ಬ್ಯಾಚುಲರ್ಸ್ ಸ್ಪೆಷಲ್.. ಮ್ಯಾರಿನೇಟ್ ಮಾಡಿ ಎಣ್ಣೆಯಲ್ಲಿ ಫ್ರೈ ಮಾಡಿದ್ರೆ ಮುಗಿತು ರೆಡ್ ಚಿಕನ್ ಗ್ರೇವಿ ರೆಡಿ

Published : Jul 14, 2026, 04:31 PM IST
Kannada non veg recipes

ಸಾರಾಂಶ

Kannada non-veg recipes: ಹೈದರಾಬಾದಿ ಶಾಹಿ ರೆಡ್ ಚಿಕನ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಈಗ ನೀವು ಇದನ್ನ ಮನೆಯಲ್ಲೇ ಅತ್ಯಂತ ಸಿಂಪಲ್ಲಾಗಿ ಮಾಡಬಹುದು. ಬ್ಯಾಚುಲರ್ಸ್ ಕೂಡ ಸುಲಭವಾಗಿ ತಯಾರಿಸಬಹುದಾದ ಈ ಮಸಾಲೆಯುಕ್ತ ಚಿಕನ್ ರೆಸಿಪಿ ಸೀಕ್ರೆಟ್ ಟಿಪ್ಸ್ ಇಲ್ಲಿದೆ ನೋಡಿ.

ಚಿಕನ್ ಪ್ರಿಯರಿಗೆ ಸ್ಪೈಸಿ ಮಸಾಲವೆಂದರೆ ಪಂಚಪ್ರಾಣ. ಅದರಲ್ಲೂ ವಿಶೇಷವಾಗಿ ಮದುವೆ ಸಮಾರಂಭಗಳಲ್ಲಿ ಸಿಗುವ ಮಸಾಲೆಯುಕ್ತ ಶಾಹಿ ರೆಡ್ ಚಿಕನ್ ಅಂದ್ರೆ ಎಲ್ಲರಿಗೂ ಇಷ್ಟ. ಪ್ರೋಟೀನ್ ಮತ್ತು ಪೌಷ್ಟಿಕಾಂಶ ಭರಿತವಾಗಿರುವ ಈ ಸ್ಪೆಷಲ್ ಚಿಕನ್ ಅನ್ನು ಹೋಟೆಲ್ ರುಚಿಯಲ್ಲೇ ಮನೆಯಲ್ಲಿ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು

ಚಿಕನ್ - ಅರ್ಧ ಕೆಜಿ
ಕಾಶ್ಮೀರಿ ಒಣಮೆಣಸಿನಕಾಯಿ - 10
ಗೋಡಂಬಿ - 15
ಮೊಸರು - ಅರ್ಧ ಕಪ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
ಈರುಳ್ಳಿ - 4 (ಕರಿದದ್ದು)
ಟೊಮೆಟೊ - 1
ಧನಿಯಾ ಪುಡಿ, ಗರಂ ಮಸಾಲ, ಜೀರಿಗೆ ಪುಡಿ - ತಲಾ ಅರ್ಧ ಟೀಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು ಮತ್ತು ಎಣ್ಣೆ - ಅಗತ್ಯವಿರುವಷ್ಟು

ತಯಾರಿಸುವ ವಿಧಾನ

*ಮೊದಲು ಈರುಳ್ಳಿಯನ್ನು ಉದ್ದಕ್ಕೆ ಹೆಚ್ಚಿ ಎಣ್ಣೆಯಲ್ಲಿ ಕೆಂಪಾಗುವವರೆಗೆ (Brown Onion) ಕರಿದು ಪಕ್ಕಕ್ಕೆ ಇಟ್ಟುಕೊಳ್ಳಿ.
*ಮಿಕ್ಸಿ ಜಾರ್‌ಗೆ ಕಾಶ್ಮೀರಿ ಒಣಮೆಣಸಿನಕಾಯಿ, ಗೋಡಂಬಿ, ಕರಿದ ಈರುಳ್ಳಿ, ಟೊಮೆಟೊ ತುಂಡುಗಳು, ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಎಲ್ಲಾ ಮಸಾಲ ಪುಡಿಗಳನ್ನು ಹಾಕಿ ನುಣ್ಣಗೆ ಪೇಸ್ಟ್ ಮಾಡಿ.
*ಈಗ ಒಂದು ಬೌಲ್‌ನಲ್ಲಿ ತೊಳೆದ ಚಿಕನ್ ತೆಗೆದುಕೊಂಡು, ನುಣ್ಣಗೆ ಪೇಸ್ಟ್ ಮಾಡಿದ ಮಸಾಲ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ಎಣ್ಣೆ ಸೇರಿಸಿ ಚೆನ್ನಾಗಿ ಬೆರೆಸಿ. ಇದನ್ನು ಸುಮಾರು ಒಂದು ಗಂಟೆ ಕಾಲ ನೆನೆಯಲು ಬಿಡಿ. ಇದರಿಂದ ಮಸಾಲೆ ಚಿಕನ್ ತುಂಡುಗಳ ಒಳಗೆ ಚೆನ್ನಾಗಿ ಇಳಿಯುತ್ತದೆ.
*ಈಗ ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಮ್ಯಾರಿನೇಟ್ ಮಾಡಿದ ಚಿಕನ್ ಮಿಶ್ರಣವನ್ನು ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ. ಹಸಿ ವಾಸನೆ ಹೋದ ನಂತರ ಸ್ವಲ್ಪ ನೀರು ಸೇರಿಸಿ.
ಅಂತಿಮ ಹಂತ: ಚಿಕನ್ ಮೃದುವಾಗಿ ಬೆಂದು, ಎಣ್ಣೆಯು ಮಸಾಲೆಯ ಮೇಲೆ ತೇಲುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಇಳಿಸುವ ಮುನ್ನ ಸ್ವಲ್ಪ ಕಸೂರಿ ಮೇತಿ ಸೇರಿಸಿದರೆ ರುಚಿ ಇನ್ನೂ ಹೆಚ್ಚುತ್ತದೆ.

ಬಿಸಿಬಿಸಿ ಅನ್ನ ಅಥವಾ ಚಪಾತಿ ಜೊತೆಗೆ ಈ ಶಾಹಿ ರೆಡ್ ಚಿಕನ್ ಅದ್ಭುತವಾಗಿ ಹೊಂದಿಕೊಳ್ಳುತ್ತದೆ. ಆದ್ದರಿಂದ ಅತಿಥಿಗಳು ಬಂದಾಗ ರೊಟೀನ್ ಚಿಕನ್ ಬಿಟ್ಟು ಈ ಹೈದರಾಬಾದಿ ಸ್ಪೆಷಲ್ ಟ್ರೈ ಮಾಡಿ ನೋಡಿ!

ಇದು ನೆನಪಿನಲ್ಲಿರಲಿ..

ನೈಸರ್ಗಿಕ ಕೆಂಪು ಬಣ್ಣಕ್ಕಾಗಿ: ಶಾಹಿ ರೆಡ್ ಚಿಕನ್ ಹೆಸರೇ ಹೇಳುವಂತೆ ಕೆಂಪು ಬಣ್ಣದಲ್ಲಿರಬೇಕು. ಇದಕ್ಕಾಗಿ ಕೃತಕ ಫುಡ್ ಕಲರ್ ಬಳಸುವ ಬದಲು ಕಾಶ್ಮೀರಿ ಒಣಮೆಣಸಿನಕಾಯಿಗಳನ್ನು ಬಿಸಿ ನೀರಿನಲ್ಲಿ 15 ನಿಮಿಷ ನೆನೆಸಿ ನಂತರ ರುಬ್ಬಿಕೊಳ್ಳಿ. ಇದು ಗ್ರೇವಿಗೆ ಗಾಢ ಕೆಂಪು ಬಣ್ಣ ನೀಡುತ್ತದೆ ಮತ್ತು ಅತಿಯಾದ ಖಾರವಿರುವುದಿಲ್ಲ.

ಮ್ಯಾರಿನೇಷನ್ ಸಮಯ: ಚಿಕನ್ ಕನಿಷ್ಠ 1 ಗಂಟೆಯಾದರೂ ಮ್ಯಾರಿನೇಟ್ ಆಗಲಿ. ನಿಮ್ಮ ಬಳಿ ಸಮಯವಿದ್ದರೆ 3-4 ಗಂಟೆ ಅಥವಾ ಇಡೀ ರಾತ್ರಿ ಫ್ರಿಡ್ಜ್‌ನಲ್ಲಿ ಇಡಬಹುದು. ಇದರಿಂದ ಮಸಾಲೆ ಚಿಕನ್‌ನ ಒಳಗಿನವರೆಗೆ ಇಳಿದು, ತುಂಡುಗಳು ತುಂಬಾ ಜ್ಯೂಸಿಯಾಗಿ ಬರುತ್ತವೆ.

ಈರುಳ್ಳಿ ಕರಿಯುವಾಗ ಎಚ್ಚರ: ಕರಿದ ಈರುಳ್ಳಿ (Biryani Onions) ಈ ಖಾದ್ಯಕ್ಕೆ ಮುಖ್ಯ ರುಚಿ ನೀಡುತ್ತದೆ. ಆದರೆ ಈರುಳ್ಳಿ ಅತಿಯಾಗಿ ಬೆಂದು ಕಪ್ಪಾದರೆ ಇಡೀ ಗ್ರೇವಿ ಕಹಿಯಾಗುತ್ತದೆ. ಆದ್ದರಿಂದ ಈರುಳ್ಳಿ ಚಿನ್ನದ ಬಣ್ಣಕ್ಕೆ ಬಂದ ತಕ್ಷಣ ಎಣ್ಣೆಯಿಂದ ತೆಗೆಯಿರಿ.

ಮೊಸರಿನ ಬಳಕೆ: ಮಸಾಲೆಗೆ ಮೊಸರು ಸೇರಿಸುವ ಮೊದಲು, ಮೊಸರನ್ನು ಗಂಟಿಲ್ಲದಂತೆ ಚೆನ್ನಾಗಿ ಬೆರೆಸಿಕೊಳ್ಳಿ (Whisk). ಅಡುಗೆ ಮಾಡುವಾಗ ಉರಿಯನ್ನು ಸಣ್ಣದಾಗಿ ಇಟ್ಟು ಮೊಸರು ಸೇರಿಸಿದರೆ ಗ್ರೇವಿ ಒಡೆಯುವುದಿಲ್ಲ.

ಇಲ್ಲಿದೆ ನೋಡಿ ವಿಡಿಯೋ  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಮಯ ಕಡಿಮೆ ಇದ್ದಾಗ ಮಾಡ್ಕೊಳ್ಳಿ ಸೋಂಬೇರಿ ರೈಸ್‌ ಬಾತ್; ಕಡಿಮೆ ಮಸಾಲೆ, ಹದವಾದ ಅಡುಗೆ
BRICS ಊಟದಲ್ಲಿ ಪನೀರ್ ಪದಾರ್ಥಕ್ಕೆ ಈರುಳ್ಳಿ ಬದಲು ಶಾಲೆಟ್ಸ್ ಬಳಕೆ, ಈರುಳ್ಳಿಗೂ ಶಾಲೆಟ್ಸ್‌ಗೂ ವ್ಯತ್ಯಾಸ ಏನು?