ಸ್ವಿಗ್ವೀಯಲ್ಲಿ ಫುಡ್ ಆರ್ಡರ್‌ ಮಾಡಿದ ಬೆಂಗಳೂರಿನ ವ್ಯಕ್ತಿಗೆ ಶವರ್ಮಾದ ಜೊತೆ ಸಿಕ್ತು ಮೆಟಲ್‌ ಪೀಸ್!

By Vinutha PerlaFirst Published Jan 13, 2024, 3:37 PM IST
Highlights

ಸ್ವಿಗ್ಗಿ ಝೊಮೆಟೋಗಳ ಫುಡ್ ಡೆಲಿವರಿಯಲ್ಲಿ ಆಗಾಗ ಏನಾದರೊಂದು ಎಡವಟ್ಟು ಆಗೋದು ಹೊಸ ವಿಚಾರವೇನಲ್ಲ. ಕೆಲವೊಮ್ಮೆ ಆಹಾರದಲ್ಲಿ ಸತ್ತ ಜಿರಳೆ, ನೊಣ ಹೀಗೆ ಏನಾದರೂ ಸಿಗುವುದೂ ಇದೆ. ಹಾಗೆಯೇ ಬೆಂಗಳೂರಿನ ಗ್ರಾಹಕರೊಬ್ಬರಿಗೆ ಸ್ವಿಗ್ಗಿಯ ಪಾರ್ಸೆಲ್‌ ಓಪನ್ ಮಾಡಿ ನೋಡಿದಾಗ ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಅದರಲ್ಲಿ ಇದ್ದಿದ್ದೇನು?

ಬೆಂಗಳೂರು: ಸ್ವಿಗ್ಗಿ ಝೊಮೆಟೋಗಳ ಫುಡ್ ಡೆಲಿವರಿಯಲ್ಲಿ ಆಗಾಗ ಏನಾದರೊಂದು ಎಡವಟ್ಟು ಆಗೋದು ಹೊಸ ವಿಚಾರವೇನಲ್ಲ. ಆರ್ಡರ್ ಮಾಡಿದ ಗಂಟೆಗಳ ನಂತರ ಪಾರ್ಸೆಲ್ ಮನೆ ರೀಚ್ ಆಗುವುದು, ವೆಜ್ ಆರ್ಡರ್ ಮಾಡಿದವರಿಗೆ ನಾನ್‌ವೆಜ್‌ ಆರ್ಡರ್ ಸಿಗುವುದು ಹೀಗೆ ಏನಾದರೊಂದು ಎಡವಟ್ಟು ಆಗ್ತಾನೆ ಇರುತ್ತೆ. ಸಾಲದ್ದಕ್ಕೆ ಆಹಾರದಲ್ಲಿ ಸತ್ತ ಜಿರಳೆ, ನೊಣ ಹೀಗೆ ಏನಾದರೂ ಸಿಗುವುದೂ ಇದೆ. ಹಾಗೆಯೇ ಬೆಂಗಳೂರಿನ ಗ್ರಾಹಕರೊಬ್ಬರಿಗೆ ಸ್ವಿಗ್ಗಿಯ ಪಾರ್ಸೆಲ್‌ ಓಪನ್ ಮಾಡಿ ನೋಡಿದಾಗ ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಅದರಲ್ಲಿ ಇದ್ದಿದ್ದೇನು?

ಬೆಂಗಳೂರಿನ ವ್ಯಕ್ತಿ ತಾವು ಸ್ವಿಗ್ಗಿಯಲ್ಲಿ ತರಿಸಿದ ಆಹಾರದ ಪೊಟ್ಟಣವನ್ನು ಓಪನ್ ಮಾಡಿದಾಗ ಅದರಲ್ಲಿ ಲೋಹದ ತುಂಡು ಸಿಕ್ಕಿದೆ. ಸ್ವಿಗ್ಗಿಯ ಆನ್‌ಲೈನ್‌ ಫ್ಲಾಟ್‌ಫಾರ್ಮ್‌ನಲ್ಲಿ ಆರ್ಡರ್‌ ಮಾಡಿದ ಶವರ್ಮಾದಲ್ಲಿ ಗ್ರಾಹಕರು ಮೆಟಲ್‌ ಪೀಸ್‌ನ್ನು ಕಂಡುಕೊಂಡಿದ್ದಾರೆ. ಈ ಬಗ್ಗೆ ವ್ಯಕ್ತಿ ರೆಡ್ಡಿಟ್‌ನಲ್ಲಿ ಸ್ವಿಗ್ಗೀ ಬಿಲ್ ಮತ್ತು ಮೆಟಲ್‌ ಪೀಸ್ ಫೋಟೋವನ್ನು ಹಾಕಿ ಪೋಸ್ಟ್ ಮಾಡಿದ್ದಾರೆ. 

ಬೆಂಗಳೂರಿನ ವ್ಯಕ್ತಿ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ಸಿಕ್ತು ಜೀವಂತ ಬಸವನ ಹುಳು!

ದೂರು ನೀಡಿದ್ದಕ್ಕೆ 50 ರೂ. ರಿಫಂಡ್ ಮಾಡಿ ಸುಮ್ಮನಾದ ಸ್ವಿಗ್ಗಿ
ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಶವರ್ಮಾದಲ್ಲಿ ಲೋಹದ ತುಂಡು ಸಿಕ್ಕಿದೆ ಎಂದು ಬೆಂಗಳೂರಿನ ಗ್ರಾಹಕ ಬರೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಕಂಪ್ಲೇಟ್‌ ನೀಡಿದರೂ ಸ್ವಿಗ್ಗಿ ಈ ದೂರನ್ನು ಲಘುವಾಗಿ ಪರಿಗಣಿಸಿದ ಎಂದಿದ್ದಾರೆ. 'ಸ್ವಿಗ್ಗಿ ಮೂಲಕ ಆರ್ಡರ್ ಮಾಡಿದ್ದ ಶವರ್ಮಾದಲ್ಲಿ ಲೋಹದ ತುಂಡು ಸಿಕ್ಕಿತು ಎಂದು ನಾನು ದೂರು ಸಲ್ಲಿಸಿದ್ದೆ. ಆದರೆ ಸ್ವಿಗ್ಗಿಯವರು ಈ ವಿಷಯವನ್ನು ತುಂಬಾ ಲಘುವಾಗಿ ಪರಿಗಣಿಸಿದಂತಿದೆ. ಕೇವಲ 50 ರೂಪಾಯಿಗಳನ್ನು ಮರುಪಾವತಿಸುವುದಾಗಿ ಹೇಳಿದರು' ಎಂದು ವ್ಯಕ್ತಿ ತಿಳಿಸಿದ್ದಾರೆ.

ರೆಡ್ಡಿಟ್‌ನಲ್ಲಿ, ವ್ಯಕ್ತಿ ಈ ವಾರದ ಆರಂಭದಲ್ಲಿ 'ಸ್ಟರ್ಲಿಂಗ್‌ಕ್ರೈಸಸ್' ಎಂಬ ಹೆಸರಿನ ತನ್ನ ಖಾತೆಯಿಂದ ಈ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ. ಬಿಲ್‌ನ ಚಿತ್ರದೊಂದಿಗೆ, ಅವರು ಲೋಹದ ತುಂಡು ಮತ್ತು ಅವರು ಆರ್ಡರ್ ಮಾಡಿದ ಶವರ್ಮಾದ ಬಿಲ್‌ನ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಪೋಸ್ಟ್, Swiggy ಗ್ರಾಹಕ ಸೇವೆಯೊಂದಿಗೆ ಅವರ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು ಸಹ ಒಳಗೊಂಡಿದೆ.

ಸ್ವಿಗ್ಗಿ ಫುಡ್ ಆರ್ಡರ್ ಮಾಡಿದ್ದನ್ನು 6 ಡೆಲಿವರಿ ಹುಡುಗ್ರು ತರೋದಾ?

'ಬೆಂಗಳೂರಿನ ನಾಗವಾರದ ಅಬ್ಸೊಲ್ಯೂಟ್ ಶವರ್ಮಾ (ಜೆಎಂಜೆ ಆಸ್ಪತ್ರೆ ಹತ್ತಿರ)ದಿಂದ ಶವರ್ಮಾವನ್ನು ಆರ್ಡರ್ ಮಾಡಿದ್ದೆ. ನಾನು ಅದನ್ನು ಸ್ವಿಗ್ಗಿ ಮೂಲಕ ಆರ್ಡರ್ ಮಾಡಿದ್ದೆ. ಆದರೆ ನಾನು ತಿನ್ನಲು ಪ್ರಾರಂಭಿಸಿದಾಗ ಏನೋ ಗಟ್ಟಿಯಾಗಿರುವುದು ಸಿಕ್ಕಿತು. ಅದು ಏನೆಂದು ನಾನು ಪರೀಕ್ಷಿಸಿದಾಗ ಶವರ್ಮಾ ತಯಾರಿಸಲು ಬಳಸುವ ಫ್ಲೇಮ್ ಗ್ರಿಲ್‌ ಆಗಿತ್ತು' ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

'ಸ್ವಿಗ್ಗಿ ಗ್ರಾಹಕರ ಏಜೆಂಟ್‌ಗೆ ಈ ವಿಷಯವಾಗಿ ಹೇಳಿದಾಗ ತುಂಬಾ ಲಘುವಾಗಿ ತೆಗೆದುಕೊಳ್ಳುವುದನ್ನು ನೋಡಿ ನನಗೆ ತುಂಬಾ ಆಘಾತವಾಯಿತು. ಈ ಅನ್ಯಾಯದ ವಿರುದ್ಧ ಕಾನೂನುಬದ್ಧವಾಗಿ ಹೋರಾಡಲು ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಲು ನನಗೆ ಏನಾದರೂ ಮಾರ್ಗವಿದೆಯೇ, ಅವರು ಖಂಡಿತವಾಗಿಯೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರಾ' ಎಂದು ಗ್ರಾಹಕರು ಆನ್‌ಲೈನ್‌ನಲ್ಲಿ ಪ್ರಶ್ನಿಸಿದ್ದಾರೆ.

click me!