ಎಲ್ಲಾ ಹಬ್ಬಕ್ಕೂ ಆರಂಭಿಕವಾಗಿ ಬರುವ ನಾಗರಪಂಚಮಿ ಹಬ್ಬ ಅಂತೂ ಇಂತೂ ಬಂದೇ ಬಿಟ್ಟಿದೆ. ಹಬ್ಬ ಅಂದ್ಮೇಲೆ ಸಿಹಿತಿಂಡಿ ತಯಾರಿ ಆಗ್ಲೇಬೇಕಲ್ಲಾ. ಅದ್ರಲ್ಲೂ ತುಳುನಾಡಿನಲ್ಲಿ ನಾಗರ ಪಂಚಮಿಗೆ ಸ್ಪೆಷಲ್ ಅರಿಶಿನ ಎಲೆ ಸಿಹಿ ಕಡುಬು ಇಲ್ಲಾಂದ್ರೆ ಆಗೋದೆ ಇಲ್ಲ. ಇಲ್ಲಿದೆ ಅದ್ರ ಸಿಂಪಲ್ ರೆಸಿಪಿ.
ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ. ಶ್ರಾವಣ ಶುದ್ಧ ಪಂಚಮಿಯಿಂದ ನಾಗರಪಂಚಮಿಯನ್ನು ಆಚರಿಸಲಾಗುತ್ತದೆ. ನಾಗರ ಪಂಚಮಿ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವು ಕಥೆಗಳಿವೆ. ಈ ಕಾಲದಲ್ಲಿ ಕೀಟ, ಮಿಡತೆಗಳ ಹಾವಳಿ ಅಧಿಕ. ಅಷ್ಟೇ ಅಲ್ಲದೆ ಫಸಲು ತಿನ್ನಲು ಬರುವ ಇಲಿಗಳಿಗೂ ಕೊರತೆಯಿಲ್ಲ. ಇವೆಲ್ಲದರಿಂದ ರೈತನ ಫಸಲನ್ನು ಕಾಪಾಡುವುದು ಹಾವುಗಳು. ಇಲಿ, ಕಪ್ಪೆಗಳ ಅತಿಯಾದ ಹಾವಳಿಯನ್ನು ನಿಯಂತ್ರಿಸುವ ನಾಗರನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಪೂಜೆಯೇ ನಾಗರ ಪಂಚಮಿ.
ನಾಗರಪಂಚಮಿ ಹಬ್ಬದಂದು ಮಹಿಳೆಯರು (Woman) ನಾಗದೇವತೆಯನ್ನು ಪೂಜಿಸುತ್ತಾರೆ ಮತ್ತು ಹಾವುಗಳಿಗೆ ಹಾಲು, ಸಿಹಿತಿಂಡಿಯನ್ನು ಅರ್ಪಿಸುತ್ತಾರೆ. ಕೆಲ ಮಹಿಳೆಯರು ಉಪವಾಸ ಅಥವಾ ವ್ರತವನ್ನು ಆಚರಿಸುತ್ತಾರೆ. ತಮ್ಮ ಸಹೋದರರು ಮತ್ತು ಕುಟುಂಬದ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ. ಈ ಮಂಗಳಕರ ದಿನದಂದು ಯಾವುದೇ ಕರಿದ ಅಥವಾ ಉಪ್ಪು ಆಹಾರವನ್ನು ತಯಾರಿಸುವುದಿಲ್ಲ. ಬದಲಾಗಿ ಎಳ್ಳುಂಡೆ ಸೇರಿದಂತೆ ಇತರ ಸಿಹಿ ಪದಾರ್ಥಗಳನ್ನು ಸಿದ್ಧ ಮಾಡುತ್ತಾರೆ. ಅದರಲ್ಲೂ ತುಳುನಾಡಿನಲ್ಲಿ ನಾಗರಪಂಚಮಿ ಬಂತು ಅಂದ್ರೆ ಸ್ಪೆಷಲ್ ಅರಿಶಿನ ಎಲೆ ಸಿಹಿ ಕಡುಬು (Turmeric Leaves Patholi) ಇರ್ಲೇಬೇಕು. ಈ ಸಿಹಿತಿಂಡಿಯನ್ನು ಮಾಡೋದು ಹೇಗೆ ತಿಳ್ಕೊಳ್ಳೋಣ.
undefined
ಅರಿಶಿನ ಎಲೆ ಸಿಹಿ ಕಡುಬು
ಬೇಕಾದ ಪದಾರ್ಥಗಳು
ಅಕ್ಕಿ- 1 ಕಪ್
ತೆಂಗಿನಕಾಯಿ (ತುರಿದ)- 2 ಕಪ್
ಬೆಲ್ಲ (ತುರಿದ) - 1 ಕಪ್
ಏಲಕ್ಕಿ ಕಾಳುಗಳು (ಪುಡಿ ಮಾಡಿದ) - 4
ಹಸಿ ಅಕ್ಕಿ - 2 ಕಪ್
ಒಂದು ಚಿಟಿಕೆ ಉಪ್ಪು
ಬಾಳೆ ಎಲೆಗಳು
ಮಾಡುವ ವಿಧಾನ: ಅಕ್ಕಿಯನ್ನು ಒಂದು ಅಥವಾ ಎರಡು ಗಂಟೆಗಳ ಕಾಲ ನೆನೆಸಿಡಿ. ಇದರ ನೀರನ್ನೆಲ್ಲಾ ಬಸಿದು ತೆಂಗಿನಕಾಯಿ, ಬೆಲ್ಲ, ಉಪ್ಪು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಒಂದು ಪಾತ್ರೆಗೆ ವರ್ಗಾಯಿಸಿಡಿ. ಇನ್ನೊಂದೆಡೆ, ತೆಂಗಿನಕಾಯಿ ಮತ್ತು ಬೆಲ್ಲದ ತುರಿಯನ್ನು ಏಲಕ್ಕಿ ಕಾಳುಗಳೊಂದಿಗೆ ಮಿಶ್ರಣ ಮಾಡಿಟ್ಟುಕೊಳ್ಳಿ. ಈಗ ಬಾಳೆ ಎಲೆಗಳ ಮೇಲೆ ಅಕ್ಕಿ ಪೇಸ್ಟ್‌ನ ತೆಳುವಾದ ಪದರವನ್ನು ಅನ್ವಯಿಸಿ. ಇದರ ಮಧ್ಯೆ ಬೆಲ್ಲ ಹಾಗೂ ತೆಂಗಿನತುರಿಯ ಮಿಶ್ರಣವನ್ನಿಟ್ಟು ಎಲೆಯನ್ನು ನೀಟಾಗಿ ಮಡಚಿಕೊಳ್ಳಿ. ಇದನ್ನು ಬಾಳೆ ಎಲೆಯಲ್ಲಿ ಇಟ್ಟು ಫೋಲ್ಡ್ ಮಾಡಿ.
ಈಗ ಕುದಿಯುವ ನೀರಿನೊಂದಿಗೆ ಒಂದು ಪಾತ್ರೆ ಸಿದ್ಧವಾಗಿರಲಿ. ನಂತರ ಎಲೆಗಳ ಒಂದು ಬದಿಯನ್ನು ಇನ್ನೊಂದು ಬದಿಯಲ್ಲಿ ಉದ್ದವಾಗಿ ಮಡಿಸಿ. ಎಲೆಯ ಅಂಚುಗಳನ್ನು ಲಘುವಾಗಿ ಒತ್ತಿರಿ, ಇದರಿಂದ ಪೇಸ್ಟ್ ಒಟ್ಟಿಗೆ ಅಂಟಿಕೊಳ್ಳುತ್ತದೆ ಮತ್ತು ಬೆಲ್ಲ ಕರಗಿದಾಗ ಉಕ್ಕಿ ಹರಿಯುವುದಿಲ್ಲ. ಅಕ್ಕಿ ತುಂಬಿದ ಎಲ್ಲಾ ಎಲೆಗಳನ್ನು ಒಂದೊಂದಾಗಿ 10-12 ನಿಮಿಷಗಳ ಕಾಲ ಸ್ಟೀಮ್ ಮಾಡಿ.
ತೆಂಗಿನಕಾಯಿ ಮಿಠಾಯಿ
ಬೇಕಾದ ಪದಾರ್ಥಗಳು
ಹಸಿ ಅಕ್ಕಿ - 1 ಕಪ್
ತುರಿದ ತೆಂಗಿನಕಾಯಿ - 1/2
ಬೆಲ್ಲ - 1/4 ಕಪ್
ತುಪ್ಪ - 1 ಟೀಸ್ಪೂನ್
ಏಲಕ್ಕಿ ಪುಡಿ - ½ ಟೀಸ್ಪೂನ್
ತುಪ್ಪ ಸವರಿದ ತಟ್ಟೆ/ಬಾಳೆ ಎಲೆ
ಮಾಡುವ ವಿಧಾನ: ಒಂದು ಬಟ್ಟಲಿನಲ್ಲಿ ಅಕ್ಕಿಯನ್ನು ಮೂವತ್ತು ನಿಮಿಷಗಳ ಕಾಲ ನೆನೆಸಿ. ನಂತರ ಅದನ್ನು ತೆಂಗಿನಕಾಯಿ ಮತ್ತು ಬೆಲ್ಲದೊಂದಿಗೆ ರುಬ್ಬಿದರೆ ತೆಳುವಾದ ಹಿಟ್ಟು ಸಿಗುತ್ತದೆ. ದಪ್ಪ ತಳದ ಬಾಣಲೆಯಲ್ಲಿ ಹಿಟ್ಟನ್ನು ಸುರಿಯಿರಿ ಮತ್ತು ನಿರಂತರವಾಗಿ ಬೆರೆಸಿ. ಸ್ವಲ್ಪ ತುಪ್ಪವನ್ನು ಸುರಿಯಿರಿ ಮತ್ತು ಮಿಕ್ಸ್ ಮಾಡುತ್ತಿರಿ. ಹಿಟ್ಟು ಪ್ಯಾನ್‌ನ ಬದಿಗಳಿಗೆ ಅಂಟಿಕೊಳ್ಳುವುದನ್ನು ನಿಲ್ಲಿಸಿದ ನಂತರ, ಅದನ್ನು ತುಪ್ಪ ಸವರಿದ ತಟ್ಟೆ/ಬಾಳೆ ಎಲೆಗೆ ವರ್ಗಾಯಿಸಿ ಮತ್ತು ಬೆಣ್ಣೆಯನ್ನು ಸಮವಾಗಿ ಹರಡಿ. ಹಿಟ್ಟನ್ನು ತಣ್ಣಗಾಗಲು ಅನುಮತಿಸಿ, ತದನಂತರ ಅದನ್ನು ಚೌಕಗಳಾಗಿ ಕತ್ತರಿಸಿ, ಮೇಲಿನಿಂದ ಗೋಡಂಬಿ ಸೇರಿಸಿ ಅಲಂಕರಿಸಿ.