ದೀಪಾವಳಿ ಹಬ್ಬಕ್ಕೆ ಈ ಸಿಂಪಲ್‌ ಅಡುಗೆ ಮಾಡ್ಕೊಂಡು ಸವಿಯಿರಿ

By Vinutha PerlaFirst Published Nov 12, 2023, 1:14 PM IST
Highlights

ಬೆಳಕಿನ ಹಬ್ಬದ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹಬ್ಬ ಅಂದ್ಮೇಲೆ ಹಬ್ಬದ ಸಡಗರ ಹೆಚ್ಚಿಸೋಕೆ ತರಹೇವಾರಿ ಅಡುಗೆ ಇಲ್ಲಾಂದ್ರೆ ಆಗುತ್ತಾ? ಅಡುಗೆ ಪರಿಣಿತೆ ರೇಖಾ ಭಟ್, ದೀಪಾವಳಿಗೆಂದೇ ಕೆಲವು ಅಡುಗೆ ರೆಸಿಪಿಗಳನ್ನು ನೀಡಿದ್ದಾರೆ.

ಅಡುಗೆ ಮನೆಯಿಂದ ವಿವಿಧ ಖಾದ್ಯಗಳ ಘಮ ಮೂಗಿಗೆ ಬಡಿದಾಗ ಹಬ್ಬ ಕಳೆಗಟ್ಟುವುದು. ದೀಪಾವಳಿಗೆಂದೇ ಕೆಲವು ಅಡುಗೆ ರೆಸಿಪಿಗಳನ್ನು ಅಡುಗೆ ಪರಿಣಿತೆ ರೇಖಾ ಭಟ್ ನೀಡಿದ್ದಾರೆ.

ಇಡ್ಲಿ ಮಂಚೂರಿಯನ್
ಒಂದು ಬೌಲಿಗೆ 1 ಕಪ್ ಮೈದಾ, ಅರ್ಧ ಕಪ್ ಕಾರ್ನ್ ಫ್ಲೋರ್, ಕಾಳುಮೆಣಸಿನ ಒಂಪುಡಿ, ಅಚ್ಚ ಖಾರದ ಪುಡಿ, ಉಪ್ಪು, ಚಿಟಿಕೆ ಅರಿಶಿನ ಹಾಕಿ ಮಿಕ್ಸ್ ಸ್ವಲ್ಪ ನೀರು ಸೇರಿಸಿ ಬಜ್ಜೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಮಾಡಿ. ಮಾಡಿಟ್ಟ ಇಡ್ಲಿಯನ್ನು ನಿಮ್ಮಿಷ್ಟದ ಆಕಾರಕ್ಕೆ ಕತ್ತರಿಸಿ ಕಲಸಿಟ್ಟುಕೊಂಡ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ ಗರಿಗರಿಯಾಗುವವರೆಗೆ ಕರಿದು ತೆಗೆದುಕೊಳ್ಳಿ. 

ಈಗ ಒಂದು ದಪ್ಪ ತಳದ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿಕೊಂಡ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಮಿಕ್ಸ್ ಮಾಡಿ. ಜೊತೆಗೆ ಟೊಮೆಟೋ ಸಾಸ್, ಸೋಯಾ ಸಾಸ್, ಚಿಲ್ಲಿ ಸಾಸ್, ವಿನೆಗರ್ ಹಾಕಿ ಮಿಕ್ಸ್ ಮಾಡಿ. ಈಗ ಕರಿದಿಟ್ಟುಕೊಂಡ ಇಟ್ಟ ಫೈ ಚೆನ್ನಾಗಿ ಕಲಸಿ ಸಣ್ಣ ಉರಿಯಲ್ಲಿ ಫ್ರೈ ಮಾಡಿ.ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಅಥವಾ ಸಿಂಗ್ ಆನಿಯನ್ ಉದುರಿಸಿ ಸರ್ವ್ ಮಾಡಿ.

ಅರ್ಜೆಂಟಿದ್ರೆ ಗೊಜ್ಜವಲಕ್ಕಿ ಮಾಡಿ, ಗಿರಿಜಾ ಲೋಕೇಶ್ ರೆಸಿಪಿ ಹೇಳ್ತಾರೆ ನೋಡಿ!

ಬಾಳೆಕಾಯಿ ಚಿಪ್ಸ್
ಅರಿಶಿನಪುಡಿ, ಅಚ್ಚ ಖಾರದ ಪುಡಿ, ಪುಡಿ ಇಂಗು ಸೇರಿಸಿ ಮಿಶ್ರಣ ಮಾಡಿ ಮಸಾಲೆ ತಯಾರು ಮಾಡಿಟ್ಟುಕೊಳ್ಳಿ. ಚೆನ್ನಾಗಿ ಬಲಿತ ಬಾಳೆಕಾಯಿ ತೆಗೆದುಕೊಳ್ಳಿ, ತುದಿ, ಬುಡ ಕತ್ತರಿಸಿ ಸಿಪ್ಪೆ ತೆಗೆದುಕೊಳ್ಳಿ, ಚಿಪ್ಸ್ ತುರಿಯುವ ಮನೆಯ (ಚಿಪ್ ಮೇಕರ್ ) ಸಹಾಯದಿಂದ ನೇರವಾಗಿ ಕಾದ ಎಣ್ಣೆಗೆ ಹಾಕಿ. ಹೊಂಬಣ್ಣ ಬರುವವರೆಗೆ ಕರಿದು ತೆಗೆದುಕೊಳ್ಳಿ. ಈಗ ಮಾಡಿಟ್ಟುಕೊಂಡ ಮಸಾಲೆ ಪುಡಿಯನ್ನು ಉದುರಿಸಿ ಸರಿಯಾಗಿ ಮಿಶ್ರಣ ಮಾಡಿ, ಸ್ವಲ್ಪ ತಣ್ಣಗಾದ ನಂತರ ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟುಕೊಂಡರೆ ತಿಂಗಳುಗಟ್ಟಲೆ ಕೆಡದೇ ಗರಿಗರಿಯಾಗಿರುತ್ತದೆ. ಮಕ್ಕಳಿಗೆ ಯಾವಾಗ ಬೇಕಾದರೂ ಮನೆಯಲ್ಲೇ ತಯಾರಿಸಿದ ಚಿಪ್ಸ್ ಕೊಡಬಹುದು.

ಇನ್‌ಸ್ಟಂಟ್ ವೆಜಿಟೆಬಲ್ ನೂಡಲ್ಸ್
ಯಾವುದೇ ಇನ್‌ ಸ್ಟಂಟ್ ತಿನಿಸುಗಳೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಮಕ್ಕಳಿಗೆ ಅಂತಹ ತಿನಿಸುಗಳೇ ಪ್ರಿಯವಾಗಿರುತ್ತದೆ. ಹಾಗಾಗಿ ಅದರಲ್ಲೇ ಸ್ವಲ್ಪ ಆರೋಗ್ಯಕ್ಕೆ ಉತ್ತಮವಾದುದ್ದನ್ನೂ ಸೇರಿಸಿ ಕೊಡುವುದರಿಂದ ನಮ್ಮ ಮನಸ್ಸಿಗೆ ನೆಮ್ಮದಿ, ಏನಂತೀರಾ? 

ಕಪ್ಪಾಗಿರುವ ಬಾಳೆಹಣ್ಣಿನ ಸುಟ್ಟವು ಸಖತ್ ಟೇಸ್ಟೀ; ಸಿಂಪಲ್ ರೆಸಿಪಿ ಟ್ರೈ ಮಾಡಿ

ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಹೆಚ್ಚಿಕೊಂಡ ಈರುಳ್ಳಿ, ಟೊಮೆಟೊ, ಕ್ಯಾಪಿಕಂ, ಹಸಿಬಟಾಣಿ. (ನಿಮ್ಮಿಷ್ಟದ ಇತರ ತರಕಾರಿ ಸೇರಿಸಬಹುದು) ಚಿಟಿಕೆ ಉಪ್ಪು ಹಾಕಿ ಮಾಡಿ. ಒಂದು ಕಪ್‌ ಬಿಸಿ ನೀರು ಹಾಕಿ ಇನ್‌ಸ್ಟಂಟ್ ನೂಡಲ್ಸ್, ಅದರ ಜೊತೆಗೆ ಬರುವ ಪುಡಿ ಹಾಕಿ ಕಲಕಿ 2-3 ನಿಮಿಷ ಬೇಯಲು ಬಿಡಿ, ನೀರು ಆನಿ ನೂಡಲ್ಸ್ ಬೆಂದ ನಂತರ ಕೊತ್ತಂಬರಿ ಸೊಪ್ಪಿನಿಂದ ಆಲಂಕರಿಸಿ ಕೊಟ್ಟರೆ ಮಕ್ಕಳು ಎರಡೇ ನಿಮಿಷದಲ್ಲಿ ಖಾಲಿ ಮಾಡುತ್ತಾರೆ.

click me!