Winter Food: ನಾಲಿಗೆ ಚಪ್ಪರಿಸುತ್ತಲೇ ಇರಬೇಕೆನಿಸೋ ರುಚಿ ರುಚೀ ಟೊಮ್ಯಾಟೋ ಕಾಯಿ ಚಟ್ನಿ

By Suvarna News  |  First Published Jan 22, 2022, 5:10 PM IST

ಈಗ ಚಳಿಗಾಲ. ಇದಕ್ಕೆ ಸರಿ ಹೊಂದುವ ಆಹಾರ ಖಾದ್ಯ ತಯಾರಿಸಿಕೊಂಡು ತಿನ್ನುವುದರಿಂದ ನಾಲಿಗೆಗೆ ರುಚಿ ಸಿಗುವ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದಾಗುವುದು. ಅಂತಹ ಚಳಿಗಾಲಕ್ಕೆ ಹೇಳಿ ಮಾಡಿಸಿದಂತೆ ಇರುವ ಚಟ್ನಿಯೊಂದನ್ನು ಮಾಡುವ ವಿಧಾನ ಹೀಗಿದೆ ನೋಡಿ.


ನಾವು ಭಾರತೀಯರು ಊಟದಲ್ಲಿ ಚಟ್ನಿ ಹಾಗೂ ಉಪ್ಪಿನ ಕಾಯಿಯಂತಹ ಪದಾರ್ಥಗಳಿಗೆ ಹೆಚ್ಚಿನ ಪ್ರಾಮುಖ್ಯತೆ (Importance) ನೀಡುತ್ತೇವೆ. ಚಟ್ನಿ ಎಲ್ಲ ಕಾಲದಲ್ಲಿಯೂ (Season) ತಿನ್ನಬಹುದಾದ ಖಾದ್ಯ. ಎಂಥದೇ ಸಮಾರಂಭಗಳಲ್ಲಿಯೂ (Function) ಬಗೆ ಬಗೆಯ ಅಡುಗೆ ಪದಾರ್ಥಗಳ ನಡುವೆ ಚಟ್ನಿಯೂ ಇರುತ್ತದೆ.

ಬೆಳಗಿನ ತಿಂಡಿಗಂತೂ (Breakfast) ಚಟ್ನಿ ಬೇಕೇ ಬೇಕು. ದೋಸೆ, ಚಪಾತಿ ಅದರಲ್ಲೂ ಮಖ್ಯವಾಗಿ ರೊಟ್ಟಿ (Roti) ಯೊಂದಿಗೆ ಚಟ್ನಿ ಹೊಂದುತ್ತದೆ. ಅದರಲ್ಲೂ ಈ ವಿಶೇಷ ಚಟ್ನಿಯನ್ನು ಸವಿಯುವ ಮಜವೇ ಬೇರೆ. ಸುಲಭವಾಗಿ ತಯಾರಿಸಬಹುದಾದ ಈ ಟೊಮೆಟೋ (Tomato) ಕಾಯಿಯ ಚಟ್ನಿಯು ಚಳಿಗಾಲದಲ್ಲಿ (Winter) ದೇಹಕ್ಕೆ ಸರಿ ಹೊಂದುವ ಖಾದ್ಯ ಕೂಡ ಹೌದು. ನೀವೂ ಈ ಖಾದ್ಯದ ರುಚಿ ನೋಡಬೇಕು ಎಂದಾದರೆ ಇದಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಸಿದ್ಧ ಪಡಿಸಿಕೊಳ್ಳಿ.

ಇದನ್ನೂ ಓದಿ:Junk Foodನಿಂದ ದೂರ ಇರೋಕೆ ಈ ಟಿಪ್ಸ್ ಫಾಲೋ ಮಾಡಿ..

Tap to resize

Latest Videos

undefined

ಬೇಕಾಗುವ ಸಾಮಾಗ್ರಿಗಳು (Ingredients)
2 ಸಣ್ಣಗೆ ಕತ್ತರಿಸಿದ ಟೊಮ್ಯಾಟೊ ಕಾಯಿ /ಹಸಿರು ಟೊಮ್ಯಾಟೊ
3 ಟೀ ಸ್ಪೂನ್‌ ಎಳ್ಳಿನ ಬೀಜ (Sesame)
ಸ್ವಲ್ಪ ಕೊತ್ತೊಂಬರಿ ಸೊಪ್ಪು
1 ಟೀ ಸ್ಪೂನ್‌ ಅಡುಗೆ ಎಣ್ಣೆ
7 ರಿಂದ 8 ಕರಿಬೇವಿನ ಎಸಳುಗಳು (Curry leaves)
1/2 ಟೀ ಸ್ಪೂನ್‌ ಜೀರಿಗೆ (Jeera)
1/2 ಟೀ ಸ್ಪೂನ್‌ ಸಾಸಿವೆ (Mustard)
1/2 ಟೀ ಸ್ಪೂನ್‌ ಸಕ್ಕರೆ
3 ರಿಂದ 4 ಹಸಿ ಮೆಣಸಿನ ಕಾಯಿಗಳು (Green chillies)
ಒಂದು ಚಿಟಿಕೆ ಇಂಗು (Asoefetida)
ರುಚಿಗೆ ತಕ್ಕಷ್ಟು ಉಪ್ಪು (Salt)

ಮಾಡುವ ವಿಧಾನ ಹೀಗಿದೆ

  • ಮೊದಲಿಗೆ ಎಳ್ಳಿನ ಬೀಜಗಳನ್ನು ಹುರಿದು ಒಣಗಿಸಿಕೊಳ್ಳಿ.
  • ಈಗ ಒಂದು ಪ್ಯಾನ್‌ನಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಂಡು ಸಾಸಿವೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಇಂಗು, ಜೀರಿಗೆ, ಹಸಿ ಮೆಣಸಿಕಾಯಿ, ಕರಿಬೇವಿನ ಎಸಳುಗಳು ಹಾಗೂ ಸಣ್ಣದಾಗಿ ಕತ್ತರಿಸಿ ಇಟ್ಟುಕೊಂಡಿದ್ದ ಹಸಿರು ಟೊಮ್ಯಾಟೋವನ್ನು ಹಾಕಿ. ಸುಮಾರು 3 ರಿಂದ 4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಕೊನೆಯಲ್ಲಿ ಕೊತ್ತೊಂಬರಿ ಸೊಪ್ಪನ್ನು ಸೇರಿಸಿಕೊಳ್ಳಿ. ಇದು ರುಚಿ ಜೊತೆಗೆ ಘಮವನ್ನೂ ಹೆಚ್ಚಿಸುತ್ತದೆ. ನಂತರ ಇದನ್ನುತಣ್ಣಗಾಗಲು ಬಿಡಿ.
  •  ಮಿಶ್ರಣ ತಣ್ಣಗಾದ ಬಳಿಕ ಅದರೊಂದಿಗೆ ಉಪ್ಪು , ಸಕ್ಕರೆ ಹಾಗೂ ಹುರಿದಿಟ್ಟುಕೊಂಡಿದ್ದ ಎಳ್ಳನ್ನು ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಪಾತ್ರೆಗೆ ಹಾಕಿ ಸರ್ವ್‌ ಮಾಡಿ. 

ಇದನ್ನೂ ಓದಿ: ಸೌತ್ ಇಂಡಿಯನ್ v/s ನಾರ್ಥ್ ಇಂಡಿಯನ್ Food: ಯಾವ ಆಹಾರ ಬೆಸ್ಟ್?

ರುಚಿ ರುಚಿಯಾದ ಚಟ್ನಿಯು ಸವಿಯಲು ಸಿದ್ಧವಾಗುತ್ತದೆ. ಎಷ್ಟೊಂದು ಸುಲಭವಾಗಿ ತಯಾರಿಸಬಹುದಲ್ವಾ? ಇದನ್ನು ತಯಾರಿಸಲು ಹೆಚ್ಚು ಸಮಯ ಕೂಡಾ ಬೇಕಾಗಿಲ್ಲ. ನಾಲಿಗೆಗೆ ರುಚಿ ನೀಡುವ ಈ ವಿಶೇಷ ಚಟ್ನಿಯನ್ನು ಚಳಿಗಾಲದಲ್ಲಿ ಸೇವಿಸಿ ಎಂದು ಹೇಳುವುದಕ್ಕೂ ಕಾರಣವಿದೆ (Reason). ಈ ಚಟ್ನಿಗೆ ಎಳ್ಳನ್ನು ಬಳಸಲಾಗುತ್ತದೆ. ಎಳ್ಳು ಇಂತಹ ಚಳಿಯ ವಾತಾವರಣಕ್ಕೆ ದೇಹದಲ್ಲಿ ಉಷ್ಣಾಂಶವನ್ನು (Heat) ಹೆಚ್ಚಿಸುವ ಜೊತೆಗೆ ಎಣ್ಣೆಯನ್ನೂ ನೀಡುತ್ತದೆ.

 ಮನೆಯ ಹಿರಿಯರಿಂದ ಹಿಡಿದು ಪುಟಾಣಿ ಮಕ್ಕಳವರೆಗೆ ಎಲ್ಲರಿಗೂ ಇಷ್ಟವಾಗುವ ಮತ್ತೆ ಮತ್ತೆ ಮಾಡಿ ತಿನ್ನಬೇಕು ಅನಿಸುವ ಈ ಚಟ್ನಿಯನ್ನು ರೊಟ್ಟಿಯೊಂದಿಗೆ ತಿನ್ನಲು ಬಹಳ ರುಚಿಯಾಗಿರುತ್ತದೆ, ಸ್ಯಾಂಡ್ವಿಚ್‌ನ ಜೊತೆಗೂ ಕೂಡ ತಿನ್ನಬಹುದು. ಅದಷ್ಟೇ ಅಲ್ಲದೆ ಅನ್ನದೊಂದಿಗೆ ಕಲಸಿ ತಿನ್ನುತ್ತಿದ್ದರೆ ಲೋಕವೇ ಮರೆತು ಬಿಡಬಹುದು. 

ಇನ್ನೇಕೆ ತಡ ಈಗಲೇ ನಿಮ್ಮ ಮನೆಯಲ್ಲಿಯೂ ಈ ರುಚಿ ರುಚಿಯಾದ ಟೊಮ್ಯಾಟೊ ಚಟ್ನಿಯನ್ನು ಮಾಡಿ ಸವಿಯಿರಿ.

click me!