ಬೆಂಗಳೂರಲ್ಲಿ ನಾಯಿದು ಕಬಾಬ್‌, ನಾಯಿದು ಮಂಚೂರಿ ಮಾರಾಟ: ಈ ಹೋಟೆಲ್‌ಗೆ ಹೋಗೋ ಮುನ್ನ ಎಚ್ಚರ!

By Sathish Kumar KH  |  First Published Oct 15, 2023, 2:36 PM IST

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ನಾಯಿದು ಕಬಾಬ್‌, ನಾಯಿದು ಮಂಚೂರಿ ಮಾಂಸಾಹಾರ ಊಟವನ್ನು ಮಾರಾಟ ಮಾಡಲಾಗುತ್ತದೆ. 


ಬೆಂಗಳೂರು (ಅ.15): ಸಾಮಾನ್ಯವಾಗಿ ಹೋಟೆಲ್‌ಗೆ ಹೋಗಿ ಮಾಂಸಾಹಾರದ ಊಟವನ್ನು ಆರ್ಡರ್‌ ಮಾಡಿದಾಗ ಅದರಲ್ಲಿ ಇಲಿ, ಜಿರಳೆ ಅಥವಾ ಹಲ್ಲಿ ಇತ್ತಾದಿ ಕೀಟಗಳು ಬಿದ್ದಿರುವುದನ್ನು ನಾವು ನೋಡಿರುತ್ತೇವೆ. ಮುಂದುವರೆದು ನಾವು ಕೇಳಿದ ಚಿಕನ್‌, ಮಟನ್‌ ಬದಲಾಗಿ ಬೇರೆ ಮಾಂಸದ ಆಹಾರವನ್ನೂ ಕೊಟ್ಟಿರುವುದು ಗಮನಕ್ಕೆ ಬಂದಿರುತ್ತದೆ. ಆದರೆ, ಬೆಂಗಳೂರಿನ ಹೊರ ವಲಯ ಹೊಸೂರು ರಸ್ತೆಯ ಹೋಟೆಲೊಂದರಲ್ಲಿ ನಾಯಿದು ಕಬಾಬ್‌, ನಾಯಿದು ಮಂಚೂರಿ ಹಾಗೂ ನಾಯಿದು ನೂಡಲ್ಸ್‌ ಮಾರಾಟ ಮಾಡಲಾಗುತ್ತಿದೆ.

ಹೌದು, ಈಗಾಗಲೇ ಹೋಟೆಲ್‌ಗಳಲ್ಲಿ ಮಾಂಸಾಹಾರ ಊಟ ಮಾಡುವಾಗ ನಿಮಗೆ ಗೊತ್ತಿರುವ ಹೋಟೆಲ್‌ಗೆ ಹೋಗಬೇಕು ಎಂದು ಹಲವರು ನಿಮಗೆ ಸಲಹೆಯನ್ನೂ ಕೊಟ್ಟಿರಬಹುದು. ಇನ್ನು ಕೋಳಿ, ಕುರಿ, ಮೀನು, ಮೊಟ್ಟೆ ಆಹಾರದಲ್ಲಿ ಕೆಲವು ವ್ಯತ್ಯಾಸ ಉಂಟಾಗುವುದನ್ನು ನಾವೂ ಸ್ವತಃ ಅನುಭವಿಸಿರುತ್ತೇವೆ. ಆದರೆ, ಬೆಂಗಳೂರು ಸೇರಿದಂತೆ ಹಲವು ಪಟ್ಟಣಗಳಲ್ಲಿ ಚಿಕನ್‌, ಮಟನ್‌ ಆಹಾರವನ್ನು ಆರ್ಡರ್‌ ಮಾಡಿದಾಗ ಅದರಲ್ಲಿ ಹಂದಿ ಮಾಂಸ ಅಥವಾ ಬೇರಾವುದೇ ಮಾಂಸಾಹಾರ ಮಿಶ್ರಣ ಮಾಡಿ ಕೊಟ್ಟಿದ್ದಾರೆ ಎಂಬ ಅನುಮಾನಗಳೂ ಕೂಡ ಕಂಡುಬಂದಿರುತ್ತದೆ.

Tap to resize

Latest Videos

undefined

ಟಿವಿ ರಿಮೋಟ್‌ಗಾಗಿ ಮಕ್ಕಳ ಕಿತ್ತಾಟ ಬಿಡಿಸಲು, ಕತ್ತರಿ ಎಸೆದ ತಂದೆ: ಕುತ್ತಿಗೆಗೆ ಕತ್ತರಿ ಸಿಕ್ಕಿಕೊಂಡು ಮಗ ಸಾವು

ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಬೆಂಗಳೂರಿನ ಹೊಸೂರು ಮುಖ್ಯರಸ್ತೆಯಲ್ಲಿರುವ ನಾಯಿಡು ಕಿಚನ್ಸ್‌ ಹೋಟೆಲ್‌ ಒಂದರಲ್ಲಿ ನಾಯಿದು ನೂಡಲ್ಸ್‌, ನಾಯಿದು ಫ್ರೈಡ್‌ ರೈಸ್, ನಾಯಿದು ಮಂಚುರಿ ಹಾಗೂ ನಾಯಿದು ಕಬಾಬ್‌ ಸಿಗುತ್ತದೆ. ಆದರೆ, ಇದು ಬೋರ್ಡ್‌ನಲ್ಲಿ ಇರುವ ಮೆನು ಆಗಿದೆ. ನಾಯ್ಡು ಕಿಚನ್ಸ್‌ನಲ್ಲಿ ಸ್ಪೆಷನ್‌ ಮೆನು ಸಿದ್ಧಪಡಿಸಲಾಗಿದೆ. ನಾಯ್ಡು ಹೋಟೆಲ್‌ನ ಇಂಗ್ಲೀಷ್‌ ಮೆನುವಿನ ಪಟ್ಟಿಯನ್ನು ಕನ್ನಡಕ್ಕೆ ಗೂಗಲ್‌ ಟ್ರಾನ್ಸ್‌ಲೇಟ್‌ ಮಾಡಲಾಗಿದೆ. ಆದ್ದರಿಂದ Naidu's Kitchen ನಾಯ್ಡು ಕಿಚನ್‌ ಅನ್ನು ಟ್ರಾನ್ಸ್‌ಲೇಟ್‌ ಮಾಡಿದಾಗ ನಾಯಿದು ಕಿಚನ್‌ ಎಂದು ತೋರಿಸಿದೆ. ಆದರೆ, ಅಲ್ಲಿನ ಹೋಟೆಲ್‌ ಮಾಲೀಕರಿಗೆ ಕನ್ನಡ ಬಾರದ ಹಿನ್ನೆಲೆಯಲ್ಲಿ ಬೋರ್ಡ್‌ನಲ್ಲಿ ನಾಯಿದು ಕಬಾಬ್‌, ಮಂಚೂರಿ ಎಂದು ಮೆನು ಪಟ್ಟಿ ಹಾಕಲಾಗಿದೆ.

ಕ್ರಿಕೆಟ್​ ಗೆಲುವಿಗೆ ಹರ್ಷಿಸುತ್ತಲೇ ರಮ್ಯಾ ಅಸಮಾಧಾನ: ದೇಶದ ಹೆಸ್ರು ಕೆಡಿಸೋಕೇ ಕಾಯ್ತಿರ್ತೀರಾ ಎಂದ ನೆಟ್ಟಿಗರು!

ಸಾಮಾಜಿಕ ಜಾಲತಾಣದಲ್ಲಿ ನಾಯಿದು ಕಬಾಬ್‌ ಫೋಟೊ ವೈರಲ್‌: ಬೆಂಗಳೂರಿನ ಹೊರ ವಲಯದ ಹೊಸೂರು ರಸ್ತೆಯಲ್ಲಿರುವ ನಾಯ್ಡುಸ್ ಕಿಚನ್‌ನ ನಾಯಿದು ಕಬಾಬ್‌, ನಾಯಿದು ಮಂಚೂರಿ ಸೇರಿದಂತೆ ಹಲವು ಮೆನು ಪಟ್ಟಿಯನ್ನು ಹಾಕಿರುವ ಹೋಟೆಲ್‌ ಬೋರ್ಡ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನು ಪ್ರತಿ ಭಾನುವಾರ ಸೇರಿದಂತೆ ಹಲವು ರಜಾ ದಿನಗಳಲ್ಲಿ ಫೋಟೋ ಹಂಚಿಕೊಂಡು ವೈರಲ್‌ ಮಾಡಲಾಗುತ್ತಿದೆ. ಈಗ ಗೂಗಲ್‌ನಲ್ಲಿ ನಾಯ್ಡು ಬಿರಿಯಾನಿ ಎಂದು ಟ್ರಾನ್ಸ್‌ಲೇಟ್‌ ಆಗುತ್ತದೆ. ಆದರೆ, ಕನ್ನಡ ಬಾರದಿರುವವರು ಕನ್ನಡಿಗ ಗ್ರಾಹಕರನ್ನು ಸೆಳೆಯಲು ಈ ಪ್ರಯತ್ನವನ್ನು ಮಾಡಿದ್ದು, ಒತ್ತಕ್ಷರದ ಜ್ಞಾನವಿಲ್ಲದ ಕಾರಣ ಬೋರ್ಡ್‌ನಲ್ಲಿ ತಪ್ಪಾಗಿ ಮುದ್ರಿಸಲಾಗಿದೆ.

click me!