Kitchen Tips : ಅರ್ಜೆಂಟ್ ಇದೆ ಅಂತಾ ಹಾಲನ್ನು ಬೇಗ ಬೇಗ ಕುದಿಸ್ಬೇಡಿ

By Suvarna NewsFirst Published Apr 5, 2023, 11:17 AM IST
Highlights

ಹಾಲು ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಹೆಂಗ್ ಹೆಂಗೋ ಹಾಲನ್ನು ಸೇವನೆ ಮಾಡಿದ್ರೆ ಒಳ್ಳೆಯದಲ್ಲ. ಹಾಲನ್ನು ಕುದಿಸೋದ್ರಿಂದ ಕುಡಿಯೋ ಸಮಯದವರೆಗೆ ಎಲ್ಲವೂ ಇಲ್ಲಿ ಇಂಪಾರ್ಟೆಂಟ್ ಆಗುತ್ತೆ. ಹಾಲನ್ನು ಹೆಚ್ಚು ಕುದಿಸಿದ್ರೂ ಕಷ್ಟ, ಕಡಿಮೆ ಕುದಿಸಿದ್ರೂ ಒಳ್ಳೆಯದಲ್ಲ. 
 

ಪ್ಯಾಕೆಟ್ ಹಾಲಿರಲಿ ಇಲ್ಲ ಮನೆಯಲ್ಲಿರುವ ಹಸುವಿನ ಹಾಲಿರಲಿ, ಅದನ್ನು ಹಸಿಯಾಗಿ ಕುಡಿಯೋದು ಒಳ್ಳೆಯದಲ್ಲ. ಹಸು ಅಥವಾ ಎಮ್ಮೆ ತಿನ್ನುವ ಹುಲ್ಲಿನಲ್ಲಿರುವ ಬ್ಯಾಕ್ಟೀರಿಯಾ ಹಾಲನ್ನು ಸೇರಿತ್ತದೆ. ಹಸಿಯಾದ ಹಾಲು ಸೇವನೆ ಮಾಡಿದಾಗ ಬ್ಯಾಕ್ಟೀರಿಯಾ ನಮ್ಮ ದೇಹಕ್ಕೆ ಹಾನಿಯುಂಟು ಮಾಡುವ ಸಾಧ್ಯತೆಯಿರುತ್ತದೆ. ಹಾಗಾಗಿ  ಹಾಲನ್ನು ಕುದಿಸಿ ಕುಡಿಯಬೇಕು.

ಹಾಲ (Milk) ನ್ನು ಕುದಿಸಿ ಕುಡಿಯಬೇಕು ನಿಜ, ಆದ್ರೆ ಗ್ಯಾಸ್ (Gas) ಮೇಲೆ ಹಾಲಿಟ್ಟರೆ ಒಂದು ಕಣ್ಣು ಅದ್ರ ಮೇಲಿರಬೇಕು. ಅನೇಕ ಬಾರಿ ಕಣ್ಣು ತಪ್ಪಿಸಿ ಹಾಲು ಮೇಲೆ ಬಂದಿರುತ್ತದೆ. ಹಾಲು ಗ್ಯಾಸ್ ಮೇಲಿದ್ದಾಗ ಅಲ್ಲಿಯೇ ನಿಂತಿರುವುದು ಸಾಧ್ಯವಿಲ್ಲದ ಮಾತು. ಹಾಗಾಗಿಯೇ ಅನೇಕರು ಗ್ಯಾಸ್ ಉರಿಯನ್ನು ಜಾಸ್ತಿ ಮಾಡ್ತಾರೆ. ಕೆಲಸಕ್ಕೆ ಹೋಗುವವರಂತೂ ಹಾಲನ್ನು ಕಾಯಿಸಿದ ಶಾಸ್ತ್ರ ಮಾಡಿ ಅದನ್ನು ಬಳಕೆ ಮಾಡ್ತಾರೆ. ನೀವೂ ಹಾಲನ್ನು ಸರಿಯಾಗಿ ಕಾಯಿಸದೆ ಸೇವನೆ ಮಾಡ್ತಿದ್ದರೆ ಈಗ್ಲೇ ಎಚ್ಚೆತ್ತುಕೊಳ್ಳಿ. ಹಾಲನ್ನು ಸರಿಯಾಗಿ ಕುದಿಸಿ ಕುಡಿಯದೆ ಹೋದ್ರೆ ಕೆಲ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ನಾವಿಂದು ಆತುರದಲ್ಲಿ ಗ್ಯಾಸ್ ಉರಿಯನ್ನು ಹೆಚ್ಚು ಮಾಡಿ, ಹಾಲನ್ನು ಕಾಯಿಸಿದಂತೆ ಮಾಡಿ ಕುಡಿಯೋದ್ರಿಂದ ಏನೆಲ್ಲ ಸಮಸ್ಯೆಯಾಗುತ್ತೆ ಎಂಬುದನ್ನು ನಿಮಗೆ ಹೇಳ್ತೇವೆ.

Healthy Food : ಸ್ವೀಟ್ ಕಾರ್ನ್ ನಾರನ್ನ ಎಸೀಬೇಡಿ, ಅದ್ರಲ್ಲೂ ಇದೆ ಔಷಧಿ ಗುಣ

• ಹಾಲನ್ನು ತ್ವರಿತವಾಗಿ ಕುದಿಸುವುದ್ರಿಂದ ಅದರಲ್ಲಿರುವ ನೈಸರ್ಗಿಕ ಸಕ್ಕರೆ (Sugar) ಸುಟ್ಟುಹೋಗುತ್ತದೆ. 
• ಹಾಲನ್ನು ದೊಡ್ಡ ಉರಿಯಲ್ಲಿ ಬೇಗ ಕುದಿಸುವುದ್ರಿಂದ ಹಾಲು ಸುಟ್ಟು ಪಾತ್ರೆ (vessel) ಗೆ ಅಂಟಿಕೊಳ್ಳಬಹುದು. ಹೆ
• ಹೆಚ್ಚಿನ ಉರಿಯಲ್ಲಿ ಹಾಲನ್ನು ಕುದಿಸುವುದ್ರಿಂದ ಅದರಲ್ಲಿ ಫೋಮ್ (Foam) ರೂಪುಗೊಳ್ಳುತ್ತದೆ. ಅದು ಎಲ್ಲೆಡೆ ಚೆಲ್ಲುತ್ತದೆ. ನಿಮ್ಮ ಒಲೆ ಕೂಡ ಕೊಳಕಾಗುವ ಸಾಧ್ಯತೆ ಹೆಚ್ಚಿರುತ್ತದೆ.
• ಹಾಲನ್ನು ನೀವು ಬೇಗ ಬೇಗ ಕುದಿಸಿದಾಗ ಹಾಲಿನಲ್ಲಿರುವ ನೀರು (water) ಆವಿಯಾಗಲು ಪ್ರಾರಂಭಿಸುತ್ತದೆ. 
• ಕೊಬ್ಬು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಪೋಷಕಾಂಶಗಳು ಹಾಲಿನಿಂದ ಬೇರ್ಪಡಲು ಶುರುವಾಗುತ್ತವೆ. 

ನೀವು ಹಾಲನ್ನು ಸಣ್ಣ ಅಥವಾ ಮಧ್ಯಮ ಉರಿಯಲ್ಲಿ ಬಿಸಿ (Hot) ಮಾಡಿದ್ರೆ ಹಾಲಿನಲ್ಲಿರುವ ನೀರು ಆವಿಯಾಗುವುದಿಲ್ಲ. ಕಾರ್ಬೋಹೈಡ್ರೇಟ್‌ಗಳು, ಕೊಬ್ಬು ಮತ್ತು ಪ್ರೋಟೀನ್‌ ನಾಶವಾಗುವುದಿಲ್ಲ. ಹಾಲನ್ನು ಯಾವಾಗ್ಲೂ ಮಧ್ಯಮ ಉರಿಯಲ್ಲಿ ಬಿಸಿ ಮಾಡುವುದು ಉತ್ತಮ ಆಯ್ಕೆಯಾಗಿದೆ. ಮಧ್ಯದ ಉರಿಯಲ್ಲಿ ಹಾಲು ನಿಧಾನವಾಗಿ ಮೇಲೆ ಬರುತ್ತದೆ. ಹಾಲು ಉಕ್ಕುವುದನ್ನು ತಡೆಯಬೇಕು ಎಂದಾದ್ರೆ ಹಾಲಿನ ಪಾತ್ರೆ ಮಧ್ಯೆ ಒಂದು ಚಮಚ ಅಥವಾ ಸೌಟನ್ನು ಇಡಿ.

ಹೃದಯಾಘಾತದ ನಂತರ ರೋಗಿಗಳು ಯಾವ ಆಹಾರ ಸೇವಿಸಿದ್ರೆ ಒಳ್ಳೇಯದು?

ಆರೋಗ್ಯ ತಜ್ಞರ ಪ್ರಕಾರ, ನೀವು ಹಾಲನ್ನು ಮಾತ್ರವಲ್ಲ ಯಾವುದೇ ಆಹಾರವನ್ನು ಹೆಚ್ಚಿನ ಶಾಖದಲ್ಲಿ ಬೇಯಿಸುವುದು ಸೂಕ್ತವಲ್ಲ. ಅದರಲ್ಲಿರುವ ಅಗತ್ಯ ಪೋಷಕಾಂಶ ನಾಶಪಡಿಸುತ್ತದೆ. ಹಾಲು ನಮ್ಮ ಆರೋಗ್ಯಕ್ಕೆ ಬಹಳ ಅಗತ್ಯ. ಹಾಲಿನ ಸೇವನೆ ಮಾಡಿದ್ರೆ ಸಾಲದು, ಸರಿಯಾದ ವಿಧಾನದಲ್ಲಿ ಹಾಲಿನ ಸೇವನೆ ಮಾಡಬೇಕು. ಆಗ್ಲೇ ಹಾಲಿನಲ್ಲಿರುವ ಪೋಷಕಾಂಶಗಳ ನಮ್ಮ ದೇಹವನ್ನು ಸೇರುತ್ತವೆ. ಹಾಲನ್ನು ಕುಡಿಯುವ ಮುನ್ನ ನೀವು ಸರಿಯಾಗಿ ಕಾಯಿಸಿದ್ದೀರಾ ಎಂಬುದನ್ನು ಗಮನಿಸಿ. 

ಹಾಲನ್ನು ಬೇಗ ಕಾಯಿಸುವುದು ಮಾತ್ರವಲ್ಲ ಹೆಚ್ಚು ಕುದಿಸುವುದು ಕೂಡ ಒಳ್ಳೆಯದಲ್ಲ. ಹಾಲನ್ನು ನೀವು ಒಂದು ಪ್ರಮಾಣದಲ್ಲಿ ಕುದಿಸಿ ಬಳಕೆ ಮಾಡಬೇಕು. ಹಾಲು ಬಿಸಿಯಾಗ್ತಿದ್ದಂತೆ ಸುತ್ತಮುತ್ತ ಗುಳ್ಳೆಗಳು ಬರಲು ಶುರುವಾಗುತ್ತದೆ. ಈ ಸಮಯದಲ್ಲಿ ನೀವು ಗ್ಯಾಸ್ ಆಫ್ ಮಾಡಿದ್ರೆ ಒಳ್ಳೆಯದು. ನೀವು ಹಾಲನ್ನು ಹೆಚ್ಚು ಕುದಿಸಿದ್ರೆ ಅದ್ರಲ್ಲಿರುವ ಪೋಷಕಾಂಶ ನಾಶವಾಗುತ್ತದೆ. ಹಾಲಿನ ಬಣ್ಣ ಕೂಡ ಬದಲಾಗುತ್ತದೆ. ಹಾಗೆಯೇ ಹಾಲಿನ ರುಚಿಯಲ್ಲೂ ಬದಲಾವಣೆಯನ್ನು ನೀವು ಕಾಣ್ತಿರಿ.  ಹಾಲನ್ನು ಪದೇ ಪದೇ ಬಿಸಿ ಮಾಡುವುದು ಕೂಡ ಒಳ್ಳೆಯ ಅಭ್ಯಾಸವಲ್ಲ ಎನ್ನುತ್ತಾರೆ ತಜ್ಞರು. 

click me!