
ಪೀರಿಯಡ್ಸ್(Periods) ಹತ್ತಿರ ಬಂದರೆ ಸಾಕು, ಆಗ ಅನುಭವಿಸಬೇಕಿರುವುದನ್ನು ನೆನೆಸಿಕೊಂಡೇ ಸಾಕಷ್ಟು ಹೆಣ್ಮಕ್ಕಳು ಆತಂಕಕ್ಕೊಳಗಾಗುತ್ತಾರೆ. ಮುಟ್ಟು ಎಂದರೆ ಹೊಟ್ಟೆನೋವು, ಸಂಕಟ, ಬೇಧಿ, ಮಲಬದ್ಧತೆ, ಮೂಡ್ ಸ್ವಿಂಗ್ಸ್, ತಲೆನೋವು, ಕಾಲು ನೋವು ಹೀಗೆ ಹಲವಾರು ಕಿರಿಕಿರಿಗಳು. ಹಾಗಂಥ ಇದೇ ನೆಪವೊಡ್ಡಿ ಪ್ರತಿ ತಿಂಗಳು ಮನೆಕೆಲಸಕ್ಕೆ, ಆಫೀಸ್ ಕೆಲಸಕ್ಕೆ ರಜೆ ಹಾಕಲಾಗುವುದಿಲ್ಲವಲ್ಲ.. ಬದಲಿಗೆ ಈ ನೋವು, ಕಿರಿಕಿರಿಗಳಿಂದ ಪಾರಾಗಲು ಏನು ಮಾಡಬಹುದೆಂದು ಕಂಡುಕೊಳ್ಳುವುದು, ಅದರಂತೆ ನಡೆಯುವುದೇ ಜಾಣತನ. ಆ ನಿಟ್ಟಿನಲ್ಲಿ ನಾವು ತೆಗೆದುಕೊಳ್ಳುವ ಆಹಾರದ(food) ಬಗ್ಗೆ ಪ್ರಮುಖವಾಗಿ ಗಮನ ಹರಿಸಬೇಕು. ಋತುಬಂಧದ ಆ ದಿನಗಳಲ್ಲಿ ಈ ಆಹಾರಗಳನ್ನು ಸೇವಿಸುವುದರಿಂದ ನೀವು ಕೊಂಚ ರಿಲ್ಯಾಕ್ಸ್ ಆಗಬಹುದು.
ನೀರು
ಮುಟ್ಟಿನ ದಿನಗಳಲ್ಲಿ ಇತರೆ ದಿನಗಳಿಗಿಂತ ಹೆಚ್ಚಾಗಿಯೇ ನೀರು ಸೇವಿಸಿ. ಪದೇ ಪದೆ ನೀರು ಕುಡಿಯುವುದರಿಂದ ಪೀರಿಯಡ್ಸ್‌ನಲ್ಲಿ ಕಾಣಿಸಿಕೊಳ್ಳುವ ತಲೆನೋವು, ಸಂಕಟ ಕಡಿಮೆಯಾಗುತ್ತದೆ.
ಬಾಳೆಹಣ್ಣು
ಪೀರಿಯಡ್ಸ್ ಸಮಯದಲ್ಲಿ ಡಯಾರಿಯಾ(diarrhea) ಕಾಮನ್. ಬಾಳೆಹಣ್ಣು ಇದಕ್ಕೆ ಉತ್ತಮ ಮದ್ದು. ಬಾಳೆಹಣ್ಣಿನಲ್ಲಿರುವ ಮೆಗ್ನೀಶಿಯಂ, ಪೊಟಾಶಿಯಂ, ಹಾಗೂ ಫೈಬರ್ ನಿಮ್ಮ ಬೊವೆಲ್ ಮೂವ್‌ಮೆಂಟ್ ಸರಿಯಾಗಿ ಆಗುವಂತೆ ಮಾಡುತ್ತದೆ. ಜೊತೆಗೆ ಇದು ಮೂಡ್ ರಿಲ್ಯಾಕ್ಸರ್ ಕೂಡಾ ಹೌದು. ಉತ್ತಮ ಸ್ನಾಯು ರಿಲ್ಯಾಕ್ಸರ್ ಆಗಿರುವ ಮೆಗ್ನೀಶಿಯಂ ಹೊಟ್ಟೆನೋವನ್ನೂ ತಗ್ಗಿಸುತ್ತದೆ. ಕೆಲವರಿಗೆ ಮುಟ್ಟಿನ ದಿನಗಳಲ್ಲಿ ಸಿಕ್ಕಾಪಟ್ಟೆ ಹಸಿವು. ಆ ಹಸಿವನ್ನೂ ನೀಗಿಸುವ ಕೆಲಸ ಬಾಳೆಹಣ್ಣು ಮಾಡುತ್ತದೆ.
Broken heart syndrome: ನಿಮಗಿದ್ಯಾ ಈ ಪ್ರಾಬ್ಲಂ? ಜೋಪಾನ ಮಾಡ್ರೀ ಸ್ವಲ್ಪ
ಶುಂಠಿ
ಶುಂಠಿಯಲ್ಲಿ ಆ್ಯಂಟಿ ಆ್ಯಕ್ಸಿಡೆಂಟ್‌ಗಳು ಹೇರಳವಾಗಿದ್ದು, ಮೈಕೈ ನೋವು, ಮಂಡಿ ನೋವನ್ನು ತಗ್ಗಿಸುವಲ್ಲಿ ಈ ಆ್ಯಂಟಿ ಆಕ್ಸಿಡೆಂಟ್‌ಗಳು ಸಹಕಾರಿ. ಹಾಗಾಗಿ, ಶುಂಠಿ ಶರಬತ್, ಶುಂಠಿ ಟೀ, ಶುಂಠಿ ತಂಬುಳಿಯನ್ನು ಮಾಡಿ ಸೇವಿಸಿ.
ಕಿತ್ತಳೆ ಹಣ್ಣುಗಳು
ಕಿತ್ತಳೆಯಲ್ಲಿ ವಿಟಮಿನ್ ಡಿ ಹಾಗೂ ಕ್ಯಾಲ್ಶಿಯಂ(Calcium) ಅಧಿಕವಾಗಿದ್ದು, ಒಟ್ಟಿಗೆ ಸೇವಿಸಿದಾಗ ನೋವನ್ನು ಶಮನಗೊಳಿಸಿ ಆತಂಕ ಹಾಗೂ ಖಿನ್ನತೆಯಿಂದ ಹೊರತರುತ್ತದೆ. ಇನ್ನು ಸಿಟ್ರಸ್ ಹಣ್ಣುಗಳಾದ(Citrus fruits) ನಿಂಬು, ದಾಳಿಂಬೆ, ದ್ರಾಕ್ಷಿಗಳೆಲ್ಲವೂ ಆರೆಂಜ್‌ನಂತೆಯೇ ಮೂಡನ್ನು ಸರಿಪಡಿಸುತ್ತವೆ. ಜೊತೆಗೆ, ಪೀರಿಯಡ್ಸ್ ಸಂದರ್ಭದ ಸಂಕಟಕ್ಕೆ ಮುಕ್ತಿ ನೀಡುತ್ತದೆ.
ಸಾಲ್ಮೋನ್ (Salmon)
ಸಾಲ್ಮೋನ್ ಮೀನಿನಲ್ಲಿರುವ ಒಮೆಗಾ-3(Omega-3) ಫ್ಯಾಟಿ ಆ್ಯಸಿಡ್‌ನಲ್ಲಿ ಹೇರಳ ಆ್ಯಂಟಿ ಆಕ್ಸಿಡೆಂಟ್ಸ್(Anti oxidents) ಇವೆ. ಇದು ಗರ್ಭಾಶಯವನ್ನು ರಿಲ್ಯಾಕ್ಸ್ ಮಾಡಿ, ನೋವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದರಲ್ಲಿ ಪ್ರೋಟೀನ್ ಹಾಗೂ ವಿಟಮಿನ್ ಬಿ ಇದ್ದು, ಆ ಸಮಯದಲ್ಲಿ ಶಕ್ತಿಕುಂದದಂತೆ ನೋಡಿಕೊಳ್ಳುತ್ತವೆ.
Kithecn Hacks: ಈ 8 ಆಹಾರ ಪದಾರ್ಥಗಳನ್ನು ಎಂದಿಗೂ ಫ್ರೀಜರ್ ನಲ್ಲಿ ಇಡಬೇಡಿ
ಮೊಟ್ಟೆಗಳು(eggs)
ಮೊಟ್ಟೆಯಲ್ಲಿ ಐರನ್, ವಿಟಮಿನ್ಸ್, ಫ್ಯಾಟಿ ಆ್ಯಸಿಡ್ಸ್ ಹಾಗೂ ಪ್ರೋಟೀನ್ ಹೇರಳವಾಗಿದೆ. ಇದು ಪೀರಿಯಡ್ಸ್ ಸಂದರ್ಭದಲ್ಲಿ ಎದುರಾಗುವ ವೀಕ್ನೆಸ್ ಕಡಿಮೆ ಮಾಡುತ್ತದೆ.
ಡಾರ್ಕ್ ಚಾಕೋಲೇಟ್(dark chocolate)
ಮೂಡ್ ಬೂಸ್ಟರ್ ಆಗಿ ಡಾರ್ಕ್ ಚಾಕೋಲೇಟ್‌ಗೆ ಒಳ್ಳೆ ಹೆಸರಿದೆ. ಆರ್ಗ್ಯಾನಿಕ್ ಡಾರ್ಕ್ ಚಾಕೋಲೇಟ್ ನಿಮ್ಮನ್ನು ಪೀರಿಯಡ್ಸ್ ಸಮಯದಲ್ಲಿ ಹೆಚ್ಚು ಕಂಫರ್ಟ್ ಆಗಿರಿಸುತ್ತದೆ. ಆದರೆ ಇತರೆ ಸ್ವೀಟ್ಸ್ ಹಾಗೂ ಪ್ರೊಸೆಸ್ಡ್ ಕ್ಯಾಂಡಿಯಿಂದ ದೂರವಿರಿ. ಏಕೆಂದರೆ, ಆರ್ಟಿಫಿಶಿಯಲ್ ಶುಗರ್ ಹೊಂದಿದ ಚಾಕೋಲೇಟ್‌ಗಳು ಎಂದಿಗೂ ಒಳ್ಳೆಯವಲ್ಲ.
ಹೂಕೋಸು(Cauliflower)
ಹೂಕೋಸಿನಲ್ಲಿ ಫೈಬರ್ ಹಾಗೂ ಐರನ್ ಅಧಿಕವಾಗಿದ್ದು, ಪೀರಿಯಡ್ಸ್‌ನಲ್ಲಿ ಆಗುವ ಬ್ಲೀಡಿಂಗ್‌ನಿಂದ ನಷ್ಟವಾಗುವ ಐರನ್ ಅನ್ನು ತುಂಬಿಕೊಡುತ್ತದೆ. ಹಾಗಾಗಿ, ಪೀರಿಯಡ್ಸ್ ಸಂದರ್ಭದಲ್ಲಿ ಹೂಕೋಸಿನ ಪಲ್ಯ, ಸಾಂಬಾರ್ ಹೆಚ್ಚಾಗಿ ತಯಾರಿಸಿ.
ಇಷ್ಟೇ ಅಲ್ಲದೆ, ಕೆಲವೊಂದು ಆಹಾರ, ಪಾನೀಯಗಳಿಂದ ದೂರ ಉಳಿಯುವುದರಿಂದ ಕೂಡಾ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಅವೆಂದರೆ,
- ಕಾಫಿ, ಟೀ ಸೇವನೆಯಿಂದ ದೂರವಿರಿ.
- ಸಕ್ಕರೆ ಅಂಶ ಹೆಚ್ಚಿರುವ ಆಹಾರಕ್ಕೆ ನೋ ಎನ್ನಿ.
- ಆಹಾರದಲ್ಲಿ ಬಳಸುವ ಉಪ್ಪಿನ ಪ್ರಮಾಣ ಕಡಿಮೆ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.