ಮನೆಯೇ ಮಂತ್ರಾಲಯ, ಬ್ರೆಡ್ ಮಸಾಲ, ಗೋಳಿಬಜೆ ಮಾಡೋದು ಹೇಗೆ? ಒಳ್ಳೆ ಕಾಂಬಿನೇಶನ್ ಗುರು!

By Suvarna NewsFirst Published Apr 5, 2020, 6:05 PM IST
Highlights

ಬ್ರೆಡ್ ಮಸಾಲಾ, ಗೋಳಿಬಜೆ ಬೆಳಗಿನ ಉಪಹಾರಕ್ಕೂ ಸೈ, ಸಂಜೆಯ ಸ್ನಾಕ್ಸ್ ಆಗಿ ಸವಿಯಲೂ ಸೈ. ರುಚಿ ಯಮ್ಮೀ ಅನ್ನೊ ಹಾಗಿರುತ್ತೆ. ಮನೆಗೆ ತಂದ ಬ್ರೆಡ್ ತಿನ್ನದೇ ಉಳಿದುಬಿಟ್ಟಿರುತ್ತೆ. ನಾಲ್ಕೈದು ಪೀಸ್ ಗಳನ್ನು ಮತ್ತೇನು ಮಾಡೋದು ಅಂತ ಗೊತ್ತಾಗಲ್ಲ. ಈ ಸಿಂಪಲ್ ರೆಸಿಪಿ ಮಾಡಿದರೆ ಕ್ಷಣಾರ್ಧದಲ್ಲಿ ಖಾಲಿಯಾಗದಿದ್ರೆ ಕೇಳಿ.

ಬ್ರೆಡ್ ಮಸಾಲಾ
ಇದು ಬೆಳಗಿನ ಉಪಹಾರಕ್ಕೂ ಸೈ, ಸಂಜೆಯ ಸ್ನಾಕ್ಸ್ ಆಗಿ ಸವಿಯಲೂ ಸೈ. ರುಚಿ ಯಮ್ಮೀ ಅನ್ನೊ ಹಾಗಿರುತ್ತೆ. ಮನೆಗೆ ತಂದ ಬ್ರೆಡ್ ತಿನ್ನದೇ ಉಳಿದುಬಿಟ್ಟಿರುತ್ತೆ. ನಾಲ್ಕೈದು ಪೀಸ್ ಗಳನ್ನು ಮತ್ತೇನು ಮಾಡೋದು ಅಂತ ಗೊತ್ತಾಗಲ್ಲ. ಈ ಸಿಂಪಲ್ ರೆಸಿಪಿ ಮಾಡಿದರೆ ಕ್ಷಣಾರ್ಧದಲ್ಲಿ ಖಾಲಿಯಾಗದಿದ್ರೆ ಕೇಳಿ.

ಮಾಡಲು ಬೇಕಾದ ಅವಧಿ : ಹನ್ನೆರಡು ನಿಮಿಷ

 

ಏನೇನೆಲ್ಲ ಬೇಕಾಗುತ್ತೆ?

- ನಾಲ್ಕೈದು ಬ್ರೆಡ್ ಸ್ಲೈಸ್

- ಬೆಣ್ಣೆ ಒಂದು ಪೀಸ್

- ಚಿಕ್ಕದಾಗಿ ಹೆಚ್ಚಿರುವ ಬೆಳ್ಳುಳ್ಳಿ ಎರಡು ಎಸಳು

- ಒಂದು ಹಸಿ ಮೆಣಸು

- ಈರುಳ್ಳಿ ಚಿಗುರು ಸ್ವಲ್ಪ

- ಸಣ್ಣಕ್ಕೆ ಹೆಚ್ಚಿರುವ ಈರುಳ್ಳಿ, ಕ್ಯಾಬೇಜ್, ಕ್ಯಾರೆಟ್, ಕ್ಯಾಪ್ಸಿಕಂ, ಟೊಮ್ಯಾಟೋ,

- ಪಾವ್ ಬಾಜಿ ಮಸಾಲ

- ಕೊತ್ತಂಬರಿ ಸೊಪ್ಪು

- ಉಪ್ಪು

- ಎಣ್ಣೆ

 

ಮಾಡೋದು ಹೇಗೆ?

- ಮೊದಲು ಬ್ರೆಡ್ ನ ಮೀಡಿಯಂ ಸೈಸ್ ಪೀಸ್ ಗಳಾಗಿ ಕಟ್ ಮಾಡಿ.

- ಬಾಣಲೆ ಸ್ಟೌ ಮೇಲಿಟ್ಟು ಮೀಡಿಯಂ ಫ್ಲೇಮ್ ನಲ್ಲಿ ಬಿಸಿ ಮಾಡಿ.

- ಇದಕ್ಕೆ ಬೆಣ್ಣೆ ಹಾಕಿ ಅದನ್ನು ಕರಗಿಸಿ.

- ಈಗ ಬೆಳ್ಳುಳ್ಳಿ, ಮೆಣಸಿನ ಕಾಯಿ ಹಾಕಿ ತಿರುವುತ್ತಿರಿ.

- ಬಳಿಕ ಈರುಳ್ಳಿ ಚಿಗುರು ಮತ್ತು ಈರುಳ್ಳಿ ಪೀಸ್ ಹಾಕಿ ಫ್ರೈ ಮಾಡಿ.

- ನಂತರ ತರಕಾರಿಗಳನ್ನು ಹಾಕಿ. ಚೆನ್ನಾಗಿ ಮಿಕ್ಸ್ ಮಾಡುತ್ತಿರಿ.

- ಇದಕ್ಕೆ ಉಪ್ಪು ಸೇರಿಸಿ.

- ಬಳಿಕ ಪಾವ್ ಬಾಜಿ ಮಸಾಲ ಹಾಕಿ. ಉಪ್ಪು ಕಡಿಮೆ ಅನಿಸಿದರೆ ಇನ್ನೊಂಚೂರು ಹಾಕಿ.

- ಈಗ ಟೊಮ್ಯಾಟೋ ಸಾಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ಸ್ಮಾಶ್ ಮಾಡಿ.

- ಈಗ ಮೊದಲೇ ಕಟ್ ಮಾಡಿಟ್ಟ ಬ್ರೆಡ್ ಚೂರುಗಳನ್ನು ಇದಕ್ಕೆ ಸೇರಿಸಿ.

- ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಟೀ ಜೊತೆಗೆ ಸರ್ವ್ ಮಾಡಬಹುದು.

(ಕೃಪೆ : ಹೆಬ್ಬಾರ್ ಕಿಚನ್)

 

ದಿನಾ ಒಂದ್ ಲೋಟ ರಸಂ ಕುಡೀರಿ, ರೋಗಕ್ಕೆ ಗುಡ್ ಬೈ ಹೇಳಿ..

ಬಲು ಸುಲಭದ ಗೋಳಿಬಜೆ

ಮಂಗಳೂರು ಕಡೆಯ ತಿಂಡಿ. ಆದರೆ ಮಂಗಳೂರು ಬಜ್ಜಿ ಹೆಸರಲ್ಲಿ ಇದನ್ನು ಎಲ್ಲರೂ ಚಪ್ಪರಿಸಿಕೊಂಡು ತಿನ್ನುತ್ತಾರೆ. ಬಿಸಿ ಬಿಸಿ ಗೋಳಿಬಜೆಯನ್ನು ಹಾಗೇ ತಿಂದರೆ ಟೇಸ್ಟ್ ಬೇಕಿದ್ರೆ ಕಾಯಿಚಟ್ನಿ ಕಾಂಬಿನೇಶನ್ ಮಾಡಬಹುದು.

 

ಏನೇನೆಲ್ಲ ಬೇಕಾಗುತ್ತೆ?

ಒಂದು ಕಪ್ ಮೈದಾ ಹಿಟ್ಟು, ಸ್ವಲ್ಪ ಕಡಲೆ ಹಿಟ್ಟು, ಹಸಿ ಮೆಣಸಿನ ಕಾಯಿ ನಾಲ್ಕು, ಉಪ್ಪು, ಸಕ್ಕರೆ, ಅಡುಗೆ ಸೋಡ, ಬಾಳೆ ಹಣ್ಣು ಒಂದು, ಎಣ್ಣೆ.

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಸೋರೆಕಾಯಿ ಹಲ್ವಾ, ಮೊಸರು ಬಜ್ಜಿ 

ಮಾಡೋದು ಹೇಗೆ?

- ಮೈದಾ ಹಿಟ್ಟಿಗೆ ಕಡ್ಲೆಹಿಟ್ಟು, ಉಪ್ಪು, ಸಕ್ಕರೆ, ಅಡುಗೆ ಸೋಡ, ಬಾಳೆಹಣ್ಣು ಹಾಕಿ.

- ನೀರು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಿ.

- ಇದಕ್ಕೆ ಹಸಿಮೆಣಸಿನ ಕಾಯಿ ಸಣ್ಣಗೆ ಹೆಚ್ಚಿ ಹಾಕಿ.

- ಒಂದಿಷ್ಟು ಹೊತ್ತು ಹಾಗೇ ಬಿಡಿ.

- ಆಮೇಲೆ ಹಿಟ್ಟನ್ನು ತುಸು ತೆಳ್ಳಗೆ ಮಾಡಿಕೊಳ್ಳಿ.

- ಎಣ್ಣೆ ಕಾಯಿಸಿ.

- ನೆಲ್ಲಿಕಾಯಷ್ಟು ಗಾತ್ರದ ಹಿಟ್ಟನ್ನು ಕಾದ ಎಣ್ಣೆಗೆ ಹಾಕಿ.

- ಸಣ್ಣ ಅಥವಾ ಮೀಡಿಯಂ ಫ್ಲೇಮ್ ನಲ್ಲಿ ಕರಿಯುತ್ತಾ ಇರಿ.

- ಹಳದಿ ಬಣ್ಣಕ್ಕೆ ಬರುವಾಗ ತೆಗೆಯಿರಿ.

ಇದಕ್ಕೆ ಬಾಳೆಹಣ್ಣು ಹಾಕದಿದ್ರೂ ಓಕೆ. ಸೋಡದ ಬದಲಿಗೆ ಮೊಸರು ಬಳಸಿದ್ರೂ ಓಕೆ. ಕರಿಬೇವು ಸ್ವಲ್ಪ ಹಾಕಿದ್ರೆ ಘಮ ಚೆನ್ನಾಗಿರುತ್ತದೆ.

click me!