Food And Health: ಕೋವಿಡ್ ಕಾಲದಲ್ಲಿ ಇಂಥ ಆಹಾರ ಸೇವಿಸುವುದು ತಪ್ಪಿಸಿ

Suvarna News   | Asianet News
Published : Jan 22, 2022, 07:01 PM ISTUpdated : Jan 22, 2022, 07:13 PM IST
Food And Health: ಕೋವಿಡ್ ಕಾಲದಲ್ಲಿ ಇಂಥ ಆಹಾರ ಸೇವಿಸುವುದು ತಪ್ಪಿಸಿ

ಸಾರಾಂಶ

ಕೋವಿಡ್ (Covid) ಕಾಲದಲ್ಲಿ, ದೇಹದ ರೋಗ ನಿರೋಧಕ ಶಕ್ತಿ (Immunity Power)ಯನ್ನು ಹೆಚ್ಚಿಸಲು ಎಲ್ಲರೂ ಹೆಚ್ಚು ಗಮನ ಕೊಡುತ್ತಿದ್ದಾರೆ. ಆದರೆ ನಿಮಗೆ ಗೊತ್ತಾ, ನೀವು ಸೇವಿಸುವ ಕೆಲವೊಂದ ಆಹಾರ (Food)ಗಳು ನಿಮಗರಿವಿಲ್ಲದೆಯೇ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸಬಹುದು. ಬಾಯಿಗೆ ರುಚಿ, ಆರೋಗ್ಯಕ್ಕೆ ಕಹಿಯಾಗಿರುವ ಆ ಆಹಾರಗಳು ಯಾವೆಲ್ಲಾ ?

ಆರೋಗ್ಯವೇ ಭಾಗ್ಯ ಎಂಬ ಮಾತೇ ಇದೆ. ಆರೋಗ್ಯ (Health) ಹದಗೆಟ್ಟಾದ ಮನುಷ್ಯ ಅಸಹಾಯಕ, ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಆರೋಗ್ಯ ಯಾವಾಗಲೂ ಚೆನ್ನಾಗಿರುವಂತೆ ನೋಡಿಕೊಳ್ಳುವುದು ಮುಖ್ಯ. ಶೀತ, ಜ್ವರ, ಕಾಯಿಲೆಗಳು ವಕ್ಕರಿಸಿಕೊಳ್ಳದಂತೆ ರೋಗ ನಿರೋಧಕ ಶಕ್ತಿ (Immunity Power)ಯನ್ನು ವೃದ್ಧಿಸಿಕೊಳ್ಳಬೇಕು. ಪ್ರತಿರಕ್ಷಣಾ ವ್ಯವಸ್ಥೆಯು ವ್ಯಕ್ತಿಯ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿಯು ಆರೋಗ್ಯಕರ ಜೀವನಶೈಲಿ (Lifestyle) ಮತ್ತು ನಮ್ಮ ದೈನಂದಿನ ಆಹಾರ ಪದ್ಧತಿಯನ್ನು ಅವಲಂಬಿಸಿರುತ್ತದೆ.

ವಿವಿಧ ಜೀವಸತ್ವಗಳು, ಖನಿಜಗಳು, ಫೈಟೊನ್ಯೂಟ್ರಿಯೆಂಟ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಅನೇಕ ಹಣ್ಣುಗಳು, ತರಕಾರಿಗಳು ಪ್ರಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಬೇಕಾಗುತ್ತವೆ. ಕೊರೋನಾ ಸೋಂಕು ಶುರುವಾದಾಗಿನಿಂದಲೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಎಲ್ಲರೂ ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾರೆ. ಹೀಗಾಗಿ ಕಷಾಯ, ಸೊಪ್ಪು, ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸುತ್ತಿದ್ದಾರೆ. 

ಆದರೆ ನಿಮಗೆ ಗೊತ್ತಾ, ಕೆಲವೊಂದು ಆಹಾರ ಪದಾರ್ಥಗಳ ಸೇವನೆ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನೇ ಕುಗ್ಗಿಸಬಹುದು. ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗದಿರಲು, ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಇಂಥಹಾ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು. ಆ ಆಹಾರಗಳು ಯಾವುದೆಲ್ಲಾ ತಿಳಿಯೋಣ.

Tulsi Tea Health Benefits: ತುಳಸಿ ಚಹಾ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ಜಂಕ್ ಫುಡ್ ಸೇವಿಸುವುದು
ಬಿಡುವಿಲ್ಲದ ಜೀವನಶೈಲಿಯಿಂದಾಗಿ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ.  ತಿನ್ನಲು ಸಹ ಇವು ಟೇಸ್ಟೀಯಾಗಿರುವ ಕಾರಣ ಕೆಲವೊಬ್ಬರು ಇದನ್ನು ದಿನದ ಮೂರು ಹೊತ್ತು ತಿನ್ನುತ್ತಾರೆ. ಆದರೆ ನಮ್ಮ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಬೇಕಾದರೆ, ಪ್ಯಾಕ್ ಮಾಡಿದ ತಿಂಡಿಗಳನ್ನು ಸೇವಿಸುವುದು ಕಡಿಮೆ ಮಾಡಬೇಕು. ಯಾಕೆಂದರೆ ಈ ರೀತಿಯ ಪ್ಯಾಕೆಟ್ ತಿಂಡಿ ದೀರ್ಘಕಾಲ ಬಾಳ್ವಿಕೆ ಬರುವಂತೆ ಬಳಸುವ ಸಂರಕ್ಷಕಗಳು ಆರೋಗ್ಯಕ್ಕೆ ಹಾನಿಕಾರಕ.

ಉಪ್ಪಿನ ಅತಿಯಾದ ಬಳಕೆ
ಉಪ್ಪಿನ ಅತಿಯಾದ ಸೇವನೆಯು ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಹಾನಿಯನ್ನುಂಟು ಮಾಡುತ್ತದೆ. ಹೀಗಾಗಿ ಮನೆಯಲ್ಲಿ ತಯಾರಿಸುವ ಅಡುಗೆಗೆ ಯಾವಾಗಲೂ ಕಡಿಮೆ ಉಪ್ಪನ್ನು ಬಳಸಿ. ಅಂಗಡಿಗಳಲ್ಲಿ ಖರೀದಿಸುವ ಚಿಪ್ಸ್, ಬೇಕರಿ ತಿಂಡಿಗಳಲ್ಲಿ ಹೆಚ್ಚಿನ ಪ್ರಮಾಣದ ಉಪ್ಪನ್ನು ಬಳಸಲಾಗುತ್ತದೆ. ಹೀಗಾಗಿ ಇಂಥಹಾ ಆಹಾರ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು. ಅತಿಯಾದ ಉಪ್ಪು (Salt) ಸೇವನೆಯು ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳನ್ನು ಸಹ ಉಂಟು ಮಾಡಬಹುದು.

Saffron Health Benefits: ಕೋವಿಡ್ ಕಾಲದಲ್ಲಿ ಆಹಾರದಲ್ಲಿರಲಿ ಕೇಸರಿ

ಸಂಸ್ಕರಿಸಿದ ಮಾಂಸವನ್ನು ತಿನ್ನುವುದು
ಸಂಸ್ಕರಿಸಿದ ಮಾಂಸವು ದೇಹದ ರೋಗನಿರೋಧಕ ಶಕ್ತಿಯನ್ನು ಹಾನಿಗೊಳಿಸುವುದಲ್ಲದೆ, ಜೀರ್ಣಾಂಗ ವ್ಯವಸ್ಥೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಸಂಸ್ಕರಿಸಿದ ಮಾಂಸವು ಆರೋಗ್ಯಕ್ಕೆ ಹೆಚ್ಚು ಹಾನಿಕಾರಕವಾಗಿದೆ. ಇದಲ್ಲದೆ, ಸಂಸ್ಕರಿಸಿದ ಮಾಂಸ (Meat) ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಫಾಸ್ಟ್ ಫುಡ್ ಸೇವನೆ
ಸಂಜೆಯಾದರೆ ಸಾಕು ಫ್ರೆಂಡ್ಸ್, ಫ್ಯಾಮಿಲಿ ಜತೆ ಹೊರಗಡೆ ಹೋಗಿ ಸ್ನ್ಯಾಕ್ಸ್ (Snacks) ತಿಂದುಕೊಂಡು ಬರುವ ಅಭ್ಯಾಸ ಹಲವರಿಗಿದೆ. ಆದರೆ ಈ ರೀತಿ ನಿರಂತರವಾಗಿ ಫಾಸ್ಟ್ ಫುಡ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ತ್ವರಿತ ಆಹಾರವು ದೇಹಕ್ಕೆ ಅಪಾಯಕಾರಿಯಾಗುವುದರ ಜೊತೆಗೆ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಹ ಕುಂಠಿತಗೊಳಿಸುತ್ತದೆ. ಚಯಾಪಚಯ ಕ್ರಿಯೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ನೀವು ಫಾಸ್ಟ್ ಫುಡ್ ಸೇವಿಸುವುದನ್ನು ಕಡಿಮೆ ಮಾಡಬೇಕು. 

ಕೂಲ್ ಡ್ರಿಂಕ್ಸ್ ಸೇವನೆ
ತಂಪು ಪಾನೀಯಗಳು ಕುಡಿದಾಗ ಒಮ್ಮೆ ಹಾಯೆನಿಸುತ್ತದೆ. ಆದರೆ ನಿಜವಾಗಿಯೂ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ತಂಪು ಪಾನೀಯಗಳಲ್ಲಿ ಸೇವಿಸಿರುವ ಪ್ರಿಸವೇಟಿವ್ ಅಂಶಗಳು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ