ಇಲ್ಲಿ ಹೃದಯ, ಹೂವು ಚಿಟ್ಟೆಯ ಆಕಾರದಲ್ಲೂ ಸಿಗುತ್ತೆ ದೋಸೆ: viral video

Published : Aug 02, 2022, 03:18 PM ISTUpdated : Aug 02, 2022, 03:21 PM IST
ಇಲ್ಲಿ ಹೃದಯ, ಹೂವು ಚಿಟ್ಟೆಯ ಆಕಾರದಲ್ಲೂ ಸಿಗುತ್ತೆ ದೋಸೆ: viral video

ಸಾರಾಂಶ

ದೋಸೆ ಸಾಮಾನ್ಯವಾಗಿ ದುಂಡನೆಯ ಆಕಾರದಲ್ಲಿರುತ್ತದೆ. ಆದರೆ ಇಲ್ಲೊಂದು ಕಡೆ ನಿಮಗೆ ದೋಸೆ ಬೇಕಾದ ವಿನ್ಯಾಸದಲ್ಲಿ ಲಭ್ಯವಿದೆ. ಹೃದಯ, ಹೂವುಗಳು, ನಕ್ಷತ್ರ ವಿಮಾನ ಸೇಬುಗಳ ವಿನ್ಯಾಸದಲ್ಲಿ ಇಲ್ಲಿ ದೋಸೆ ನಿಮಗೆ ಸಿಗುತ್ತದೆ.

ದೋಸೆ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿನಿಸು. ಮುಂಜಾನೆಯ ಬ್ರೇಕ್‌ಫಾಸ್ಟ್‌ಗೆ ಅದು ಹೇಳಿ ಮಾಡಿಸಿದ ಆಹಾರ, ಬಹುತೇಕೆ ದಕ್ಷಿಣ ಭಾರತೀಯರು ದೋಸೆಯನ್ನು ಇಷ್ಟಪಟ್ಟು ತಿನ್ನುತ್ತಾರೆ. ದೋಸೆ ಸಾಮಾನ್ಯವಾಗಿ ದುಂಡನೆಯ ಆಕಾರದಲ್ಲಿರುತ್ತದೆ. ಆದರೆ ಇಲ್ಲೊಂದು ಕಡೆ ನಿಮಗೆ ದೋಸೆ ಬೇಕಾದ ವಿನ್ಯಾಸದಲ್ಲಿ ಲಭ್ಯವಿದೆ. ಹೃದಯ, ಹೂವುಗಳು, ನಕ್ಷತ್ರ ವಿಮಾನ ಸೇಬುಗಳ ವಿನ್ಯಾಸದಲ್ಲಿ ಇಲ್ಲಿ ದೋಸೆ ನಿಮಗೆ ಸಿಗುತ್ತದೆ. ಹೊಟೇಲ್‌ ಮಾಲೀಕರೊಬ್ಬರು ಹೀಗೆ ವಿಭನ್ನ ಶೈಲಿಯಲ್ಲಿ ದೋಸೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸಾಮಾನ್ಯವಾಗಿ ಮನೆಯಲ್ಲಿ ಕೆಲವೊಮ್ಮೆ ದುಂಡಗಿನ ಆಕಾರದ ದೋಸೆ ಮಾಡುವ ವೇಳೆಯೇ ದೋಸೆ ತಳ ಹಿಡಿಯುವುದು ಶೇಪ್‌ಲೆಸ್ ಆಗುವುದು ಅದಕ್ಕಾಗಿ ಅಪ್ಪನಿಂದ ಕೆಲವೊಮ್ಮೆ ಮನೆಯವರೆಲ್ಲರಿಂದ ದೋಸೆ ಮಾಡುವ ಅಮ್ಮ ಬೈಸಿಕೊಳ್ಳುವುದು ಸಾಮಾನ್ಯವಾಗಿ ಎಲ್ಲರ ಮನೆಯ ಕತೆಯಾಗಿರುತ್ತದೆ. ಆದರೆ ಇಲ್ಲಿ ಹೊಟೇಲ್‌ನಲ್ಲಿ ದೋಸೆಗೆ ದೋಸೆ ತಯಾರಾಕರು ಸುಂದರವಾದ ಭಿನ್ನ ಭಿನ್ನವಾದ ಶೇಪ್ ಕೊಡುವುದು ನೋಡುವಾಗ ಅಚ್ಚರಿಯಾಗುತ್ತದೆ. ಚಾಣಾಕ್ಷತನದಿಂದ ಹೊಟೇಲ್‌ ಅಡುಗೆ ಭಟ್ಟರು ದೋಸೆ ಮಾಡುತ್ತಿರುವ ವಿಡಿಯೋವನ್ನು ಉದ್ಯಮಿ ಹರ್ಷ ಗೋಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅಡುಗೆ ಭಟ್ಟರ ಚಾಣಾಕ್ಷತನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. 

 

ಪ್ಯಾನ್‌ಗೆ ದೋಸೆ ಹಿಟ್ಟನ್ನು ಹೊಯ್ಯುವ ಅಡುಗೆ ಭಟ್ಟರು ಕ್ಷಣದಲ್ಲೇ ಅದಕ್ಕೊಂದು ಸುಂದರ ಆಕಾರ ನೀಡುತ್ತಾರೆ. ಕೇವಲ ಪ್ಯಾನ್‌ನ್ನು ವಿಭಿನ್ನವಾಗಿ ತಿರುಗಿಸುತ್ತಾ ಅದಕ್ಕೆ ಸುಂದರ ವಿನ್ಯಾಸ ನೀಡುತ್ತಾರೆ. ಅಡುಗೆ ಭಟ್ಟರ ಕೈ ಚಳಕದಲ್ಲಿ ಸೇಬು, ಹಕ್ಕಿ, ಹೃದಯ, ನಕ್ಷತ್ರ ಮುಂತಾದ ವಿನ್ಯಾಸಗಳ ದೋಸೆ ಮೂಡಿ ಬರುತ್ತದೆ. ವಿವಿಧ ವಿನ್ಯಾಸಗಳ ದೋಸೆಗಳನ್ನು ತಯಾರಿಸಿ ಬಾಡಿಸಿದ ಬಾಳೆ ಎಲೆಗಳ ಮೇಲೆ ಹಾಕಲಾಗಿದೆ. 

ಅಮೇರಿಕಾದಲ್ಲಿ ಸಾದಾ ದೋಸೆ ಹೆಸ್ರು ನೇಕೆಡ್ ಕ್ರೇಪ್ಸ್, ಬೆಲೆ ಭರ್ತಿ 1400 ರೂ.!

ಕರ್ನಾಟಕದ ಕರಾವಳಿ ಕೇರಳ ತಮಿಳುನಾಡು ಭಾಗದಲ್ಲಿ ದೋಸೆ (ಅಪ್ಪಂ) ಸಾಮಾನ್ಯವಾಗಿ ತಯಾರಿಸಲಾಗುತ್ತದೆ. ಆದರೆ ಈ ವಿಡಿಯೋವನ್ನು ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ಖಚಿತತೆ ಇಲ್ಲ. ಈ ವಿಡಿಯೋ ನೋಡಿದ ಒಬ್ಬರು ನಾನು ಕಳೆದ ವಾರ ದೋಸೆ ತಯಾರಿಸಿದೆ. ಆದರೆ ತೀವ್ರವಾದ ಬೆಂಕಿಯಿಂದಾಗಿ ಮಾಡಿದ ದೋಸೆ ಹಾಳಾದವು ಎಂದು ಕಾಮೆಂಟ್ ಮಾಡಿದ್ದಾರೆ. ಈತ ಹೇಗೆ ಈ ರೀತಿ ಸಖತ್ ಆಗಿ ದೋಸೆಗೆ ಶೇಫ್‌ ಕೊಡುತ್ತಿರುವುದನ್ನು ನೋಡಿದರೆ ಅಚ್ಚರಿ ಆಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶ: ಈ ಅಡುಗೆ ಭಟ್ಟ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್‌ ಫ್ಯಾಷನ್ ಡಿಸೈನಿಂಗ್‌ ಕಾಲೇಜಿನ ವಿದ್ಯಾರ್ಥಿ ಆಗಿರಬೇಕು. ನಂತರ ಈತ ಹೊಟೇಲ್‌ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿರಬೇಕು. ಹೀಗಾಗಿ ಆಹಾರ ಹಾಗೂ ಡಿಸೈನ್‌ ಎರಡೂ ಟೇಬಲ್ ಮೇಲಿದೆ ಎಂದು ತಮಾಷೆಯಾಗಿ ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಮಳೆಯಲ್ಲಿ ಬಿಸಿಬಿಸಿಯಾಗಿ ಚಿಕನ್ ದೋಸೆ ಮಾಡಿ ತಿನ್ನಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ