ಅಸ್ಸಾಂನ 'ಮನೋಹರಿ ಗೋಲ್ಡ್‌ ಟೀ' : 1 ಕಿಲೋ ಚಹಾ ಎಲೆ 1.15 ಲಕ್ಷಕ್ಕೆ ಹರಾಜು

By Vinutha Perla  |  First Published Dec 18, 2022, 10:32 AM IST

ಅಸ್ಸಾಂನ ಪ್ರಖ್ಯಾತ 'ಮನೋಹರಿ ಗೋಲ್ಡ್‌ ಟೀ' ತೋಟದ 1 ಕಿಲೋ ಗ್ರಾಂ ಚಹಾ ಎಲೆ 1.15 ಲಕ್ಷ ರೂ.ಗೆ ಹರಾಜಾಗುವ ಮೂಲಕ ಚಹಾ ಮಾರಾಟದ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಅಸ್ಸಾಂನ ಮನೋಹರಿ ಗೋಲ್ಡ್ ಟೀ ಪ್ರತಿ ಕೆಜಿಗೆ ದಾಖಲೆಯ (Record) ರೂ 1.15 ಲಕ್ಷಕ್ಕೆ ಮಾರಾಟವಾಗಿದೆ. ಅಸ್ಸಾಂನ ದಿಬ್ರುಗಢ ಜಿಲ್ಲೆಯ ಚಹಾ ತೋಟವೊಂದರಲ್ಲಿ ಈ ವಿಶೇಷ ತಳಿಯ ಚಹಾ ಗಿಡವನ್ನು (Tea plant) ಬೆಳೆಯಲಾಗುತ್ತದೆ. ಮೊನೊಹರಿ ಟೀ ಎಸ್ಟೇಟ್‌ನಲ್ಲಿ ಬೆಳೆದ ಅಸ್ಸಾಂನ ಮನೋಹರಿ ಗೋಲ್ಡ್ ಎಂಬ ಅರಾರೆ ತಳಿಯ ಚಹಾವು ಹರಾಜಿನಲ್ಲಿ ಪ್ರತಿ ಕಿಲೋಗ್ರಾಂಗೆ 1.15 ಲಕ್ಷ ರೂ. ಪಡೆದುಕೊಂಡಿದೆ. ಈ ವರ್ಷ, ಪ್ರೀಮಿಯಂ ಅಸ್ಸಾಂ ಚಹಾವು ಹೈದರಾಬಾದ್‌ನ ನೀಲೋಫರ್ ಕೆಫೆಯಲ್ಲಿ ಲಭ್ಯವಿರುತ್ತದೆ.

ಮನೋಹರಿ ಗೋಲ್ಡ್ ಚಹಾದ ದಾಖಲೆಯ ಮಾರಾಟ
ಹಾಟ್ ಫೇವರಿಟ್ ಆಗಿ ಹೊರಹೊಮ್ಮಿರುವ ಮನೋಹರಿ ಗೋಲ್ಡ್ ಚಹಾದ ದಾಖಲೆಯ ಮಾರಾಟವು ಅಸ್ಸಾಂನ ಚಹಾ ಉದ್ಯಮಕ್ಕೆ (Business) ಖುಷಿಯ ವಿಚಾರವಾಗಿದೆ ಎಂದು ಮೊನೊಹರಿ ಟೀಯ ವ್ಯವಸ್ಥಾಪಕ ನಿರ್ದೇಶಕ ರಾಜನ್ ಲೋಹಿಯಾ ನ್ಯೂಸ್ ತಿಳಿಸಿದ್ದಾರೆ. 'ಕಳೆದ ಐದು ವರ್ಷಗಳಿಂದ ಮನೋಹರಿ ಗೋಲ್ಡ್ ಅನ್ನು ತಯಾರಿಸುತ್ತಿದ್ದೇವೆ ಮತ್ತು ಚಹಾದ ಬೇಡಿಕೆ (Demand) ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈ ವರ್ಷ 1 ಕೆಜಿ ಉತ್ಪನ್ನವನ್ನು 1.15 ಲಕ್ಷಕ್ಕೆ ಮಾರಾಟ ಮಾಡಿದ್ದೇವೆ. ಅಸ್ಸಾಂ ಮತ್ತು ರಾಜ್ಯದ ಚಹಾ ಉದ್ಯಮಕ್ಕೆ ಇದು ಒಳ್ಳೆಯ ಸುದ್ದಿ. ಕೋಲ್ಕತ್ತಾ ಮೂಲದ ಖಾಸಗಿ ಪೋರ್ಟಲ್ ಮೂಲಕ ಚಹಾವನ್ನು ಮಾರಾಟ ಮಾಡಲಾಗಿದ್ದು, ಹೈದರಾಬಾದ್ ಮೂಲದ ನೀಲೋಫರ್ ಕೆಫೆ ಖರೀದಿಸಿದೆ' ಎಂದು ಲೋಹಿಯಾ ಹೇಳಿದ್ದಾರೆ.

Tap to resize

Latest Videos

ಚಹಾ ರಾಷ್ಟ್ರೀಯ ಪಾನೀಯವಾಗಿ ಘೋಷಿಸಲು ಸಂಸತ್ತಿನಲ್ಲಿ ಅಸ್ಸಾಂ ಸಂಸದರ ಒತ್ತಾಯ

ಕಳೆದ ಐದು ವರ್ಷಗಳಿಂದ ತನ್ನ ಸ್ಥಿತಿಯನ್ನು ಹಾಗೆಯೇ ಉಳಿಸಿಕೊಂಡು, ಅಪ್ಪರ್ ಅಸ್ಸಾಂನಲ್ಲಿರುವ ಎಸ್ಟೇಟ್ ಡಿಸೆಂಬರ್ 16 ರಂದು 1 ಲಕ್ಷ ರೂಪಾಯಿಗಳಿಗೆ ಚಹಾವನ್ನು ಮಾರಾಟ (Sale) ಮಾಡಿತು, ಇದು ಭಾರತೀಯ ಚಹಾ ಹರಾಜಿನಲ್ಲಿ ಪಡೆದ ಅತ್ಯಧಿಕ ಬೆಲೆ (Price)ಯಾಗಿದೆ.

ಡಿಸೆಂಬರ್ 2021 ರಂದು ಗುವಾಹಟಿ ಟೀ ಹರಾ ಜು ಕೇಂದ್ರದಲ್ಲಿ (GTAC) ಮನೋಹರಿ ಗೋಲ್ಡ್ ಟೀ ಪ್ರತಿ ಕಿಲೋಗ್ರಾಂಗೆ 99,999 ರೂ.ಗೆ ಮಾರಾಟವಾಯಿತು. ಮೊನೊಹರಿ ಟೀ ತನ್ನ ಪ್ರೀಮಿಯಂ ಉತ್ಪನ್ನವನ್ನು (Product) ಪ್ರತಿ ಕೆಜಿಗೆ 75,000 ರೂ.ಗೆ ದಾಖಲೆಯ ಬೆಲೆಗೆ ರಾಜ್ಯದಲ್ಲಿ ಎರಡು ಬಾರಿ ಮಾರಾಟ ಮಾಡಿತು. 2020 ರಲ್ಲಿ, ಡಿಕೋಮ್ ಟೀ ಎಸ್ಟೇಟ್ ತನ್ನ ಗೋಲ್ಡನ್ ಬಟರ್ಫ್ಲೈ ಟೀಯನ್ನು ಪ್ರತಿ ಕಿಲೋಗ್ರಾಂಗೆ 75,000 ರೂ.ಗೆ ಮಾರಾಟ ಮಾಡಿತು. ನಂತರ, ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್‌ನಲ್ಲಿರುವ ದೋನಿ ಪೊಲೊ ಟೀ ಎಸ್ಟೇಟ್ ತಯಾರಿಸಿದ ವಿಶೇಷ ಚಹಾವು ಗುವಾಹಟಿ ಹರಾಜಿನಲ್ಲಿ ಅದೇ ಬೆಲೆಗೆ ಬಂದಿತು.

ಟೀ ಕುಡಿದ್ರೆ ಬೊಜ್ಜು ಹೆಚ್ಚುತ್ತಾ? ಅಷ್ಟಕ್ಕೂ ಏನಿರಲಿದೆ ಇದರಲ್ಲಿ ತೂಕ ಹೆಚ್ಚಿಸೋ ಅಂಶ?

2018ರಿಂದ ಸತತವಾಗಿ ಐದನೇ ಬಾರಿಗೆ ಇತಿಹಾಸವನ್ನು ಸೃಷ್ಟಿಸಿರುವುದು ಕಂಪನಿಯ ಹೆಮ್ಮೆ ಎಂದು ಲೋಹಿಯಾ ಹೇಳಿದರು. 'ಈ ಹೊಸ ದಾಖಲೆ ಮುರಿಯುವ ಹೊಸ ಬೆಲೆ ದೊರಕಿದೆ. ಈ ತಳಿಗೆ ಚಹಾ ಪ್ರಿಯರಿಂದ ಹೆಚ್ಚಿನ ಬೇಡಿಕೆಯಿದೆ. ಇದು ಪಡೆದ ಬೆಲೆಯು ಅಸ್ಸಾಂ ಚಹಾ ಉದ್ಯಮವು ತನ್ನ ಕಳೆದುಹೋದ ಖ್ಯಾತಿಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. ಈ ಚಹಾ ಎಲೆಗಳು 24 ಕ್ಯಾರೆಟ್ ಚಿನ್ನದಂತೆ ಕಾಣುತ್ತದೆ ಮತ್ತು ಆರೋಗ್ಯಕರ ಪೇಯವಾಗಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ಸ್ ಮತ್ತು ಪೋಷಕಾಂಶಗಳು ಹೇರಳವಾಗಿವೆ ಎಂದು ಮನೋಹರಿ ಟೀ ಎಸ್ಟೇಟ್ ಮಾಲೀಕರಾದ ರಾಜನ್ ಲೋಹಿಯಾ ಹೇಳಿದ್ದಾರೆ. 

Lavender Tea: ವಿಶ್ವದ ಅತ್ಯಂತ ಆರೋಗ್ಯಕರ ಚಹಾದ ಬಗ್ಗೆ ನಿಮಗೆಷ್ಟು ಗೊತ್ತು

click me!