ಮನುಷ್ಯನ ಮಾಂಸದ ಸ್ಮೆಲ್ ಇರೋ ಬರ್ಗರ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌ !

By Suvarna News  |  First Published Jul 10, 2022, 12:35 PM IST

ಬರ್ಗರ್ (Burger) ಅಂದ್ರೆ ಸಾಮಾನ್ಯವಾಗಿ ಎಲ್ರೂ ಸಿಕ್ಕಾಪಟ್ಟೆ ಇಷ್ಟಪಟ್ಟು ತಿನ್ತಾರೆ. ವೆಜ್‌ (Veg), ಎಗ್‌, ಚಿಕನ್ ಬರ್ಗರ್ ತಿನ್ನೋಕೆ ತುಂಬಾ ಟೇಸ್ಟಿಯಾಗಿರುತ್ತೆ. ಆದ್ರೆ ಇಲ್ಲೊಂದು ಸ್ಪೆಷಲ್ ಬರ್ಗರ್ ಇದೆ. ಇದು ಮಾನವನ ಮಾಂಸದ ಸ್ಮೆಲ್ (Smell) ಹೊಂದಿರುತ್ತದೆಯೆಂತೆ. ಈ ಸ್ಪೆಷಲ್ ಬರ್ಗರ್‌ಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ (Demand) ಕ್ರಿಯೇಟ್ ಆಗಿದೆ. 


ಇತ್ತೀಚಿನ ದಿನಗಳಲ್ಲಿ ಪಿಜ್ಜಾ, ಬರ್ಗರ್ (Burger), ಸ್ಯಾಂಡ್‌ವಿಚ್ (Sandwich) ಇಂಥವುಗಳನ್ನೇ ಇಷ್ಟಪಟ್ಟು ತಿನ್ನುವವರು ಹೆಚ್ಚು. ಸ್ಟ್ರೀಟ್ ಸೈಡ್ 100 ರೂ.ಗೆ ದೊರಕುವ ಬರ್ಗರ್‌ ಬೆಲೆ ಮಾಲ್‌ಗಳಲ್ಲಿ 300 ರೂ. ವರೆಗೂ ತಲುಪುತ್ತದೆ. ಹಲವು ತರಕಾರಿಗಳ ಮಿಶ್ರಣ, ಚೀಸ್ ಸೇರಿಸಿರುವ ಬರ್ಗರ್ ತಿನ್ನಲು ರುಚಿಯಾಗಿರುವ ಕಾರಣ ಹಲವರು ಬೆಲೆ ಹೆಚ್ಚಾದರೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಆಲೂ ಬರ್ಗರ್, ಎಗ್‌ ಬರ್ಗರ್, ಚಿಕನ್ ಬರ್ಗರ್‌ ಹೀಗೆ ಇಷ್ಟವಾದುದನ್ನು ಆಯ್ಕೆ ಮಾಡಿ ತಿನ್ನುತ್ತಾರೆ. ಬರ್ಗರ್‌ಗಳಲ್ಲಿ ಸಾದಾ ಬರ್ಗರ್‌ನಿಂದ ತೊಡಗಿ ಬೆಲೆಬಾಳುವ (Costly) ಬರ್ಗರ್‌ಗಳು ಸಹ ಲಭ್ಯವಿರುತ್ತವೆ. ಆದ್ರೆ ಸ್ಪೀಡಿಷ್ ಕಂಪೆನಿಯೊಂದು ಇದೆಲ್ಲಕ್ಕಿಂತ ಸ್ಪೆಷಲ್‌ ಬರ್ಗರ್‌ವೊಂದನ್ನು ತಯಾರಿಸಿದೆ. ಏನದು ತಿಳಿಯೋಣ.

ಸ್ವೀಡಿಷ್ ಕಂಪೆನಿಯೊಂದು ಸಸ್ಯಾಹಾರಿ ಬರ್ಗರ್‌ನ್ನು ತಯಾರಿಸಿದೆ. ಆದ್ರೆ ಇದು ಮಾನವ ಮಾಂಸದ ರುಚಿಯನ್ನು ಹೊಂದಿದೆ ಎಂದು ಅವರು ಹೇಳುತ್ತಾರೆ. ಮತ್ತು ಈ ಸ್ಪೆಷಲ್‌ ಬರ್ಗರ್ ಇತ್ತೀಚೆಗೆ ಪ್ರಶಸ್ತಿಯನ್ನು ಸ್ವೀಕರಿಸಿದೆ. ಓಂಫಾ ಎಂಬ ಸಸ್ಯ ಆಧಾರಿತ ಕಂಪನಿ  ಕಳೆದ ವರ್ಷ ಹ್ಯಾಲೋವೀನ್ ಸಮಯದಲ್ಲಿ ನಕಲಿ ಮಾನವ ಮಾಂಸವನ್ನು ಸವಿಯಲು ಬಯಸುವ ಜನರಿಗಾಗಿ ಈ ವಿಶೇಷ ಬರ್ಗರ್‌ನ್ನು ಸಿದ್ಧಪಡಿಸಿದೆ. ಇದನ್ನು ಸಸ್ಯ ಆಧಾರಿತ ಬರ್ಗರ್ ಎಂದು ಹೇಳಿ ಮಾರಾಟ ಮಾಡಲಾಗ್ತಿದೆ. 

Tap to resize

Latest Videos

50 ವರ್ಷಗಳಿಂದ ನಿರಂತರ ಬರ್ಗರ್ ತಿಂದು ಗಿನ್ನೆಸ್ ಪುಟ ಸೇರಿದ

ಸ್ಪೆಷಲ್ ಬರ್ಗರ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌
ಬರ್ಗರ್ ಅನ್ನು ಸೋಯಾ, ಅಣಬೆಗಳು ಮತ್ತು ಗೋಧಿ ಪ್ರೋಟೀನ್ ಜೊತೆಗೆ ಸಸ್ಯ-ಆಧಾರಿತ ಕೊಬ್ಬುಗಳು ಮತ್ತು ನಿಗೂಢ ಮಸಾಲೆ ಮಿಶ್ರಣದಿಂದ ತಯಾರಿಸಲಾಗುತ್ತದೆ. ಪ್ರಚಾರದ ಹಿಂದಿನ ಜಾಹೀರಾತು ಏಜೆನ್ಸಿಯಾದ ಲೋಲಾ ಮುಲೆನ್‌ಲೋವ್ ಅವರು ಸಸ್ಯ-ಆಧಾರಿತ ಉತ್ಪನ್ನಗಳು ಯಾವುದೇ ಮಾಂಸದ ರುಚಿಯನ್ನು ಪುನರಾವರ್ತಿಸಬಹುದು ಎಂದು ಹೇಳುತ್ತಾರೆ. ಸಂಸ್ಥೆಯ ಸಹ-ಸಂಸ್ಥಾಪಕ, ಕಾರ್ಪೊರೇಟ್ ಬಾಣಸಿಗ ಮತ್ತು ನಾವೀನ್ಯತೆ ಮುಖ್ಯಸ್ಥ ಆಂಡರ್ಸ್ ಲಿಂಡೆನ್, ಯೂಟ್ಯೂಬ್ ವೀಡಿಯೊದಲ್ಲಿ, ಮಾನವನ ಮಾಂಸದ ರುಚಿಯನ್ನು ಹೊಂದಿರುವ ಸಸ್ಯ ಆಧಾರಿತ ಬರ್ಗರ್ ಅನ್ನು ಅಭಿವೃದ್ಧಿಪಡಿಸುವುದು ರೋಮಾಂಚನಕಾರಿ ಮತ್ತು ಸ್ವಲ್ಪ ಭಯಾನಕವಾಗಿತ್ತು. ಆದರೆ ಈ ಬರ್ಗರ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದು ಖುಷಿ ನೀಡಿದೆ ಎಂದು ಹೇಳಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Oumph! (@eat_oumph)

ಬರೋಬ್ಬರಿ 19 ಲಕ್ಷ ರೂ. ಬೆಲೆ ಬಾಳುವ ಬರ್ಗರ್‌
ಇತ್ತೀಚಿಗೆ ಜಗತ್ತಿನ ಅತ್ಯಂತ ಕಾಸ್ಟ್ಲೀ ಬರ್ಗರ್‌ನ್ನು ಪರಿಚಯಿಸಲಾಗಿತ್ತು. ಅಟ್ಲಾಂಟಾ ಬ್ರೇವ್ಸ್ ಎಂಬ ಅಮೇರಿಕಾ ಮೂಲದ ಬೇಸ್‌ಬಾಲ್ ತಂಡವು ಹೊಸ ಸೀಮಿತ ಆವೃತ್ತಿಯ ಬರ್ಗರ್ ಅನ್ನು ಬಹಿರಂಗಪಡಿಸಿದೆ, ಇದರ ಬೆಲೆ ಅಂದಾಜು 19 ಲಕ್ಷ ರೂ. ಸೂಪರ್ ದುಬಾರಿ ಬರ್ಗರ್ ಅನ್ನು 'ವಿಶ್ವ ಚಾಂಪಿಯನ್ಸ್ ಬರ್ಗರ್' ಎಂದು ಕರೆಯಲಾಗುತ್ತದೆ. ಸದ್ಯ ಈ ಅತ್ಯಂತ ದುಬಾರಿ ಬರ್ಗರ್ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರು ಕಾಸ್ಟ್ಲೀ ಬರ್ಗರ್ ನೋಡಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಆರ್ಡರ್ ಕೊಟ್ಟು ಗಂಟೆಗಟ್ಟಲೆ ಕಾಯ್ಬೇಕಿಲ್ಲ..! ಕೆಲವೇ ನಿಮಿಷಗಳಲ್ಲಿ ಬರ್ಗರ್ ತಯಾರಿಸುತ್ತೆ ರೊಬೋಟ್..!

ಫಾಕ್ಸ್ ನ್ಯೂಸ್‌ನ ಸುದ್ದಿ ವರದಿಯ ಪ್ರಕಾರ, ಈ ದುಬಾರಿ ಬರ್ಗರ್ ಅನ್ನು ಅರ್ಧ ಪೌಂಡ್ ಪ್ರಮಾಣದ ವಿಶೇಷ ಮಾಂಸವನ್ನು ಬಳಸಿ ತಯಾರಿಸಲಾಗಿದೆ. ಫ್ರೈಡ್ ಮೊಟ್ಟೆಗಳು, ಟೊಮೆಟೊ, ಚೀಸ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಲಾಗಿದೆ. ಕ್ಲಬ್‌ ಸ್ಥಾಪನೆಯಾದ 151 ವರ್ಷಗಳ ಸ್ಮರಣಾರ್ಥವಾಗಿ ಇದನ್ನು ತಯಾರಿಸಲಾಗಿದೆ. ಕಾಸ್ಟ್ಲೀ ಬರ್ಗರ್ ಆಗಿರುವ ಕಾರಣ ಇದನ್ನು ಕೇವಲ ಸೀಮಿತ ಪ್ರಮಾಣದಲ್ಲಿ ತಯಾರಿಸಲಾಗಿದೆ.  ವರದಿಗಳ ಪ್ರಕಾರ, ನೀವು ಈ ಸೀಮಿತ ಪ್ರಮಾಣದಲ್ಲಿ ಲಭ್ಯವಾಗುವ ಬರ್ಗರ್‌ನ್ನು ಪಡೆಯಲು ಸಾಧ್ಯವಾಗುತ್ತಿಲ್ಲವೆಂದಾದರೆ, ಅದರಂತೆಯೇ ಇರುವ ಪ್ರತಿರೂಪದ ಬರ್ಗರ್‌ನ್ನು ಖರೀದಿಸಬಹುದು. ಇದರ ಬೆಲೆ ಮೂಲ ಬರ್ಗರ್‌ಗಿಂತ ತುಂಬಾ ಕಡಿಮೆಯೂ ಆಗಿದೆ. 19 ಲಕ್ಷ ರೂ. ಬೆಲೆಬಾಳುವ ಬರ್ಗರ್‌ನ ಪ್ರತಿರೂಪಕ್ಕೆ 11,000 ವೆಚ್ಚವಾಗುತ್ತದೆ. 

click me!