Recipe : ಪೂಜೆ ಆದ್ಮೇಲೆ ಉಳಿಯೋ ವೀಳ್ಯದೆಲೆಯಿಂದ ಚಿತ್ರಾನ್ನ ಮಾಡ್ಬಹುದು ನೋಡಿ!

By Suvarna NewsFirst Published Oct 4, 2023, 4:41 PM IST
Highlights

ವೀಳ್ಯದೆಲೆ ಆರೋಗ್ಯಕ್ಕೆ ಒಳ್ಳೆಯದು. ಅದನ್ನು ಪಾನ್, ಪೂಜೆಗೆ ಬಳಕೆ ಮಾಡೋದು ಮಾತ್ರವಲ್ಲ ಅಡುಗೆ ತಯಾರಿಸಿ ಸೇವನೆ ಮಾಡ್ಬಹುದು. ಬರೀ ತರಕಾರಿ ಚಿತ್ರನ್ನ ತಿಂದು ಬೋರ್ ಆಗಿದೆ ಎನ್ನುವವರು ಇಂದು ಹೊಸ ರೆಸಿಪಿ ಟ್ರೈ ಮಾಡಿ.
 

ವೀಳ್ಯದೆಲೆ ನಿಮಗೆಲ್ಲ ಗೊತ್ತಿರುವಂತೆ ಪೂಜೆಗೆ ಅತ್ಯಗತ್ಯವಾಗಿ ಬೇಕಾಗುವ ಸಾಮಗ್ರಿ. ಪ್ರತಿ ಪೂಜೆಯಲ್ಲೂ ಇದು ಇರ್ಲೇಬೇಕು. ಹಬ್ಬದ ದಿನಗಳಲ್ಲಿ ವೀಳ್ಯದೆಲೆ ಮನೆಯಲ್ಲಿ ಸಾಕಷ್ಟಿರುತ್ತದೆ. ಪೂಜೆಗೆ ಬಳಸಿದ ನಂತ್ರ ಇದಕ್ಕೆ ಅಡಿಕೆ ಹಾಕಿ ನಾವೆಲ್ಲ ಪಾನ್ ರೀತಿಯಲ್ಲಿ ಸೇವನೆ ಮಾಡ್ತೇವೆ. ವೀಳ್ಯದೆಲೆ ಜೊತೆ ಅಡಿಕೆ ಸೇರಿಸಿ, ಊಟವಾದ್ಮೇಲೆ ತಿಂದ್ರೆ, ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ನೀವು ಅದಕ್ಕೆ ಸ್ವೀಟ್ ಬೆರೆಸಿ ಕೂಡ ತಿನ್ನಬಹುದು. ವೀಳ್ಯದೆಲೆ ಬರೀ ಇದಕ್ಕೆ ಮಾತ್ರ ಬಳಕೆಯಾಗೋದಿಲ್ಲ. ಇತ್ತೀಚಿನ ದಿನಗಳಲ್ಲಿ ವೀಳ್ಯದೆಲೆಯ ಅನೇಕ ರೆಸಿಪಿಗಳನ್ನು ನೀವು ನೋಡ್ಬಹುದು. ಪಾನ್ ಐಸ್ ಕ್ರೀಂ ಕೂಡ ಮಾರುಕಟ್ಟೆಗೆ ಬಂದಿದೆ.  

ವೀಳ್ಯದೆಲೆ (Betel) ರುಚಿ ಮಾತ್ರವಲ್ಲ ಆರೋಗ್ಯ (Health) ಕ್ಕೂ ಬಹಳ ಒಳ್ಳೆಯದು. ವೀಳ್ಯದೆಲೆಯನ್ನು ಹಾಗೆಯೇ ಜಗಿದು ತಿಂದ್ರೆ ಯಾವುದೇ ಹಾನಿಯಿಲ್ಲ. ಕೆಮ್ಮು, ನೆಗಡಿ ಸೇರಿದಂತೆ ಅನೇಕ ರೋಗಕ್ಕೆ ಇದನ್ನು ಮನೆ ಮದ್ದಿನ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ನಿಮ್ಮ ಮನೆಯಲ್ಲಿ ವೀಳ್ಯದೆಲೆ ಇದ್ರೆ ಈ ಬಾರಿ ಹೊಸ ರೀತಿಯಲ್ಲಿ ಅದನ್ನು ಬಳಸಿ. ಇಂದು ನಾವೊಂದು ನಿಮಗೆ ತಿಳಿಸ್ತಿರೋ ರೆಸಿಪಿ ಟ್ರೈ ಮಾಡಿ ನೋಡಿ. ವೀಳ್ಯದೆಲೆ ಬಳಸಿ ಚಿತ್ರನ್ನ ಕೂಡ ಮಾಡ್ಬಹುದು. ಹೇಗೆ ಗೊತ್ತಾ?

ಪಂಚಾಮೃತದ ಅದ್ಭುತ ಆರೋಗ್ಯ ಲಾಭಗಳ ಬಗ್ಗೆ ನಿಮಗೆಷ್ಟು ಗೊತ್ತು?

ವೀಳ್ಯದೆಲೆ ಚಿತ್ರನ್ನ (chitranna) ಮಾಡಲು ಬೇಕಾಗುವ ಪದಾರ್ಥ : 
ಒಂದು ಕಪ್ ಅನ್ನ, ಎರಡು ವೀಳ್ಯದೆಲೆ ( ಕರಿ ಎಲೆ ಅಥವಾ ಅಂಬಾಡಿ ಎಲೆ) , ಒಂದು ಚಮಚ ತುಪ್ಪ, ಮೂರು ಮೆಣಸಿನಕಾಯಿ, ಅರ್ಧ ಕಪ್ ತೆಂಗಿನಕಾಯಿ ತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪ. ಒಗ್ಗರಣೆಗೆ ಎರಡು ಚಮಚ ಎಣ್ಣೆ, ಕಾಲು ಚಮಚ ಸಾಸಿವೆ, ಕಾಲು ಚಮಚ ಜೀರಿಗೆ,  ಕಾಲು ಚಮಚ ಉದ್ದಿನಬೇಳೆ, ಕಾಲು ಚಮಚ ಕಡಲೆ ಬೇಳೆ, ಎರಡು ಕೆಂಪು ಮೆಣಸಿನಕಾಯಿ, ಚಿಟಕಿ ಅರಿಶಿನ ಪುಡಿ, ಕರಿಬೇವು,  ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆ ರಸ 

ನಿಮ್ಮ ಯೋಚನಾ ಶಕ್ತಿಯನ್ನೇ ನಿಲ್ಲಿಸುತ್ತೆ ಅಲ್ಟ್ರಾ ಪ್ರೊಸೆಸ್ಡ್ ಆಹಾರ!

ವೀಳ್ಯದೆಲೆ ಚಿತ್ರನ್ನ ಮಾಡುವ ವಿಧಾನ : ಮೊದಲು ವೀಳ್ಯದೆಲೆಯನ್ನು ಚೆನ್ನಾಗಿ ವಾಶ್ ಮಾಡಿ, ಚಿಕ್ಕದಾಗಿ ಕತ್ತರಿಸಿ ಅದನ್ನು ಒಂದು ಬಾಣಲೆಗೆ ಹಾಕಿಕೊಳ್ಳಿ. ಈ ಬಾಣಲೆಯನ್ನು ಗ್ಯಾಸ್ ಮೇಲಿಟ್ಟು, ಗ್ಯಾಸ್ ಹಚ್ಚಿ. ಅದಕ್ಕೆ ಒಂದು ಚಮಚ ತುಪ್ಪವನ್ನು ಹಾಕಿ. ನಂತ್ರ ಮೂರು ಹಸಿಮೆಣಸಿನ ಕಾಯಿಯನ್ನು ಹಾಕಿ. ಈ ಮೂರನ್ನೂ ಚೆನ್ನಾಗಿ ಹುರಿದುಕೊಳ್ಳಿ. ನಂತ್ರ ಒಂದು ಮಿಕ್ಸಿ ಜಾರ್ ಗೆ ತೆಂಗಿನತುರಿ, ಕೊತ್ತಂಬರಿ ಸೊಪ್ಪು ಮತ್ತು ಹುರಿದ ವೀಳ್ಯದೆಲೆಯನ್ನು ಹಾಕಿ ಮಿಕ್ಸಿ ಮಾಡಿಕೊಳ್ಳಿ. ನೀವು ನೀರು ಬೆರೆಸದೆ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. 

ನಂತ್ರ ಮತ್ತೆ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವಿನ ಎಲೆ ಹಾಗೂ ಕೆಂಪು ಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ. ನಂತ್ರ ಚಿಟಕಿ ಅರಿಶಿನ ಹಾಕಿ ಮಿಕ್ಸ್ ಮಾಡಿ. ನಂತ್ರ ಈಗಾಗಲೇ ಸಿದ್ಧವಿರುವ ವೀಳ್ಯದೆಲೆ ಪೇಸ್ಟನ್ನು ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಎರಡು ನಿಮಿಷ ಫ್ರೈ ಅದ್ಮೇಲೆ ಗ್ಯಾಸ್ ಆಫ್ ಮಾಡಿ. ಈ ಮಿಶ್ರಣಕ್ಕೆ ನೀವು ಈಗಾಗಲೇ ಬೇಯಿಸಿಟ್ಟ ಅನ್ನವನ್ನು ಹಾಕಿ, ಅದಕ್ಕೆ ಉಪ್ಪನ್ನು ಹಾಕಿ, ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ರುಚಿ ರುಚಿ ವೀಳ್ಯದೆಲೆ ಚಿತ್ರನ್ನ ಸವಿಯಲು ಸಿದ್ಧ. 

ನೀವು ವೀಳ್ಯದೆಲೆ ಸೇವನೆ ಮಾಡೋದ್ರಿಂದ ನಿಮ್ಮ ಉಸಿರಾಟದ ತೊಂದರೆ ಕಡಿಮೆ ಆಗುತ್ತದೆ. ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದು. ಕೀಲು ನೋವಿಗೂ ಇದನ್ನು ಬಳಸಬಹುದು. 

click me!