ಯಾವುದೇ ಆಹಾರವಾದ್ರೂ ಅದು ಹಿತಮಿತವಾಗಿರಬೇಕು. ನಮ್ಮ ದೇಹ ಬಯಸಿದ್ದಕ್ಕಿಂತ ಹೆಚ್ಚು ಆಹಾರವನ್ನು ನಾವು ತಿಂದ್ರೆ ಆರೋಗ್ಯ ಸುಧಾರಿಸುವ ಬದಲು ಹಾಳಾಗುತ್ತದೆ. ಅದ್ರಲ್ಲಿ ಫುಡ್ ಕೋಮಾ ಒಂದು. ಅದ್ರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ನಾವು ಸೇವಿಸುವ ಆಹಾರಕ್ಕೂ ನಮ್ಮ ದೈಹಿಕ ಚಟುವಟಿಕೆಗೂ ಸಂಬಂಧವಿದೆ. ಏಕೆಂದರೆ ಕೆಲವು ಆಹಾರಗಳು ನಮಗೆ ಹೆಚ್ಚು ಕೆಲಸ ಮಾಡುವ ಹುಮ್ಮಸ್ಸನ್ನು ನೀಡುತ್ತದೆ ಮತ್ತು ನಮ್ಮನ್ನು ಎನೆರ್ಜೆಟಿಕ್ ಮಾಡುತ್ತದೆ. ಇನ್ನು ಕೆಲವು ಆಹಾರಗಳು ಜಡವಾಗಿರುತ್ತವೆ. ಅವುಗಳನ್ನು ಸೇವಿಸಿದಾಗ ನಿದ್ದೆ ಹೆಚ್ಚು ಬರುವುದರ ಜೊತೆಗೆ ಶರೀರವೂ ಜಡವಾಗುತ್ತದೆ.
ಆಹಾರ (Food) ನಮ್ಮ ಶರೀರಕ್ಕೆ ಅತ್ಯಗತ್ಯವಾಗಿದೆ. ನಾವು ಸೇವಿಸುವ ಆಹಾರದಿಂದಲೇ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ (Nutrient)ಗಳು ಸಿಗುತ್ತದೆ. ಆದರೆ ಹೀಗೆ ನಾವು ಸೇವಿಸುವ ಆಹಾರ ನಮ್ಮನ್ನು ಕೋಮಾ (Coma) ಗೆ ಕೂಡ ಕಳುಹಿಸಬಹುದು. ನಿತ್ಯದ ಜೀವನದಲ್ಲಿ ಕೂಡ ನಾವು ಹೊಟ್ಟೆ ತುಂಬ ಆಹಾರ ಸೇವಿಸಿದಾಗ ನಿದ್ದೆಯ ಮಂಪರು ಹತ್ತುವುದನ್ನು ನೋಡಿದ್ದೇವೆ. ಹಾಗಾಗಿಯೇ ಅನೇಕ ಮಂದಿ ಊಟವಾದ ತಕ್ಷಣ ನಿದ್ದೆಗೆ ಜಾರುತ್ತಾರೆ. ಹೀಗೆ ಆಹಾರ ತಿಂದ ತಕ್ಷಣ ನಿದ್ದೆ ಬರುವುದು ಫುಡ್ ಕೋಮಾದ ಲಕ್ಷಣವೂ ಆಗಿರಬಹುದು.
ಭಾರತದ ಟಾಪ್ 10 ಪಾನೀಯಗಳ ವಿವರ ಇಲ್ಲಿದೆ: ಇದ್ರಲ್ಲಿ ನಿಮಗೆ ಯಾವ್ದು ಇಷ್ಟ?
ಫುಡ್ ಕೋಮಾ ಎಂದರೇನು? : ಊಟದ ನಂತರ ಬಿಡುಗಡೆಯಾಗುವ ಹೆಚ್ಚುವರಿ ಗ್ಲೂಕೋಸ್ ಮತ್ತು ಇನ್ಸುಲಿನ್ ಅರೆನಿದ್ರಾವಸ್ಥೆ ಮತ್ತು ಆಲಸ್ಯಕ್ಕೆ ಕಾರಣವಾಗುತ್ತದೆ. ಹೀಗೆ ಆಹಾರದಿಂದಾಗುವ ಕೋಮಾವನ್ನು ಫುಡ್ ಕೋಮಾ ಎನ್ನುತ್ತಾರೆ. ಸಾಮಾನ್ಯವಾಗಿ ನಾವು ಆಹಾರ ಸೇವಿಸದ ನಂತರ ನಿದ್ದೆಯ ಸ್ಥಿತಿಗೆ ತಲುಪುತ್ತೇವೆ. ಆದರೆ ಫುಡ್ ಕೋಮಾ ಎನ್ನುವುದು ಭಯಾನಕ ಸ್ಥಿತಿಯಾಗಿದೆ. ಏಕೆಂದರೆ ಇದರಿಂದ ವ್ಯಕ್ತಿ ಪ್ರಜ್ಞಾಹೀನನಾಗುತ್ತಾನೆ. ಫುಡ್ ಕೋಮಾ ಗೆ ಒಳಗಾದ ವ್ಯಕ್ತಿಗೆ ತನ್ನ ಕೈ ಮತ್ತು ಕಾಲುಗಳನ್ನು ಅನೇಕ ದಿನಗಳವರೆಗೆ ಚಲಿಸಲು ಸಾಧ್ಯವಾಗೋದಿಲ್ಲ. ತಲೆಗೆ ಗಾಯ, ಪಾರ್ಶ್ವವಾಯು, ಮೆದುಳಿನಲ್ಲಿ ಆಮ್ಲಜನಕದ ಕೊರತೆ, ಇನ್ಫೆಕ್ಷನ್ ಇತ್ಯಾದಿಗಳಿಂದ ರೋಗಿಯು ಕೋಮಾಗೆ ಹೋಗಬಹುದು. ಆಹಾರ ಸೇವಿಸಿದ ನಂತರ ನಿದ್ದೆ ಬರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ. ಇದರಿಂದ ತೂಕ ಹೆಚ್ಚಾಗಿ ಬೊಜ್ಜಿನ ಸಮಸ್ಯೆ, ಥೈರಾಯ್ಡ್ ಸಮಸ್ಯೆ, ಡಯಾಬಿಟೀಸ್, ಹೈ ಕೊಲೆಸ್ಟ್ರಾಲ್ ಉಂಟಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ. ಹಠಾತ್ತನೆ ಕಫ ಹೆಚ್ಚಾಗುವುದರಿಂದಲೂ ಫುಡ್ ಕೋಮಾಗೆ ಒಳಗಾಗುವ ಸಾಧ್ಯತೆ ಇದೆ. ಇದರಿಂದ ದೇಹದಲ್ಲಿ ಉರಿಯೂತವೂ ಉಂಟಾಗಬಹುದು.
ಫುಡ್ ಕೋಮಾ ಲಕ್ಷಣಗಳೇನು? : ಇತ್ತೀಚೆಗೆ ಕೋಮಾ ಎನ್ನುವ ಹೆಸರು ಸಾಮಾನ್ಯವಾಗಿದೆ. ಇದು ದೀರ್ಘಾವಧಿಯ ಪ್ರಜ್ಞಾಶೂನ್ಯ ಸ್ಥಿತಿಯಾಗಿದೆ. ಇಂದು ಅನೇಕ ಮಂದಿ ನಾನಾ ಕಾರಣಗಳಿಂದ ಕೋಮಾಗೆ ಜಾರುತ್ತಿದ್ದಾರೆ. ನಾವು ಹೆಚ್ಚು ಆಹಾರ ಸೇವಿಸಿದಾಗ ಹೆಚ್ಚಿನ ಪ್ರಮಾಣದ ರಕ್ತ ಜೀರ್ಣಕ್ರಿಯೆಯ ಕೆಲಸಕ್ಕೆ ಬೇಕಾಗುತ್ತದೆ. ಆ ಸಮಯದಲ್ಲಿ ದೇಹದ ಇನ್ನಿತರ ಭಾಗಗಳಿಗೆ ರಕ್ತದ ಪೂರೈಕೆ ಕಡಿಮೆಯಾಗುತ್ತದೆ. ಇದರಿಂದ ಹೆಚ್ಚು ನಿದ್ದೆ ಬರುವುದು, ಆಲಸಿತನ, ಸುಸ್ತು, ಶರೀರದಲ್ಲಿ ಶಕ್ತಿ ಮತ್ತು ಏಕಾಗ್ರತೆಯ ಕೊರತೆ ಮುಂತಾದ ಲಕ್ಷಣಗಳನ್ನು ಕಾಣಬಹುದು. ಇಂತಹ ಲಕ್ಷಣಗಳು ದೇಹದಲ್ಲಿ ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ಪೌಷ್ಠಿಕ ತಜ್ಞರು ಸಲಹೆ ನೀಡುತ್ತಾರೆ.
ರೆಡ್ ಮೀಟ್ ತಿನ್ನೋದು ಆರೋಗ್ಯಕ್ಕೆ ಎಷ್ಟು ಹಾನಿಕಾರಕ? ಅಧ್ಯಯನ ಹೇಳೋದೇನು?
ಫುಡ್ ಕೋಮಾಕ್ಕೆ ಕಾರಣವೇನು? : ವೈದ್ಯಕೀಯ ಭಾಷೆಯಲ್ಲಿ ಫುಡ್ ಕೋಮಾವನ್ನು ಫೋಸ್ಟ್ ಪ್ರಾಂಡಿಯಲ್ ಸೊಮ್ನೋಲೆನ್ಸ್ ಎಂದು ಕರೆಯಲಾಗುತ್ತದೆ. ಅತಿಯಾಗಿ ಆಹಾರ ಸೇವಿಸುವುದರಿಂದ ಇದು ಉಂಟಾಗುತ್ತದೆ. ಇದನ್ನು ಪೋಸ್ಟ್ ಲಂಚ್ ಡಿಪ್ ಎಂದು ಕೂಡ ಹೇಳಲಾಗುತ್ತದೆ. ಇದರ ಹೊರತಾಗಿ ರಕ್ತ ಪರಿಚಲನೆಯಲ್ಲಿ ಬದಲಾವಣೆಗಳಾದಾಗಲೂ ಫುಡ್ ಕೋಮಾ ಸಂಭವಿಸುತ್ತದೆ. ಹೆಚ್ಚಿನ ಕಾರ್ಬೋಹೈಡ್ರೇಟ್ ಗಳು, ಕೊಬ್ಬು, ಪ್ರೋಟೀನ್ ಯುಕ್ತ ಆಹಾರ ಸೇವಿಸುವುದು ಮೆದುಳು ಮತ್ತು ನಿದ್ರೆಯ ಹಾರ್ಮೋನ್ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಮಿತವಾದ ಆಹಾರ ಸೇವನೆ ಮತ್ತು ಆಹಾರ ಸೇವನೆಯ ನಂತರ ವಾಕ್ ಮಾಡೋದ್ರಿಂದ ಫುಡ್ ಕೋಮಾದಿಂದ ದೂರವಿರಬಹುದು.