ಬೆಂಗಳೂರಿನಲ್ಲಿ ಅಮಿತಾಬ್ ಬಚ್ಚನ್ ಮೊಮ್ಮಗಳು.. ದೋಸೆ ಫೋಟೋಕ್ಕೆ ತಾಯಿ ರಿಯಾಕ್ಷನ್

By Suvarna News  |  First Published Jul 11, 2023, 1:36 PM IST

ಸ್ಟಾರ್ ಮಕ್ಕಳು ಕಲಾವಿದರೇ ಆಗ್ಬೇಕೆಂದೇನಿಲ್ಲ. ಇದಕ್ಕೆ ನವ್ಯಾ ನಂದಾ ಉತ್ತಮ ನಿದರ್ಶನ. ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನವ್ಯಾ, ಕುಟುಂಬದ ಉದ್ಯಮ ಮುನ್ನಡೆಸುತ್ತಿದ್ದಾರೆ. ಅವರಿಗೆ ತಾಯಿ ಬೆಂಬಲ ಸದಾ ಇದೆ. ಸದ್ಯ ಬೆಂಗಳೂರಿನ ದೋಸೆ ಟೇಸ್ಟ್ ಮಾಡ್ತಿದ್ದಾರೆ ನವ್ಯಾ. 


ಯುವಜನತೆ ಮತ್ತು ಮಹಿಳೆಯರ ಸಬಲೀಕರಣದ ಅಭಿಯಾನ ಹಮ್ಮಿಕೊಂಡಿರುವ ಉದ್ಯಮಿ ನವ್ಯಾ (Navya) ನಂದಾ ಆಲ್ ಇಂಡಿಯಾ ಟೂರ್ ನಲ್ಲಿದ್ದಾರೆ. ಸ್ನೇಹಿತರ ಜೊತೆ ಬೆಂಗಳೂರಿನಲ್ಲಿ ತಂಗಿರುವ ನವ್ಯಾ, ಉದ್ಯಾನನಗರವನ್ನು ರೌಂಡ್ ಹಾಕ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನವ್ಯಾ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

ಬೆಂಗಳೂರಿ (Bangalore) ನ ರಾಮೇಶ್ವರಂ ಕೆಫೆಗೆ ಹೋಗಿದ್ದ ನವ್ಯಾ ಅಲ್ಲಿ ದೋಸೆ ರುಚಿ ಸವಿಸಿದ್ದಾರೆ. ದೋಸೆ (Dosa) ತಿನ್ನುವ ಫೋಟೋ ಜೊತೆಗೆ ಸ್ನೇಹಿತರ ರಿಯಾಕ್ಷನ್ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದೋಸೆ ಫೋಟೋಕ್ಕೆ ನವ್ಯಾ, ವಿ ಹ್ಯಾಡ್ ಟು.. ಎಂದು ಶೀರ್ಷಿಕೆ ಹಾಕುವ ಜೊತೆಗೆ ಹಾರ್ಟ್ ಇಮೋಜಿ ಹಾಕಿದ್ದಾರೆ. ನವ್ಯಾ ಈ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಅದ್ರಲ್ಲಿ ತಾಯಿ ಶ್ವೇತಾ ಕೂಡ ಸೇರಿದ್ದಾರೆ. ಮಗಳ ಈ ಫೋಟೋಕ್ಕೆ ಶ್ವೇತಾ ಬಚ್ಚನ್, ನವ್ಯಾ..! ಎಂದು ಎಲ್ಲ ಅಮ್ಮಂದಿರಂತೆ ಕಮೆಂಟ್ ಮಾಡಿದ್ದಾರೆ. ತಾಯಿ  ಶ್ವೇತಾ ಕಮೆಂಟ್ ಅನೇಕರಿಗೆ ಇಷ್ಟವಾಗಿದೆ. ನವ್ಯಾ ಎಲ್ಲ ಕೆಲಸಕ್ಕೂ ತಾಯಿ ಶ್ವೇತಾ ಸಪೂರ್ಟ್ ಇದೆ ಅಂತಾ ಕೆಲವರು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

Health Tips: ಮಳೆ ಬಂತೂಂದ್ರೆ ಅನಾರೋಗ್ಯನೂ ಕಾಡುತ್ತೆ, ನೀವ್ ತಿನ್ನೋ ಆಹಾರ ಹೀಗಿರ್ಲಿ

ಬೆಂಗಳೂರಿನ ಐಐಎಂ ಗೆ ಭೇಟಿ ನೀಡಿದ್ದ ಉದ್ಯಮಿ ನವ್ಯಾ ಅವರು ಕ್ವಿರ್ಕಿ ಚೇರ್ ಮೇಲೆ ಕುಳಿತು 3 ಈಡಿಯಟ್ಸ್ ಚಿತ್ರದ ಫೋಸ್ ಕೊಟ್ಟಿದ್ದಾರೆ. ಈ ಫೋಟೋವನ್ನೂ ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ. ಜಹಾನ್ಪನಾ! ತುಸ್ಸಿ ಫೆಂಟಾಸ್ಟಿಕ್ ಹೋ… ಎಂಬ ಶೀರ್ಷಿಕೆಯನ್ನು ಹಾಕಿದ್ದಾರೆ. ಇಲ್ಲಿ ನವ್ಯಾ ಜೊತೆ ಇಬ್ಬರು ಸ್ನೇಹಿತರನ್ನು ನೀವು ನೋಡ್ಬಹುದಾಗಿದೆ. ಎಲ್ಲರೂ 3 ಈಡಿಯಟ್ಸ್ ಚೇರ್ ಮೇಲೆ ಕುಳಿತಿದ್ದಾರೆ. ಈ ಫೋಟೋಕ್ಕೂ ಶ್ವೇತಾ ಕಮೆಂಟ್ ಮಾಡಿದ್ದಾರೆ. ಈ ಫೋಟೋಗೆ ನಗುಮುಖದ ಇಮೊಜಿಯನ್ನು ಕಳಿಸಿರುವ ಶ್ವೇತಾ ನಂದಾ ಮತ್ತೆ ನವ್ಯಾ.. ಎಂದು ನಗು ಬೀರಿದ್ದಾರೆ. 

ಇದಕ್ಕೂ ಮುನ್ನ ಯುವಾ ಸಂಸ್ಥೆಯ ಸಹಯೋಗದಲ್ಲಿ ದೆಹಲಿಯಲ್ಲಿ ನಡೆದ ರೋಡ್ ಶೋದ ಫೋಟೋವನ್ನೂ ಕೂಡ ಹಂಚಿಕೊಂಡಿರುವ ನವ್ಯಾ, “ಹೇಗೆ ನಡೆಯುತ್ತಿದೆ  ರೋಡ್ ಶೋ” ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟ ಅಭಿಷೇಕ ಬಚ್ಚನ್, ನವ್ಯಾಳಿಗೆ ಹಗ್ ಎಮೋಜಿಯನ್ನು ಕಳುಹಿಸಿದ್ದಾರೆ. 

ಕನ್ನಡತಿಯರು ಬಿಕಿನಿ ಹಾಕ್ಬಾರ್ದು; ಕಾಮೆಂಟ್ ಅಫ್ ಮಾಡಿದ ನಮ್ರತಾ, ನೆಟ್ಟಿಗರು ಗರಂ

ನವ್ಯಾ ನವೇಲಿ ನಂದಾ ಪ್ರಸ್ತುತ ತಮ್ಮ ಕುಟುಂಬದ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ  ಅವರು ಆನ್‌ಲೈನ್ ಹೆಲ್ತ್ ಕೇರ್ ಪ್ಲಾಟ್‌ಫಾರ್ಮ್ ಆರಾ ಹೆಲ್ತ್ ನ ಸಂಸ್ಥಾಪಕರಾಗಿದ್ದಾರೆ.  ಈ ಸಂಸ್ಥೆ ಮಹಿಳೆಯರ ಆರೋಗ್ಯ ಉತ್ಪನ್ನಗಳನ್ನು ತಯಾರಿಸುತ್ತದೆ. ಅಷ್ಟೇ ಅಲ್ಲದೇ ನವ್ಯಾ ನಂದಾ ಅವರು ವಾಟ್ ದ ಹೆಲ್ ನವ್ಯಾ ಎಂಬ ಬ್ರೋಡ್ಕಾಸ್ಟ್ ಮೂಲಕ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸುತ್ತಾರೆ. ನವ್ಯಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡದೇ ಇರಬಹುದು, ಆದರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. 

ನವ್ಯಾ ನ್ಯೂಯಾರ್ಕ್‌ನ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ. ತನ್ನ ಅಜ್ಜಿ ಜಯಾ ಬಚ್ಚನ್ ನನಗೆ ತುಂಬಾ ಸ್ಫೂರ್ತಿ ಎಂದು ಕಾರ್ಯಕ್ರಮವೊಂದರಲ್ಲಿ ನವ್ಯಾ ಹೇಳಿದ್ದರು. ಅಜ್ಜಿಯ ಒಂದು ವ್ಯಕ್ತಿತ್ವ ನನಗೆ ಬಂದ್ರೂ ನನ್ನ ಲೈಫ್ ಸೆಟಲ್ ಎಂದಿದ್ದರು ನವ್ಯಾ.

ನವ್ಯಾ ಚಿತ್ರರಂಗದಿಂದ ಹೊರಗಿದ್ದು, ನವ್ಯಾ ಸಹೋದರ ಅಗಸ್ತ್ಯ ನಂದಾ ಶೀಘ್ರದಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಅಗಸ್ತ್ಯ ಮುಂದೆ ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಮತ್ತು ಖುಷಿ ಕಪೂರ್ ಸಹ  ಕಾಣಿಸಿಕೊಳ್ಳಲಿದ್ದಾರೆ. 
 

click me!