ತಿನ್ನೋ ಆಹಾರ ಆರೋಗ್ಯಕರ ಹಾಗೇ ರುಚಿಕರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಈಗಿನ ದಿನಗಳಲ್ಲಿ ಆಹಾರದ ಮೇಲೆ ಅತ್ಯಾಚಾರ ನಡೀತಾ ಇದೆ. ಗ್ರಾಹಕರನ್ನು ಸೆಳೆಯಲು ಜನರು ನಾನಾ ಪ್ರಯೋಗ ಮಾಡ್ತಿದ್ದಾರೆ.
ಆಹಾರಕ್ಕೆ ಸಂಬಂಧಿಸಿದಂತೆ ಜನರು ನಾನಾ ಪ್ರಯೋಗಗಳನ್ನು ಮಾಡ್ತಿರುತ್ತಾರೆ. ಈಗಿನ ದಿನಗಳಲ್ಲಿ ವಿಚಿತ್ರ ಖಾದ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುತ್ತವೆ. ನೂಡಲ್ಸ್ ಗೋಲ್ಗಪ್ಪಾ, ಪೈನಾಪಲ್ ಮೊಮೊಸ್, ಬಿಂಡಿ ಸಮೋಸಾ, ತಂದೂರಿ ಚೋಕೋಬಾರ್ ಸೇರಿದಂತೆ ದಿನಕ್ಕೊಂದು ಪ್ರಯೋಗ ನಡೆಯುತ್ತಿರುತ್ತದೆ. ಕೆಲವನ್ನು ಜನರು ಒಪ್ಪಿಕೊಂಡ್ರೆ ಮತ್ತೆ ಕೆಲ ಪ್ರಯೋಗಗಳಿಗೆ ವಿರೋಧ ವ್ಯಕ್ತಪಡಿಸ್ತಾರೆ.
ಸಾಮಾಜಿಕ ಜಾಲತಾಣ (Social Media ) ದಲ್ಲಿ ಈಗ ಮತ್ತೊಂದು ವಿಚಿತ್ರ ಖಾದ್ಯದ ವಿಡಿಯೋ (Video) ವೈರಲ್ ಆಗಿದೆ. ಅದ್ರಲ್ಲಿ ಮಹಿಳೆಯೊಬ್ಬಳು ಭಿನ್ನವಾಗಿ ಟೀ ತಯಾರಿಸಿದ್ದಾಳೆ. ಅದನ್ನು ನೋಡಿದ ಜನರು ಮುಖ ಕಿವಿಚಿದ್ದಾರೆ. ಅಷ್ಟಕ್ಕೂ ಆ ಮಹಿಳೆ ಮಾಡಿದ ಟೀ ಯಾವುದು ಎಂಬುದರ ವಿವರ ಇಲ್ಲಿದೆ. ಟೀ ಪುಡಿ, ಹಾಲು, ನೀರು, ಸಕ್ಕರೆ ಹಾಗೇ ಮಸಾಲೆಗೆ ಅಂತ ನಾವು ಶುಂಠಿ, ದಾಲ್ನಿಚಿ, ಏಲಕ್ಕಿ ಹಾಕ್ತೇವೆ. ಆದ್ರೆ ಈ ಮಹಿಳೆ ತಯಾರಿಸಿ ಟೀ ನೋಡಿದ್ರೆ ಇದು ಚಹಾನಾ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುತ್ತೆ. ಪ್ರತಿ ದಿನ ಟೀ ಸೇವನೆ ಮಾಡುವ ಜನರು ಈ ಟೀ ನೋಡಿ, ಜನರಿಗೆ ತಲೆ ಕೆಟ್ಟಿದೆ ಎನ್ನುತ್ತಿದ್ದಾರೆ.
undefined
ಹೀಗೆಲ್ಲಾ ಆಹಾರ ಪದಾರ್ಥಗಳನ್ನು ಫ್ರಿಜ್‌ನಲ್ಲಿಟ್ಟರೂ ಹಾಳಾಗೋದು ಗ್ಯಾರಂಟಿ!
ಸೇಬು (Apple) – ಮೊಟ್ಟೆಯಿಂದ ಸಿದ್ಧವಾಗಿದೆ ಟೀ : ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಟೀ ತಯಾರಿಸಲು ಹಾಲು, ಟೀ ಎಲೆ ಸಕ್ಕರೆ, ಉಪ್ಪು, ದಾಲ್ಚಿನ್ನಿ, ಏಲಕ್ಕಿ ಜೊತೆಗೆ ಸೇಬು ಹಣ್ಣು ಮತ್ತು ಮೊಟ್ಟೆಯನ್ನು ಬಳಸಿದ್ದಾಳೆ. ಮಹಿಳೆ ತಯಾರಿಸಿದ ಈ ಚಹಾದ ವೀಡಿಯೋವನ್ನು ಬಾಂಗ್ಲಾದೇಶದ ಫುಡ್ ವ್ಲಾಗಿಂಗ್ ಖಾತೆ ಸುಲ್ತಾನ ಕುಕ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಬಂಗಾಳಿ ಭಾಷೆಯಲ್ಲಿ ಶೀರ್ಷಿಕೆಯನ್ನು ಬರೆದಿದ್ದಾರೆ. ಕುದಿಯುವ ಚಹಾದಲ್ಲಿ ಹಸಿ ಮೊಟ್ಟೆ ಎಂದು ಶೀರ್ಷಿಕೆ ಹಾಕಿದ್ದಾರೆ.
ಮೊಟ್ಟೆ – ಸೇಬು ಟೀ ತಯಾರಿಸೋದು ಹೇಗೆ ? : ನೀವು ವಿಡಿಯೋದಲ್ಲಿ ಮಹಿಳೆ ಒಂದು ಪಾತ್ರೆಗೆ ಟೀ ಪುಡಿ ಹಾಕೋದನ್ನು ನೋಡ್ಬಹುದು. ಉಪ್ಪು ಮತ್ತು ಸಕ್ಕರೆ ಸೇರಿಸಿ ಮತ್ತು ಅದನ್ನು ಮಿಕ್ಸ್ ಮಾಡುತ್ತಾಳೆ. ಇದರ ನಂತರ ಸೇಬಿನ ತುಂಡುಗಳನ್ನು ಕತ್ತರಿಸಿ ಅದರಲ್ಲಿ ಹಾಕುತ್ತಾಳೆ. ಎಲ್ಲಾ ವಸ್ತುಗಳನ್ನು ಸರಿಯಾಗಿ ಹುರಿದ ನಂತರ ಒಂದು ಲೋಟ ಹಾಲು ಸೇರಿಸ್ತಾಳೆ. ಈ ಮಿಶ್ರಣ ಕುದಿಯಲು ಶುರುವಾದಾಗ ಒಂದು ಹಸಿ ಮೊಟ್ಟೆಯನ್ನು ಒಡೆದು ಇದಕ್ಕೆ ಹಾಕ್ತಾಳೆ. ನಂತರ ಏಲಕ್ಕಿ ಮತ್ತು ದಾಲ್ಚಿನ್ನಿ ತುಂಡುಗಳನ್ನು ಸೇರಿಸಿ ಕುದಿಸಿ, ಅದನ್ನು ಸೋಸುತ್ತಾಳೆ. ನಂತ್ರ ಮೊಟ್ಟೆಯಿಂದ ಗ್ಲಾಸ್ ಅಲಂಕರಿಸಿ ಸರ್ವ್ ಮಾಡ್ತಾಳೆ.
ತೆಂಗಿನಕಾಯಿ ಚಿಪ್ಪಿನಲ್ಲಿ ಸಿದ್ಧವಾಗುತ್ತೆ ಇಡ್ಲಿ, ರುಚಿ ಹೇಗಿರ್ಬಹುದು ಗೆಸ್ ಮಾಡಿ!
ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಕಮೆಂಟ್ : ಮಹಿಳೆಯ ಟೀ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 11 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆ ಸಿಕ್ಕದೆ. 13 ಲಕ್ಷಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ. 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಜನರು ಈ ವಿಚಿತ್ರ ಟೀಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವರು, ಈ ಟೀ ಕುಡಿದು ತೋರಿಸಿ ಎಂದು ಬರೆದಿದ್ದಾರೆ. ಈ ಟೀ ನೋಡಿದ್ರೆ, ಟೀ ಕುಡಿಯೋರು ಟೀ ಕುಡಿಯೋದನ್ನೇ ಬಿಡ್ತಾರೆ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.
ಮೀನಿನ ಟೀ : ಮೇಲಿನ ವಿಡಿಯೋಕ್ಕೆ ಕಮೆಂಟ್ ಮಾಡಿದ ಜನರು ಮೀನಿನ ಟೀ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಅದ್ರಲ್ಲಿ ಹಾಲು, ಟೀ ಪುಡಿ ಕುದಿಯುತ್ತಿರುವ ಸಮಯದಲ್ಲಿ ಮೀನಿನ ಪೀಸ್ ಹಾಕಿ ಕುದಿಸಲಾಗುತ್ತದೆ. ನಂತ್ರ ಮೀನಿನ ಪೀಸ್ ತೆಗೆದು, ಟೀ ಸರ್ವ್ ಮಾಡಲಾಗುತ್ತದೆ.