ಕ್ಲೌಡ್ ಕಿಚನ್ ಪ್ರಸಿದ್ಧಿ ದಿನೇ ದಿನೇ ಹೆಚ್ಚಾಗ್ತಿದೆ. ಜನರು ಕ್ಲೌಡ್ ಕಿಚನ್ ಆಹಾರ ಇಷ್ಟಪಡ್ತಿದ್ದಾರೆ. ಆದ್ರೆ ಅಲ್ಲಿನ ಸ್ವಚ್ಛತೆ ಬಗ್ಗೆ ಈಗ ಚರ್ಚೆ ಶುರುವಾಗಿದೆ. ರೆಡ್ಡಿಟ್ ನಲ್ಲಿ ಪೋಸ್ಟ್ ಆದ ಒಂದು ಫೋಟೋ ಆಹಾರ ಪ್ರೇಮಿಗಳ ಕೋಪಕ್ಕೆ ಕಾರಣವಾಗಿದೆ.
ಜನರು ಸಿಕ್ಕಪಟ್ಟೆ ಬ್ಯುಸಿಯಾಗಿದ್ದಾರೆ. ಕೆಲಸದ ಒತ್ತಡದಿಂದಾಗಿ ಮನೆಯಲ್ಲಿ ಅಡುಗೆ ಮಾಡಿ ಬಾಕ್ಸ್ ಗೆ ಹಾಕಿಕೊಂಡು ಬರೋದು ಅವರಿಗೆ ಕಷ್ಟವಾಗಿದೆ. ಇನ್ನು ಕೆಲವರಿಗೆ ಅಡುಗೆ ಮಾಡಲು ಬೇಸರ. ಮತ್ತೆ ಕೆಲವರಿಗೆ ಮನೆಗಿಂತ ಹೊರಗಿನ ತಿಂಡಿ ಇಷ್ಟವಾಗುತ್ತದೆ. ಈ ಎಲ್ಲ ಕಾರಣಕ್ಕೆ ರೆಸ್ಟೋರೆಂಟ್ ಗಳಲ್ಲಿ ಹೆಚ್ಚಿನ ಜನರನ್ನು ನಾವು ನೋಡ್ತಿದ್ದೆವು. ಆದ್ರೀಗ ರೆಸ್ಟೋರೆಂಟ್ ಗಿಂತ ಕ್ಲೌಡ್ ಕಿಚನ್ ಪ್ರಸಿದ್ಧಿ ಪಡೆದಿದೆ.
ನಿಮಗೆಲ್ಲ ಗೊತ್ತಿರುವಂತೆ ನೀವು ಮನೆಯಲ್ಲಿ ಕುಳಿತು ಆನ್ಲೈನ್ (Online) ನಲ್ಲಿ ಆರ್ಡರ್ (Order) ಮಾಡಿದ್ರೆ ಸಾಕು. ಕ್ಲೌಡ್ ಕಿಚನ್ ನಿಂದ ಅಡುಗೆ ನೀವಿರುವ ಜಾಗಕ್ಕೆ ಬರುತ್ತದೆ. ಕ್ಲೌಡ್ ಕಿಚನ್ (Cloud Kitchen) ನಲ್ಲಿ ಗ್ರಾಹಕರಿಗೆ ಕುಳಿತುಕೊಂಡು ಆಹಾರ ಸೇವನೆ ಮಾಡುವ ವ್ಯವಸ್ಥೆ ಇರೋದಿಲ್ಲ. ಇಲ್ಲಿ ಅಡುಗೆ ಮಾಡಿ ಪಾರ್ಸಲ್ ಕಳುಹಿಸುವ ಕೆಲಸ ನಡೆಯುತ್ತದೆ. ಆಹಾರವನ್ನು ನಾವಿದ್ದಲ್ಲಿಗೆ ತರಿಸಿ ತಿನ್ನುವುದು ಮಹಾನಗರಗಳಲ್ಲಿ ಮಾಮೂಲಿಯಾಗಿದೆ. ಇದು ನಮ್ಮ ಕೆಲಸವನ್ನು ಮತ್ತಷ್ಟು ಸುಲಭಗೊಳಿಸಿದೆ. ಮೆಟ್ರೋ ನಗರಗಳಲ್ಲಿ ಕ್ಲೌಡ್ ಕಿಚನ್ ಹೆಚ್ಚು ಜನಪ್ರಿಯವಾಗಿದ್ದು, ಅನೇಕರಿಗೆ ಜೀವನಾಧಾರವಾಗಿದೆ. ಆದ್ರೆ ಕ್ಲೌಡ್ ಕಿಚನ್ ನಲ್ಲಿ ಸ್ವಚ್ಛತೆ ಹೇಗಿರುತ್ತೆ ಎನ್ನುವ ಪ್ರಶ್ನೆ ಏಳೋದು ಸಹಜ. ಇದಕ್ಕೆ ರೆಡ್ಡಿಟ್ ಬಳಕೆದಾರನೊಬ್ಬ ಹಂಚಿಕೊಂಡ ಪೋಸ್ಟ್ ಸಾಕ್ಷಿಯಾಗಿದೆ. ಕ್ಲೌಡ್ ಕಿಚನ್ ದುಸ್ಥಿತಿ ನೋಡಿದ್ರೆ ನೀವು ಎಂದೂ ಆಹಾರ ಆರ್ಡರ್ ಮಾಡೋದಿಲ್ಲ. ರೆಡ್ಡಿಟ್ ನಲ್ಲಿ ಆತ ಹಂಚಿಕೊಂಡಿದ್ದೇನು ಹಾಗೆ ಅದಕ್ಕೆ ಬೆಂಗಳೂರಿಗರ ಪ್ರತಿಕ್ರಿಯೆ ಏನು ಎಂಬುದನ್ನು ನಾವು ಹೇಳ್ತೇವೆ.
ಮಾಧುರಿ ದೀಕ್ಷಿತ್ ಮೀಟ್ ಆಗ್ಬೇಕು ಅಂತ ಟಿಮ್ ಕುಕ್ ಕೇಳಿದ್ದೇಕೆ?
ರೆಡ್ಡಿಟ್ ಬಳಕೆದಾರ ಬೆಂಗಳೂರಿನಲ್ಲಿ ಕ್ಲೌಡ್ ಕಿಚನ್‌ನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸುನಾಮಿ ಎಬ್ಬಿಸಿದ್ದಾನೆ. ಕ್ಲೌಡ್ ಕಿಚ್ನ ನೈರ್ಮಲ್ಯ ಮತ್ತು ಶುಚಿತ್ವದ ಕೊರತೆಯ ಬಗ್ಗೆ ಎಲ್ಲರ ಚರ್ಚೆಗೆ ಕಾರಣವಾಗಿದ್ದಾನೆ.
ಡೋಜಿಂಗ್ ಡಾಗ್ ಹೆಸರಿನ ಖಾತೆಯಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಬಳಕೆದಾರ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾನೆ. ಅದ್ರಲ್ಲಿ ಕ್ಲೌಡ್ ಕಿಚನ್ ಕೊಳಕನ್ನು ನಾವು ಸ್ಪಷ್ಟವಾಗಿ ನೋಡಬಹುದು. ದೊಡ್ಡದಾದ ಕಿಚನ್ ಅವ್ಯವಸ್ಥೆಯಿಂದ ಕೂಡಿದೆ. ನಾನು ಫುಡ್ ಡಿಲೆವರಿ ಫ್ಲಾಟ್ಫಾರ್ಮ್ ನಲ್ಲಿ ಪಾರ್ಟ್ ಟೈಂ ಕೆಲಸ ಮಾಡ್ತೇನೆ. ಇಂದು ನನ್ನನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗ್ಲಿಲ್ಲ. ಕೊಳಕು ನೆಲದ ಮೇಲೆ ಬಿದ್ದ ಮೊಮೊವನ್ನು ಮತ್ತೆ ವ್ಯಕ್ತಿ ಎತ್ತಿ ಹಾಕಿದ್ದನ್ನು ನಾನು ನೋಡಿದೆ. ನನಗೆ ಇದನ್ನು ಹೇಳೋಕೆ ಪದ ಸಿಗ್ತಿಲ್ಲ ಎಂದು ರೆಡ್ಡಿಟ್ ನಲ್ಲಿ ಬರೆದಿದ್ದಾನೆ. ಇದಕ್ಕೆ ಅಸಹ್ಯಕರ ಕ್ಲೌಡ್ ಕಿಚನ್ ಎಂದು ಶೀರ್ಷಿಕೆ ಹಾಕಿದ್ದಾನೆ.
ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಲು ಬಯಸಿದ್ರೆ ಈ ಲಸ್ಸಿ ಕುಡಿಯಿರಿ…
ರೆಡ್ಡಿಟ್ ನಲ್ಲಿ ವೈರಲ್ ಆದ ಈ ಫೋಟೋಗಳು ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡುವವರಿಗೆ ದುಃಸ್ವಪ್ನದಂತಿವೆ. ಭಾರೀ ಬೆಲೆ ತೆತ್ತು ಆಹಾರ ಖರೀದಿ ಮಾಡಿವ ಜನರು ಆಹಾರ ತಯಾರಿಸುವ ಸ್ಥಳದ ಸ್ಥಿತಿ ಕಂಡು ಅಚ್ಚರಿ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ.
ಡೋಜಿಂಗ್ ಡಾಗ್‌ನ ಈ ಪೋಸ್ಟ್ ಗೆ ಸಾಕಷ್ಟು ಕಾಮೆಂಟ್‌ಗಳು ಕಂಡುಬರುತ್ತಿವೆ. 1.4 ಸಾವಿರಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. 215ಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ. ಆಹಾರ ನಿಯಂತ್ರಣ ಭಾರತದಲ್ಲಿ ತಮಾಷೆಯಾಗಿದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ವಾರ್ಮ್ ಓವನ್, ಕಥಿ ಝೋನ್, ಸ್ಲರಿ ಶೇಕ್ಸ್‌ನಂತಹ ಹಲವು ಬ್ರಾಂಡ್‌ಗಳನ್ನು ನಡೆಸುತ್ತಿರುವ ಕೌಜಿನಾದಂತೆ ಇದು ಕಾಣ್ತಿದೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.
ಇದಕ್ಕೆ ಕೌಜಿನಾ ಫುಡ್ ಟೆಕ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಮಡಿಯಾಲ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಭಾರತದಾದ್ಯಂತ ಕ್ಲೌಡ್ ಕಿಚನ್‌ಗಳನ್ನು ನಿರ್ವಹಿಸುತ್ತೇವೆ. ಬೆಂಗಳೂರಿನಲ್ಲಿ 16 ಶಾಖೆಗಳನ್ನು ಹೊಂದಿದ್ದೇವೆ. ಈ ಫೋಟೋ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಮ್ಮ ಕ್ಲೌಡ್ ಕಿಚನ್‌ನದ್ದು. ಆದ್ರೆ ಕಳಪೆ ಬೆಳಕಿನಿಂದ ಕಿಚನನ್ನು ಕೊಳಕಾಗಿ ತೋರಿಸಲಾಗಿದೆ. ಇದು ಮಾಜಿ ಉದ್ಯೋಗಿ, ಹೋಟೆಲ್ ಮ್ಯಾನೇಜ್‌ಮೆಂಟ್ ಪದವೀಧರರ ಕುಶಲ ಕೆಲಸವೆಂದು ತೋರುತ್ತದೆ ಎಂದು ಮಹೇಶ್ ಹೇಳಿದ್ದಾರೆ.