ರೈಲಿನಲ್ಲಿ ಕಳಪೆ ಆಹಾರ, ಮನೆಯವ್ರಿಗೂ ಇಂಥಾ ಫುಡ್‌ ಕೊಡ್ತೀರಾ..ಅಧಿಕಾರಿಗಳಿಗೆ ಮಹಿಳೆಯ ಕ್ಲಾಸ್‌

By Vinutha PerlaFirst Published Feb 14, 2023, 3:36 PM IST
Highlights

ರೈಲು ನಿಗದಿತ ಸಮಯಕ್ಕಿಂತ ಬೇಗನೇ ಅಥವಾ ತಡವಾಗಿ ಬರುತ್ತದೆ. ರೈಲಿನಲ್ಲಿ ಬಾತ್‌ರೂಮ್‌, ಸಿಂಕ್‌ ಗಲೀಜಾಗಿರುತ್ತದೆ. ಸೀಟಿನಲ್ಲೂ ಧೂಳಿರುತ್ತದೆ, ವಿಂಡೋ ಓಪನ್ ಮಾಡಲು ಆಗುವುದಿಲ್ಲ ಹೀಗೆ ನಾನಾ ರೀತಿಯ ದೂರುಗಳು ರೈಲ್ವೆ ಇಲಾಖೆಗೆ ಬರುತ್ತದೆ. ಹಾಗೆಯೇ ಇಲ್ಲೊಬ್ಬ ಮಹಿಳೆ ಐಆರ್‌ಟಿಸಿಯಲ್ಲಿ ನೀಡುವ ಆಹಾರದ ಗುಣಮಟ್ಟದ ಬಗ್ಗೆ ಟ್ವೀಟ್‌ ಮಾಡಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ.

ದೂರದ ಊರುಗಳಿಗೆ ಹೋಗುವಾಗ ಹೆಚ್ಚಿನವರ ಆಯ್ಕೆ ರೈಲು ಪ್ರಯಾಣ. ಕಂಫರ್ಟೆಬಲ್ ಆಗಿರುತ್ತೆ ಅನ್ನೋ ಕಾರಣಕ್ಕೆ ಬಹುತೇಕರು ಲಾಂಗ್ ರೂಟ್‌ಗೆ ಟ್ರೈನ್ ಟ್ರಾವೆಲ್ ಆಯ್ಕೆ ಮಾಡಿಕೊಳ್ಳುತ್ತಾರೆ. ಕುಳಿತುಕೊಳ್ಳಬಹುದು, ಸುಸ್ತಾದಾಗ ಆರಾಮವಾಗಿ ಮಲಗಬಹುದು ಅನ್ನೋದು ಸಮಾಧಾನ ನೀಡುತ್ತದೆ. ಉಳಿದ ಪ್ರಯಾಣದ ವಿಧಗಳಿಗೆ ಹೋಲಿಸಿದರೆ ರೈಲು ಪ್ರಯಾಣ ಸ್ಪಲ್ಪ ಚೀಪ್ ಸಹ ಆಗಿರುವುದರಿಂದ ಬಹುತೇಕರು ರೈಲು ಟಿಕೆಟ್ ಬುಕ್ ಮಾಡಿಕೊಳ್ಳುತ್ತಾರೆ. ಬಾತ್‌ರೂಮ್‌ಗೆ ಹೋಗಬಹುದು, ಫುಡ್ ಆರ್ಡರ್ ಮಾಡಿ ತಿನ್ನಬಹುದು, ಆರಾಮವಾಗಿ ಮಲಗಬಹುದು ಎಂದು ಅಂದುಕೊಳ್ಳುತ್ತಾರೆ. ದೇಶದ ಜನಸಂಖ್ಯೆಯ ಸರಿ ಸುಮಾರು ಅರ್ಧದಷ್ಟು ಜನರು ರೈಲಿನಲ್ಲಿ ಸಂಚರಿಸುತ್ತಾರೆಯಾದರೂ ಅದರಲ್ಲಿರುವ ವ್ಯವಸ್ಥೆಗಳ ಬಗ್ಗೆ ಆಗಾಗ ದೂರು ಬರುತ್ತಲೇ ಇರುತ್ತದೆ.

ರೈಲು (Train) ನಿಗದಿತ ಸಮಯಕ್ಕಿಂತ ಬೇಗನೇ ಅಥವಾ ತಡವಾಗಿ ಬರುತ್ತದೆ. ರೈಲಿನಲ್ಲಿ ಬಾತ್‌ರೂಮ್‌, ಸಿಂಕ್‌ ಗಲೀಜಾಗಿರುತ್ತದೆ. ಸೀಟಿನಲ್ಲೂ ಧೂಳಿರುತ್ತದೆ, ವಿಂಡೋ ಓಪನ್ ಮಾಡಲು ಆಗುವುದಿಲ್ಲ ಹೀಗೆ ನಾನಾ ರೀತಿಯ ದೂರುಗಳು (Complaints) ರೈಲ್ವೆ ಇಲಾಖೆಗೆ ಬರುತ್ತದೆ. ಹಾಗೆಯೇ ಇಲ್ಲೊಬ್ಬ ಮಹಿಳೆ (Women) ಐಆರ್‌ಟಿಸಿಯಲ್ಲಿ ನೀಡುವ ಆಹಾರದ ಗುಣಮಟ್ಟದ ಬಗ್ಗೆ ಟ್ವೀಟ್‌ ಮಾಡಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ.

Latest Videos

ರೈಲಿನಲ್ಲಿ ಪ್ರಯಾಣಿಸುವಾಗ ವಾಟ್ಸಾಪ್‌ನಲ್ಲೇ ಆಹಾರ ಆರ್ಡರ್‌ ಮಾಡಿ: ಐಆರ್‌ಸಿಟಿಸಿ ಹೊಸ ಸೇವೆ

ರೈಲು ಪ್ರಯಾಣದಲ್ಲಿ ಊಟ, ತಿಂಡಿ, ಸ್ನ್ಯಾಕ್ಸ್‌, ಕೂಲ್‌ ಡ್ರಿಂಕ್ಸ್‌ಗಳಿಗೇನೂ ಬರವಿಲ್ಲ. ಆಗಾಗ ಬರುತ್ತಲೇ ಇರುತ್ತದೆ. ಬ್ರೇಕ್‌ಫಾಸ್ಟ್‌ಗೆ, ರಾತ್ರಿಯ ಊಟಕ್ಕೆ ಮೊದಲೇ ಆರ್ಡರ್‌ ಪಡೆದುಕೊಂಡು ನಿಗದಿತ ಸಮಯಕ್ಕೆ ಬಂದು ಆಹಾರ (Food)ವನ್ನು ವಿತರಿಸುತ್ತಾರೆ. ಅನ್ನ ಸಾಂಬಾರ್‌, ಬಿರಿಯಾನಿ, ಥಾಲಿ ಮೊದಲಾದವು ಲಭ್ಯವಿರುತ್ತದೆ. ಇದರಲ್ಲಿ ದೊರಕೋ ಆಹಾರದ ಬಗ್ಗೆ ಪ್ರಯಾಣಿಕರು ಆಗಾಗ ಕಂಪ್ಲೇಂಟ್ ಮಾಡುತ್ತಲೇ ಇರುತ್ತಾರೆ. ಸದ್ಯ ಮಹಿಳೆಯೊಬ್ಬರು ಆಹಾರದ ಗುಣಮಟ್ಟದ (Quality) ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇಂಥಾ ಆಹಾರವನ್ನು ನೀವು ನಿಮ್ಮ ಮನೆಮಂದಿಗೆ ನೀಡಲು ಸಿದ್ಧರಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಪ್ರಯಾಣಿಕರು ಮಾಡಿರುವ ಟ್ವೀಟ್‌ನಲ್ಲೇನಿದೆ ?
ಭೂಮಿಕಾ ಎಂಬ ಟ್ವಿಟ್ಟರ್ ಬಳಕೆದಾರರು ಅರ್ಧ ತಿಂದ ಊಟದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಐಆರ್‌ಸಿಟಿಸಿಯಲ್ಲಿ ಪ್ರಯಾಣಿಕರಿಗೆ ನೀಡುವ ಆಹಾರದ ಗುಣಮಟ್ಟದ ಬಗ್ಗೆ ಗಮನಹರಿಸಲು ವಿಫಲವಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ನೀವು ಎಂದಾದರೂ ರೈಲಿನಲ್ಲಿ ವಿತರಿಸುವ ಆಹಾರದ ಗುಣಮಟ್ಟ ನೋಡಿದ್ದೀರಾ @IRCTCofficial. ನಿಮ್ಮ ಗ್ರಾಹಕರಿಗೆ ಕೆಟ್ಟ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ನಿಮ್ಮ ಸ್ವಂತ ಕುಟುಂಬ ಮತ್ತು ಮಕ್ಕಳಿಗೆ ಇಂತಹ ಕೆಟ್ಟ ಗುಣಮಟ್ಟದ ಆಹಾರವನ್ನು ನೀವು ನೀಡುತ್ತೀರಾ ? ಇದು ಕೈದಿಗಳಿಗೆ ನೀಡುವ ಆಹಾರದಂತಿದೆ.ಆದರೆ ನೀವು ನಿಮ್ಮ ಗ್ರಾಹಕರಿಗೆ ಅದೇ ಕಳಪೆ ಗುಣಮಟ್ಟದ ಆಹಾರವನ್ನು ನೀಡುತ್ತಿದ್ದೀರಿ. ಟಿಕೆಟ್ ದರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Train Travel: ಚಳಿಗಾಲದಲ್ಲೂ ಎಸಿ ಕೋಚ್ ಗೆ ಯಾಕೆ ನೀಡ್ಬೇಕು ಹೆಚ್ಚಿನ ಹಣ..!

'ಈ ಪೋಸ್ಟ್ ಯಾವುದೇ IRCTC ರೈಲು ಸಿಬ್ಬಂದಿಯನ್ನು ಗುರಿಯಾಗಿಸಿ ಮಾಡಿರುವುದಲ್ಲ. ಇದು ಆಹಾರ ಸಿಬ್ಬಂದಿಯವರಿಂದ ಆಗಿರುವ ತಪ್ಪು ಅಲ್ಲ. ಅವರು ನಮಗೆ IRCTC ಆಹಾರವನ್ನು ತಲುಪಿಸುವ ಮೂಲಕ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ' ಎಂದು ಮಹಿಳೆ ಹೇಳಿದ್ದಾರೆ. ಟ್ವೀಟ್ ಸಾಕಷ್ಟು ವೈರಲ್ ಆಗಿದ್ದು, ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಒಬ್ಬ ವ್ಯಕ್ತಿ, 'ಆಹಾರವು ರೈಲು ಸೇವೆಗಳಂತೆಯೇ ಕರುಣಾಜನಕವಾಗಿದೆ, ರೈಲಿನ ಅಪ್ಲಿಕೇಶನ್ ಗುಣಮಟ್ಟ ಕೆಟ್ಟದಾಗಿದೆ, ವೆಬ್‌ಸೈಟ್ ಒಂದು ದುಃಸ್ವಪ್ನವಾಗಿದೆ, ಶುಲ್ಕಗಳು ಬೃಹತ್ ಪ್ರಮಾಣದಲ್ಲಿವೆ ಮತ್ತು ಗುಣಮಟ್ಟವು ತುಂಬಾ ಕೆಟ್ಟದಾಗಿದೆ' ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಶತಾಬ್ದಿ ಮತ್ತು ರಾಜಧಾನಿಯಂತಹ ರೈಲುಗಳು ಸಹ ಆಹಾರ ಸೇವೆಯನ್ನು ಕಡ್ಡಾಯವಾಗಿ ನಿಲ್ಲಿಸಿವೆ. ಆದರೆ ಟಿಕೆಟ್ ಬೆಲೆಗಳು ನಿಯಮಿತವಾಗಿ ಹೆಚ್ಚುತ್ತಿವೆ. IRCTCಗೆ ಅಂತಹ ಆಹಾರವನ್ನು ನೀಡಲು ನಾಚಿಕೆಯಾಗಬೇಕು' ಎಂದು ತಿಳಿಸಿದ್ದಾರೆ. ಇನ್ನು ಕೆಲವೊಬ್ಬರು ಮನೆಯಿಂದಲೇ ಊಟ ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದರು. 

ರೈಲ್ವೇ ಅಧಿಕಾರಿಗಳು ಸಹ ಭೂಮಿಕಾ ಟ್ವೀಟ್ ನ್ನು ಗಮನಿಸಿದ್ದಾರೆ. ಆಕೆಯ ಟ್ವೀಟ್‌ಗೆ ಪ್ರತಿಕ್ರಿಕೆ ನೀಡಿ, 'ಸರ್, ದಯವಿಟ್ಟು ಪಿಎನ್‌ಆರ್ ಮತ್ತು ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳಿ' ಎಂದಿದ್ದಾರೆ.

Have you ever tasted your own food ? Will you ever give such bad quality and taste to your own family and children? It tastes like food for prisoners. The ticket prices are increasing day by day but you are providing same bad quality food to your customers. pic.twitter.com/GJYJ0eWfXP

— Bhumika (@thisisbhumika)
click me!