20 ವರ್ಷದ ಹಿಂದೆ ಚಿಕನ್ ಬಿರಿಯಾನಿ ಇಷ್ಟು ಚೀಪಾ, ಮೂರು ಹೊತ್ತೂ ತಿನ್ಬೋದಿತ್ತು!

By Vinutha Perla  |  First Published Feb 3, 2023, 1:14 PM IST

ಬಿರಿಯಾನಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹೇಳ್ತಾ ಇದ್ರೇನೆ ಬಾಯಲ್ಲಿ ನೀರೂರುತ್ತೆ. ಆದ್ರೆ ಇವತ್ತಿನ ಕಾಲದಲ್ಲಿ ಬಿರಿಯಾನಿ ತಿನ್ಬೇಕು ಅಂದ್ರೆ ಒಮ್ಮೆ ಜೇಬು ಮುಟ್ಟಿ ನೋಡ್ಕೊಳ್ಳೇಬೇಕು. ಯಾಕಂದ್ರೆ ಬಿರಿಯಾನಿ ಬೆಲೆ ಏನಿಲ್ಲಾಂದ್ರೂ 150 ರಿಂದ 200 ರೂ. ಇದ್ದೇ ಇದೆ. ಆದ್ರೆ ಇಪ್ಪತ್ತು ವರ್ಷದ ಹಿಂದೆ ಬಿರಿಯಾನಿ ಬೆಲೆ ಎಷ್ಟೂಂತ ಗೊತ್ತಾದ್ರೆ ನಿಮ್ಗೆ ಶಾಕ್ ಆಗೋದು ಖಂಡಿತ.


ಬಿರಿಯಾನಿ ಅಂದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ವೆಜ್‌ ಪ್ರಿಯರಿಗೆ ಪನೀರ್, ಮಶ್ರೂಮ್‌, ವೆಜಿಟೇಬಲ್‌ ಬಿರಿಯಾನಿಯಿದ್ರೆ, ನಾನ್‌ ವೆಜ್ ಪ್ರಿಯರು ಎಗ್‌, ಚಿಕನ್‌, ಮಟನ್‌ ಮೊದಲಾದ ಬಿರಿಯಾನಿಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ಬೋದು. ಬರ್ತ್‌ಡೇ, ಪಾರ್ಟಿ ಹೀಗೆ ವಿಶೇಷ ದಿನಗಳಲ್ಲಿ ಬಹುತೇಕರ ಪಾಲಿಗೆ ಸ್ಪೆಷಲ್ ಫುಡ್ ಬಿರಿಯಾನಿನೇ. ಆದ್ರೆ ಬಿರಿಯಾನಿ ಲರ್ವಸ್‌ಗೆ ಸ್ಪೆಷಲ್ ಕಾರಣಾನೇ ಬೇಕು ಅಂತಿಲ್ಲ. ಮೂರು ಹೊತ್ತು ಬೇಕಾದ್ರೂ ಬಿರಿಯಾನಿ ತಿನ್ತಾರೆ. ಆದ್ರೆ ಸಿಕ್ಕಾಪಟ್ಟೆ ಇಷ್ಟಾಂತ ಬಿರಿಯಾನಿಯನ್ನು ಎಲ್ಲಾ ಹೊತ್ತು ತಿನ್ನೋಕು ಆಗಲ್ಲ. ಯಾಕೆಂದರೆ ಬೆಲೆಯೇರಿಕೆ ಈ ಕಾಲಘಟ್ಟದಲ್ಲಿ ಬಿರಿಯಾನಿಯ ಬೆಲೆಯೂ ಕಡಿಮೆಯೇನಿಲ್ಲ. 

ಸ್ಟ್ರೀಟ್‌ ಸೈಡ್ ಬಿರಿಯಾನಿ ಬೆಲೆ ನೂರರಿಂದ ನೂರೈವತ್ತು ಇದ್ದರೆ, ದೊಡ್ಡ ದೊಡ್ಡ ರೆಸ್ಟೊರೆಂಟ್‌ಗಳಲ್ಲಿ ಇದು ಐನೂರು ರೂಪಾಯಿ ವರೆಗೂ ತಲುಪುತ್ತದೆ. ಯಾರಿಗಾದ್ರೂ ಬಿರಿಯಾನಿ ಪಾರ್ಟಿ ಕೊಡ್ಬೇಕು ಅಂದ್ರೆ ಜೇಬಲ್ಲಿ ಭರ್ತಿ ದುಡ್ಡಿರಲೇಬೇಕು. ಅಷ್ಟರಮಟ್ಟಿಗೆ ಬಿರಿಯಾನಿ ಕಾಸ್ಟ್ಲೀಯಾಗಿದೆ. ಈಗ ಧಮ್ ಬಿರಿಯಾನಿ, ಫ್ರೈಡ್‌ ಬಿರಿಯಾನಿ, ಬ್ಯಾಂಬೂ ಬಿರಿಯಾನಿ ಅಂತ ವೆರೈಟಿ ಬಿರಿಯಾನಿ ಲಭ್ಯವಿರುವ ಕಾರಣ ಸಹಜವಾಗಿಯೇ ಬೆಲೆಯಾರಿಕೆ ಆಗಿರಲೂಬಹುದು. ಆದ್ರೆ ಹಿಂದೆಲ್ಲಾ ಬಿರಿಯಾನಿ ಬೆಲೆ ಇಷ್ಟಿರಲ್ಲಿಲ್ಲ. ಇಪ್ಪತ್ತು ವರ್ಷಗಳ ಹಿಂದಿನ ಬಿರಿಯಾನಿ ಬೆಲೆ ಕೇಳಿದ್ರೆ ನೀವು ಬೇಕಾದ್ರೆ ಮೂರು ಹೊತ್ತು ಸಹ ಬಿರಿಯಾನಿ ತಿನ್ತಾ ಕೂರ್ಬೋದು. 

Tap to resize

Latest Videos

ಮುಂಬೈನಲ್ಲಿದ್ದು, ಬೆಂಗಳೂರಿನಿಂದ ಬಿರಿಯಾನಿ ಆರ್ಡರ್ ಮಾಡಿದ ಯುವತಿ, ಬಿಲ್ ಭರ್ತಿ 2500 ರೂ.!

2001ನೇ ಇಸವಿಯ ಮೆನು ಕಾರ್ಡ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಇತ್ತೀಚೆಗೆ ರೆಸ್ಟೋರೆಂಟ್​ ಒಂದರ 2001ನೇ ಇಸವಿಯ ಮೆನು ಕಾರ್ಡ್​ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್​ ಆಗಿದ್ದು, ಅದನ್ನು ನೋಡಿದ ನೆಟ್ಟಿಗರು 90ರ ದಶಕದ ಕ್ಷಣಗಳನ್ನು ನೆನೆಯುತ್ತಿದ್ದಾರೆ. ವಾವ್ಹ್‌ ಇಷ್ಟು ಕಡಿಮೆಗೆ ಬಿರಿಯಾನಿ ಸಿಗ್ತಾ ಇತ್ತಾ ಅಂತ ಅಚ್ಚರಿಪಟ್ಟುಕೊಳ್ಳುತ್ತಿದ್ದಾರೆ. ವೈರಲ್​ ಆಗಿರುವ ಮೆನುವಿನಲ್ಲಿ ಅಂದಿನ ವಿವಿಧ ಬಗೆಯ ಆಹಾರ (Food) ಮತ್ತು ಅದಕ್ಕೆ ತಗುಲುತ್ತಿದ್ದ ಖರ್ಚನ್ನು ಉಲ್ಲೇಖಿಸಲಾಗಿದೆ. ಅಚ್ಚರಿಯೇನೆಂದರೆ ಅಂದು ರೆಸ್ಟೋರೆಂಟ್​ನಲ್ಲಿ ಒಂದು ಪ್ಲೇಟ್​ ಚಿಕನ್​ ಬಿರಿಯಾನಿ ಬೆಲೆ ಕೇವಲ 30 ಇತ್ತು.

ಅಲ್ಲದೆ, ಮಟನ್​ ಬಿರಿಯಾನಿಗೆ ಕೇವಲ 32 ರೂ. ಇತ್ತು. ರೆಸ್ಟೋರೆಂಟ್​ ಅಂದಮೇಲೆ ಕೇಳಬೇಕಾ ಸಾಮಾನ್ಯ ಹೋಟೆಲ್​ಗಿಂತ ರೆಸ್ಟೋರೆಂಟ್​ ತುಂಬಾ ದುಬಾರಿಯಾಗಿರುತ್ತವೆ. ಅಲ್ಲಿಗೆ ಜನ ಸಾಮಾನ್ಯರಂತೂ ಹೋಗೋದಿಲ್ಲ. ರೆಸ್ಟೋರೆಂಟ್​ಗಳಿಗೆ ಹೋಗುವವರು ಬಹುತೇಕ ಹಣಕಾಸು ಸ್ಥಿತಿ ಉತ್ತಮವಾಗಿರುವವರು. ಆದರೆ, 2001ರಲ್ಲಿ ರೆಸ್ಟೋರೆಂಟ್​ನಲ್ಲಿ ಕೇವಲ 30 ರೂ. ಬಿರಿಯಾನಿ ಸಿಗ್ತಿತ್ತು ಅನ್ನೋದು ಬಿಲ್ ನೋಡಿದರೆ ತಿಳಿದುಬರುತ್ತದೆ.

ಅಬ್ಬಬ್ಬಾ..ನ್ಯೂ ಇಯರ್‌ಗೆ ಸ್ವಿಗ್ಗಿಗೆ ಬಂದ ಬಿರಿಯಾಗಿ ಆರ್ಡರ್ ಎಷ್ಟ್‌ ಗೊತ್ತಾ ?

 2001ರಲ್ಲಿ ಕೇವಲ 30 ಮತ್ತು 31 ರೂ. ಬಿಕನ್​ ಮತ್ತು ಮಟನ್​ ಬಿರಿಯಾನಿ ಸಿಗುತ್ತಿತ್ತು. ಉಳಿದಂತೆ ಎಗ್​ ರೋಲ್​, ಚಿಕನ್​ ರೋಲ್​, ಎಗ್​ ಚಿಕನ್​ ರೋಲ್​, ವಿಶೇಷ ಚಿಕನ್​ ರೋಲ್​ ಕ್ರಮವಾಗಿ 7, 10, 15 ಮತ್ತು 24 ರೂ.ಗೆ ಸಿಗುತ್ತಿತ್ತು ಎಂದು ವೈರಲ್ ಆದ ಪೋಸ್ಟ್‌ನಿಂದ ತಿಳಿದುಬರುತ್ತದೆ. 3500ಕ್ಕೂ ಹೆಚ್ಚು ಮಂದಿ ಫೋಟೋಗೆ ಲೈಕ್​ ಮಾಡಿದ್ದಾರೆ. ಇವತ್ತೇನಿದ್ರೂ ಈ ದುಡ್ಡಿಗೆ ಒಂದು ಮೆನು, ಒಂದೇ ಐಟಂ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. ಒಂದು ಎಗ್​ ರೋಲ್​ ಇವತ್ತು 70 ರೂ. ಆಗಿದೆ. ಆ ದಿನಗಳೇ ಸರಿಯಾಗಿದ್ದವು ಎಂದೆಲ್ಲ ಕಾಮೆಂಟಿಸುತ್ತಿದ್ದಾರೆ.

click me!