ಬೆಂಗಳೂರಿನ ಪ್ರಸಿದ್ಧ ಸೆಂಟ್ರಲ್ ಟಿಫಿನ್ ರೂಮ್ (ಸಿಟಿಆರ್) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ತನ್ನ ಮೊದಲ ಔಟ್ಲೆಟ್ ಅನ್ನು ಪ್ರಾರಂಭಿಸಿದೆ. ಪ್ರಯಾಣಿಕರು ಈಗ ವಿಮಾನ ನಿಲ್ದಾಣದಲ್ಲಿಯೇ ಸಿಟಿಆರ್‌ನ ರುಚಿಕರ ದೋಸೆ ಮತ್ತು ಇಡ್ಲಿಗಳನ್ನು ಸವಿಯಬಹುದು.
ಬೆಂಗಳೂರು (ಜ.11): ತನ್ನ ಗರಿಗರಿಯಾದ ಮಸಾಲೆ ದೋಸೆಗಳಿಗೆ ಹೆಸರುವಾಸಿಯಾಗಿರುವ ಬೆಂಗಳೂರಿನ ಪ್ರಸಿದ್ಧ ಸೆಂಟ್ರಲ್ ಟಿಫಿನ್ ರೂಮ್ ಅಂದರೆ ಸಿಟಿಆರ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಮೊದಲ ಔಟ್ಲೆಟ್ ಅನ್ನು ಪ್ರಾರಂಭಿಸಿದೆ. ಟರ್ಮಿನಲ್ 2 ರಲ್ಲಿ ನೆಲೆಗೊಂಡಿರುವ ಹೊಸ ಸಿಟಿಆರ್ ಮಳಿಗೆಯು ಪ್ರಯಾಣಿಕರಿಗೆ ದೋಸೆ ಮತ್ತು ಇಡ್ಲಿ ಸೇರಿದಂತೆ ಜನಪ್ರಿಯ ದಕ್ಷಿಣ ಭಾರತದ ಉಪಹಾರಗಳನ್ನು ನೀಡುತ್ತದೆ. ಸ್ಥಳೀಯ ರುಚಿಗಳನ್ನು ಬಯಸುವ ಗ್ರಾಹಕರಿಗೆ ಏರ್‌ಪೋರ್ಟ್‌ನಲ್ಲಿಯೇ ಈಗ ಈ ಆಹಾರಗಳು ಸಿಗಲಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ಏರ್‌ಪೋರ್ಟ್‌ನ ಮುಖ್ಯ ವ್ಯವಸ್ಥಾಪಕ ಅಧಿಕಾರಿ (ಸಿಒಒ) ಸತ್ಯಕಿ ರಘುನಾಥ್,'ಇದು ನಾನು ಎದುರಿಸಿದ ಅತ್ಯಂತ ಬೆಸ್ಟ್ ಫೀಲಿಂಗ್. ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್ 2 ಹೊರಗೆ ಸಿಟಿಆರ್‌ಅನ್ನು ನೋಡಿದ್ದಕ್ಕೆ ಬಹಳ ಖುಷಿಯಾಗಿದೆ. ನನ್ನ ಬಾಲ್ಯದ ಹೆಚ್ಚಿನ ದಿನಗಳನ್ನು ಮಲ್ಲೇಶ್ವರಂನಲ್ಲಿಯೇ ಕಳೆದ ನನಗೆ ಇದು ದಿ ಬೆಸ್ಟ್ ಫೀಲಿಂಗ್. ನಾನು ಇಂದು ಮೊದಲ ಬೆಣ್ಣೆ ದೋಸೆಯನ್ನು ಇಲ್ಲಿ ಸವಿದೆ. ರುಚಿಕರವಾಗಿತ್ತು' ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರಿನ ಸ್ಥಳೀಯ ಜನರ ಬಹುದಿನಗಳ ಬೇಡಿಕೆ ಕೊನೆಗೂ ಇದರೊಂದಿಗೆ ಈಡೇರಿದಂತಾಗಿದೆ. ಏರ್‌ಪೋರ್ಟ್‌ನಲ್ಲಿ ಸ್ಥಳೀಯ ಖಾದ್ಯಗಳ ಮಳಿಗೆಗೆ ಆದ್ಯತೆ ಸಿಗಬೇಕು ಎಂದು ಅವರು ಬಯಸಿದ್ದರು. ಇಲ್ಲಿಯವರೆಗೂ ಅಂತಾರಾಷ್ಟ್ರೀಯ ಫುಡ್‌ಚೈನ್‌ಗಳು ಮಾತ್ರವೇ ಮಳಿಗೆಗಳನ್ನು ಹೊಂದಿದ್ದವು. ಈ ಬಗ್ಗೆ ಕಾಮೆಂಟ್ ಮಾಡಿರುವ ಯೂಸರ್ ಒಬ್ಬರು. 'ಫ್ಯಾನ್ಸಿ ಫುಡ್ ಹಾಗೂ ಡೆಸಾರ್ಟ್ ಶಾಪ್‌ಗಳ ಬದಲಿಗೆ ಕರ್ನಾಟಕದ ಅಥೆಂಟಿಕ್ ಆಗಿರುವ ಉಪಹಾರಗಳು ಏರ್‌ಪೋರ್ಟ್‌ನಲ್ಲಿ ಸಿಗುವಂತಾಗಲಿ. ಏರ್ ಪೋರ್ಟ್‌ಗಳು ಆಯಾ ನಗರದ ಪಾಕ ಪದ್ಧತಿಯನ್ನು ಪ್ರತಿನಿಧಿಸುವಂತಿರಬೇಕು' ಎಂದು ಬರೆದಿದ್ದಾರೆ.
ಇನ್ನೊಬ್ಬ ಟ್ರಾವೆಲರ್ ಏರ್‌ಪೋರ್ಟ್‌ನಲ್ಲಿ ಸಿಟಿಆರ್ ಔಟ್‌ಲೆಟ್ ಆರಂಭವಾಗಿರುವ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ್ದು, ಅವರ ಪ್ರಖ್ಯಾತ ಬೆಣ್ಣೆದೋಸೆಯ ಬೆಲೆ ಎಷ್ಟು ಎಂದು ಪ್ರ್ನೆ ಮಾಡಿದ್ದರೆ. 'ಫೆಟಾಸ್ಟಿಕ್. ಫೆಬ್ರವರಿ ಮಧ್ಯಭಾಗದ ನನ್ನ ಟ್ರಿಪ್ ಬಗ್ಗೆ ಇನ್ನಷ್ಟು ಖುಷಿಯಾಗಿದ್ದಾರೆ. ಅದಿರಲಿ, ಅಲ್ಲಿ ಬೆಣ್ಣೆ ಮಸಾಲೆ ದೋಸೆಯ ಬೆಲೆ ಎಷ್ಟು?' ಎಂದು ಕೇಳಿದ್ದಾರೆ.
ಸಿಟಿಆರ್‌ನೊಂದಿಗೆ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇನ್ನೊಂದು ಐಕಾನಿಕ್ ಬೆಂಗಳೂರು ಹೋಟೆಲ್ ಆದ ರಾಮೇಶ್ವರಂ ಕೆಫೆಯನ್ನೂ ಸ್ವಾಗತಿಸಲು ಸಜ್ಜಾಗಿದೆ. ಇದು ಟರ್ಮಿನಲ್ 1ರಲ್ಲಿ ಓಪನ್ ಆಗಲಿದ್ದು, ದೇಶೀಯ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ. ಮಲ್ಲೇಶ್ವರಂನಲ್ಲಿರುವ ಮೂಲ ಸ್ಥಳದಿಂದ ಹೊರತಾಗಿ ಸಿಟಿಅರ್‌ನ ಮೊದಲ ಮಳಿಗೆ ಇದಾಗಿದೆ. ಈಗ ಇಂಟರ್‌ನ್ಯಾಷನಲ್ ಹಾಗೂ ಆಯ್ದ ದೇಶೀಯ ವಿಮಾನ ಪ್ರಯಾಣಿಕರಿಗೆ ಟರ್ಮಿನಲ್ 2ನಲ್ಲಿ ಉಪಹಾರಗಳನ್ನು ನೀಡಲಿದೆ.
ಅನ್ನದ ಬದಲು ಇವುಗಳನ್ನು ತಿನ್ನಿ, ತೂಕ ಇಳಿಸೋಕೆ ಬೆಸ್ಟ್!
ಸಿಟಿಆರ್ ನಗರದ ಅತ್ಯಂತ ಹಳೆಯ ಹಾಗೂ ಪ್ರೀತಿಪಾತ್ರ ದೋಸೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಗರಿಗರಿಯಾದ ಬೆಣ್ಣೆದೋಸೆಯನ್ನು ಮೆಚ್ಚದವರೇ ಇಲ್ಲ. ಅನೇಕ ಸೆಲೆಬ್ರಿಟಿಗಳು ಕೂಡ ಇದನ್ನು ಮೆಚ್ಚಿದ್ದಾರೆ.ಸ್ಥಳೀಯ ಸಂಪ್ರದಾಯಗಳನ್ನು ಉತ್ತೇಜಿಸುವ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಾಂಸ್ಕೃತಿಕ ವಾತಾವರಣವನ್ನು ಹೆಚ್ಚಿಸಲು ಬಿಐಎಎಲ್ ಬದ್ಧವಾಗಿದೆ. ಈ ಉಪಕ್ರಮದ ಭಾಗವಾಗಿ, ವಿಮಾನ ನಿಲ್ದಾಣವು ಡಿಜಿಟಲ್ ಪ್ರದರ್ಶನಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುತ್ತದೆ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಈವೆಂಟ್ ಅಪ್‌ಡೇಟ್‌ಗಳನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಪ್ರಯಾಣಿಕರ ತೊಡಗಿಸಿಕೊಳ್ಳುವಿಕೆಯ ಚಟುವಟಿಕೆಗಳು ಕನ್ನಡ ಬಳಕೆಯನ್ನು ಉತ್ತೇಜಿಸುತ್ತದೆ, ಇದು ಪ್ರದೇಶದ ರೋಮಾಂಚಕ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಪ್ರದರ್ಶಿಸುವ BIAL ನ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.
Kitchen Hacks: ಮೊಳಕೆ ಬರದ ಹಾಗೆ ಆಲೂಗಡ್ಡೆಯನ್ನು ತಾಜಾವಾಗಿ ಹೀಗೆ ಶೇಖರಿಸಿಡಿ!
The best feeling ever - really chuffed to see outside at . As someone who spent all my childhood holidays in Malleswaram, this is just the best feeling. I had my first today. Delicious!! pic.twitter.com/azMLxAZQ0y
— Satyaki Raghunath (@SatyakiRaghuna1)