
ಪುಣೆಯ ಪ್ರಸಿದ್ದ ರೆಸ್ಟೋರೆಂಟ್ ಕೆಫೆ ಗುಡ್‌ಲಕ್‌ನಲ್ಲಿ ಗ್ರಾಹಕರೊಬ್ಬರು ಆರ್ಡರ್ ಮಾಡಿದ ಬನ್‌ನಲ್ಲಿ ಗಾಜಿನ ತುಂಡು ಸಿಕ್ಕಿದಂತಹ ಘಟನೆ ನಡೆದಿದೆ. ಈ ವಿಚಾರ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾದ ಹಿನ್ನೆಲೆ ಆಹಾರ ಇಲಾಖೆಯ ಅಧಿಕಾರಿಗಳು ಹೊಟೇಲ್‌ನ್ ಪರವಾನಗಿಯನ್ನೇ ರದ್ದುಪಡಿಸಿದ್ದಾರೆ.
ಸ್ವಚ್ಛತೆಯ ಕಾರಣ ನೀಡಿ ಈಗ ಪುಣೆಯ ಪ್ರಸಿದ್ದ ರೆಸ್ಟೋರೆಂಟ್ ಕೆಫೆ ಗುಡ್‌ಲಕ್‌ನ್ನು ಬಂದ್ ಮಾಡಲಾಗಿದೆ. ಇಲ್ಲಿ ಆಗಮಿಸಿದ ಗ್ರಾಹಕರೊಬ್ಬರು ಬನ್ ಮುಸ್ಕಾವನ್ನು ಆರ್ಡರ್ ಮಾಡಿದ್ದರು. ಆದರೆ ಈ ಬನ್ ಮುಸ್ಕಾದಲ್ಲಿ ಗಾಜಿನ ಪೀಸ್ ಪತ್ತೆಯಾಗಿದ್ದಾಗಿ ಗ್ರಾಹಕರು ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸಂಸ್ಥೆಯ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
ಜೋಡಿಯೊಂದು ತಮಗೆ ಬನ್ ಮಸ್ಕ್‌ನಲ್ಲಿ ಗಾಜಿನ ತುಂಡು ಪತ್ತೆಯಾಗಿದೆ ಎಂದು ವೀಡಿಯೋ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಜೋಡಿ ಈ ಕೆಫೆಯಲ್ಲಿ ಟೀ ಕುಡಿಯುತ್ತ ಬನ್ ಮಸ್ಕ್ ಸೇವಿಸುತ್ತಿದ್ದರು. ಈ ವೇಳೆ ಅವರಿಗೆ ಗಾಜಿನ ತುಂಡು ಸಿಕ್ಕಿದೆ. ಕೂಡಲೇ ಅವರು ಈ ಬನ್‌ನಲ್ಲಿ ಕನ್ನಡಿ ತುಂಡು ಇದೆ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಆಹಾರ ಸುರಕ್ಷತೆ ಹಾಗೂ ಸ್ವಚ್ಛತೆಯ ಬಗ್ಗೆ ಆತಂಕ ಸೃಷ್ಟಿಸಿತ್ತು. ಅನೇಕರು ನಾವು ಹೊರಗೆ ತಿನ್ನುವ ಆಹಾರಗಳು ಎಷ್ಟು ಸುರಕ್ಷಿತ ಎಂದು ಪ್ರಶ್ನೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಹೊಟೇಲ್‌ನಲ್ಲಿ ಸ್ವಚ್ಛತೆ ಮಾಡದಿರುವುದು ಕಂಡು ಬಂತು. ಹೀಗಾಗಿ ಹೊಟೇಲ್ ಅಗತ್ಯ ಸ್ವಚ್ಚತೆ ಹಾಗೂ ಆಹಾರ ತಯಾರಿಕೆಯಲ್ಲಿ ನೈರ್ಮಲ್ಯತೆ ಕಾಪಾಡುವವರೆಗೆ ಈ ಹೊಟೇಲ್‌ನ ಪರವಾನಗಿ ಅಮಾನತು ಮಾಡಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಜಂಟಿ ಆಯುಕ್ತ ಸುರೇಶ್ ಅನ್ನಾಪುರೆ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಇಲಾಖೆಯು ಆವರಣವನ್ನು ತಕ್ಷಣ ಪರಿಶೀಲಿಸಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಪುಣೆಯಲ್ಲಿ ಒಂದು ಕಾಲದಲ್ಲಿ ಪ್ರಸಿದ್ಧ ಚಾಯ್ ಮತ್ತು ಬನ್ ಮಸ್ಕಾಗೆ ಹೆಸರುವಾಸಿಯಾಗಿದ್ದ ಕೆಫೆ ಗುಡ್‌ಲಕ್ ಈಗ ಗಂಭೀರ ನೈರ್ಮಲ್ಯ ವಿವಾದದಿಂದ ಸುದ್ದಿಯಾಗಿದೆ.
ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲೇ ಐಸ್‌ಕ್ರೀಂನಲ್ಲಿ ಮಾನವ ಬೆರಳು ಪತ್ತೆಯಾದಂತಹ ಘಟನೆ ನಡೆದಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.