
ಅಡುಗೆ ಮನೆ(Kitchen)ಯಲ್ಲಿ ಹೆಚ್ಚು ಬಳಕೆಯಾಗುವ ಪಟ್ಟಿಯಲ್ಲಿ ಸಿಂಕ್ (sink) ಕೂಡ ಸೇರುತ್ತದೆ. ರುಚಿ ರುಚಿಯಾಗಿ ಅಡುಗೆ (Cooking) ಮಾಡುವುದು ಇಷ್ಟ. ಪಾತ್ರೆ ತೊಳೆಯುವುದು ಕಷ್ಟ ಎಂಬುದು ಮಹಿಳೆಯರ ಮಾಮೂಲಿ ಮಾತು. ಅಡುಗೆ ಮಾಡಿದ ಪಾತ್ರೆಗಳಲ್ಲಿನ ಅವಶೇಷಗಳೆಲ್ಲವೂ ಸಿಂಕ್ ಸೇರುತ್ತದೆ. ಇದರಿಂದ ಸಿಂಕ್ ನಲ್ಲಿ ನೀರು (Water)ಹೋಗದೆ ಬ್ಲಾಕ್ ಆಗುತ್ತದೆ. ಸಿಂಕ್ ಸರಿಯಾಗಿ ಸ್ವಚ್ಛಗೊಳಿಸದೆ ಹೋದಲ್ಲಿ ಹಾಗೂ ಸಿಂಗ್ ನ ನೀರು ಸರಿಯಾಗಿ ಹೋಗುವ ಪೈಪ್ (pipe) ಸ್ವಚ್ಛತೆ(Cleaning )ಹಾಗೂ ಬದಲಾವಣೆಗೆ ಗಮನ ನೀಡದೆ ಹೋದಲ್ಲಿ ವಾಸನೆ ಬರಲು ಶುರುವಾಗುತ್ತದೆ. ನೀರು ಬ್ಲಾಕ್ ಆದಾಗ ಅದನ್ನು ಸ್ವಚ್ಛಗೊಳಿಸುವುದು ಕಷ್ಟದ ಕೆಲಸ. ಬ್ಲಾಕ್ ಆದ ಸಿಂಕನ್ನು ಮನೆಯಲ್ಲೇ ಇರುವ ಕೆಲ ವಸ್ತುಗಳ ಸಹಾಯದಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು. ಅದು ಹೇಗೆ ಎನ್ನುತ್ತೀರಾ? ಇಲ್ಲಿದೆ ನಿಮಗಾಗಿಯೇ ಕೆಲವು ಸುಲಭ ಟಿಪ್ಸ್.
ಬಿಸಿ ನೀರು (Hot water) : ಬ್ಲಾಕ್ ಆದ ಸಿಂಕ್ ಅನ್ನು ಸುಲಭವಾಗಿ ಕ್ಲೀನ್ (Clean) ಮಾಡಲು ಬಿಸಿ ನೀರನ್ನು ಬಳಸಬೇಕು. ಬಿಸಿ ನೀರನ್ನು ಸಿಂಕ್ ಗೆ ಸುರಿದಾಗ ಪೈಪ್ ನಲ್ಲಿ ಕುಳಿತ ಗ್ರೀಸ್ ನಂತಹ ಅಂಶಗಳು ಕ್ಷಣಾರ್ಧದಲ್ಲಿ ಸ್ವಚ್ಛವಾಗುತ್ತದೆ. ಒಮ್ಮೆ ನಿಮ್ಮ ಸಿಂಕ್ ಚೀನೀ ಮಣ್ಣಿನಿಂದ ಮಾಡಿದ್ದಾಗಿದ್ದರೆ ಅಥವಾ ಸಿಂಕ್ ಗೆ ಪಿವಿಸಿ ಡ್ರೈನ್ ಗಳನ್ನು ಬಳಸಿದಲ್ಲಿ ಬಿಸಿ ನೀರನ್ನು ಹಾಕಬೇಡಿ. ಏಕೆಂದರೆ ಬಿಸಿ ನೀರು ಪಿವಿಸಿ ಪೈಪ್ (PVC Pipe ) ಅನ್ನು ಮೃದುಗೊಳಿಸುತ್ತದೆ. ನಿಮ್ಮ ಸಿಂಕ್ ಸ್ಟೀಲಿನದ್ದಾದರೆ ನೀವು ಬಿಸಿ ನೀರನ್ನು ಹಾಕಬಹುದು.
ಡ್ರೇನ್ ಸ್ನೇಕ್ (Drain Snake) : ಸತತ ಪರಿಶ್ರಮದ ನಂತರವೂ ನಿಮಗೆ ಸಿಂಕ್ ಬ್ಲಾಕ್ ಅನ್ನು ತೆಗೆಯಲು ಆಗದಿದ್ದಲ್ಲಿ ನೀವು ಡ್ರೇನ್ ಸ್ನೇಕ್ ಅನ್ನು ಬಳಸಬಹುದು. ಡ್ರೇನ್ ಸ್ನೇಕ್ ಕೇಬಲ್ ಅನ್ನು ಸಿಂಕ್ ನ ಪೈಪ್ ಒಳಗೆ ಹಾಕಿ ಡ್ರೇನ್ ಸ್ನೇಕ್ ಹ್ಯಾಂಡಲ್ ಅನ್ನು 3-4 ಬಾರಿ ತಿರುಗಿಸಬೇಕು. ಎಲ್ಲ ಕ್ಲಾಗ್ ಗಳು ಸ್ವಚ್ಛವಾಗುವವರೆಗೂ ಹೀಗೆ ಮಾಡಬೇಕು. ಡ್ರೇನ್ ಸ್ನೇಕ್ ಕೇಬಲ್ ನಿಂದ ಸಿಂಕ್ ಅಲ್ಲಿ ಸಿಕ್ಕಿ ಹಾಕಿಕೊಂಡ ಕಸಗಳನ್ನು ಸುಲಭವಾಗಿ ತೆಗೆಯಬಹುದು.
ವಿನೆಗರ್ ಮತ್ತು ಬೇಕಿಂಗ್ ಸೋಡಾ (Vinegar and baking soda) : ಬ್ಲಾಕ್ ಆದ ಸಿಂಕ್ ಅನ್ನು ಸ್ವಚ್ಛಗೊಳಿಸಲು ಬಿಳಿ ವಿನೆಗರ್ ಮತ್ತು ಸೋಡಾವನ್ನು ಬಳಸಬಹುದು. ಮೊದಲು ಸಿಂಕ್ ಗೆ ಬೇಕಿಂಗ್ ಸೋಡಾ ಹಾಕಬೇಕು. ನಂತರ ಅದಕ್ಕೆ ಒಂದು ಕಪ್ ಬಿಳಿ ವಿನೆಗರ್ ಹಾಕಬೇಕು. ಇವೆರಡನ್ನು ಹಾಕುವುದರಿಂದ ಅವುಗಳ ಮಧ್ಯೆ ರಾಸಾಯನಿಕ ಕ್ರಿಯೆ ನಡೆದು ಸಿಂಕ್ ಪೈಪ್ ಸ್ವಚ್ಛವಾಗುತ್ತದೆ. ಇದಾದ 5 ನಿಮಿಷದ ಬಳಿಕ ಸಿಂಕ್ ಗೆ ಬಿಸಿ ನೀರನ್ನು ಹಾಕಬೇಕು. ಆಗ ಸಿಂಕ್ ಸ್ವಚ್ಛವಾಗುತ್ತದೆ.
ರಬ್ಬರ್ ಕೊಳವೆ : ಅಡುಗೆಮನೆಯ ಸಿಂಕ್ (Kitchen Sink) ಬ್ಲಾಕ್ ಅನ್ನು ತೆಗೆಯಲು ರಬ್ಬರ್ ಕೊಳವೆಯನ್ನು ಬಳಸಬಹುದು. ರಬ್ಬರ್ ಕೊಳವೆಯ ಸಹಾಯದಿಂದ ನಲ್ಲಿ ಮತ್ತು ಪೈಪ್ ಎರಡನ್ನೂ ಜೋಡಿಸಿ. ನಂತರ ನಲ್ಲಿಯ ನೀರನ್ನು 3 ನಿಮಿಷಗಳ ಕಾಲ ಜೋರಾಗಿ ಬಿಡಿ. ಹೀಗೆ ಮಾಡುವುದರಿಂದ ನೀರಿನ ರಭಸಕ್ಕೆ ಕೊಳೆಯೆಲ್ಲ ಸ್ವಚ್ಛವಾಗುತ್ತದೆ. ವಾರದಲ್ಲಿ ಒಮ್ಮೆಯಾದರೂ ಸಿಂಕ್ ಸ್ವಚ್ಛ ಮಾಡುವುದು ಒಳ್ಳೆಯದು. ಸಾಧ್ಯವಿಲ್ಲವೆನ್ನುವವರು 15 ದಿನಗಳಿಗೆ ಒಮ್ಮೆ ಸಿಂಕ್ ಸ್ವಚ್ಛಗೊಳಿಸಬೇಕು. ಇಲ್ಲವಾದರೆ ನೀರು ಹೊರಗೆ ಹೋಗದೆ ಸಮಸ್ಯೆ ಶುರುವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.