Health Tips: ಪೌಷ್ಟಿಕ ರೊಟ್ಟಿ ಆರೋಗ್ಯ ಹಾಳು ಮಾಡೋದ್ಯಾವಾಗ?

Published : Oct 11, 2023, 07:00 AM IST
Health Tips:  ಪೌಷ್ಟಿಕ ರೊಟ್ಟಿ ಆರೋಗ್ಯ  ಹಾಳು ಮಾಡೋದ್ಯಾವಾಗ?

ಸಾರಾಂಶ

ದಿನದಲ್ಲಿ ಒಂದು ಬಾರಿಯಾದ್ರೂ ರೊಟ್ಟಿ ತಿನ್ಲೇಬೇಕು ಎನ್ನುವ ಜನರಿದ್ದಾರೆ. ರೊಟ್ಟಿ ಇಲ್ಲದೆ ಹೊಟ್ಟೆ ತುಂಬೋದಿಲ್ಲ. ಸರಿಯಾದ ರೀತಿ ರೊಟ್ಟಿ ತಯಾರಿಸಿದ್ರೆ ಮಾತ್ರ ಈ ರೊಟ್ಟಿ ನಮ್ಮ ಆರೋಗ್ಯ ವೃದ್ಧಿಸುವ ಕೆಲಸ ಮಾಡುತ್ತದೆ.   

ರೊಟ್ಟಿ ನಮ್ಮ ಆಹಾರದ ಒಂದು ಭಾಗವಾಗಿದೆ. ಅಕ್ಕಿ, ಗೋಧಿ, ಜೋಳ, ರಾಗಿ ಸೇರಿದಂತೆ ಅನೇಕ ಧಾನ್ಯಗಳ ಹಿಟ್ಟಿನಿಂದ ನಾವು ರೊಟ್ಟಿ ತಯಾರು ಮಾಡುತ್ತೇವೆ. ಇಂತಹ ರೊಟ್ಟಿಗಳಲ್ಲಿ ಫೈಬರ್, ಪ್ರೋಟೀನ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಇರುತ್ತವೆ. ಡಯಟ್ ನಲ್ಲಿರುವವರ ಮೊದಲ ಆಯ್ಕೆ ಈ ರೊಟ್ಟಿ.  ರೊಟ್ಟಿಯಲ್ಲಿರುವ ಪೋಷಕಾಂಶಗಳು ನಮಗೆ ಉತ್ತಮ ಆರೋಗ್ಯವನ್ನು ಕೊಡುತ್ತವೆ. ಇಂತಹ ಬಹುಧಾನ್ಯದ ರೊಟ್ಟಿಯ ಸೇವನೆಯಿಂದ ಮಧುಮೇಹ ಹಾಗೂ ದೇಹದ ತೂಕವನ್ನು ನಿಯಂತ್ರಿಸಬಹುದು. ಇದರಿಂದ ಜೀರ್ಣಕ್ರಿಯೆ ಹಾಗೂ ಮೂಳೆಗಳ ಆರೋಗ್ಯ ಕೂಡ ಚೆನ್ನಾಗಿರುತ್ತದೆ. 

ಉತ್ತಮ ಆರೋಗ್ಯ (Health) ನೀಡುವ ಈ ರೊಟ್ಟಿಗಳನ್ನು ತಯಾರಿಸುವಾಗ  ನಾವು ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತೇವೆ. ಅಂತಹ ತಪ್ಪಿನಿಂದ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಾಗಿ ರೊಟ್ಟಿ (Roti) ತಯಾರಿಸುವಾಗ ಹಿಟ್ಟಿನಿಂದ ಮೊದಲಾಗಿ ರೊಟ್ಟಿಯನ್ನು ಬೇಯಿಸುವವರೆಗೂ ನಾವು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಸೇಬು – ಮೊಟ್ಟೆ ಸೇರಿಸಿ ಟೀ ತಯಾರಿಸಿದ ಮಹಿಳೆ! ನಿಮಗೂ ಟೇಸ್ಟ್ ಇಷ್ಟವಾಗಬಹುದು ಅಂದ್ರೆ ಟ್ರೈ ಮಾಡಿ!

ರೊಟ್ಟಿ ತಯಾರಿಸುವಾಗ ನಾವು ಮಾಡುವ ಸಾಮಾನ್ಯ ತಪ್ಪುಗಳು : 

ಬಹುಧಾನ್ಯದ ರೊಟ್ಟಿ : ಯಾವುದೇ ಹಿಟ್ಟಿನಿಂದ ರೊಟ್ಟಿಯನ್ನು ತಯಾರಿಸುವಾಗ ಒಂದೇ ಬಗೆಯ ಹಿಟ್ಟನ್ನು ಬಳಸಿ. ನೀವು ಗೋಧಿ ಹಿಟ್ಟಿನ ರೊಟ್ಟಿಯನ್ನು ಮಾಡುತ್ತಿದ್ದೀರಿ ಎಂದಾದರೆ ಅದಕ್ಕೆ ಕೇವಲ ಗೋಧಿ ಹಿಟ್ಟನ್ನು ಮಾತ್ರ ಬಳಸಿ. ಅದರ ಜೊತೆಗೆ ಮೈದಾ ಹಿಟ್ಟನ್ನೋ ಅಥವಾ ಅಕ್ಕಿ ಹಿಟ್ಟನ್ನೋ ಮಿಶ್ರಣ ಮಾಡಬೇಡಿ. ಹೀಗೆ ಮಾಡಿದ್ರೆ ಆರೋಗ್ಯ ಸುಧಾರಿಸುತ್ತದೆ ಎಂದು ನಾವು ಭಾವಿಸಿದ್ದೇವೆ. ಆದ್ರೆ ಅದು ತಪ್ಪು ವಿಧಾನ. 
ಒಂದೊಂದು ಬಗೆಯ ಹಿಟ್ಟಿನಲ್ಲಿ ಒಂದೊಂದು ಪೋಷಕಾಂಶಗಳು ಇರುತ್ತವೆ. ನಾವು ಒಂದು ಹಿಟ್ಟಿನ ಜೊತೆ ಇನ್ನೊಂದು ಹಿಟ್ಟನ್ನು ಸೇರಿಸಿದಾಗ ಅದರಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಒಂದು ಬಾರಿ ಒಂದೇ ಹಿಟ್ಟನ್ನು ಬಳಸಿ ರೊಟ್ಟಿ ತಯಾರಿಸುವುದು ಉತ್ತಮ.

ಹೀಗೆಲ್ಲಾ ಆಹಾರ ಪದಾರ್ಥಗಳನ್ನು ಫ್ರಿಜ್‌ನಲ್ಲಿಟ್ಟರೂ ಹಾಳಾಗೋದು ಗ್ಯಾರಂಟಿ!

ನಾನ್ ಸ್ಟಿಕ್ ತವಾ : ಈಗಿನ ಫ್ಯಾಷನ್ ಜಗತ್ತಿನಲ್ಲಿ ನಾವು ಅಡುಗೆಯಲ್ಲಿ ಬಳಸುವ ಪಾತ್ರೆಗಳು ಕೂಡ ಫ್ಯಾಷನೇಬಲ್ ಆಗೇ ಇರಬೇಕೆಂದು ಅನೇಕ ಮಂದಿ ಬಯಸುತ್ತಾರೆ. ಆದರೆ ಅಂತಹ ಕೆಲವು ಪಾತ್ರೆಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಅವುಗಳ ಪೈಕಿ ನಾನ್ ಸ್ಟಿಕ್ ಪಾತ್ರೆಗಳು ಕೂಡ ಒಂದು. ರೊಟ್ಟಿಯನ್ನು ಬೇಯಿಸಲು ಹೆಚ್ಚಿನ ಮಂದಿ ನಾನ್ ಸ್ಟಿಕ್ ತವಾವನ್ನು ಬಳಸುತ್ತಾರೆ. ಅಂತಹ ನಾನ್ ಸ್ಟಿಕ್ ತವಾವನ್ನು ಬಳಸುವ ಬದಲು ಕಬ್ಬಿಣದ ರೊಟ್ಟಿ ಹಂಚುಗಳನ್ನು ಬಳಸುವುದು ಉತ್ತಮವಾಗಿದೆ.

ಅಲ್ಯೂಮಿನಿಯಂ ಫೈಲ್ : ಮಕ್ಕಳಿಗೆ, ಕಚೇರಿಗೆ ಹೋಗುವವರಿಗೆ ಅಥವಾ ಪ್ರವಾಸಕ್ಕೆ ಹೋಗುವ ವೇಳೆ ಬಿಸಿ ರೊಟ್ಟಿಯನ್ನು ಅಲ್ಯೂಮಿನಿಯಂ ಫೈಲ್ ಗಳಲ್ಲಿ ಪ್ಯಾಕ್ ಮಾಡುವ ಅಭ್ಯಾಸ ಅನೇಕರಿಗಿರುತ್ತೆ. ಹೀಗೆ ಅಲ್ಯೂಮಿನಿಯಂ ಹಾಳೆಗಳಲ್ಲಿ ರೊಟ್ಟಿಯನ್ನು ಪ್ಯಾಕ್ ಮಾಡುವ ಬದಲು ಕಾಟನ್ ಬಟ್ಟೆಗಳನ್ನು ಬಳಸುವುದು ಹೆಚ್ಚು ಸೂಕ್ತವಾಗಿದೆ.

ರೊಟ್ಟಿ ಹಿಟ್ಟನ್ನು ಸ್ವಲ್ಪ ಸಮಯ ಹಾಗೇ ಬಿಡಿ :  ವೃತ್ತಿನಿರತ ಮಹಿಳೆಯರಿಗೆ ಸಮಯದ ಅಭಾವವಿರುವುದರಿಂದ ರೊಟ್ಟಿ ಹಿಟ್ಟನ್ನು ಕಲಸಿ ತಕ್ಷಣವೇ ರೊಟ್ಟಿಯನ್ನು ತಯಾರಿಸುತ್ತಾರೆ. ಉದ್ಯೋಗಸ್ಥ ಮಹಿಳೆಯರ ಹೊರತಾಗಿ ಉಳಿದ ಮಹಿಳೆಯರಿಗೂ ಕೂಡ ರೊಟ್ಟಿ ಹಿಟ್ಟು ಕಲಸಿದ ತಕ್ಷಣವೇ ರೊಟ್ಟಿ ತಯಾರಿಸುವ ಅಭ್ಯಾಸ ಇರುತ್ತದೆ. ಹೀಗೆ ಹಿಟ್ಟು ಕಲಸಿದ ತಕ್ಷಣವೇ ರೊಟ್ಟಿ ಮಾಡುವ ಬದಲು ಹಿಟ್ಟು ಸ್ವಲ್ಪ ಸಮಯ ನೆನೆಯಲು ಬಿಡಿ. ಕೆಲವು ಸಮಯ ಹಿಟ್ಟು ನೆನೆಯುವುದರಿಂದ ಹಿಟ್ಟಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಹೀಗೆ ತಯಾರಾದ ರೊಟ್ಟಿ ಉತ್ತಮ ಆರೋಗ್ಯವನ್ನು ನೀಡುತ್ತದೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ