ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಹಲವರಿಗೆ ಗೊತ್ತಿದೆ. ಆದ್ರೆ ಅದನ್ನು ತಿನ್ನುವ ಸಮಯ, ತಿನ್ನುವ ರೀತಿ ಎಲ್ಲವೂ ಸರಿಯಾಗಿದ್ದರಷ್ಟೇ ಅದು ಆರೋಗ್ಯಕರವಾಗಿರುತ್ತದೆ. ಹಾಗಿದ್ರೆ ನೀವು ಹಣ್ಣು ತಿನ್ನೋ ರೀತಿ ಸರಿಯಾಗಿದ್ಯಾ ಚೆಕ್ ಮಾಡ್ಕೊಳ್ಳಿ.
ಆರೋಗ್ಯದ ಬಗ್ಗೆ ಪ್ರತಿಯೊಬ್ಬರಿಗೂ ಕಾಳಜಿ ಇರುತ್ತದೆ. ಹೀಗಾಗಿಯೇ ಹೆಚ್ಚೆಚ್ಚು ಹಣ್ಣು, ತರಕಾರಿಗಳನ್ನು ತಿನ್ನೋ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಯಾಕೆಂದರೆ ಸೊಪ್ಪು ತರಕಾರಿಗಳು, ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್, ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಮೆಡಿಕಲ್‌ನ್ಯೂಸ್‌ಟುಡೇ.ಕಾಮ್‌ನ ಪ್ರಕಾರ ಹಣ್ಣುಗಳು ಖನಿಜಗಳು ಮತ್ತು ವಿಟಮಿನ್‌ಗಳ ಸಮೃದ್ಧ ಮೂಲವಾಗಿದೆ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಉತ್ಕರ್ಷಣ ನಿರೋಧಕಗಳ ಮೂಲವೂ ಹೌದು. ಹಣ್ಣುಗಳನ್ನು ತಿನ್ನುವುದು ಮಧುಮೇಹ, ಉರಿಯೂತ, ಹೃದಯ ಸಮಸ್ಯೆಗಳು ಇತ್ಯಾದಿಗಳ ಅಪಾಯಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಆದ್ರೆ ಹಣ್ಣು ಆರೋಗ್ಯಕ್ಕೆ ಒಳ್ಳೇದು ಅಂತ ಬೇಕಾಬಿಟ್ಟಿ ತಿನ್ನೋ ಅಭ್ಯಾಸನೂ ಒಳ್ಳೇದಲ್ಲ. ಹಣ್ಣುಗಳನ್ನು ತಿನ್ನೋ ಸಮಯ, ಹಣ್ಣುಗಳನ್ನು ತಿನ್ನೋ ರೀತಿ ಎಲ್ಲವೂ ಸರಿಯಾಗಿದ್ದರಷ್ಟೇ ಆರೋಗ್ಯಕ್ಕೆ ಇದರ ಪ್ರಯೋಜನ ಸಿಗಲು ಸಾಧ್ಯ.
1. ಹಣ್ಣುಗಳ ತಪ್ಪು ಸಂಯೋಜನೆ ಒಳ್ಳೆಯದಲ್ಲ: ಸಿಹಿ ಹಣ್ಣುಗಳನ್ನು (Fruits) ಸಿಟ್ರಿಕ್ ಹಣ್ಣುಗಳೊಂದಿಗೆ ಸಂಯೋಜಿಸದಿರುವುದು ಉತ್ತಮ. ಬದಲಾಗಿ, ಸಿಹಿ ಹಣ್ಣುಗಳನ್ನು ಇತರ ಸಿಹಿ ಹಣ್ಣುಗಳೊಂದಿಗೆ ಮತ್ತು ಸಿಟ್ರಿಕ್ ಹಣ್ಣುಗಳನ್ನು ಇತರ ಸಿಟ್ರಿಕ್ ಹಣ್ಣುಗಳೊಂದಿಗೆ ತಿನ್ನಿರಿ ಏಕೆಂದರೆ ಪ್ರತಿಯೊಂದು ವರ್ಗದ ಹಣ್ಣುಗಳು ನಿಮ್ಮ ಹೊಟ್ಟೆಯಲ್ಲಿ (Stomach) ವಿಭಿನ್ನ ಜೀರ್ಣಕಾರಿ ರಸವನ್ನು ಬಿಡುಗಡೆ ಮಾಡಬೇಕಾಗುತ್ತದೆ. ಹಾಗೆಯೇ ಕಲ್ಲಂಗಡಿ ಹಣ್ಣನ್ನು ಇತರ ಯಾವುದೇ ಹಣ್ಣಿನೊಂದಿಗೆ ಮಿಕ್ಸ್ ಮಾಡಿ ತಿನ್ನಬಾರದು. ಏಕೆಂದರೆ ಅವುಗಳು ಇತರರೊಂದಿಗೆ ಸಂಯೋಜಿಸಿದಾಗ ಚೆನ್ನಾಗಿ ಜೀರ್ಣವಾಗುವುದಿಲ್ಲ. ಹೆಚ್ಚಿನ ನೀರಿನ ಅಂಶದಿಂದಾಗಿ, ಅವು ಇತರ ಹಣ್ಣುಗಳಿಗಿಂತ ಹೆಚ್ಚು ವೇಗವಾಗಿ ಜೀರ್ಣವಾಗುತ್ತವೆ. ಆದ್ದರಿಂದ, ಈ ಹಣ್ಣಿನ ಸಂಯೋಜನೆಯನ್ನು ತಪ್ಪಿಸಿ.
ಕೆಲ ತರಕಾರಿ, ಹಣ್ಣಿ ಬೀಜವನ್ನು ಅಪ್ಪಿತಪ್ಪಿಯೂ ತಿನ್ನಬಾರದು!
2. ಹಣ್ಣುಗಳ ಮೇಲೆ ಉಪ್ಪು ಹಾಕುವುದು: ಹಣ್ಣುಗಳ ಮೇಲೆ ಉಪ್ಪು (Salt) ಅಥವಾ ಚಾಟ್ ಮಸಾಲಾವನ್ನು ಸಿಂಪಡಿಸಿ ತಿನ್ನುವುದನ್ನು ಹೆಚ್ಚಿನವರು ಇಷ್ಟಪಡುತ್ತೇವೆ. ಆದ್ರೆ ಈ ಫ್ರೂಟ್‌ಚಾಟ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಉಪ್ಪು ಅಥವಾ ಚಾಟ್ ಮಸಾಲವನ್ನು ಸಿಂಪಡಿಸಿದ ನಂತರ, ಹಣ್ಣುಗಳು ತಮ್ಮ ನೀರನ್ನು ಹೇಗೆ ಬಿಡುಗಡೆ ಮಾಡುತ್ತವೆ ಎಂಬುದನ್ನು ನೀವು ಎಂದಾದರೂ ಗಮನಿಸಿದ್ದೀರಾ ? ಆ ನೀರು ಪೋಷಕಾಂಶಗಳ ನಷ್ಟವನ್ನು ಸಹ ಸೂಚಿಸುತ್ತದೆ. ಅಲ್ಲದೆ, ಉಪ್ಪು ಮತ್ತು ಚಾಟ್ ಮಸಾಲಾದಲ್ಲಿರುವ ಸೋಡಿಯಂ ಮೂತ್ರಪಿಂಡಗಳಿಗೆ ಒಳ್ಳೆಯದಲ್ಲ ಏಕೆಂದರೆ ಅವು ನಮ್ಮ ದೇಹದಲ್ಲಿ ನೀರಿನ ಧಾರಣಕ್ಕೆ ಕಾರಣವಾಗುತ್ತವೆ. ಆದ್ದರಿಂದ ನಿಮ್ಮ ಹಣ್ಣುಗಳನ್ನು ಯಾವುದೇ ಉಪ್ಪು ಅಥವಾ ಚಾಟ್ ಮಸಾಲವನ್ನು ಸೇರಿಸದೆಯೇ ತಿನ್ನಿ.
3. ಊಟದ ನಂತರ ಹಣ್ಣುಗಳನ್ನು ತಿನ್ನಬೇಡಿ: ಊಟದ ನಂತರ ಸಿಹಿ ಹಣ್ಣುಗಳನ್ನು ತಿನ್ನಬೇಕೆಂದು ಪ್ರತಿ ಸಾರಿಯೂ ಅನಿಸುತ್ತಿರುತ್ತದೆ. ಆದರೆ, ಹಣ್ಣಿನಲ್ಲಿರುವ ಸಕ್ಕರೆ ಅಂಶವು ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳೊಂದಿಗೆ ಹುದುಗುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮಾತ್ರವಲ್ಲ ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನು ನೀಡುತ್ತದೆ. ಇದರಿಂದಾಗಿ ಹೊಟ್ಟೆ ಉಬ್ಬರ, ಹೊಟ್ಟೆ ನೋವು ಮತ್ತು ಇತರ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ, ಊಟವಾದ ತಕ್ಷಣ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದಲ್ಲ. ಹಣ್ಣುಗಳನ್ನು ತಿನ್ನಲು ಉತ್ತಮ ಸಮಯವೆಂದರೆ ಊಟದ ನಂತರ ಕನಿಷ್ಠ 30 ನಿಮಿಷದಿಂದ ಒಂದು ಗಂಟೆಯ ನಂತರ ತಿನ್ನಬಹುದು ಅಥವಾ ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯನ್ನು ಹೊಂದಿರುವಾಗ ಹಣ್ಣು ತಿನ್ನಬಹುದು.
Monsoon: ಸಿಕ್ಕಿದ್ದೆಲ್ಲ ಹಣ್ಣು ತಿಂದ್ರೆ ಆರೋಗ್ಯ ಕೆಡ್ಬಹುದು ಜೋಪಾನ
4. ಕತ್ತರಿಸಿದ ನಂತರ ಹಣ್ಣುಗಳನ್ನು ತೊಳೆಯುವುದು: ಹಣ್ಣು, ತರಕಾರಿಗಳನ್ನು ಯಾವಾಗಲೂ ತೊಳೆದು ತಿನ್ನುವ ಅಭ್ಯಾಸ ಒಳ್ಳೆಯದು. ಆದ್ರೆ ಕತ್ತರಿಸಿದ ಬಳಿಕ ಹಣ್ಣುಗಳನ್ನು ತೊಳೆಯೋದು ತುಂಬಾ ಕೆಟ್ಟ ಅಭ್ಯಾಸ. ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವ ಮೊದಲು ತೊಳೆಯುವುದು ಅವಶ್ಯಕ. ನೀವು ಹಣ್ಣುಗಳನ್ನು ಕತ್ತರಿಸಿದ ನಂತರ ತೊಳೆದರೆ, ಅದು ಜೀವಸತ್ವಗಳು ಮತ್ತು ಖನಿಜಗಳನ್ನು ತೊಳೆಯುತ್ತದೆ. ನಿಮ್ಮ ಆಹಾರದಲ್ಲಿ ಹಣ್ಣುಗಳ ಸಂಪೂರ್ಣ ಪೌಷ್ಟಿಕಾಂಶದ ಪ್ರಯೋಜನಗಳನ್ನು ಪಡೆಯಲು ನೀವು ಬಯಸಿದರೆ, ಈ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಲು ಪ್ರಯತ್ನಿಸಿ.