ಭಾರತದ ಮಸಾಲೆ ಬೆರೆಸಿದ ಆಹಾರ ರುಚಿಸೋದಿಲ್ಲ. ಈ ಮಾತು ಕೇಳ್ತಿದ್ದಂತೆ ಭಾರತೀಯರು ಉರಿದು ಬೀಳ್ತಾರೆ. ಭಾರತದ ಮಸಾಲೆ ರುಚಿ ನೋಡ್ದೆ ಕಮೆಂಟ್ ಮಾಡಿದ್ರೆ ಕೋಪ ನೆತ್ತಿಗೇರುತ್ತೆ. ಆಸ್ಟ್ರೇಲಿಯನ್ ಯೂಟ್ಯೂಬರ್ ಒಬ್ಬರು ಈಗ ಇಂಥಹದ್ದೇ ಕಮೆಂಟ್ ಮಾಡಿ ಟ್ರೋಲ್ ಆಗಿದ್ದಾರೆ.
ಎಕ್ಸ್ ನಲ್ಲಿ @FlipMan ಖಾತೆ ಹೊಂದಿರುವ ಶೆಫ್, ಭಾರತದ ಸ್ವಾದಿಷ್ಟ ಆಹಾರವಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಭಾರತೀಯ ಆಹಾರ ಪೃಥ್ವಿಯಲ್ಲಿ ಅತ್ಯುತ್ತಮವಾಗಿದೆ ಎಂದು ಅದಕ್ಕೆ ಶೀರ್ಷಿಕೆ ಹಾಕಿದ್ದಾರೆ. ಈ ಫೋಟೋಕ್ಕೆ ಆಸ್ಟ್ರೇಲಿಯಾ ಯೂಟ್ಯೂಬರ್ ಡಾ. ಸಿಡ್ನಿ ವಾಟ್ಸನ್ (Dr Sydney Watson) ಕಮೆಂಟ್ ಮಾಡಿದ್ದಾರೆ. ನಿಜವಾಗಿಯೂ ಇದು ಹಾಗಿಲ್ಲ ಎಂದಿರುವ ಅವರು, ನಿಮ್ಮ ಆಹಾರದ ರುಚಿ ಹೆಚ್ಚಿಸಲು ನೀವು ಕೊಳಕು ಮಸಾಲೆ ಸೇರಿಸುತ್ತಿದ್ದರೆ ಅದು ಉತ್ತಮ ಆಹಾರ ಆಗೋದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಯುಟ್ಯೂಬರ್ ಡಾ. ಸಿಡ್ನಿ ವಾಟ್ಸನ್ ಮಾಡಿದ ಈ ಕಮೆಂಟ್ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅವರ ಈ ಕಮೆಂಟ್ ವೈರಲ್ ಆಗಿದೆ. ಈವರೆಗೆ 23 ದಶಲಕ್ಷಕ್ಕೂ ಹೆಚ್ಚು ಮಂದಿ ಈ ಕಮೆಂಟ್ ವೀಕ್ಷಣೆ ಮಾಡಿದ್ದಾರೆ. ಭಾರತೀಯ ಆಹಾರ, ಅಗ್ರ ಪಾಕಪದ್ಧತಿಗಳಲ್ಲಿ ಒಂದು. ಇದ್ರಲ್ಲಿ ಬಳಸುವ ಮಸಾಲೆಗಳು ಔಷಧಿ ಗುಣವನ್ನು ಹೊಂದಿರುತ್ತವೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಭಾರತೀಯ ಪಾಕಪದ್ಧತಿಯಲ್ಲಿ ಕನಿಷ್ಠ 5,000 ವಿಭಿನ್ನ ಭಕ್ಷ್ಯಗಳಿವೆ. ಇದನ್ನು ಎಲ್ಲರೂ ಪ್ರಯತ್ನಿಸಬಹುದು. ಪಶ್ಚಿಮದ ಜನರು ಹೆಚ್ಚೆಂದರೆ 10 ಆಹಾರದ ರುಚಿಯನ್ನು ಮಾತ್ರ ನೋಡಿದ್ದಾರೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
undefined
ತಿರುಪತಿ ಲಡ್ಡುನಲ್ಲಿ ಪ್ರಾಣಿ ಕೊಬ್ಬಿಗೂ, ಕೆಎಂಫ್‌ನ ನಂದಿನಿ ತುಪ್ಪಕ್ಕೂ ಸಂಬಂಧವೇ ಇಲ್ಲ!
ಕೆಲ ಬಳಕೆದಾರರು, ಇತಿಹಾಸವನ್ನು ನೆನೆಪಿಸಿಕೊಂಡಿದ್ದಾರೆ. ಮಸಾಲೆಗಾಗಿ ತುಂಬಾ ಹತಾಶೆಗೊಂಡಿದ್ದ ಗುಂಪಿನಿಂದ ಇಂಥ ದೂರುಗಳು ಬರುತ್ತವೆ. ಮಸಾಲೆಗಾಗಿ ಅವರು ಪ್ರಪಂಚದ ಹೆಚ್ಚಿನ ಭಾಗವನ್ನು ವಶಪಡಿಸಿಕೊಂಡ್ರು. ಆದ್ರೂ ಅವರಿಗೆ ಸರಿಯಾಗಿ ಮಸಾಲೆ ಆಹಾರ ಬೇಯಿಸಲು ಸಾಧ್ಯವಾಗ್ಲಿಲ್ಲ. ಭಾರತೀಯ ಖಾದ್ಯವಾದ ಚಿಕನ್ ಟಿಕ್ಕಾ ಮಸಾಲಾವನ್ನು ಅವರು ತಮ್ಮ ರಾಷ್ಟ್ರೀಯ ಖಾದ್ಯ ಮಾಡಿಕೊಂಡಿದ್ದಾರೆ. ನಿಮ್ಮ ಪಾಕ ಪದ್ಧತಿ ಸರಿಯಿಲ್ಲ ಎಂಬುದನ್ನು ಒಪ್ಪಿಕೊಂಡು ಮುಂದೆ ಹೋಗಿ. ನಮ್ಮ ಸುದ್ದಿಗೆ ಬರ್ಬೇಡಿ ಎಂದು ಬಳಕೆದಾರರು ಬರೆದಿದ್ದಾರೆ.
ಭಾರತದಲ್ಲಿ ಮಸಾಲೆ ವ್ಯಾಪಾರದ ನಿಯಂತ್ರಣಕ್ಕಾಗಿ ಯುರೋಪಿಯನ್ ರಾಷ್ಟ್ರಗಳು ಹೋರಾಡುತ್ತಿದ್ದವು ಎಂದು ಒಬ್ಬ ಕಮೆಂಟ್ ಮಾಡಿದ್ರೆ, ಭಾರತದ ಕೊಳಕು ಮಸಾಲೆಗಳೇ ಪ್ರಪಂಚದ ಕೆಲವು ಅತ್ಯಂತ ರುಚಿಕರ ಭಕ್ಷ್ಯಗಳನ್ನು ಹುಟ್ಟುಹಾಕಿದೆ ಎಂದು ಇನ್ನೊಬ್ಬರು ಎಂದಿದ್ದಾರೆ. ಭಾರತೀಯ ಆಹಾರ ಸಂಸ್ಕೃತಿ, ಸಂಪ್ರದಾಯ ಮತ್ತು ಪ್ರೀತಿಯ ಆಚರಣೆಯಾಗಿದೆ. ನಿಮಗೆ ಇಷ್ಟವಾಗದಿದ್ದರೆ ನಷ್ಟ ನಿಮಗೆ ಎನ್ನುತ್ತ ಭಾರತದ ಆಹಾರಕ್ಕೆ ಭಾವನಾತ್ಮಕ ಟಚ್ ನೀಡಿದ್ದಾರೆ ಇನ್ನೊಬ್ಬರು.
ದಟ್ಟವಾಗಿ ಕೂದಲು ಬೆಳೆಯಲು ಬಯೋಟಿನ್ ಅಂಶವಿರುವ ಈ 6 ಆಹಾರ ಸೇವಿಸಿ
ಭಾರತದ ಫುಡ್ ಹಿಸ್ಟ್ರಿ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಯುಟ್ಯೂಬರ್ ಈ ರೀತಿ ಕಮೆಂಟ್ ಮಾಡ್ತಿದ್ದಾರೆ ಎಂಬುದು ಬಳಕೆದಾರರ ವಾದ. ಕೊಳಕು ಮಸಾಲೆ ಅಂದ್ರೇನು ಎಂದು ಪ್ರಶ್ನೆ ಮಾಡಿರುವ ನೆಟ್ಟಿಗರು, ಭಾರತೀಯ ಆಹಾರ ಸೇವನೆ ಮಾಡದೆ ಕಮೆಂಟ್ ಮಾಡ್ತಿರುವ ಸಿಡ್ನಿ ವಾಟ್ಸನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ಆಹಾರ ಟೇಸ್ಟ್ ಮಾಡಿ ನಂತ್ರ ರಿಯಾಕ್ಷನ್ ನೀಡಿ ಎಂದಿದ್ದಾರೆ ಭಾರತೀಯ ಆಹಾರ ಪ್ರೇಮಿಗಳು.
It really, really isn't. https://t.co/jzoiUW60bl
— Dr. Sydney Watson (@SydneyLWatson)