ಸಣ್ಣಪುಟ್ಟ ವಿಚಾರಕ್ಕೆ ಬೆಟ್ ಕಟ್ಟೋದು, ಚಾಲೆಂಜ್ ಮಾಡೋದು ಇವತ್ತಿನ ಜನರೇಷನ್‌ನ ಕೆಟ್ಟ ಅಭ್ಯಾಸ. ಅದೇನೋ ಮಜ ಸಿಗುತ್ತೆ ಅನ್ನೋ ಕಾರಣಕ್ಕೆ ಹೀಗೆಲ್ಲಾ ಮಾಡ್ತಿರ್ತಾರೆ. ಅದೇ ರೀತಿ ಫ್ರೆಂಡ್ಸ್ ಚಾಲೆಂಜ್ ಮಾಡೋಕೆ ಹೋಗಿ ಇಲ್ಲೊಬ್ಬ ವ್ಯಕ್ತಿ ಜೀವವನ್ನೇ ಕಳೆದುಕೊಂಡಿದ್ದಾನೆ
ಸಾವು ಅನ್ನೋದು ಕರೆಯದೇ ಬರುವ ಅತಿಥಿ. ಯಾವಾಗ, ಯಾವತ್ತು ಯಾರ ಸಾವಾಗುತ್ತೋ ಹೇಳೋಕೆ ಸಾಧ್ಯವಿಲ್ಲ. ಆರೋಗ್ಯವಾಗಿದ್ದವರೂ ಥಟ್ಟಂತ ಹುಷಾರು ತಪ್ಪಿ ಜೀವ ಕಳೆದುಕೊಳ್ಳುತ್ತಾರೆ. ಸುಮ್ನೆ ನಡ್ಕೊಂಡು ಹೋಗ್ತಿದ್ದವರು, ಕುಳಿತಿದ್ದವರು ಜೀವ ಕಳೆದುಕೊಂಡು ಬಿಡುತ್ತಾರೆ. ಅಪಘಾತ, ಆಕಸ್ಮಿಕ ಸಾವುಗಳು ಒಂದೆಡೆಯಾದರೆ ಇನ್ನು ಕೆಲವರು ಏನೇನೂ ಎಡವಟ್ಟು ಮಾಡ್ಕೊಂಡು ಜೀವ ಕಳೆದುಕೊಳ್ಳೋದಿದೆ. ಸಾವು ಅದ್ಯಾವ ರೂಪದಲ್ಲೆಲ್ಲಾ ಬರುತ್ತೋ ಹೇಳೋಕೆ ಸಾಧ್ಯವಿಲ್ಲ. ಆತನ ಪಾಲಿಗೆ ಅದು ಮೊಮೋಸ್ ರೂಪದಲ್ಲಿ ಬಂದು ಜೀವಾನೇ ಕಿತ್ತುಕೊಂಡು ಹೋಯ್ತು.
ಸಣ್ಣಪುಟ್ಟ ವಿಚಾರಕ್ಕೆ ಬೆಟ್ ಕಟ್ಟೋದು, ಚಾಲೆಂಜ್ ಮಾಡೋದು ಇವತ್ತಿನ ಜನರೇಷನ್‌ನ ಕೆಟ್ಟ ಅಭ್ಯಾಸ. ಅದೇನೋ ಮಜ ಸಿಗುತ್ತೆ ಅನ್ನೋ ಕಾರಣಕ್ಕೆ ಹೀಗೆಲ್ಲಾ ಮಾಡ್ತಿರ್ತಾರೆ. ಏನೋ ಕಾರಣವಿರಲ್ಲ. ಏನೋ ಸುಮ್ನೆ ಚಾಲೆಂಜ್ ಮಾಡ್ಕೊಂಡು ಈ ರೀತಿ ಆಪತ್ತು ಮೈ ಮೇಲೆ ಎಳೆದುಕೊಳ್ತಾರೆ. ಅದೇ ರೀತಿ ಫ್ರೆಂಡ್ಸ್ ಜೊತೆ ಚಾಲೆಂಜ್ ಮಾಡೋಕೆ ಹೋಗಿ ಇಲ್ಲೊಬ್ಬ ವ್ಯಕ್ತಿ ಜೀವವನ್ನೇ ಕಳೆದುಕೊಂಡಿದ್ದಾನೆ.
undefined
ಸತ್ತಿದ್ದಾನೆ ಎಂದು ಕುಟುಂಬ ನಂಬಿದ್ದಾಗ, 4 ತಿಂಗಳ ಬಳಿಕ ಮೆಮೋಸ್ ತಿನ್ನುವಾಗ ಪತ್ತೆಯಾದ ವ್ಯಕ್ತಿ!
ಯಾರು ಅತಿ ಹೆಚ್ಚು ಮೊಮೋಸ್ ತಿನ್ತಾರೆ ಅನ್ನೋ ಬಗ್ಗೆ ಸ್ನೇಹಿತರ ಚಾಲೆಂಜ್
ಗೋಪಾಲ್‌ಗಂಜ್‌ನಲ್ಲಿ ಮೊಬೈಲ್ ರಿಪೇರಿ ಅಂಗಡಿ ನಡೆಸುತ್ತಿದ್ದ ವಿಪಿನ್ ಕುಮಾರ್ ಪಾಸ್ವಾನ್ ಎಂದಿನಿಂತೆ ಕೆಲಸಕ್ಕೆ ಹೋಗಿ ಸಂಜೆ ಸ್ನೇಹಿತರನ್ನು ಭೇಟಿಯಾಗಿದ್ದ. ಈ ಸಂದರ್ಭದಲ್ಲಿ ಸ್ನೇಹಿತರು (Friends) ಸಮಯ ಕಳೆಯಲು ಯಾರು ಹೆಚ್ಚು ಮೊಮೋಸ್ ತಿನ್ನುತ್ತಾರೆ ಅನ್ನೋ ಚಾಲೆಂಜ್ ಏರ್ಪಡಿಸಿದ್ದಾರೆ. ಈ ಸಂದರ್ಭದಲ್ಲಿ ವಿಪಿನ್ ಕುಮಾರ್ ಪಾಸ್ವಾನ್ ಅವರು ಮೊಮೋಸ್ ತಿಂದು ನಂತರ ಪ್ರಜ್ಞಾಹೀನರಾಗಿ (Fainted) ಬಿದ್ದು ಕೊನೆಗೆ ಸಾವನ್ನಪ್ಪಿದರು.
ದಿ ಟೆಲಿಗ್ರಾಫ್‌ನಲ್ಲಿನ ವರದಿಯ ಪ್ರಕಾರ ಪಾಸ್ವಾನ್ ಮೊಮೊಸ್ ತಿಂದ ನಂತರ ಪ್ರಜ್ಞಾಹೀನರಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ (Hospital) ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಪಾಸ್ವಾನ್ ಮತ್ತು ಅವನ ಸ್ನೇಹಿತರು ಚಾಲೆಂಜ್‌ನಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಗರಿಷ್ಠ ಸಂಖ್ಯೆಯ ಮೊಮೊಗಳನ್ನು ತಿನ್ನುವ ವ್ಯಕ್ತಿಗೆ 1000 ರೂ. ಬಹುಮಾನ ಎಂದು ಘೋಷಿಸಲಾಗಿತ್ತು. ಹೀಗೆ ಮೊಮೋಸ್ ತಿನ್ನುತ್ತಿದ್ದ ಪಾಸ್ವಾನ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
Viral Video: ರಸ್ತೆ ಬದಿಯಲ್ಲಿ ವಿಶಿಷ್ಟ ಮೊಮೊ ಮಾಡಿ ಫೇಮಸ್ ಆದ ಹುಡುಗಿ
150 ಮೊಮೋಸ್ ತಿಂದು ಅಸ್ವಸ್ಥಗೊಂಡ ಯುವಕ
ಸ್ಥಳೀಯ ಪೊಲೀಸರನ್ನು ಕರೆಸಲಾಯಿತು ಮತ್ತು ವಿಪಿನ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. 'ವಿಪಿನ್ ತನ್ನ ಸ್ನೇಹಿತರೊಂದಿಗೆ ಚಾಲೆಂಜ್ ಸ್ವೀಕರಿಸಿದ ನಂತರ ಹೆಚ್ಚಿನ ಸಂಖ್ಯೆಯ ಮೊಮೊಸ್ ತಿಂದರು. ಅವರು ಅಸ್ವಸ್ಥಗೊಂಡ ನಂತರ ಅವರ ಸ್ನೇಹಿತರು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರು ಅವರು ಸಾವನ್ನಪ್ಪಿದ್ದಾರೆ (Death) ಎಂದು ಘೋಷಿಸಿದ್ದಾರೆ' ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಶಶಿ ರಂಜನ್ ಕುಮಾರ್ ತಿಳಿಸಿದ್ದಾರೆ.
ಆದರೆ ಆತನ ಸ್ನೇಹಿತರು ಆತನನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ವ್ಯಕ್ತಿಯ ತಂದೆ ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ. ಸ್ನೇಹಿತರು ಉದ್ದೇಶಪೂರ್ವಕವಾಗಿ ಮೊಮೊ ತಿನ್ನುವ ಸವಾಲನ್ನು ಪ್ರಸ್ತಾಪಿಸಿದರು ಮತ್ತು ಪಾಸ್ವಾನ್‌ಗೆ ವಿಷವನ್ನು ನೀಡಿದರು. ಇದು ಅಂತಿಮವಾಗಿ ಅವನ ಸಾವಿಗೆ ಕಾರಣವಾಯಿತು ಎಂದು ವಿಪಿನ್ ತಂದೆ ಆರೋಪಿಸಿದ್ದಾರೆ. ಮಾತ್ರವಲ್ಲ, ;ಸಾವಿನ ಬಗ್ಗೆ ನಮಗೂ ತಿಳಿಸಲಿಲ್ಲ. ಕೆಲವರು ಫುಟ್‌ಪಾತ್‌ನಲ್ಲಿ ಶವ ಬಿದ್ದಿರುವುದನ್ನು ನೋಡಿ ನಮಗೆ ಮಾಹಿತಿ ನೀಡಿದರು; ಎಂದು ತಿಳಿಸಿದ್ದಾರೆ. ಸಾವಿಗೆ ಕಾರಣದ ಬಗ್ಗೆ ತಿಳಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ನಾವು ಎಲ್ಲಾ ಆಂಗಲ್‌ನಿಂದ ವಿಷಯದ ತನಿಖೆ ಮಾಡುತ್ತೇವೆ ಎಂದು ಅವರು ಹೇಳಿದರು.