ಎಷ್ಟು ತಿಂಗಳ ಬಳಿಕ ಮಕ್ಕಳಿಗೆ ಮಸಾಲೆ ಸೇರಿಸಿದ ಆಹಾರ ಕೊಡ್ಬೋದು ?

Published : Jul 10, 2022, 09:46 AM ISTUpdated : Jul 10, 2022, 09:49 AM IST
ಎಷ್ಟು ತಿಂಗಳ ಬಳಿಕ ಮಕ್ಕಳಿಗೆ ಮಸಾಲೆ ಸೇರಿಸಿದ ಆಹಾರ ಕೊಡ್ಬೋದು ?

ಸಾರಾಂಶ

ಮಕ್ಕಳ (Children) ಲಾಲನೆ-ಪೋಷಣೆ ತುಂಬಾ ಜಾಗರೂಕತೆಯಿಂದ ಮಾಡಬೇಕಾದ ಕೆಲಸ. ಆರೈಕೆ, ಆಹಾರ ಎಲ್ಲದರ ಬಗ್ಗೆಯೂ ಪ್ರತ್ಯೇಕವಾಗಿ ಗಮನ ಕೊಡಬೇಕು. ಹಾಗಿದ್ರೆ ಮಕ್ಕಳಿಗೆ ಯಾವ ತಿಂಗಳಿನಿಂದ ಮಸಾಲೆಯುಕ್ತ ಆಹಾರ (Spicy food) ಕೊಡ್ಬೋದು ?

ಮಗು (Baby0ವನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುವುದೆಂದರೆ ಸಣ್ಣಪುಟ್ಟ ಕೆಲಸವಲ್ಲ. ಮಕ್ಕಳ ಆರೋಗ್ಯ (Health), ಆರೈಕೆ, ಆಹಾರ (Food) ಎಲ್ಲದರ ಬಗ್ಗೆಯೂ ಗಮನಹರಿಸಿಕೊಳ್ಳಬೇಕು. ಮಕ್ಕಳ ದೇಹಕ್ಕೆ ಒಗ್ಗದ ಆಹಾರಗಳನ್ನು ಅವರಿಗೆ ಕೊಡುವ ತಪ್ಪುವ ಮಾಡಲೇಬಾರದು. ಯಾವ ವಯಸ್ಸಿನಲ್ಲಿ ಯಾವ ಆಹಾರವನ್ನು ಕೊಡಬಹುದು, ಎಂಥಾ ಆಹಾರವನ್ನು ಕೊಡಬಾರದು ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಚಿಕ್ಕಂದಿನಲ್ಲಿ ಮಕ್ಕಳಿಗೆ ತಾಯಿಯ ಎದೆಹಾಲು ಸಾಕಾಗುತ್ತದೆ. ಆದರೆ ಬೆಳೆಯುತ್ತಾ ಹೋದಂತೆ ಇತರ ಆರೋಗ್ಯಕರ ಆಹಾರಗಳನ್ನೂ ಕೊಡಬೇಕು. ಮಸಾಲೆ (Spice)ಯುಕ್ತ ಆಹಾರಗಳನ್ನು ಎಷ್ಟು ತಿಂಗಳಾದ ಬಳಿಕ ಮಕ್ಕಳಿಗೆ ನೀಡಬೇಕು, ಇದರಿಂದ ಮಕ್ಕಳಿಗಿರುವ ಲಾಭಗಳೇನು ? : ಇಲ್ಲಿದೆ ಅಗತ್ಯ ಮಾಹಿತಿ.

ಮಕ್ಕಳಿಗೆ ಹಾಲುಣಿಸುವುದನ್ನು ಬಿಟ್ಟ ನಂತರ 8 ಅಥವಾ 9 ತಿಂಗಳುಗಳನ್ನು ಪೂರೈಸಿದ ನಂತರವೇ ಯಾವುದೇ ಘನ ಆಹಾರಕ್ಕೆ ಮಸಾಲೆಗಳನ್ನು ನೀಡಬೇಕು. ಇದು ಹೊಟ್ಟೆಯ ಅಸ್ವಸ್ಥತೆ ಮತ್ತು ಅಲರ್ಜಿಯ ಪ್ರತಿಕ್ರಿಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಆದರೆ ಮಕ್ಕಳ ಆಹಾರಕ್ಕೆ ಹೆಚ್ಚು ಉಪ್ಪು ಅಥವಾ ಸಕ್ಕರೆಯನ್ನು ಸೇರಿಸಬೇಡಿ. ನಿಮ್ಮ ಮಗು ಆಹಾರದ ನೈಸರ್ಗಿಕ ಸುವಾಸನೆಗಳಿಗೆ ಒಗ್ಗಿಕೊಳ್ಳಬೇಕೆಂದು ನೀವು ಬಯಸುತ್ತೀರಿ ಮತ್ತು ಹೆಚ್ಚು ಉಪ್ಪು ಅಥವಾ ಸಕ್ಕರೆಯಿಲ್ಲದ ಆಹಾರವನ್ನು ತಿನ್ನಲು ಅಭ್ಯಾಸ ಮಾಡಿಸಿ.

ಮಗು ತೂಕ ಏರ್ತಿಲ್ಲ ಅನ್ನೋ ಚಿಂತೆನಾ? ಈ ಆಹಾರ ನೀಡಿದ್ದೀರಾ?

ಯಾವಾಗ ಮಗುವಿಗೆ ಮಸಾಲೆಯುಕ್ತ ಆಹಾರ ಕೊಡಬಹುದು ?
ಮೊದಲಿಗೆ ಅರಿಶಿನ ಮತ್ತು ಜೀರಿಗೆಯಂತಹ ಸೌಮ್ಯ ಮಸಾಲೆಗಳನ್ನು ಮಗುವಿನ ಆಹಾರದಲ್ಲಿ ಸೇರಿಸಬಹುದು. ನಂತರದ ದಿನಗಳಲ್ಲಿ ತುಳಸಿ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯಂತಹ ಸಣ್ಣ ಪ್ರಮಾಣದ ಸುವಾಸನೆಯ ಆಹಾರಗಳನ್ನು ಪರಿಚಯಿಸಬಹುದು. ಮೊದಲಿಗೆ ಗಾಢ ಮಸಾಲೆಗಳನ್ನು ಹೆಚ್ಚು ಬಳಸಬೇಡಿ. ಕ್ರಮೇಣ ದಾಲ್ಚಿನ್ನಿ, ಜಾಯಿಕಾಯಿ, ಕೆಂಪುಮೆಣಸು, ಏಲಕ್ಕಿ, ಲವಂಗ, ಶುಂಠಿ, ಕರಿಮೆಣಸು ಮೊದಲಾದ ಮಸಾಲೆಗಳನ್ನು ಸೇರಿಸಿಕೊಳ್ಳುತ್ತಾ ಹೋಗಬಹುದು.

ಮಗು ಮಸಾಲೆ ಸೇರಿಸಿದ ಹೊಸ ಆಹಾರಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಗಮನಿಸಿಕೊಳ್ಳಿ. ಕೆಲವು ಮಕ್ಕಳಲ್ಲಿ ಮಸಾಲೆಯುಕ್ತ ಆಹಾರಗಳು ಅಲರ್ಜಿಯನ್ನುಂಟು ಮಾಡಬಹುದು. ಜೀರ್ಣಾಂಗ ವ್ಯವಸ್ಥೆಯನ್ನು ಕೆರಳಿಸಬಹುದು ಮತ್ತು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ಗೆ ಕಾರಣವಾಗಬಹುದು. ಹೀಗಾಗಿ ಮಕ್ಕಳ ಪ್ರತಿಕ್ರಿಯೆಯನ್ನು ಗಮನಿಸಿ ಬದಲಾವಣೆ ಮಾಡಿಕೊಳ್ಳಿ.

ಮಸಾಲೆಗಳು ಶಿಶುಗಳಿಗೆ ಉತ್ತಮವೇ ?
ಮಸಾಲೆಗಳು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ. ಮಸಾಲೆಗಳು ಮತ್ತು ಗಿಡಮೂಲಿಕೆಗಳನ್ನು ಹಲವು ವರ್ಷಗಳಿಂದ ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಹಾಗೆಯೇ ಮಕ್ಕಳಿಗೂ ಚಿಕ್ಕಂದಿನಲ್ಲೇ ಮಸಾಲೆಗಳನ್ನು ಕೊಡುವ ಅಭ್ಯಾಸ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಮಗುವಿಗೆ ವಿವಿಧ ಸುವಾಸನೆಗಳನ್ನು ಆರಂಭದಲ್ಲಿ ಪರಿಚಯಿಸುವುದು ಅವರ ಜೀವಿತಾವಧಿಯಲ್ಲಿ ವಿವಿಧ ಆಹಾರಗಳನ್ನು ಪ್ರಯತ್ನಿಸಲು ಮತ್ತು ತಿನ್ನಲು ಅವರಿಗೆ ಸಹಾಯ ಮಾಡಬಹುದು.

Baby Food: ಆರೋಗ್ಯಕರ ಆಹಾರ ಮನೆಯಲ್ಲೇ ತಯಾರಿಸ್ಬೋದು

ಶಿಶುಗಳಿಗೆ ಮಸಾಲೆ ಅಲರ್ಜಿಯಾಗಬಹುದೇ ?
ಕೆಲವು ಮಕ್ಕಳಿಗೆ ಮಸಾಲೆಗಳು ಅಲರ್ಜಿಯಾಗುವ ಸಾಧ್ಯತೆಯಿದೆ. ಇದನ್ನು ಅನಾಫಿಲ್ಯಾಕ್ಟಿಕ್ ಪ್ರತಿಕ್ರಿಯೆ ಎನ್ನುತ್ತಾರೆ. ಇದು ಅತ್ಯಂತ ಅಪರೂಪ. ಮಕ್ಕಳಲ್ಲಿ ಕಂಡು ಬರುವ ಈ ಅಲರ್ಜಿಯು ತುರಿಕೆ ಚರ್ಮದ ದದ್ದುಗಳು, ಊತ, ಸೀನುವಿಕೆ, ವಾಕರಿಕೆ, ವಾಂತಿ, ಅತಿಸಾರ ಮತ್ತು ತೆಳು ಚರ್ಮವನ್ನು ಒಳಗೊಂಡಿರುತ್ತದೆ. ಹೀಗಾದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಕೊಡಿಸಿ. ಸ್ಪಲ್ಪ ತಿಂಗಳುಗಳ ತನಕ ಮಸಾಲೆ ಪದಾರ್ಥಗಳನ್ನು ಕೊಡುವುದನ್ನು ತಪ್ಪಿಸಿ

ಮಗುವಿನ ಆಹಾರದಲ್ಲಿ ಮಸಾಲೆ ಸೇರಿಸುವುದು ಹೇಗೆ ?
ಮಗುವಿನ ಆಹಾರದಲ್ಲಿ ಮಸಾಲೆಗಳನ್ನು ಪರಿಚಯಿಸಲು ಹಲವು ಮಾರ್ಗಗಳಿವೆ. ಮನೆಯಲ್ಲಿ ನಿಮ್ಮ ಊಟವನ್ನು ತಯಾರಿಸುವಾಗ ನೀವು ಮಸಾಲೆಗಳನ್ನು ಬಳಸಿದರೆ, ಕುಟುಂಬದ ಉಳಿದವರು ಏನು ತಿನ್ನುತ್ತಿದ್ದಾರೆ ಎಂಬುದನ್ನು ನಿಮ್ಮ ಮಗುವಿಗೆ ತಿನ್ನಿಸಿ. ಮಗುವಿನ ಪ್ಯೂರಿಯಲ್ಲಿ ದಾಲ್ಚಿನ್ನಿ, ಬೇಯಿಸಿದ ಸಿಹಿ ಆಲೂಗಡ್ಡೆಯೊಂದಿಗೆ ಜಾಯಿಕಾಯಿ, ಬೀನ್ಸ್ ಜೊತೆ ಜೀರಿಗೆಯನ್ನು ಸೇರಿಸಿ ಕೊಡಿ. ತುಳಸಿ, ಪುದೀನಾ ಮೊದಲಾದ ತಾಜಾ ಗಿಡಮೂಲಿಕೆಗಳನ್ನು ಸಹ ನೀವು ಸೇರಿಸಿಕೊಳ್ಳಬಹುದು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫ್ರಿಡ್ಜ್‌ನಲ್ಲಿಟ್ಟ ಮೊಟ್ಟೆಗಳು ಕೊಳೆಯುತ್ತವೆಯೇ? ಗೃಹಿಣಿಯರು ತಿಳಿದುಕೊಳ್ಳಬೇಕಾದ ವಿಷಯವಿದು!
ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!