‌ಗಳಲ್ಲಿ ಹೆಚ್ಚಿನ ಆಲ್ಕೋಹಾಲ್ ಅಂಶವಿದೆ
ರಿಯಾಲಿಟಿ: ಅಲ್ಕೋಹಾಲ್ ವಿಷಯಕ್ಕೆ ಬಂದಾಗ ಬಿಯರ್ (Beer)ನ ಬಣ್ಣವು ಮುಖ್ಯವಾಗಿದೆ ಎಂದು ಹಲವರು ಭಾವಿಸುತ್ತಾರೆ. ಗಾಢ ಬಣ್ಣದ ಮದ್ಯದ ಗುಣಮಟ್ಟ ಉತ್ತಮವಾಗಿರುತ್ತದೆ. ತಿಳಿ ಬಣ್ಣದ ಮದ್ಯ ಕಿಕ್ ನೀಡುವುದಿಲ್ಲ ಎಂದೇ ಭಾವಿಸುತ್ತಾರೆ. ಆದರೆ ಇದು ಯಾವುದೂ ನಿಜವಲ್ಲ. ಮದ್ಯದ ಬಣ್ಣವು ಅದನ್ನು ತಯಾರಿಸಲು ಬಳಸಲಾಗುವ ಧಾನ್ಯಗಳಿಂದ ಬಂದಿರುತ್ತದೆ. ಹೀಗಾಗಿ ಇದಕ್ಕೂ ಮದ್ಯದ ಅಮಲಿನ ಪರಿಣಾಮಕ್ಕೂ ಯಾವುದೇ ಸಂಬಂಧವಿಲ್ಲ.
ಮದ್ಯಪಾನ ಮಾಡಿದ ನಂತ್ರ ಇದನ್ನ ಕುಡಿಲೇಬೇಡಿ: ಆರೋಗ್ಯಕ್ಕೆ ಮಾರಕ
ಮಿಥ್ಯ 4: ಹೆಚ್ಚು ಕುಡಿಯುವುದರಿಂದ ಹೆಚ್ಚು ಮೂತ್ರ ಮಾಡಬೇಕಾಗುತ್ತದೆ
ರಿಯಾಲಿಟಿ: ಸಾಮಾನ್ಯವಾಗಿ ಎಲ್ಲರೂ ಹೆಚ್ಚು ಕುಡಿಯುವುದರಿಂದ ಹೆಚ್ಚು ಮೂತ್ರ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತಾರೆ. ಆದರೆ ಇದು ಸತ್ಯವಲ್ಲ. ವಾಸ್ತವದಲ್ಲಿ ಅಲ್ಕೋಹಾಲ್ ನಮ್ಮ ದೇಹದಲ್ಲಿನ ಹಾರ್ಮೋನುಗಳಿಗೆ ಅಡ್ಡಿಪಡಿಸುತ್ತದೆ ಅದು ನೀರನ್ನು ಸಂರಕ್ಷಿಸುತ್ತದೆ ಮತ್ತು ಮೂತ್ರದ ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ. ಮದ್ಯ ಕುಡಿಯುವುದರಿಂದ ದೇಹದಲ್ಲಿ ಉತ್ಪಾದನೆಯಾಗುವ ಅರ್ಜಿನೈನ್ ವಾಸೊಪ್ರೆಸಿನ್ ಎಂದು ಹೆಸರಿಸಲಾದ ಆಂಟಿಡಿಯುರೆಟಿಕ್ ಹಾರ್ಮೋನ್ (Harmone), ದೇಹವನ್ನು ನಿಮ್ಮ ಮೂತ್ರದಿಂದ ನೀರನ್ನು ಪುನಃ ಹೀರಿಕೊಳ್ಳಲು ಒತ್ತಾಯಿಸುತ್ತದೆ. ಇದು ನಿಮ್ಮನ್ನು ಹೆಚ್ಚು ಹೈಡ್ರೀಕರಿಸುತ್ತದೆ.
ಮಿಥ್ಯ 5: ಮದ್ಯದ ಮೊದಲು ಬಿಯರ್ ಕುಡಿಯುವುದು ಅಸ್ವಸ್ಥರನ್ನಾಗಿ ಮಾಡುವುದಿಲ್ಲ
ರಿಯಾಲಿಟಿ: ಹಲವರು ಹೀಗೆ ತಪ್ಪು ತಿಳಿದುಕೊಂಡಿರುತ್ತಾರೆ. ಯಾವುದೇ ಮದ್ಯ ಕುಡಿಯುವ ಮೊದಲು ಬಿಯರ್ ಸೇವಿಸಿದರೆ ಬೇಗನೇ ಹ್ಯಾಂಗೋವರ್ ಆಗುವುದಿಲ್ಲ ಎಂದು ಅಂದುಕೊಳ್ಳುತ್ತಾರೆ. ವಾಸ್ತವದಲ್ಲಿ, ನೀವು ಎಷ್ಟು ಕುಡಿಯುತ್ತೀರಿ ಎಂಬುದು ಮುಖ್ಯವಾಗಿದೆ. ಎಷ್ಟು ಕುಡಿಯುತ್ತೀರಿ ಎಂಬ ಪ್ರಮಾಣ ಹ್ಯಾಂಗೋವರ್ (Hangover), ಅಸ್ವಸ್ಥತೆಗೆ ಕಾರಣವಾಗುತ್ತದೆ. ಅಥವಾ ನೀವು ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಿದ್ದರೆ, ಅದು ನಿಮ್ಮನ್ನು ಅಸ್ವಸ್ಥಗೊಳಿಸುತ್ತದೆ.
ಮಿಥ್ಯ 6: ಗಾಢ ಬಣ್ಣವನ್ನು ಹೊಂದಿರುವ ಮದ್ಯ ಹೆಚ್ಚು ಆರೋಗ್ಯಕರವಾಗಿರುತ್ತದೆ
ರಿಯಾಲಿಟಿ: ಕೆಂಪು ವೈನ್, ಡಾರ್ಕ್ ಬಿಯರ್, ವಿಸ್ಕಿ ಮತ್ತು ಬೌರ್ಬನ್ ನಂತಹ ಕಪ್ಪು ಮದ್ಯ ದೇಹಕ್ಕೆ ಹೆಚ್ಚು ಆರೋಗ್ಯಕರವೆಂದು ಹಲವರು ಅಂದುಕೊಳ್ಳುತ್ತಾರೆ. ನಿಸ್ಸಂದೇಹವಾಗಿ, ಈ ಪ್ರತಿಯೊಂದು ಪಾನೀಯಗಳಲ್ಲಿ ಕೆಲವು ಆರೋಗ್ಯ (Health) ಪ್ರಯೋಜನಗಳಿವೆ. ಕೆಂಪು ವೈನ್ ಹೆಚ್ಚು ಪಾಲಿಫಿನಾಲ್‌ಗಳನ್ನು ಹೊಂದಿದೆ ಮತ್ತು ಡಾರ್ಕ್ ಬಿಯರ್ ಹೆಚ್ಚು ಫ್ಲೇವನಾಯ್ಡ್ಗಯ್ಡ್ ಗಳನ್ನು ಹೊಂದಿದೆ, ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾಗಿವೆ. ಆದಾಗ್ಯೂ, ಗಾಢವಾದ ಪಾನೀಯಗಳು ಹೆಚ್ಚಿನ ಪ್ರಮಾಣದ ರಾಸಾಯನಿಕ ಪ್ರಮಾಣವನ್ನು ಹೊಂದಿರುತ್ತವೆ. ಇವು ದೇಹದಲ್ಲಿ ಹ್ಯಾಂಗೋವರ್ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬಹುದು.