ಶಾರ್ಕ್ ತಿಂದ ಚೀನಾದ ಮಹಿಳಾ ಫುಡ್ ಬ್ಲಾಗರ್‌ಗೆ 15 ಲಕ್ಷ ರೂ. ದಂಡ..!

By BK Ashwin  |  First Published Jan 31, 2023, 7:35 PM IST

ಚೀನಾದ ಫುಡ್ ಬ್ಲಾಗರ್ ಒಬ್ಬರು ಅಕ್ರಮವಾಗಿ ಬಿಳಿ ಶಾರ್ಕ್ ಅನ್ನು ಖರೀದಿಸಿ, ಅಡುಗೆ ಮಾಡಿ ಮತ್ತು ತಿನ್ನುವುದನ್ನು ವಿಡಿಯೋ ಮಾಡಿದ ನಂತರ ಆಕೆಗೆ 18,500 ಡಾಲರ್‌ ಅಂದರೆ ಬರೋಬ್ಬರಿ 15 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.


ಬೀಜಿಂಗ್ (ಜನವರಿ 31, 2023): ಫುಡ್‌ ಬ್ಲಾಗರ್‌ಗಳು ಬೇರೆ ಬೇರೆ ಕಡೆ ಹೋಗಿ ಆಹಾರ, ಚಾಟ್ಸ್‌, ಹೊಸರುಚಗಳನ್ನು ತಿನ್ನುತ್ತಿರುತ್ತಾರೆ. ಅಲ್ಲದೆ, ಅದರ ಫೋಟೋ, ವಿಡಿಯೋ, ಅನುಭವಗಳನ್ನು ನಮ್ಮೊಂದಿಗೂ ಹಂಚಿಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬರು ಫುಡ್‌ ಬ್ಲಾಗರ್‌ಗೆ ಶಾರ್ಕ್‌ ಅನ್ನು ಖರೀದಿಸಿ, ಬೇಯಿಸಿಕೊಂಡು ತಿಂದಿದ್ದಕ್ಕೆ ಲಕ್ಷ ಲಕ್ಷ ರೂ. ಗಳ ದಂಡ ವಿಧಿಸಲಾಗಿದೆ. ಹೌದು, ಚೀನಾದ ಫುಡ್ ಬ್ಲಾಗರ್ ಒಬ್ಬರು ಅಕ್ರಮವಾಗಿ ಬಿಳಿ ಶಾರ್ಕ್ ಅನ್ನು ಖರೀದಿಸಿ, ಅಡುಗೆ ಮಾಡಿ ಮತ್ತು ತಿನ್ನುವುದನ್ನು ವಿಡಿಯೋ ಮಾಡಿದ ನಂತರ ಆಕೆಗೆ 18,500 ಡಾಲರ್‌ ಅಂದರೆ ಬರೋಬ್ಬರಿ 15 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಫುಡ್‌ ಬ್ಲಾಗರ್‌ (Food Blogger) ಅನ್ನು ಜಿನ್‌ ಮೌಮೌ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದು, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ (Social Media Platforms) ಟಿಝಿ (Tizi) ಎಂದು ಈಕೆ ಖ್ಯಾತಿ ಪಡೆದಿದ್ದಾಳೆ. ಏಪ್ರಿಲ್ 2022 ರಲ್ಲಿ ಅವಳು ಗ್ರೇಟ್ ವೈಟ್ ಶಾರ್ಕ್ (Great White Shark) ಅನ್ನು ಖರೀದಿಸಿದ್ದಳು ಮತ್ತು  ಕಳೆದ ವರ್ಷ ಜುಲೈನಲ್ಲಿ ಅದನ್ನು ಅಡುಗೆ (Cook) ಮಾಡಿ ತಿನ್ನುವ ವಿಡಿಯೋ (Video) ಬಿಡುಗಡೆ ಮಾಡಿದ್ದಳು ಎಂದು ನಾನ್‌ಚಾಂಗ್‌ನಲ್ಲಿರುವ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ ಎಂದು ಇಂಡಿಪೆಂಡೆಂಟ್‌ ಮಾಧ್ಯಮ ವರದಿ ಮಾಡಿದೆ.

Tap to resize

Latest Videos

ಇದನ್ನು ಓದಿ: ಅವಲಕ್ಕಿಯನ್ನು ಸಲಾಡ್ ಎಂದು ಪರಿಚಯಿಸಿದ ಇಂಡಿಗೋ ಏರ್‌ಲೈನ್ಸ್‌, ಸಿಟ್ಟಿಗೆದ್ದ ನೆಟ್ಟಿಗರು

ಡೌಯಿನ್ (ಚೀನಾದ ಟಿಕ್-ಟಾಕ್ ಅಪ್ಲಿಕೇಶನ್) ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ವೈಲ್ಡ್ ಅನಿಮಲ್ ಪ್ರೊಟೆಕ್ಷನ್ ಕಾನೂನನ್ನು" ಉಲ್ಲಂಘಿಸಿದೆ ಎಂದೂ ಮಾಧ್ಯಮದ ವರದಿ ತಿಳಿಸಿದೆ. ಅಲ್ಲದೆ, ಜನವರಿ 28 ರಂದು ಬಿಡುಗಡೆಯಾದ ಹೇಳಿಕೆಯ ಪ್ರಕಾರ, ಬಿಳಿ ಶಾರ್ಕ್ ಅನ್ನು ಅಕ್ರಮವಾಗಿ ಹೊಂದಿರುವವರು 5 - 10 ವರ್ಷಗಳ ಜೈಲು ಶಿಕ್ಷೆಗೆ ಸಹ ಗುರಿಯಾಗಬಹುದು ಎಂದು ಹೇಳಲಾಗಿದೆ.

ಬ್ಲಾಗರ್ ಅಂಗಡಿಯೊಂದರ ಮುಂದೆ ಸುಮಾರು ಆರು ಅಡಿ ಉದ್ದದ ಶಾರ್ಕ್‌ನೊಂದಿಗೆ ಪೋಸ್ ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ,  ಶಾರ್ಕ್‌ನ ತಲೆಯನ್ನು ಸ್ಟ್ಯೂನಲ್ಲಿ ಬೇಯಿಸಲಾಗುತ್ತದೆ, ಇನ್ನು ಅದರ ದೇಹವನ್ನು ಅರ್ಧದಷ್ಟು ಕತ್ತರಿಸಿ, ಮಸಾಲೆ ಮತ್ತು ಗ್ರಿಲ್ ಮಾಡಲಾಗುತ್ತದೆ. ತನ್ನ ಹಲ್ಲುಗಳಿಂದ ತಿಮಿಂಗಿಲದ ಮಾಂಸದಿಂದ ದೊಡ್ಡ ತುಂಡುಗಳನ್ನು ಕಟ್‌ ಮಾಡುವಾಗ, ಇದು ಕೆಟ್ಟದಾಗಿ ಕಾಣಿಸಬಹುದು, ಆದರೆ ಅದರ ಮಾಂಸವು ನಿಜವಾಗಿಯೂ ತುಂಬಾ ಸಾಫ್ಟ್‌ ಆಗಿದೆ ಎಂದು ಟಿಝಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕರೆಸಿಕೊಳ್ಳುವ ಮಹಿಳೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಜ್ಯೂಸ್​ ಬದಲು ಲಿಕ್ವಿಡ್​ ಡಿಟರ್ಜೆಂಟ್ ಕೊಟ್ಟ ರೆಸ್ಟೋರೆಂಟ್‌!

ಇನ್ನು, ಈ ಫುಡ್‌ ಬ್ಲಾಗರ್ ಅಲಿಬಾಬಾದ ಟಾವೊಬಾವೊ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಿಂದ 7,700 ಯುವಾನ್ (ರೂ. 93,295) ಗೆ ಶಾರ್ಕ್ ಅನ್ನು ಖರೀದಿಸಿದ್ದಾರೆ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ ಎಂದು ದಿ ಇಂಡಿಪೆಂಡೆಂಟ್‌ ವರದಿ ಮಾಡಿದೆ. ಟಿಶ್ಯೂ ಸ್ಕ್ರ್ಯಾಪ್‌ಗಳ ಮೇಲೆ ಡಿಎನ್‌ಎ ಪರೀಕ್ಷೆಯ ಮೂಲಕ ಖರೀದಿಸಿದ ಶಾರ್ಕ್ ಅನ್ನು ಗ್ರೇಟ್‌ ವೈಟ್‌ ಎಂದು ಗುರುತಿಸಲಾಗಿದೆ. ಈ ಮಧ್ಯೆ, ಸಿಬಿಎಸ್ ನ್ಯೂಸ್ ಪ್ರಕಾರ, ಮೀನುಗಾರ ಮತ್ತು ಶಾರ್ಕ್ ಅನ್ನು ಮಾರಾಟ ಮಾಡಿದ ವ್ಯಾಪಾರಿಯನ್ನು ಸಹ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ವಿಶ್ವ ವನ್ಯಜೀವಿ ನಿಧಿಯು ಗ್ರೇಟ್‌ ವೈಟ್‌ ಶಾರ್ಕ್ ಅನ್ನು ಅಪಾಯದಲ್ಲಿರುವ ಜಾತಿಯೆಂದು ಪಟ್ಟಿಮಾಡಿದೆ ಎಂಬುದನ್ನು ಗಮನದಲ್ಲಿಡಬೇಕು. ಇನನೊಂದೆಡೆ, ಫೆಬ್ರವರಿ 2020 ರಲ್ಲಿ ಚೀನಾ ಕಾಡು ಪ್ರಾಣಿಗಳ ಖರೀದಿ, ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಇದನ್ನೂ ಓದಿ: ಮನೇಲಿ ಇಂಥಾ ವೆರೈಟಿ ಚಟ್ನಿ ಇದ್ರೆ, ಆಹಾರನೂ ರುಚಿ, ಆರೋಗ್ಯನೂ ಸೂಪರ್

click me!