ಲೈವ್ ಸ್ಟ್ರೀಮ್ ಮೂಲಕ ಅತೀ ಹೆಚ್ಚಿನ ವೀಕ್ಷಕರು, ಲೈಕ್ಸ್ , ಕಮೆಂಟ್ಸ್ ಜೊತೆಗೆ ಆದಾಯ ಪಡೆಯಲು ಹಲವರು ಅಪಾಯಕಾರಿ ಸಾಹಸಕ್ಕೆ ಕೈಹಾಕುತ್ತಾರೆ. ಆದರೆ ಇಲ್ಲೊಬ್ಬ ಯುವತಿ ತಿನ್ನುವ ಸಾಹಸ ಮಾಡಿ ಪ್ರಾಣಬಿಟ್ಟಿದ್ದಾಳೆ.
ಬೀಜಿಂಗ್(ಜು.22) ರೀಲ್ಸ್, ವಿಡಿಯೋ ಮೂಲಕವೇ ಹಲವರು ಆದಾಯಗಳಿಸುತ್ತಿದ್ದಾರೆ. ಇದಕ್ಕಾಗಿ ಕೆಲವರು ಅಪಾಯಾಕಾರಿ ಸಾಹಸ ಮಾಡಿ ಪ್ರಾಣಕ್ಕೆ ಸಂಚಕಾರ ತಂದ ಉದಾಹರಣೆಗಳೂ ಇವೆ. ಇದೀಗ ಯುವತಿಯೊಬ್ಬರು ಲೈವ್ ಸ್ಟ್ರೀಮ್‌ನಲ್ಲಿ ವಿವಿದ ಭಗೆಯ ಆಹಾರ ಸೇವಿಸುವ ಸಾಹಸ ಮಾಡಿ ಮೃತಪಟ್ಟಿದ್ದಾಳೆ. 24ರ ಹರೆಯದ ಪಾನ್ ಕ್ಸಿಯೋಟಿಂಗ್ ಯುವತಿ ದುರಂತ ಅಂತ್ಯಕಂಡಿದ್ದಾಳೆ. ಈಕೆ ಲೈವ್ ಸ್ಟ್ರೀಮ್ ಮೂಲಕ ಬರೋಬ್ಬರಿ 10 ಗಂಟೆ ವಿವಿಧ ಬಗಯ ಖ್ಯಾದ್ಯಗಳನ್ನು ಸೇವಿಸಿದ್ದಾಳೆ. ಇದರ ಪರಿಣಾಮ ಆಹಾರ ಜೀರ್ಣಿಸದೆ ಯುವತಿ ಮೃತಪಟ್ಟ ಘಟನೆ ಚೀನಾದಲ್ಲಿ ನಡೆದಿದೆ.
ಪ್ಯಾನ್ ಕ್ಸಿಯೋಟಿಂಗ್‌ಗೆ ಟಿವಿ ನೋಡುವುದು, ಆಹಾರ ಸೇವಿಸುವುದು ಚಟವಾಗಿದೆ. ಇದನ್ನು ಲೈವ್ ಸ್ಟ್ರೀಮ್ ಮೂಲಕ ತೋರಿಸಿದ್ದಾಳೆ. ಈ ರೀತಿ ಕೆಲವು ಬಾರಿ ಲೈವ್ ಸ್ಟ್ರೀಮ್ ಮೂಲಕ ಈ ರೀತಿಯ ಆಹಾರ ಸೇವಿಸುವ ಸಾಹಸ ಮಾಡಿ ಲೈಕ್ಸ್, ಕಮೆಂಟ್ ಪಡೆದಿದ್ದಾಳೆ. ಆದರೆ ಈ ಬಾರಿ ಬರೋಬ್ಬರಿ 10 ಗಂಟೆ ಆಹಾರ ಸೇವಿಸಿದ ಪರಿಣಾಮ ಜೀರ್ಣಿಸದೆ ಯುವತಿ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆಯಲ್ಲಿ ಈಕೆಯ ಹೊಟ್ಟೆಯಲ್ಲಿ ಕರಗದೇ ಉಳಿದ ಹಲವು ಆಹಾರಗಳಿತ್ತು. ಇಷ್ಟೇ ಅಲ್ಲ ಈ ಆಹಾರವೇ ಈಕೆಯ ಜೀವಕ್ಕೆ ಕುತ್ತು ತಂದಿದೆ ಅನ್ನೋ ವರದಿ ಬಹಿರಂಗವಾಗಿದೆ.
ಭಾರತೀಯರ ಈ ನೆಚ್ಚಿನ ಆಹಾರ ವಿದೇಶದಲ್ಲಿ ಬ್ಯಾನ್! ಫಾರಿನ್ ಸಂಸ್ಕೃತಿ ಎನ್ನೋದೂ ಒಂದು ರೀಸನ್
ಈಕೆ ಸಾವಿನ ದಿನ ಬರೋಬ್ಬರಿ 10 ಗಂಟೆ ಆಹಾರ ತಿಂದಿದ್ದಾಳೆ. ಅತಿಯಾದ ಆಹಾರ, ಸೇವಿಸಿದ ಆಹಾರ ಜೀರ್ಣಿಸದೆ ಅಪಾಯ ಎದುರಾಗಿದೆ. ತಾನು ಆಹಾರ ಸೇವಿಸುತ್ತಾ, ದಾಖಲೆ ಬರೆದ ಹಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾಳೆ. ಹಲವು ಬಾರಿ ವಿಡಿಯೋಗಾಗಿ ಈಕೆ ಮೂರರಿಂದ ನಾಲ್ಕು ಗಂಟೆ ಆಹಾರ ಸೇವಿಸಿ ದಾಖಲೆ ಬರೆದಿದ್ದಾಳೆ.
ಹೀಗೆ ಅತೀಯಾದ ಆಹಾರ ಸೇವಿಸಿ ಆರೋಗ್ಯ ಸಮಸ್ಯೆ ಎದುರಿಸಿ ಆಸ್ಪತ್ರೆ ಕೂಡ ದಾಖಲಾಗಿದ್ದಳು. ಆದರೆ ಈಕೆ ತನ್ನ ಅಭ್ಯಾಸ ಬದಲಿಸಲಿಲ್ಲ. ಇದೀಗ ದುರಂತ ಅಂತ್ಯಕಂಡಿದ್ದಾಳೆ. ವಿಡಿಯೋ, ಲೈವ್ ಸ್ಟ್ರೀಮ್ ಮೂಲಕ ಈಕೆ ಆದಾಯಗಳಿಸುತ್ತಿದ್ದಂತೆ ಅಪಾಯ ಎದುರಾಗಿದೆ. ಇತ್ತೀಚೆಗಷ್ಟೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಈಕೆ, ಮತ್ತೆ ಸಾಹಸ ಮಾಡಲು ಹೋಗಿ ಅಂತ್ಯಕಂಡಿದ್ದಾಳೆ.
ಆಹಾರ ಪದ್ಧತಿ ಬದಲಾವಣೆಯಿಂದ ಜಿಐ ಸೋಂಕು : ಡಾ.ನಿಶ್ಚಯ್